ನಿಮ್ಮ ರಾಶಿಗೆ ಸರಿಹೊಂದುವ 'ಅದೃಷ್ಟದ ವಸ್ತು' ಯಾವುದು?

Posted By: Lekhaka
Subscribe to Boldsky

ಹಿಂದೂ ಧರ್ಮದಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ರಾಶಿ, ನಕ್ಷತ್ರ ಏನೆಂದು ತಿಳಿದೇ ಇರುತ್ತದೆ. ಇಂದಿನ ದಿನಗಳಲ್ಲಿ ಬೇರೆ ಧರ್ಮದವರು ಕೂಡ ರಾಶಿ ಭವಿಷ್ಯ ನೋಡುವಂತಹ ಪರಿಪಾಠ ಬೆಳೆದು ಬಂದಿದೆ. ಪ್ರತಿಯೊಂದು ರಾಶಿಗೂ ತನ್ನದೇ ಆದ ಗುಣ ಹಾಗೂ ಅವಗುಣಗಳು ಇದ್ದೇ ಇರುತ್ತದೆ. ಇದರಿಂದ ಆಯಾಯ ರಾಶಿಯವರು ಜೀವನದಲ್ಲಿ ಯಶಸ್ಸು ಹಾಗೂ ಜನಪ್ರಿಯತೆ ಪಡೆದುಕೊಳ್ಳುವರು.

ಅಪ್ರಾಮಾಣಿಕ ಜನರ, ರಾಶಿ ಭವಿಷ್ಯದಲ್ಲೂ ಮೋಸದ ಗುಣವಿದೆ!

ರಾಶಿಯಲ್ಲಿರುವ ಕೆಲವೊಂದು ಗುಣಗಳು ನಿಮ್ಮ ದುರಾದೃಷ್ಟ ತಪ್ಪಿಸಿ ಜೀವನದಲ್ಲಿ ಒಳ್ಳೆಯ ಶಕ್ತಿ ತರುವುದು. ಪ್ರತಿಯೊಂದು ರಾಶಿಯಲ್ಲಿ ಅದೃಷ್ಟದ ವಸ್ತು ಎನ್ನುವುದು ಇರುವುದು. ಯಾವ ರಾಶಿಯ ಯಾವುದು ಅದೃಷ್ಟದ ವಸ್ತು ಎನ್ನುವುದನ್ನು ತಿಳಿದುಕೊಂಡು ಅದರಂತೆ ನಡೆದುಕೊಂಡರೆ ಅದೃಷ್ಟವು ನಿಮ್ಮದಾಗುವುದರಲ್ಲಿ ಸಂಶಯವಿಲ್ಲ. ನಿಮ್ಮ ರಾಶಿಗೆ ಅನುಗುಣವಾಗಿ ಅದೃಷ್ಟದ ವಸ್ತು ಯಾವುದು ಎಂದು ತಿಳಿಯಿರಿ.... 

ಮೇಷ

ಮೇಷ

ಅಗ್ನಿಯ ಈ ರಾಶಿಯವರಿಗೆ ತುಂಬಾ ಗಾಢವಾದ ಬಣ್ಣವು ತುಂಬಾ ಪವಿತ್ರವೆನ್ನಲಾಗುತ್ತದೆ. ಈ ರಾಶಿಯವರ ಅದೃಷ್ಟದ ಸಂಕೇತಗಳು ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು. ಮಹಿಳೆಯರಿಗೆ ಮಾಣಿಕ್ಯದ ಆಭರಣಗಳನ್ನು ಧರಿಸಿದರೆ ತುಂಬಾ ಅದೃಷ್ಟ ಬರಲಿದೆ.

