ಈ ಜಗತ್ತಿನಲ್ಲಿ ಈ ಐದು ಬಗೆಯ ವ್ಯಕ್ತಿಗಳೇ ನಿಜವಾದ ಒಡನಾಡಿಗಳು!!

By: Arshad
Subscribe to Boldsky

ಮನುಷ್ಯರು ಸಂಘಜೀವಿಗಳು. ಒಬ್ಬರಿಗೊಬ್ಬರ ಸಹಕಾರ ಬೇಕೇ ಬೇಕು. ಅಂತೆಯೇ ನಾವು ನಮ್ಮ ಜೀವಮಾನದ ಅವಧಿಯಲ್ಲಿ ನೂರಾರು ಸಾವಿರಾರು ಜನರನ್ನು ಭೇಟಿಯಾಗಬೇಕಾಗುತ್ತದೆ. ಇದರಲ್ಲಿ ಕೆಲವರು ನಮಗೆ ತೀರಾ ಆತ್ಮೀಯರಾಗಿರುತ್ತಾರೆ. ಕೆಲವರು ಅಪರಿಚಿತರಾಗಿರುತ್ತಾರೆ.

ಆದರೆ ಇವರಲ್ಲಿ ಯಾವುದೇ ಹಂತದಲ್ಲಿ ಪ್ರತಿ ವ್ಯಕ್ತಿಗಳಿಂದಲೂ ನಮಗೆ ಜೀವನದ ಕೆಲವು ಪಾಠಗಳು ದೊರಕುತ್ತವೆ. ಕೆಲವಂತೂ ಜೀವನದ ಕಟುಸತ್ಯಗಳಾಗಿರುತ್ತವೆ. ಆದರೆ ಅಷ್ಟಕ್ಕೂ ನಾವು ಈ ಪಾಠಗಳನ್ನು ಕಲಿಯಲು ಕೆಲವು ವ್ಯಕ್ತಿಗಳನ್ನು ಹೇಗೇ ಭೇಟಿಯಾಗುತ್ತೇವೆ? ಈ ಭೇಟಿ ಅನಿರೀಕ್ಷಿತವೇ? ಮುಂಚಿತವಾಗಿ ನಿಗದಿಯಾಗಿದ್ದೇ?

ಒಂದು ಸಿದ್ಧಾಂತದ ಪ್ರಕಾರ ಈ ಜಗತ್ತಿನಲ್ಲಿ ನಾವು ಐದು ಬಗೆಯ ವ್ಯಕ್ತಿಗಳೊಂದಿಗೆ ಒಂದು ಅಗೋಚರ ಸಂಪರ್ಕವನ್ನು ಹೊಂದಿರುತ್ತೇವೆ. ಈ ಐದು ಬಗೆಯ ವ್ಯಕ್ತಿಗಳೊಂದಿಗೆ ನಾವು ಜೀವಮಾನದ ಯಾವುದೋ ಒಂದು ಘಟ್ಟದಲ್ಲಿ ಭೇಟಿಯಾಗಿ ಜೀವನವನ್ನೇ ಬದಲಿಸುವ ಪಾಠವನ್ನು ಕಲಿತುಕೊಳ್ಳುತ್ತೇವೆ. ಬನ್ನಿ, ಈ ಐದು ಬಗೆಯ ವ್ಯಕ್ತಿಗಳು ಯಾರು ಎಂಬುದನ್ನು ನೋಡೋಣ... 

ನಮ್ಮನ್ನು ನಿದ್ದೆಯಿಂದ ಎಚ್ಚರಿಸುವವರು

ನಮ್ಮನ್ನು ನಿದ್ದೆಯಿಂದ ಎಚ್ಚರಿಸುವವರು

ಈ ವ್ಯಕ್ತಿಗಳು ನಮ್ಮ ಜೀವನದ ಪ್ರಮುಖ ಬದಲಾವಣೆಯ ಘಟ್ಟಕ್ಕೆ ಕಾರಣರಾಗಿರುತ್ತಾರೆ. ಇವರು ನಮ್ಮೊಂದಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಂಪರ್ಕ ಹೊಂದಿದ್ದು ಇವರ ಸಲಹೆ ಅಥವಾ ನಿರ್ದೇಶನವನ್ನು ಅನುಸರಿಸುವ ಮೂಲಕ ಜೀವನವನ್ನೇ ಬದಲಿಸುವ ನಿರ್ಧಾರಗಳನ್ನು ಪಡೆಯುವಂತಾಗುತ್ತದೆ.

