ಯಾವ್ಯಾವ ರಾಶಿಯವರಿಗೆ ಯಾವ ಬಗೆಯ ದೌರ್ಬಲ್ಯವಿದೆ ನೋಡಿ!!

By: Hemanth
Subscribe to Boldsky

ಎಷ್ಟೇ ಮಹಾನ್ ವ್ಯಕ್ತಿಯಾದರೂ ಸಹಿತ ಆತನಲ್ಲಿ ಏನಾದರೊಂದು ದೌರ್ಬಲ್ಯ ಇದ್ದೇ ಇರುತ್ತದೆ. ಆದರೆ ಅದನ್ನು ಅವರು ತೋರಿಸಿ ಕೊಡುವುದಿಲ್ಲ. ಕೆಲವು ಮಂದಿ ತಮ್ಮ ದೌರ್ಬಲ್ಯಗಳಿಂದಾಗಿಯೇ ಸಮಾಜದ ಮುಂದೆ ಪ್ರತಿಷ್ಠೆ ಕಳೆದುಕೊಳ್ಳುವರು. ಇಂತಹ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ. ಆದರೆ ಪ್ರತಿಯೊಬ್ಬರಲ್ಲಿ ಇರುವಂತಹ ದೌರ್ಬಲ್ಯಕ್ಕೆ ಜನ್ಮರಾಶಿಯು ಕಾರಣವಾಗಿದೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ.

ಈ ರಾಶಿಗಳಲ್ಲಿ ಹುಟ್ಟಿದವರು, ಬಹಳ ಬೇಗನೇ ಶ್ರೀಮಂತರಾಗುತ್ತಾರಂತೆ!!

ಹೌದು, ಜನ್ಮ ರಾಶಿಯಿಂದಲೇ ನಿಮ್ಮಲ್ಲಿ ಆ ರೀತಿಯ ದೌರ್ಬಲ್ಯಗಳು ಬಂದಿರುವುದು. ಯಾವ ರಾಶಿಯವರಲ್ಲಿ ಯಾವ ರೀತಿಯ ದೌರ್ಬಲ್ಯಗಳು ಇರುವುದು ಎಂದು ನೀವು ತಿಳಿಯಿರಿ. ಇದನ್ನು ತಿಳಿದರೆ ಬೇರೆಯವರನ್ನು ಬೇಗನೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬಹುದು....

ಮೇಷ

ಮೇಷ

ಈ ರಾಶಿಯಲ್ಲಿ ಹುಟ್ಟಿದಂತಹ ವ್ಯಕ್ತಿಗಳು ತುಂಬಾ ಧೈರ್ಯಶಾಲಿಗಳು ಆಗಿರುವರು. ಅವರು ತಮ್ಮ ಕೆಲಸಗಳನ್ನು ತುಂಬಾ ಕ್ಷಿಪ್ರಗತಿಯಲ್ಲಿ ಮಾಡಲು ಬಯಸುವರು. ಇದು ಅವರಿಗೆ ಜನ್ಮದಿಂದಲೇ ಬಂದಿರುವುದು. ಸೂಕ್ಷ್ಮತೆಯ ಅರ್ಥ ಮಾಡಿಕೊಳ್ಳುವುದು ಮತ್ತು ತಮ್ಮ ಸುತ್ತಲಿನ ವಿಚಾರಗಳ ಬಗ್ಗೆ ಪ್ರಾಯೋಗಿಕತೆ ಕಾಪಾಡಿಕೊಂಡು ಹೋಗಬೇಕಾಗಿರುವುದು ಇವರು ಸರಿಪಡಿಸಬೇಕಾದ ದುರ್ಬಲತೆ.

