ಅಕ್ಷರದಲ್ಲಿದೆ ಸ್ವಭಾವದ ಮಹಿಮೆ...ನೀವೂ ತಿಳಿಯಿರಿ ಇವುಗಳನ್ನೊಮ್ಮೆ

By Arshad
Subscribe to Boldsky

ಯಾವುದೇ ವ್ಯಕ್ತಿಯ ವ್ಯಕ್ತಿತ್ವವನ್ನು ಆತನ ಹೆಸರು ನಿರ್ಧರಿಸುತ್ತದೆಯೇ? ದಾರ್ಶನಿಕರ ಪ್ರಕಾರ ಹೆಸರು ನೇರವಾಗಿ ನಿರ್ಧರಿಸದಿದ್ದರೂ ಇದರ ಅರ್ಥ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜನ್ಮ ದಿನಾಂಕದ ರಾಶಿಫಲ ಹೇಗೋ ಹಾಗೆಯೇ ಹೆಸರಿನ ಪ್ರಥಮ ಅಕ್ಷರವೂ ವ್ಯಕ್ತಿತ್ವವನ್ನು ರೂಪಿಸುತ್ತದೆ. ನಿಮ್ಮ ಹೆಸರು "S" ಅಕ್ಷರದಿಂದ ಪ್ರಾರಂಭವಾಗುತ್ತದೆಯೇ?

ಈ ಬಗ್ಗೆ ಕೆಲವಾರು ಸ್ವಾರಸ್ಯಕರ ಸಂಗತಿಗಳನ್ನು ಕಂಡುಕೊಂಡಿದ್ದು ಹೆಸರಿನ ಮೊದಲ ಅಕ್ಷರ ಹೇಗೆ ಪ್ರಭಾವ ಶಾಲಿಯಾಗಿದೆ ಎಂದುದನ್ನು ನೋಡೋಣ. ಆಂಗ್ಲ ವರ್ಣಮಾಲೆಯ ಎಲ್ಲಾ 26 ಅಕ್ಷರಗಳಿಂದ ಪ್ರಾರಂಭವಾಗುವ ವ್ಯಕ್ತಿಗಳ ಹೆಸರು ಅವರ ವ್ಯಕ್ತಿತ್ವವನ್ನು ಹೇಗೆ ವ್ಯಕ್ತಪಡಿಸುತ್ತಿದೆ ನೋಡೋಣ.....  

ಅಕ್ಷರ “A” ನಿಂದ ಪ್ರಾರಂಭವಾಗುವ ಹೆಸರುಗಳು

ಅಕ್ಷರ “A” ನಿಂದ ಪ್ರಾರಂಭವಾಗುವ ಹೆಸರುಗಳು

ಈ ಅಕ್ಷರ ಪ್ರಥಮ ಅಕ್ಷರವಾಗಿದ್ದು ಈ ಅಕ್ಷರ ಪ್ರಾಧಾನ್ಯತೆಯನ್ನು ಬಿಂಬಿಸುತ್ತದೆ. ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಅತಿ ಹೆಚ್ಚು ಆತ್ಮವಿಶ್ವಾಸ ಹೊಂದಿರುತ್ತಾರೆ.

ಅಕ್ಷರ “B”ನಿಂದ ಪ್ರಾರಂಭವಾಗುವ ಹೆಸರುಗಳು

ಅಕ್ಷರ “B”ನಿಂದ ಪ್ರಾರಂಭವಾಗುವ ಹೆಸರುಗಳು

ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಹುಡುಗಾಟದ ವ್ಯಕ್ತಿತ್ವ ಹೊಂದಿದ್ದು ಹೆಚ್ಚು ಭಾವನಾತ್ಮಕ ವ್ಯಕ್ತಿಗಳೂ ಆಗಿರುತ್ತಾರೆ. ಇವರು ಧೈರ್ಯಶಾಲಿಗಳೂ ಯಾವುದೇ ವಿಷಯದಲ್ಲಿ ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳದವರೂ ಆಗಿರುತ್ತಾರೆ. ಇವರು ತಮ್ಮ ಜೀವನ ಸಂಗಾತಿಗಳನ್ನು ಹೇಗೆ ಮುದ್ದಿಸಬೇಕು ಎಂಬ ಕಲೆಯನ್ನು ಅರಿತವರಾಗಿದ್ದು ತಾವೂ ಮುದ್ದಿಸಲ್ಪಡಬೇಕು ಎಂಬ ಹಂಬಲವುಳ್ಳವರಾಗಿರುತ್ತಾರೆ.