ನಮ್ಮನ್ನು ನಿದ್ದೆಯಿಂದ ಎಚ್ಚರಿಸುವವರು

ನಮ್ಮನ್ನು ನಿದ್ದೆಯಿಂದ ಎಚ್ಚರಿಸುವವರು

ಇವರ ಇರುವಿಕೆಯಿಂದಲೇ ಜೀವನವನ್ನು ಬದಲಿಸುವ ನಿರ್ಧಾರವನ್ನು ತಳೆಯಲು ಸಾಧ್ಯವಾಗಿತ್ತು, ಇವರಿಲ್ಲದೇ ಇದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ನಿಮಗೆ ಸದಾ ಅನ್ನಿಸುತ್ತದೆ. ನೀವು ಅರಿಯದೇ ಇದ್ದ, ನಿಮ್ಮೊಳಗೆ ಇರುವ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಈ ವ್ಯಕ್ತಿಗಳು ಕಂಡುಕೊಂಡು ನಿಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ನಿಮ್ಮ ಜೀವನ ಸುಂದರವಾಗಲು ಕಾರಣರಾಗುತ್ತಾರೆ.

 ನಿಮಗೆ ಕಾಲಕಾಲಕ್ಕೆ ನೆನಪು ನೀಡುವವರು

ನಿಮಗೆ ಕಾಲಕಾಲಕ್ಕೆ ನೆನಪು ನೀಡುವವರು

ಜೀವನದಲ್ಲಿ ಏನಾದರೊಂದು ಸಾಧಿಸುವ ಗುರಿ ಇದ್ದರೆ ಆ ಜೀವನಕ್ಕೊಂದು ಅರ್ಥ ಬರುತ್ತದೆ. ಈ ಗುರಿಯನ್ನು ಹೊಂದಿದ್ದರೂ ಇತರ ಆಕರ್ಷಣೆ ಹಾಗೂ ಪ್ರಲೋಭನೆಗಳಿಗೆ ಗುರಿಯಿಂದ ವಿಮುಖರಾಗುತ್ತಿದ್ದರೆ ಕೆಲವು ವ್ಯಕ್ತಿಗಳು ನಮ್ಮನ್ನು ಎಚ್ಚರಿಸಿ ಗುರಿಯಿಂದ ವಿಮುಖರಾಗದೇ ಇರಲು ಕಾರಣರಾಗುತ್ತಾರೆ. ಒಂದು ಹಂತದಲ್ಲಿ ನಮ್ಮನ್ನು ಗುರಿಯಿಂದ ವಿಚಲಿತರಾಗದಿರಲೆಂದೇ ಇವರನ್ನು ಯಾವುದೋ ಶಕ್ತಿ ನಮ್ಮಲ್ಲಿ ಕಳಿಸಿದೆ ಎಂದೇ ಅನ್ನಿಸುತ್ತದೆ. ಈ ವ್ಯಕ್ತಿಗಳು ನಿಮ್ಮ ಗುರಿಯ ಬಗ್ಗೆ ನೆನಪಿಸುತ್ತಾರೆ ಹಾಗೂ ನಮಗೆ ಜೀವನದಲ್ಲಿ ಏನು ಬೇಕಾಗಿದೆ ಎಂಬುದರ ಬಗ್ಗೆ ಎಚ್ಚರಿಸುತ್ತಾ ಇರುತ್ತಾರೆ.

