For Quick Alerts
ALLOW NOTIFICATIONS  
For Daily Alerts

ಯಾವ ಬಗೆಯ ಆಹಾರವಾದರೇನು? ಇವರಿಗೆ ಹೊಟ್ಟೆ ತುಂಬಿದರೆ ಸಾಕು!

By Arshad
|

ಭಾರತೀಯರು ಜಿಹ್ವಾಪ್ರಿಯರು. ಅತಿಥಿಗಳು ಊಟ ಮಾಡಿದಷ್ಟೂ ಹೆಚ್ಚು ತೃಪ್ತಿಪಡುವುದು ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಅದರಲ್ಲೂ ಆಹಾರ ರುಚಿಯಾಗಿರಬೇಕೆಂದರೆ ಇದರಲ್ಲಿ ಯಾವುದೇ ರಿಯಾಯಿತಿ ತೋರುವುದಿಲ್ಲ. ಅದು ಬಿರಿಯಾನಿಯೇ ಇರಲಿ, ನಿಮ್ಮ ನೆಚ್ಚಿನ ಹೋಟೆಲಿನಿಂದ ಬಂದ ಚಿಕನ್ ಕಬಾಬ್ ಇರಲಿ, ರುಚಿಗಾಗಿ ಭಾರತೀಯರು ಇತರರಿಗಿಂತಲೂ ಒಂದು ಹೆಜ್ಜೆ ಹೆಚ್ಚೇ ನಡೆಯಲು ಸಿದ್ಧ. ಈ ರುಚಿಗಾಗಿ ಹೂವಿನ ಮೊಗ್ಗು, ಮರದ ಚೆಕ್ಕೆ, ಬೇರು, ಎಲೆ, ಇನ್ನೂ ಏನೇನನ್ನೋ ಮಸಾಲೆವಸ್ತುಗಳ ರೂಪದಲ್ಲಿ ಸೇವಿಸುತ್ತೇವೆ.

ಆದರೆ ಭಾರತೀಯರ ಅಡುಗೆಗಳು ಎಷ್ಟು ವೈವಿಧ್ಯಮಯವೋ ಕೆಲವು ಅಷ್ಟೇ ವಿಚಿತ್ರವೂ, ಕೇಳಲು ವಿಚಿತ್ರವೂ ಹೌದು. ಕೆಲವು ಸಂಯೋಜನೆಗಳಂತೂ ಹೊಸದಾಗಿಯೇ ಇದ್ದು ಒಂದು ಬಾರಿ ರುಚಿ ಕಂಡರೆ ಮತ್ತೊಮ್ಮೆ ಮಗದೊಮ್ಮೆ ಸವಿಯುವ ಮನಸ್ಸಾಗುತ್ತದೆ. ಉದಾಹರಣೆಗೆ ಉಪ್ಪಿಟ್ಟಿಗೆ ಮೊಸರು ಹಾಗೂ ಸಕ್ಕರೆ ಹಾಕಿ ತಿನ್ನುವುದು.

ಒಮ್ಮೆ ಪ್ರಯತ್ನಿಸಿ ನೋಡಿ, ಉಳಿದ ಉಪ್ಪಿಟ್ಟನ್ನು ಮೊಸರಿಲ್ಲದೇ ತಿನ್ನಲಾರಿರಿ. ಭಾರತೀಯ ಅಡುಗೆಗಳಲ್ಲಿ ಕೆಲವು ವಿಚಿತ್ರ ಖಾದ್ಯಗಳಿದ್ದು ಇದರ ಹೆಸರು ಕೇಳಿದರೇ ಸಾಕು ಹಣೆಯಲ್ಲಿ ನೆರಿಗೆ ಮೂಡುತ್ತವೆ. ಇವುಗಳಲ್ಲಿ ಹೆಚ್ಚಿನವನ್ನು ನಾವು ಇದುವರೆಗೆ ಕೇಳಿಯೇ ಇರಲಾರೆವು, ಬನ್ನಿ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ಈಗ ನೋಡೋಣ....