ವೃಷಭ

ವೃಷಭ

ಈ ರಾಶಿಯ ಒಡೆಯ ಶುಕ್ರ ಮತ್ತು ಈ ದೇವರ ಇಷ್ಟದ ಲೋಕ ತಾಮ್ರ. ಈ ರಾಶಿಯವರಿಗೆ ಅದೃಷ್ಟ ಬರಬೇಕೆಂದರೆ ಅವರು ತಾಮ್ರದಿಂದ ಮಾಡಿರುವಂತಹ ಆಭರಣ ಧರಿಸಬೇಕು. ಯಾವುದೇ ರೀತಿಯ ಲೋಹದ ಆಭರಣಕ್ಕೆ ರತ್ನಗಳನ್ನು ಸೇರಿಸಿಕೊಂಡು ಧರಿಸಿದರೆ ಇವರಿಗೆ ಆರೋಗ್ಯ, ಸಂಪತ್ತು ಮತ್ತು ಪ್ರೀತಿ ಸಿಗಲಿದೆ. ಮನೆಗೆ ಅದೃಷ್ಟ ಬರಬೇಕೆಂದರೆ ಒಂದು ಲೋಹದ ವಸ್ತುವನ್ನು ಬಾಗಿಲಿನ ಮೇಲ್ಭಾಗದಲ್ಲಿ ನೇತಾಡಿಸಬೇಕು.

ಮಿಥುನ

ಮಿಥುನ

ಈ ರಾಶಿಯವರಿಗೆ ವಾಯು ಅಧಿಪತಿಯಾಗಿರುವನು. ಇವರಿಗೆ ಹಕ್ಕಿಗಳು, ಚಿಟ್ಟೆಗಳು ಮತ್ತು ಪತಂಗಗಳು ಈ ರಾಶಿಯವರಿಗೆ ಹೊಂದಿಕೊಳ್ಳುವುದು. ಈ ರೀತಿಯ ಯಾವುದೇ ಸಂಕೇತವು ಅವರಿಗೆ ಜನಪ್ರಿಯತೆ, ಕಲ್ಪನೆ, ಕ್ರಿಯಾತ್ಮಕತೆ ಮತ್ತು ಸ್ವತಂತ್ರವನ್ನು ತಂದುಕೊಡುವುದು. ದುರಾದೃಷ್ಟ ಹೋಗಲಾಡಿಸಲು ಈ ರಾಶಿಯವರು ಯಾವಾಗಲೂ ತಮ್ಮೊಂದಿಗೆ ಕನ್ನಡಿ ಇಟ್ಟುಕೊಳ್ಳಬೇಕು.

ಕರ್ಕಾಟಕ

ಕರ್ಕಾಟಕ

ಈ ರಾಶಿಯು ಜಲಕ್ಕೆ ಸಂಬಂಧಿಸಿದ್ದಾಗಿದೆ. ಇದರಿಂದ ಮೀನು, ನಕ್ಷತ್ರಮೀನು, ಡೊಲ್ಫಿನ್ ಅಥವಾ ನೀರಿಗೆ ಸಂಬಂಧಿಸಿದ ಬೇರೆ ಯಾವುದೇ ಸಂಕೇತವನ್ನು ಧರಿಸಬಹುದು. ನಿಮ್ಮ ಜೀವನದಲ್ಲಿ ಸುಖಶಾಂತಿ ಬರಬೇಕೆಂದರೆ ಮುತ್ತು ಅಥವಾ ಚಿಪ್ಪನ್ನು ಧರಿಸಬೇಕು. ವೃತ್ತಿಯಲ್ಲಿ ಉನ್ನತಿ ಪಡೆಯಬೇಕೆಂದರೆ ಚಂದ್ರನ ಆಕಾರದಲ್ಲಿರುವ ಬೆಳ್ಳಿಯ ಆಭರಣ ಧರಿಸಬೇಕು.

ಸಿಂಹ

ಸಿಂಹ

ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು ಈ ರಾಶಿಯವರಿಗೆ ತುಂಬಾ ಅದೃಷ್ಟವೆಂದು ಪರಿಗಣಿಸಲಾಗಿದೆ. ಅಗ್ನಿಯ ರಾಶಿಯಾಗಿರುವ ಕಾರಣ ಈ ರಾಶಿಯವರು ಬೆಂಕಿ ಅಥವಾ ಸೂರ್ಯನ ಆಕಾರದಲ್ಲಿರುವ ಬಂಗಾರದ ಆಭರಣ ಧರಿಸಬೇಕು. ಇದನ್ನು ಹೊರತುಪಡಿಸಿ ಬೆಕ್ಕಿನ ಸಂಕೇತವು ಒಳ್ಳೆಯದು. ಇದರಿಂದ ವೃತ್ತಿಗೆ ಒಳ್ಳೆಯದು.