ವೃಷಭ

ವೃಷಭ

ಈ ಜನ್ಮರಾಶಿಯಲ್ಲಿ ಹುಟ್ಟಿದವರು ತುಂಬಾ ಸ್ಥಿರ ಹಾಗೂ ಸಂವೇದನಾಶೀಲರೆಂದು ಅರ್ಥ ಮಾಡಿಕೊಂಡಿರುವರು. ಇವರು ಬಂಡೆಕಲ್ಲಿನಷ್ಟೇ ಗಟ್ಟಿಗರು. ಆದರೆ ಗಟ್ಟಿತವಿದ್ದರೂ ಅವರು ಸಂವೇದನಾಶೀಲತೆಯು ಮುರಿದುಹೋಗಬಹುದು. ಈ ರಾಶಿಯಲ್ಲಿನ ಜನರು ಪರಿಸ್ಥಿತಿಗೆ ತಕ್ಕಂತೆ ತಮ್ಮನ್ನು ಬದಲಾಯಿಸಿಕೊಳ್ಳಬೇಕು. ತಮ್ಮ ಹೃದಯದ ಮಾತು ಕೇಳಿದರೆ ಅವರ ಶಕ್ತಿಯು ತುಂಬಾ ಪರಿಣಾಮಕಾರಿಯಾಗಲಿದೆ.

ಮಿಥುನ

ಮಿಥುನ

ಮಿಥುನ ರಾಶಿಯಲ್ಲಿ ಹುಟ್ಟಿದವರು ತುಂಬಾ ಆಲೋಚನೆ ಮಾಡುವವರು, ಮಾತುಗಾರರು ಮತ್ತು ಮುನ್ನಡೆಯಿಡುವವರು. ಇವರು ಬದಲಾವಣೆಗೆ ಪ್ರಯತ್ನಿಸಿ, ಅದನ್ನು ಸಾಧಿಸಲು ಪ್ರಯತ್ನಿಸುವರು. ತಮ್ಮನ್ನು ಯಾವಾಗಲೂ ವ್ಯಸ್ತವಾಗಿಡುವುದರಿಂದ ಮುಂದೆ ಸಾಗಲು ಸಾಧ್ಯವಿಲ್ಲ ಮತ್ತು ಅವರಿಗೂ ವಿರಾಮ ಬೇಕೆಂದು ಅರ್ಥ ಮಾಡಿಕೊಳ್ಳಬೇಕು.

ಕರ್ಕಾಟಕ

ಕರ್ಕಾಟಕ

ಇವರು ತುಂಬಾ ಸೂಕ್ಷ್ಮ, ಕ್ರಿಯಾತ್ಮಕ ಹಾಗೂ ಚಟುವಟಿಕೆಯಿಂದ ಇರುವರು. ಈ ರಾಶಿಯವರು ತಮ್ಮ ಭಾವನೆಗಳ ಗಂಟುಕಟ್ಟಿ, ಹೃದಯದ ಬದಲು ಬುದ್ಧಿಯ ಮಾತು ಕೇಳುವರು. ನಿರ್ದಯತೆ ಇವರಿಗೆ ಗೊಂದಲ ಉಂಟು ಮಾಡಬಹುದು. ಇವರು ಹೆಚ್ಚು ಚೇತರಿಸಿಕೊಳ್ಳಲು ಮತ್ತು ಸಾಮರ್ಥ್ಯ ಸುರಕ್ಷಿತವಾಗಿಡಲು ಕಲಿತುಕೊಂಡರೆ ಬಯಸಿದ್ದಕ್ಕಿಂತ ಹೆಚ್ಚಿನ ಶಕ್ತಿಯು ಅವರದ್ದಾಗಲಿದೆ.

ಸಿಂಹ

ಸಿಂಹ

ಈ ರಾಶಿಯ ವ್ಯಕ್ತಿಗಳು ತುಂಬಾ ತಿರುಗಾಡುವ ಹಾಗೂ ಆಶಾವಾದಿಯಾಗಿರುವರು. ಅವರು ಆಂತರ್ಮುಖಿಯಲ್ಲ. ಯಾವುದೇ ಕಾರ್ಯ ಮಾಡುವ ಮೊದಲು ಅವರು ಯೋಚಿಸಬೇಕು. ತಮಗಾಗಿ ಒಳ್ಳೆಯ ಸಮಯ ತೆಗೆದುಕೊಂಡು ಅದನ್ನು ಆನಂದಿಸಬೇಕು. ಸುತ್ತಲಿರುವವರು ಅವರನ್ನು ಅದ್ಭುತವೆಂದು ತಿಳಿದಿದ್ದಾರೆ. ಆದರೆ ಇದನ್ನು ಮನವರಿಕೆ ಮಾಡಿಕೊಳ್ಳಬೇಕು.