ಈರುಳ್ಳಿ ಹಲ್ವಾ

ಈರುಳ್ಳಿ ಹಲ್ವಾ

ಹಲ್ವಾ ಅಂದರೆ ಸಿಹಿಪದಾರ್ಥವಾಗಿದೆ. ಈರುಳ್ಳಿ, ಅಪ್ಪಟ ಖಾರದ ಪದಾರ್ಥ. ಇವೆರಡರ ಸಂಯೋಜನೆ ಹೇಗೆ ಸಾಧ್ಯ? ವಾಸ್ತವವಾಗಿ ಭಾರತದ ಕೆಲವು ಕಡೆಗಳಲ್ಲಿ ಇದು ಅತ್ಯಂತ ಜನಪ್ರಿಯ ಖಾದ್ಯ. ಇದನ್ನು ತಯಾರಿಸುವುದೇನೂ ಕಷ್ಟವಿಲ್ಲ. ಚಿಕ್ಕದಾಗಿ ಹೆಚ್ಚಿನ ಈರುಳ್ಳಿಯನ್ನು ಚಿಕ್ಕ ಉರಿಯಲ್ಲಿ ಬೆಣ್ಣೆ ಅಥವಾ ತುಪ್ಪದಲ್ಲಿ ಕೆಂಪಗಾಗಿ ಅಂಚು ಕಪ್ಪಗಾಗತೊಡಗುವವರೆಗೆ ಹುರಿದ ಬಳಿಕ ಹಾಲು ಸಕ್ಕರೆ ಹಾಕಿ ಅತಿ ಚಿಕ್ಕ ಉರಿಯಲ್ಲಿ ಹಾಲು ಇಂಗಿಸಿದರೆ ಸ್ವಾದಿಷ್ಟ ಈರುಳ್ಳಿ ಹಲ್ವಾ ಸಿದ್ಧ.

ಭೇಜಾ ಫ್ರೈ

ಭೇಜಾ ಫ್ರೈ

ಕುರಿಯ ಮೆದುಳಿನಿಂದ ತಯಾರಿಸಿದ ಈ ಖಾದ್ಯ ಎಷ್ಟೋ ಕಡೆಗಳಲ್ಲಿ ಜನಪ್ರಿಯ ಬೆಳಗ್ಗಿನ ನಾಷ್ಟಾ! ಇದರಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿದ್ದು ತಿನ್ನಬಾರದು ಎಂದು ವೈದ್ಯರು ಹೇಳಿದರೂ ಇದರ ರುಚಿ ವೈದ್ಯರ ಎಚ್ಚರಿಕೆಯನ್ನೂ ಮೀರಿ ತಿನ್ನಲು ಪ್ರೇರೇಪಿಸುತ್ತದೆ.

ಕೆಂಪಿರುವ ಚಟ್ನಿ

ಕೆಂಪಿರುವ ಚಟ್ನಿ

ಛತ್ತೀಸ್ ಘಡ ರಾಜ್ಯದಲ್ಲಿ ಛಾಪ್ರಾ ಎಂಬ ಖಾದ್ಯವೊಂದಿದೆ. ಇಲ್ಲಿನ ಮೂಲ ನಿವಾಸಿಗಳು ಕೆಂಪಿರುವೆ ಕಟ್ಟಿದ ಕೊಟ್ಟೆಯನ್ನು ಒಡೆದು ಇದರಿಂದ ಉದುರುವ ಇರುವೆಯ ಮೊಟ್ಟೆಗಳನ್ನು ಚಟ್ನಿ ಮಾಡಿ ಖಾದ್ಯ ತಯಾರಿಸಿ ಸವಿಯುತ್ತಾರೆ. ಕರ್ನಾಟಕದಲ್ಲಿಯೂ ಕೆಲವು ಕಡೆ ಈ ಖಾದ್ಯವನ್ನು ಸವಿಯುತ್ತಾರೆ.