ಕನ್ಯಾ

ಕನ್ಯಾ

ಭೂಮಿಗೆ ಸಂಬಂಧಿಸಿದ ರಾಶಿಯಾಗಿರುವ ಇದಕ್ಕೆ ನೈಸರ್ಗಿಕವಾಗಿ ಸಿಗುವಂತಹ ರತ್ನಗಳಲ್ಲಿ ವೃತ್ತಾಕಾರದ ತೂತು ಇದ್ದರೆ ಒಳ್ಳೆಯದು. ಸಮೃದ್ಧಿಗಾಗಿ ನೀವು ಹಣ್ಣುಗಳಾದ ಸೇಬು, ಪ್ಲಮ್ಸ್ ಮತ್ತು ಪೀಚಸ್ ಸಂಕೇತಗಳನ್ನು ಧರಿಸಬಹುದು.

ತುಲಾ

ತುಲಾ

ಇತರ ವಾಯುವಿನ ರಾಶಿಯಂತೆ ಈ ರಾಶಿಯವರಿಗೂ ಹಕ್ಕಿಗಳು ಅದೃಷ್ಟ ಸಂಕೇತವಾಗಿದೆ. ಹಮ್ಮಿಂಗ್ ಬರ್ಡ್ ನ ಸಂಕೇತವನ್ನು ಧರಿಸಿದರೆ ಅದರಿಂದ ಸಾಮಾಜಿಕವಾಗಿ ನಿಮಗೆ ಏಳಿಗೆಯಾಗಲಿದೆ. ಯಾವುದೇ ರೀತಿಯ ಸವಾಲುಗಳಿಂದ ಮೇಲೆದ್ದು ಬರಬೇಕೆಂದು ನೀವು ನಿರ್ಧರಿಸಿದ್ದರೆ ಆಗ ನೀವು ಅಮೆಥಿಸ್ಟ್ ಧರಿಸಬೇಕು.

ವೃಶ್ಚಿಕ

ವೃಶ್ಚಿಕ

ಜಲದ ರಾಶಿಯಾಗಿರುವ ಇದಕ್ಕೆ ಚಂದ್ರನು ತುಂಬಾ ಅದೃಷ್ಟವೆಂದು ನಂಬಲಾಗಿದೆ. ನಕ್ಷತ್ರ ಆಕಾರದ ಬೆಳ್ಳಿಯ ಆಭರಣ ಧರಿಸುವುದು ವೃತ್ತಿಪರವಾಗಿ ನಿಮಗೆ ಯಶಸ್ಸು ತಂದುಕೊಡಲಿದೆ. ಹಾವು ಮತ್ತು ಸೇಬಿನ ಸಂಕೇತವು ನಿಮಗೆ ಜೀವನದಲ್ಲಿ ಸಂತೋಷವನ್ನು ತರಲಿದೆ.

ಧನು

ಧನು

ಅಗ್ನಿಯ ರಾಶಿಯಾಗಿರುವ ಇದು ನಕ್ಷತ್ರ ಮತ್ತು ಸೂರ್ಯನನ್ನು ಪ್ರತಿನಿಧಿಸುವುದು. ಬಿಲ್ಲು ಮತ್ತು ಬಾಣದ ಸಂಕೇತವು ಈ ರಾಶಿಯವರಿಗೆ ಅದೃಷ್ಟ ತರಲಿದೆ. ಪ್ರೀತಿಯ ಜೀವನದಲ್ಲಿ ಯಶಸ್ಸಾಗಲು ಹೃದಯ ಮತ್ತು ಬಿಲ್ಲಿನ ಸಂಕೇತವಿರುವ ಪೆಂಡೆಂಟ್ ಧರಿಸಿ. ವೈವಾಹಿಕ ಜೀವನದಲ್ಲಿ ಸಂತೋಷ ಬೇಕೆಂದರೆ ಮುತ್ತಿನಲ್ಲೇ ಶ್ರೇಷ್ಠವಾಗಿರುವುದನ್ನು ಧರಿಸಿ.