ಕನ್ಯಾ

ಕನ್ಯಾ

ಕನ್ಯಾ ರಾಶಿಯವರು ತುಂಬಾ ಪ್ರಾಯೋಗಿಕ ಮತ್ತು ಸಹಾಯಹಸ್ತಚಾಚುವವರು. ಇವರು ತಮ್ಮ ಕರ್ತವ್ಯ ನಿರ್ವಹಿಸುತ್ತಾ ಕೂರುವ ಬದಲು ತಮ್ಮೊಳಗೆ ಅಡಗಿರುವ ಸಾಮರ್ಥ್ಯ ಹೊರತೆಗೆದು ಅಪಾಯ ಎದುರಿಸಿ, ಅವಕಾಶ ಪಡೆದು ಕನಸನ್ನು ನನಸು ಮಾಡಬೇಕು. ಹೆಚ್ಚು ಮತ್ತು ಪೂರ್ವಾಭಾವಿಯಾಗುವುದು ಇವರ ದೌರ್ಬಲ್ಯವಾಗಿದೆ.

ತುಲಾ

ತುಲಾ

ಇವರು ನೈಸರ್ಗಿಕವಾಗಿ ಯಾವುದೇ ಸಮಸ್ಯೆ ಬಗೆಹರಿಸುವುದು ಮಾತ್ರವಲ್ಲ, ಬೆರೆಯುವವರು ಮತ್ತು ಆಕರ್ಷಕ ಮಾತುಗಾರರು. ಆದರೆ ಇವರು ತಮ್ಮತ್ತ ಸ್ವಲ್ಪ ಗಮನಹರಿಸಬೇಕಾಗಿದೆ. ಅನುಮೋದನೆ ಪಡೆಯುವುದು ಮತ್ತು ಗೌರವಾನ್ವಿತವಾಗಿರುವದನ್ನು ಮರೆತು ಬಿಡಬೇಕು. ಇದರ ಬದಲು ಕೆಳಗಿಳಿಯಬೇಕು ಮತ್ತ ತಳಮಟ್ಟದಲ್ಲಿರಬೇಕು.

ವೃಶ್ಚಿಕ

ವೃಶ್ಚಿಕ

ಇವರು ಉತ್ಸಾಹ ಮತ್ತು ತೀವ್ರತೆಯಿಂದ ಬದುಕುವರು. ಇತರರಂತೆ ಅವರಿಗೆ ಭಾವನೆಗಳ ಆಳವು ಬೇಕಾಗಿದೆ. ಇದರಿಂದಾಗಿ ಅವರು ತಮ್ಮ ಪ್ರಯತ್ನದ ಬಗ್ಗೆ ಯೋಚಿಸಬಹುದು. ಯಾವುದೇ ನೋವು ಇಲ್ಲದೆ ವಿಷಯಗಳನ್ನು ಮುಂದೆ ಹೋಗಲು ಬಿಡುವುದನ್ನು ಕಲಿತುಕೊಳ್ಳಬೇಕು. ಅವರು ಯಾವತ್ತೂ ಬಾಹ್ಯವಲ್ಲ, ಭೂಮಿ ಮೇಲೆ ವಾಸಿಸುವುದು ಅವರ ಅಸ್ತಿತ್ವ ಕಾಣೆಯಾದ ಭಾವನೆ ಹೊಂದಿರುವರು.

ಧನು

ಧನು

ಇವರು ಭರವಸೆಯ, ಪ್ರಕ್ಷುಬ್ದ ಮತ್ತು ಯಾವಾಗಲೂ ತಮ್ಮ ಸಾಮರ್ಥ್ಯ ವಿಸ್ತರಿಸಲು ಪ್ರಯತ್ನಿಸುವರು. ಪ್ರಾಯೋಗಿಕವಾಗಿರುವುದು ತಮ್ಮ ಕನಸಿನಿಂದ ದೂರ ಹೋಗುತ್ತಿರುವುದಾಗಿ ಅವರು ಭಾವಿಸುವರು. ಇವರು ಮಾಡಬೇಕಾದ ಕೆಲಸವೆಂದರೆ ಹೆಚ್ಚು ಚಿಂತಿಸುವ ಬದಲು ಕಡಿಮೆ ಯೋಚಿಸಬೇಕು.