ಅಕ್ಷರ “C” ನಿಂದ ಪ್ರಾರಂಭವಾಗುವ ಹೆಸರುಗಳು

ಅಕ್ಷರ “C” ನಿಂದ ಪ್ರಾರಂಭವಾಗುವ ಹೆಸರುಗಳು

ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಕುಶಲರೂ, ಹೆಚ್ಚು ವಿಷಯದಲ್ಲಿ ಪಾಂಡಿತ್ಯ ಹೊಂದಿರುವವರೂ, ಉತ್ತಮ ಸ್ಪರ್ಧಿಗಳೂ ಆಗಿರುತ್ತಾರೆ. ಇವರು ಶಾಂತ ಸ್ವಭಾವದವರೂ, ಉದಾರ ಮನಸ್ಸಿನವರೂ ಆಗಿದ್ದು ಖರ್ಚಿನ ವಿಷಯ ಬಂದಾಗಲೂ ಕೊಂಚ ಹೆಚ್ಚೇ ಉದಾರವಾಗಿ ಖರ್ಚು ಮಾಡುವವರಾಗಿರುತ್ತಾರೆ.

ಅಕ್ಷರ “D”ನಿಂದ ಪ್ರಾರಂಭವಾಗುವ ಹೆಸರುಗಳು

ಅಕ್ಷರ “D”ನಿಂದ ಪ್ರಾರಂಭವಾಗುವ ಹೆಸರುಗಳು

ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಅತಿ ಹೆಚ್ಚು ಮನೋಬಲವನ್ನು ಹೊಂದಿರುತ್ತಾರೆ. ಇವರಿಗೆ ವ್ಯಾಪಾರ, ನಿರಂತರ ಪರಿಶ್ರಮ ಮತ್ತು ಅಧಿಕಾರದ ಗುಣಗಳು ರಕ್ತಗತವಾಗಿ ಬಂದಿದ್ದು ಇವರು ತಮ್ಮ ಮೂಲತತ್ವವನ್ನು ಕಟ್ಟುನಿಟ್ಟಾಗಿ ಪಾಲಿಸುವ ಗುಣ ಹೊಂದಿರುತ್ತಾರೆ. ಸಾಮಾನ್ಯವಾಗಿ ಈ ಹೆಸರಿನವರು ವ್ಯಾಪಾರವನ್ನೇ ತಮ್ಮ ಕಸುಬಾಗಿ ಸ್ವೀಕರಿಸುತ್ತಾರೆ.

ಅಕ್ಷರ “E” ನಿಂದ ಪ್ರಾರಂಭವಾಗುವ ಹೆಸರುಗಳು

ಅಕ್ಷರ “E” ನಿಂದ ಪ್ರಾರಂಭವಾಗುವ ಹೆಸರುಗಳು

ಈ ಅಕ್ಷರ ಸಂವಹನವನ್ನು ಸೂಚಿಸುತ್ತದೆ. ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಸಹಾನುಭೂತಿಯುಳ್ಳ ವ್ಯಕ್ತಿಗಳಾಗಿದ್ದು ಉದಾರ ಮನಸ್ಸಿನವರೂ ಆಗಿರುತ್ತಾರೆ. ಇವರು ತಮ್ಮ ಸ್ವಾತಂತ್ರ್ಯಕ್ಕೆ ಹೆಚ್ಚಿನ ಮಹತ್ವ ನೀಡುವವರಾಗಿದ್ದು ತಮ್ಮ ವಿಷಯದಲ್ಲಿ ಇತರರು ಮೂಗು ತೂರಿಸುವುದನ್ನು ಇಷ್ಟಪಡುವುದಿಲ್ಲ.