ಮಕರ

ಮಕರ

ಈ ರಾಶಿಯು ಭೂಮಿಯ ರಾಶಿಯಾಗಿದ್ದು, ಯಾವುದೇ ರೀತಿಯ ಹರಳನ್ನು ಧರಿಸಿದರೂ ಇವರಿಗೆ ಅದೃಷ್ಟ ಒಲಿದು ಬರಲಿದೆ. ಗುಲಾಬಿ ಸ್ಪಟಿಕ ಶಿಲೆ ಈ ರಾಶಿಯವರಿಗೆ ತುಂಬಾ ಒಳ್ಳೆಯದು. ಇದನ್ನು ಧರಿಸಿದರೆ ತಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು. ವ್ಯಾಪಾರ ಮತ್ತು ಪ್ರೀತಿಯ ಜೀವನದಲ್ಲಿ ಸಿಲುಕಿ ಹಾಕುವುದನ್ನು ತಪ್ಪಿಸಲು ಅಂಥೆಸ್ಟ್ ಧರಿಸಿ.

ಕುಂಭ

ಕುಂಭ

ಇದು ವಾಯುವಿಗೆ ಸಂಬಂಧಪಟ್ಟ ರಾಶಿಯಾಗಿರುವ ಕಾರಣ ರೆಕ್ಕೆಯಿರುವ ವಸ್ತುಗಳು ಅದೃಷ್ಟ ತರಬಲ್ಲದು. ಅಪಘಾತಗಳನ್ನು ದೂರವಿರಿಸಬೇಕಾದರೆ ನೀವು ಜೀರುಂಡೆ ಸಂಕೇತ ಧರಿಸಬೇಕು. ಜೇನುನೊಣದ ಸಂಕೇತವು ಆರ್ಥಿಕ ಸಮಸ್ಯೆಯನ್ನು ನಿವಾರಿಸಲಿದೆ. ಪತಂಗವು ನಿಮ್ಮ ಕ್ರಿಯಾತ್ಮಕತೆಯ್ನು ಹೆಚ್ಚಿಸಲು ನೆರವಾಗುವುದು.

ಮೀನ

ಮೀನ

ಜಲ ರಾಶಿಯಾಗಿರುವ ಈ ರಾಶಿಯವರಿಗೆ ಅದೃಷ್ಟವೆಂದರೆ ಸಮುದ್ರ, ಅಲೆಗಳು, ನದಿಗಳು ಮತ್ತು ಜಲಪಾತಗಳು. ಇದನ್ನು ಹೊರತುಪಡಿಸಿ ಕೆಲವೊಂದು ಲೋಹಗಳು ಕೂಡ ಇವರಿಗೆ ಅದೃಷ್ಟ ತರಬಹುದು. ಬೆಳ್ಳಿಯು ಈ ರಾಶಿಯವರಿಗೆ ಅದೃಷ್ಟ ಲೋಹವಾದರೆ ಪಚ್ಚೆ ಅದೃಷ್ಟದ ಕಲ್ಲು. ವೈವಾಹಿಕ ಜೀವನದಲ್ಲಿ ಯಶಸ್ವಿಯಾಗಬೇಕಾದರೆ ನೀವು ಬೆಳ್ಳಿಯ ಡೊಲ್ಪಿನ್ ಸಂಕೇತ ಧರಿಸಿ.

English summary

Have You Wondered What The Lucky Charm For Your Zodiac Is?

Each zodiac sign has its own symbols and charms that can help protect you from bad luck as well as bring good energy into your life. All that you need to do is learn about the lucky charm according to your zodiac sign and keep the defined lucky charm as per your zodiac sign and see things change around you for good. Do remember that a lucky charm does not have to be something that you need to buy. It could be something or someone that has been close to you all your life! So, check out what your lucky charm is according to your zodiac sign, below..
Please Wait while comments are loading...
Subscribe Newsletter