ಮಕರ

ಮಕರ

ಇವರು ತುಂಬಾ ಸರಳ, ಸೂಕ್ಷ್ಮ ಹಾಗೂ ಮಹಾತ್ವಾಕಾಂಕ್ಷಿಯಾಗಿರುವರು. ತಮ್ಮ ದೃಷ್ಟಿಕೋನದ ಸೂಕ್ಷ್ಮತೆ ಬೆಳೆಸಬೇಕು. ಕನಸನ್ನು ಪೋಷಿಸಬೇಕು ಮತ್ತು ಧ್ಯೇಯ ಬೆಳೆಸಬೇಕು. ಇವರು ಆಶಾವಾದಿಗಿರಲು ಕಠಿಣ ಪ್ರಯತ್ನ ಮಾಡಬೇಕು. ಇದನ್ನು ಹೊರತುಪಡಿಸಿ ತಮ್ಮ ಜೀವನದಲ್ಲಿ ಇವರು ಹೆಚ್ಚಿನ ಉಲ್ಲಾಸ ತುಂಬಬೇಕು ಮತ್ತು ಹಿಂತಿರುಗಿ ನೋಡಬಾರದು.

ಕುಂಭ

ಕುಂಭ

ಈ ಜನ್ಮ ರಾಶಿಯವರು ತುಂಬಾ ತಾಳ್ಮೆ, ದೃಢ ಮತ್ತು ಸ್ವತಂತ್ರರಾಗಿರುವರು. ಇವರು ತಮ್ಮ ಆಲೋಚನೆಗಳನ್ನು ವಾಸ್ತವಾಗಿ ಪರಿವರ್ತಿಸಲು ಅದಕ್ಕೆ ಮೊದಲ ಸ್ಥಾನ ನೀಡಲು ಬಯಸುವರು. ಇವರು ತಮ್ಮ ಭಾವನೆಗಳನ್ನು ಹೆದರಿಸಬೇಕಿಲ್ಲ ಮತ್ತು ತುಂಬಾ ಪರಿಣಾಮಕಾರಿಯಾಗಿ ಬದುಕಬಹುದು.

ಮೀನ

ಮೀನ

ಇವರು ಬ್ರಹ್ಮಾಂಡ ಮತ್ತು ಸಾಗರದ ಜೀವಿಗಳಂತೆ. ಜೀವನದಲ್ಲಿ ಬರುವ ಸಂಕಷ್ಟಗಳನ್ನು ಎದುರಿಸಿ ಅದರ ವಿರುದ್ಧ ಈಜಲು ಇವರಿಗೆ ತಿಳಿದಿದೆ. ಆದರೆ ಬರಡು ಭೂಮಿಯಲ್ಲೂ ವಾಸಿಸಲು ಕಲಿಯಬೇಕು. ಇವರು ವಾಸ್ತವಿಕತೆ ಏನು ಎಂದು ತಿಳಿದುಕೊಳ್ಳಲು ಪ್ರಯತ್ನಿಸುವುದು ಅತೀ ಅಗತ್ಯ. ಇವರು ತಮ್ಮ ಧ್ಯೇಯ ಮತ್ತು ಕನಸನ್ನು ಸರಳವಾಗಿರಡಬೇಕು. ಇವರು ಪರಿಪೂರ್ಣರಲ್ಲದಿದ್ದರೂ ಅದು ಆಗಲು ಸಾಧ್ಯವಿದೆ.

English summary

Here Are The Weak Points Of Each Zodiac Sign

We all have weak moments and do you realise that your weak points can be linked to your zodiac signs as well? Well, these can! We're here to share the typical weaknesses of each zodiac sign that you need to know about. These are the weak points that would totally define your personality. Check them out and learn about the weakness of your zodiac sign.
Subscribe Newsletter