ಅಕ್ಷರ “F”ನಿಂದ ಪ್ರಾರಂಭವಾಗುವ ಹೆಸರುಗಳು

ಅಕ್ಷರ “F”ನಿಂದ ಪ್ರಾರಂಭವಾಗುವ ಹೆಸರುಗಳು

ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಸ್ನೇಹಪರರೂ, ಮಾತಿಗೆ ತಪ್ಪದವರೂ ಮತ್ತು ನಂಬಿಕಸ್ತರೂ ಆಗಿರುತ್ತಾರೆ. ಇವರು ತಮ್ಮ ಸುತ್ತಮುತ್ತಲಿನವರೊಂದಿಗೆ ಸುಲಭವಾಗಿ ಹೊಂದಿಕೊಳ್ಳುವ ಸ್ವಭಾವದವರಾಗಿದ್ದು ಎದುರಿನವರು ನಿರಾಳತೆಯಿಂದಿರುವಂತೆ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಇವರು ಸಾಮಾನ್ಯವಾಗಿ ವಿನೋದ ವ್ಯಕ್ತಿತ್ವವುಳ್ಳವರಾಗಿದ್ದು ಮನರಂಜಕರೂ ಆಗಿರುತ್ತಾರೆ.

ಅಕ್ಷರ “G” ನಿಂದ ಪ್ರಾರಂಭವಾಗುವ ಹೆಸರುಗಳು

ಅಕ್ಷರ “G” ನಿಂದ ಪ್ರಾರಂಭವಾಗುವ ಹೆಸರುಗಳು

ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಅಸಾಂಪ್ರಾದಾಯಿಕವಾಗಿ ನಟಿಸುವ ವ್ಯಕ್ತಿತ್ವ ಹೊಂದಿರುತ್ತಾರೆ. ಇವರು ಕ್ರಿಯಾತ್ಮಕರೂ, ಪರ್ಯಾಯವಾಗಿ ಯೋಚಿಸುವ ಚಿಂತಕೂ ಹಾಗೂ ತಮ್ಮ ಅಂತರಾಳ ಹೇಳುವ ಮಾತನ್ನೇ ಹೆಚ್ಚು ಕೇಳುವ ವ್ಯಕ್ತಿಗಳಾಗಿರುತ್ತಾರೆ.

ಅಕ್ಷರ “H” ನಿಂದ ಪ್ರಾರಂಭವಾಗುವ ಹೆಸರುಗಳು

ಅಕ್ಷರ “H” ನಿಂದ ಪ್ರಾರಂಭವಾಗುವ ಹೆಸರುಗಳು

ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಯಶಸ್ಸನ್ನು ಇಷ್ಟಪಡುವವರೂ, ಸ್ವಯಂಪೂರ್ಣರೂ ಮತ್ತು ಧನಸಂಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡುವವರೂ ಆಗಿರುತ್ತಾರೆ. ಇವರು ಸ್ವಪ್ರೇರಣೆಯಿಂದ ಮುನ್ನುಗ್ಗುವವರೂ, ಸುತ್ತಮುತ್ತಲಿನವರನ್ನು ಸುಲಭವಾಗಿ ನಿಯಂತ್ರಿಸುವವರೂ ಆಗಿರುತ್ತಾರೆ. ಇವರು ಕಲಾಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಸಾಧಿಸುವವರಾಗಿರುತ್ತಾರೆ.

ಅಕ್ಷರ “I” ನಿಂದ ಪ್ರಾರಂಭವಾಗುವ ಹೆಸರುಗಳು

ಅಕ್ಷರ “I” ನಿಂದ ಪ್ರಾರಂಭವಾಗುವ ಹೆಸರುಗಳು

ಈ ಅಕ್ಷರ "ಯಾವುದು ಸರಿ" ಅಥವಾ ಧೈರ್ಯವನ್ನು ಬಿಂಬಿಸುತ್ತದೆ. ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ನೇರವಾಗಿ ನುಡಿಯುವ, ನುಡಿದಂತೆ ನಡೆಯುವ ವ್ಯಕ್ತಿತ್ವ ಹೊಂದಿದ್ದು ಉತ್ತಮ ಅಭಿರುಚಿಗಳನ್ನು ಮತ್ತು ಸುಂದರರಾಗಿ ಕಾಣಿಸಿಕೊಳ್ಳಲು ಇಚ್ಛಿಸುವ ವ್ಯಕ್ತಿಗಳಾಗಿರುತ್ತಾರೆ.