ನಿಮ್ಮ ಬೆಳವಣಿಗೆಗೆ ನೆರವಾಗುವವರು

ನಿಮ್ಮ ಬೆಳವಣಿಗೆಗೆ ನೆರವಾಗುವವರು

ಈ ವ್ಯಕ್ತಿಗಳು ನಮ್ಮನ್ನು ಸಮಾಜದಲ್ಲಿ ಒಂದು ಗಣ್ಯವ್ಯಕ್ತಿಯನ್ನಾಗಿ ರೂಪಿಸುವಲ್ಲಿ ನೆರವಾಗುತ್ತಾರೆ. ಸಮಾಜದಲ್ಲಿ ಗಣ್ಯವ್ಯಕ್ತಿಯಾಗಲು ಸಮಾಜದೊಂದಿಗೆ ಒಡನಾಟ, ಇನ್ನೊಬ್ಬರಿಗೆ ನೆರವಾಗುವುದು, ಇನ್ನೊಬ್ಬರ ನೆರವು ಪಡೆದುಕೊಳ್ಳುವುದು, ಜೀವನದ ಏಳು ಬೀಳುಗಳನ್ನು ಸಹಿಸಿ ಜೀವನದಲ್ಲಿ ಮುಂದುವರೆಯಲು ಸದಾ ಇವರು ತಮ್ಮ ನೆರವನ್ನು ನೀಡುತ್ತಾರೆ. ಎಷ್ಟೋ ಸಲ, ಇವರ ಚರ್ಯೆ ನಮಗೆ ಮುಳ್ಳು ಚುಚ್ಚಿದಂತೆ ಅನ್ನಿಸುತ್ತದೆ ಅಥವಾ ಇವರ ಚುಚ್ಚುಮಾತಿನಿಂದ ಯಾವುದೋ ಸಾಹಸಕ್ಕೆ ಮುಂದಾಗಲು ತೊಡಗುತ್ತೇವೆ. ಒಂದು ವೇಳೆ ನಮ್ಮ ಪ್ರಯತ್ನದಲ್ಲಿ ಸೋಲು ಅನುಭವಿಸಬೇಕಾಗಿ ಬಂದರೂ ಇವರು ಸರಿಯಾದ ದಾರಿಯನ್ನು ತೋರುವ ಮೂಲಕ ಮತ್ತೊಮ್ಮೆ ಎದ್ದು ನಿಲ್ಲಲು ನೆರವಾಗುತ್ತಾರೆ. ನಾವು ಸಾಮಾನ್ಯವಾಗಿ ನಾವಾಗಿಯೇ ಕಲಿಸಲು ಸಾಧ್ಯವೇ ಇಲ್ಲದಿದ್ದ ವಿದ್ಯೆಗಳನ್ನು ಇವರ ಕಾರಣದಿಂದಲೇ ಅನಿವಾರ್ಯವಾದರೂ ಕಲಿಯಬೇಕಾಗಿ ಬಂದು ಈ ವಿದ್ಯೆಗಳೇ ನಮ್ಮ ಬೆಳವಣಿಗೆಯ ಮೆಟ್ಟಿಲುಗಳಾಗುತ್ತವೆ.

ನಿಮಗಾಗಿ ಸ್ಥಳಾವಕಾಶ ಕಾಯ್ದಿಸಿರುವವರು

ನಿಮಗಾಗಿ ಸ್ಥಳಾವಕಾಶ ಕಾಯ್ದಿಸಿರುವವರು

ಕೆಲವು ವ್ಯಕ್ತಿಗಳು ನಮ್ಮ ಜೀವನದಲ್ಲಿ ಅಲ್ಪಕಾಲದ ಅವಧಿಯಲ್ಲಿ ನಮ್ಮೊಂದಿಗಿದ್ದು ಕಾಲಾನಂತರ ಸ್ಮರಣೆಯಿಂದ ಮರೆಯಾಗಿಬಿಡುತ್ತಾರೆ. ಈ ವ್ಯಕ್ತಿಗಳನ್ನು ನಾವು ರಸ್ತೆಯಲ್ಲಿ, ಸಬ್ ವೇ ಮೊದಲಾದ ಸ್ಥಳಗಳಲ್ಲಿ ಕ್ಷಣಮಾತ್ರಕ್ಕೆ ಭೇಟಿಯಾಗಿದ್ದು ಇವರ ಭೇಟಿಯ ಬಗ್ಗೆ ನಮಗೆ ನೆನಪೂ ಇರಲಾರದು. ಆದರೆ ಈ ವ್ಯಕ್ತಿಗಳು ನಮಗಾಗಿ ಸ್ಥಳಾವಕಾಶವನ್ನು ಒದಗಿಸಿ ತಾವು ಅಲ್ಲಿಂದ ನಿರ್ಗಮಿಸಿರುತ್ತಾರೆ. ಈ ಅವಕಾಶವನ್ನು ನಾವು ಬಳಸಿಕೊಂಡಿರುತ್ತೇವೆ. ಈ ಅವಕಾಶಗಳು ಉದ್ಯೋಗ, ವ್ಯಾಪಾರ, ಉತ್ತಮ ಸಂಬಂಧ ಮೊದಲಾದ ಹಲವಾರು ರೂಪಗಳಲ್ಲಿ ನಮಗೆ ಒದಗಿರಬಹುದು.

