Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಸಾವಿನಂಚಿನಿಂದ ಪಾರಾದ, ಯುವಕನ ಸ್ಟೋರಿ-ವಿಡಿಯೋ ವೈರಲ್
ಬೆಟ್ಟದ ಮೇಲೆ ಅಪಾಯವನ್ನು ಎದುರು ಹಾಕಿಕೊಂಡು ಫೋಟೊ ತೆಗೆಯಲು ಪ್ರಯತ್ನಿಸಿದಾಗ ಕಾಲು ಜಾರಿ ಬಿದ್ದು, ಕೊನೆಗೆ ಪ್ರಾಣಾಪಾಯದಿಂದ ಪಾರಾದ ಚೀನಾ ಯುವಕನ ಸ್ಟೋರಿ ಇದು...
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೊಗಳಿಗೆ ಹೆಚ್ಚಿನ ಲೈಕ್ ಬರಬೇಕೆನ್ನುವ ಕಾರಣಕ್ಕಾಗಿ ಇಂದಿನ ದಿನಗಳಲ್ಲಿ ಜನರು ಸಾಹಸಮಯ ಫೋಟೋಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಾರೆ. ಇದಕ್ಕಾಗಿ ಭಾರೀ ಅಪಾಯವನ್ನು ಎದುರಿಸುವುದು ಸಹಜವಾಗಿದೆ. ಬೆಟ್ಟದ ಮೇಲೆ, ಸಮುದ್ರದ ಅಲೆಗಳ ಮಧ್ಯೆ ಹೀಗೆ ಹಲವಾರು ರೀತಿಯಲ್ಲಿ ಫೋಟೊ ತೆಗೆಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇದು ಅವರ ಜೀವಕ್ಕೆ ಆಪತ್ತು ಎನ್ನುವುದನ್ನು ಮರೆತಿರುತ್ತಾರೆ.
ಈ ಲೇಖನದ ಜತೆಯಲ್ಲಿ ನೀಡಿರುವಂತಹ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಬೆಟ್ಟದ ಮೇಲೆ ಅಪಾಯವನ್ನು ಎದುರು ಹಾಕಿಕೊಂಡು ಫೋಟೊ ತೆಗೆಯಲು ಪ್ರಯತ್ನಿಸಿದಾಗ ಕಾಲು ಜಾರಿ ಬೀಳುತ್ತಾನೆ. ಈ ಘಟನೆ ನಡೆದಿರುವುದು ಚೀನಾದಲ್ಲಿ. ಇದರ ಬಗ್ಗೆ ಮತ್ತಷ್ಟು ವಿವರ ತಿಳಿಯಿರಿ...

ಚೀನಾದ ಚೊಂಗ್ಕ್ವಿಂಗ್ ನಗರದಲ್ಲಿ ನಡೆದ ಘಟನೆ
ಚೀನಾದ ಚೊಂಗ್ಕ್ವಿಂಗ್ ಬೆಟ್ಟದ ಮೇಲೆ ಬಂಡೆಯ ಅಂಚಿನಲ್ಲಿ ನಿಂತುಕೊಂಡು ಫೋಟೋ ತೆಗೆಯುತ್ತಿದ್ದಾಗ ಈ ಘಟನೆ ನಡೆದಿದೆ.

ವಿಡಿಯೋದಲ್ಲಿ ತೋರಿಸುವಂತೆ
ಮತ್ತಷ್ಟು ರೋಚಕ ಫೋಟೋ ತೆಗೆಯುವ ಗುಂಗಿನಲ್ಲಿ, ಈತ ಜಿಗೊಂಗ್ ಬೆಟ್ಟದ ಬಂಡೆಯ ಅಂಚಿನಲ್ಲಿ ನೇತಾಡುವುದು ಕಂಡುಬಂದಿದೆ.

ಬೆಟ್ಟ ಏರುವುದನ್ನು ಅಭ್ಯಾಸ ಮಾಡುತ್ತಿದ್ದ1
ಕಳೆದ ನಾಲ್ಕು ವರ್ಷದಿಂದ ಆತ ಬೆಟ್ಟ ಏರುವುದನ್ನು ಅಭ್ಯಾಸ ಮಾಡುತ್ತಲಿದ್ದ. ಆತನಿಗೆ ತನ್ನ ಸಾಹಸದ ಫೋಟೋ ಬೇಕಾಗಿತ್ತು. ಇದಕ್ಕಾಗಿ ಬಂಡೆಯ ಅಂಚಿನಲ್ಲಿ ನಿಂತಿರುವ ಫೋಟೊವನ್ನು ತೆಗೆಯಲು ಸ್ನೇಹಿತರಿಗೆ ಸೂಚಿಸಿದ.

ಬಂಡೆಯಿಂದ ಹಿಡಿತ ಕಳಕೊಂಡ!
ಬಂಡೆಯಿಂದ ಹಿಡಿತ ಕಳಕೊಂಡ ಆತ ಅಲ್ಲಿಂದ ಹತ್ತು ಮೀಟರ್‌ಗೂ ಹೆಚ್ಚು ಕೆಳಗೆ ಬಿದ್ದ. ಆತನ ಸ್ನೇಹಿತರು ಕಿರುಚಿಕೊಳ್ಳುವುದು ಕೂಡ ವಿಡಿಯೋದಲ್ಲಿದೆ.

ಅದೃಷ್ಟವಶಾತ್ ಬದುಕುಳಿದ!
ಕೆಳಗೆ ಬಿದ್ದರೂ ಆತ ಅದೃಷ್ಟವಶಾತ್ ಬದುಕುಳಿದ. ಕೈಕಾಲುಗಳಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಆತ ಬದುಕುಳಿದ. ಆದರೆ ಮುಂದಿನ ಸಲ ಇಂತಹ ಸಾಹಸ ಮಾಡಲು ಆತ ಖಂಡಿತವಾಗಿಯೂ ಪ್ರಯತ್ನಿಸಲ್ಲ.
ಘಟನೆಯ ವಿಡಿಯೋ
ಸಾವಿನ ಅಂಚಿನಿಂದ ಬದುಕುಳಿದು ಬಂದ ಯುವಕನ ವಿಡಿಯೋವನ್ನು ಇದರಲ್ಲಿ ನೋಡಬಹುದು. ಈ ಬಗ್ಗೆ ನಿಮ್ಮ ಅನಿಸಿಕೆಗಳಿದ್ದರೆ ಅದನ್ನು ಕಮೆಂಟ್ ಬಾಕ್ಸ್‌ಗೆ ಹಾಕಿ.



Click it and Unblock the Notifications