ಶಾರ್ಕ್ ಮೀನಿನ ಮರಿಯ ಸಾರು

ಶಾರ್ಕ್ ಮೀನಿನ ಮರಿಯ ಸಾರು

ಶಾರ್ಕ್ ಮೀನಿನ ಚಿಕ್ಕ ಚಿಕ್ಕ ಮರಿಗಳು ದುರ್ಲಭವಾಗಿ ಸಿಗುತ್ತವೆ. ಆದರೆ ಹೀಗೆ ಸಿಕ್ಕ ಮರಿಗಳಿಗೆ ಗೋವಾದಲ್ಲಿ ಭಾರೀ ಬೇಡಿಕೆ ಇದೆ. ಗೋವಾದ ಸಾಂಪ್ರಾದಾಯಿಕ ಅಡುಗೆಯ ವಿಧಾನದ ಮೂಲಕ ಈ ಮೀನಿನ ಸಾರು ತುಂಬಾ ರುಚಿಕರವಾಗಿದ್ದು ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

ಭಾಂಗ್ ಪಕೋಡ

ಭಾಂಗ್ ಪಕೋಡ

ಭಾಂಗ್ ಅಂದರೆ ಒಂದು ಮಾದಕ ಪದಾರ್ಥವಾಗಿದೆ. ಸಾಮಾನ್ಯವಾಗಿ ಹೋಳಿ ಮತ್ತು ಶಿವರಾತ್ರಿಯ ಸಮಯದಲ್ಲಿ ಈ ಎಲೆಗಳನ್ನು ಗೊಟಾಯಿಸಿ ಕುಡಿಯುವ ಮೂಲಕ ಮದ್ಯದ ಅಮಲು ಏರುತ್ತದೆ. ಇದೇ ಎಲೆಗಳನ್ನು ಪಕೋಡದ ಹಿಟ್ಟಿನಲ್ಲಿ ಬೆರೆಸಿ ಹುರಿದು ತಿನ್ನಲಾಗುತ್ತದೆ

ದೌಲತ್ ಕೀ ಚಾಟ್

ದೌಲತ್ ಕೀ ಚಾಟ್

ದೌಲತ್ ಎಂದರೆ ಹಣ. ಹಣದ ಚಾಟ್ ಎಂಬ ಹೊಸ ಖಾದ್ಯವೊಂದು ದೆಹಲಿಯ ಗಾಡ್ಸ್ ಓವ್ ಫುಡ್ ಸ್ಟ್ರೀಟ್ ಎಂಬ ರಸ್ತೆಯಲ್ಲಿ ತುಂಬಾ ಜನಪ್ರಿಯವಾಗಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಹಾಲನ್ನು ದಪ್ಪತಳದ ಅಗಲ ಪಾತ್ರೆಯಲ್ಲಿ ಚಿಕ್ಕ ಉರಿಯಲ್ಲಿ ತುಂಬಾ ಹೊತ್ತು ಕುದಿಸಿ ಗಾಢವಾಗಿಸಲಾಗುತ್ತದೆ.

ಬೌ ಬೌ ಮಟನ್!

ಬೌ ಬೌ ಮಟನ್!

ಇದು ಹೆಚ್ಚಿನವರು ಕೇಳಲೂ ಇಷ್ಟಪಡದ ಖಾದ್ಯವಾಗಿದೆ. ಆದರೆ ನಾಗಾಲ್ಯಾಂಡ್ ಹಾಗೂ ಮಿಜೋರಾಂ ನಲ್ಲಿ ಇದು ಜನಪ್ರಿಯವಾದ ಖಾದ್ಯವಾಗಿದ್ದು ಕೋಳಿಮಾಂಸಕ್ಕಿಂತಲೂ ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತದೆ.