ನಮ್ಮೊಂದಿಗೆ ಸದಾ ಜೊತೆಯಾಗಿರುವವರು

ನಮ್ಮೊಂದಿಗೆ ಸದಾ ಜೊತೆಯಾಗಿರುವವರು

ಸುಖದಲ್ಲಿ ಹಲವರು ನಿಮ್ಮೊಂದಿಗಿರುತ್ತಾರೆ ಕಷ್ಟದಲ್ಲಿ ನಿಮ್ಮವರು ಮಾತ್ರ ನಿಮ್ಮೊಂದಿಗಿರುತ್ತಾರೆ ಎಂಬ ಗಾದೆಯೊಂದಿದೆ. ನಮ್ಮ ಜೀವನದ ಎಲ್ಲಾ ಹಂತಗಳಲ್ಲಿಯೂ ಈ ವ್ಯಕ್ತಿಗಳು ಸದಾ ನಮ್ಮೊಂದಿಗಿದ್ದು ತಮ್ಮ ಸಹಕಾರ ನೀಡುತ್ತಾ ಬಂದಿರುತ್ತಾರೆ. ಆದರೆ ಇವರನ್ನು ಗುರುತಿಸುವುದು ಕೊಂಚ ಕಷ್ಟಕರವಾಗಿರುತ್ತದೆ. ಏಕೆಂದರೆ ಕಷ್ಟಕಾಲ ಬರುವವರೆಗೂ ಉಳಿದವರೆಲ್ಲಾ ಮೊಲದ ಕೊಂಬಿನಂತೆ ಮಾಯವಾಗಿ ಈ ವ್ಯಕ್ತಿಗಳು ಮಾತ್ರ ನಿಮ್ಮ ಕಷ್ಟವನ್ನು ಹಂಚಿಕೊಳ್ಳಲು, ಈ ಕಷ್ಟವನ್ನು ಎದುರಿಸಲು ನೆರವಾಗುತ್ತಾರೆ. ಇವರು ಸಹಜವಾಗಿ ಜೀವನಸಂಗಾತಿ ಹಾಗೂ ನಮ್ಮ ಆಪ್ತ ಸ್ನೇಹಿತರು, ನಮ್ಮ ಕುಟುಂಬ ಸದಸ್ಯರು, ನಮ್ಮ ಉದ್ಯೋಗ ಅಥವಾ ಹವ್ಯಾಸದಲ್ಲಿ ಸಹಭಾಗಿಯಾಗಿರುವವರೂ ಆಗಿರುತ್ತಾರೆ. ನಿಮ್ಮ ಹಾಗೂ ಇವರಲ್ಲಿ ಹವ್ಯಾಸ ಅಥವಾ ಜೀವನದ ಗುರಿ ಅಥವಾ ಜೀವನ ನಡೆಸಲು ಆಯ್ದುಕೊಂಡ ಮಾರ್ಗ ಇವು ಸಮಾನವಾಗಿರುತ್ತವೆ.

English summary

Heard About The 5 Types Of Cosmic Connections?

We meet several people in our lives, there are those who stay with us and are by our side through thick and thin and then those who teach us some rude facts of life! Have you ever wondered why we meet certain people? Well, this is because of the cosmic connection that we share with the person. As per this theory, there is always a reason behind why we meet certain people in life.
Story first published: Saturday, August 19, 2017, 23:50 [IST]
Subscribe Newsletter