ಎರಿ ಪೋಲು

ಎರಿ ಪೋಲು

ನೋಡಲಿಕ್ಕೆ ಶ್ಯಾವಿಗೆ ಪಾಯಸದಂತೆ ಕಾಣುವ ಈ ಖಾದ್ಯ ವಾಸ್ತವವಾಗಿ ರೇಶ್ಮೆ ಹುಳುಗಳ ಮರಿಗಳಾಗಿದ್ದು ಅಸ್ಸಾಂ ರಾಜ್ಯದಲ್ಲಿ ಜನಪ್ರಿಯವಾಗಿದೆ.

ಕಪ್ಪಕ್ಕಿ

ಕಪ್ಪಕ್ಕಿ

ಮ್ಯಾಜಿಕ್ ಅಕ್ಕಿ ಎಂದೂ ಕರೆಯಲ್ಪಡುವ ಈ ಅಕ್ಕಿ ಇಂಡೋನೀಶಿಯಾ ಮತ್ತು ಥಾಯ್ಲೆಂಡ್ ಮೂಲವಾಗಿದ್ದು ಯಾವಾಗ ಕೇರಳಕ್ಕೆ ಆಗಮಿಸಿತೋ ಆಗಿನಿಂದ ಕೇರಳೀಯರ ನೆಚ್ಚಿನ ಅಕ್ಕಿಯಾಗಿದೆ. ಇದು ಹೆಚ್ಚು ಪೌಷ್ಟಿಕ ಹಾಗೂ ಆರೋಗ್ಯಕರವಾಗಿದ್ದು ಕೇರಳ, ಮಣಿಪುರ ಮತ್ತು ಬಂಗಾಳರಾಜ್ಯದ ಉತ್ತರ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿದೆ.

ಬೇನಾಮಿ ಖೀರ್

ಬೇನಾಮಿ ಖೀರ್

ಬೇನಾಮಿ ಅಂದರೆ ಹೆಸರಿಲ್ಲದ ಎಂದರ್ಥ. ಖೀರು ಸಿಹಿಪದಾರ್ಥವಾಗಿದೆ. ಆದರೆ ಇದರಲ್ಲಿ ಬೆಳ್ಳುಳ್ಳಿ ಹಾಕಿದರೆ? ಹೆಸರು ಹೆಚ್ಚಿನವರಿಗೆ ಇಷ್ಟವಾಗದಿರಬಹುದು ಎಂದೇ ಇದಕ್ಕೆ ಬೇನಾಮಿ ಎಂಬ ಹೆಸರು ಬಂದಿರಬಹುದು. ಕಾರಣವೇನೇ ಇರಲಿ, ಹಾಲಿನಲ್ಲಿ ಜಜ್ಜಿದ ಬೆಳ್ಳುಳ್ಳಿಯನ್ನು ಚಿಕ್ಕ ಉರಿಯಲ್ಲಿ ಘಂಟೆಘಟ್ಟಲೇ ಕುದಿಸಿ ಈ ಸಿಹಿಪದಾರ್ಥವನ್ನು ತಯಾರಿಸಲಾಗುತ್ತದೆ ಹಾಗೂ ಮೊಘಲರ ಕಾಲದಿಂದಲೂ ಉತ್ತರ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ.ಒಂದು ವೇಳೆ ನಿಮ್ಮಲ್ಲಿ ಇಂತಹ ವಿಚಿತ್ರ ಆಹಾರಗಳ ಬಗ್ಗೆ ಮಾಹಿತಿ ಇದ್ದರೆ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ.

English summary

Have You Heard About Onion Halwa? Here Are Bizarre Things That Indians Eat!

Indians love food and there is nothing that they would wish to compromise on. Be it the biryani or the chicken kebab from their favourite restaurant, they would always love to go a step ahead to taste it. Here are some of the most bizarre food items that people in India relish. We bet being Indians, most of us are not even aware of some of these food items.
X
Desktop Bottom Promotion