ಅಕ್ಷರ “J” ನಿಂದ ಪ್ರಾರಂಭವಾಗುವ ಹೆಸರುಗಳು

ಅಕ್ಷರ “J” ನಿಂದ ಪ್ರಾರಂಭವಾಗುವ ಹೆಸರುಗಳು

ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಸತತವಾಗಿ ಮುನ್ನುಗ್ಗುವ ವ್ಯಕ್ತಿತ್ವ ಹೊಂದಿದ್ದು ತಮಗೆ ಬೇಕಾದುದನ್ನು ಯಾವುದೇ ಕಾರಣಕ್ಕೂ ಪಡೆದೇ ತೀರುವ ಹಠವಾದಿಗಳೂ ಆಗಿರುತ್ತಾರೆ. ಇವರು ಪ್ರಾಮಾಣಿಕರೂ ಆಗಿದ್ದು ಇವರ ಜೀವನದ ಉದ್ದೇಶ ಕೊಂಚ ಕಠೋರವೂ ಆಗಿರುತ್ತದೆ. ಇವರು ತಮಗೆ ಸರಿಸಮನಾದ ಬುದ್ಧಿವಂತಿಕೆ ಹೊಂದಿರುವ ಅಥವಾ ತಮಗಿಂತಲೂ ಬುದ್ದಿವಂತರಾದ ಜೀವನಸಂಗಾತಿಗಳನ್ನೇ ಪಡೆಯಲು ಬಯಸುತ್ತಾರೆ.

ಅಕ್ಷರ “K” ನಿಂದ ಪ್ರಾರಂಭವಾಗುವ ಹೆಸರುಗಳು

ಅಕ್ಷರ “K” ನಿಂದ ಪ್ರಾರಂಭವಾಗುವ ಹೆಸರುಗಳು

ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಯಾವುದೇ ಗುಟ್ಟು ಬಿಟ್ಟು ಕೊಡದವರಾಗಿದ್ದು ಸಂಕೋಚದ ಸ್ವಭಾವದವರೂ ಆಗಿರುತ್ತಾರೆ. ಆದರೆ ತಮಗೆ ಬೇಕಾದುದನ್ನು ಪಡೆಯಬೇಕಾದರೆ ಇವರು ಯಾವುದೇ ಮಟ್ಟಕ್ಕೂ ಶ್ರಮಿಸಬಲ್ಲರು. ಇವರು ತಮ್ಮ ಪ್ರೀತಿಪಾತ್ರರಿಗೆ ಜೀವ ಕೊಡುವ ಸ್ನೇಹಿತರಾಗಿದ್ದು ತಮ್ಮ ಸ್ವಸಾಮರ್ಥ್ಯದ ಮೇಲೇ ಅವಲಂಬಿತರಾಗಲು ಇಚ್ಛಿಸುವ ವಕ್ತಿಗಳಾಗಿದ್ದಾರೆ.

ಅಕ್ಷರ “L”ನಿಂದ ಪ್ರಾರಂಭವಾಗುವ ಹೆಸರುಗಳು

ಅಕ್ಷರ “L”ನಿಂದ ಪ್ರಾರಂಭವಾಗುವ ಹೆಸರುಗಳು

ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಹೆಚ್ಚು ಕ್ರಿಯಾತ್ಮಕರೂ,ಪರಿಶ್ರಮಿಗಳೂ ಮತ್ತು ಒಂದು ಸ್ಥಳದಲ್ಲಿ ಸ್ಥಿತಗೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವವರೂ ಆಗಿದ್ದಾರೆ. ಇವರು ತಾವಾಗಿಯೇ ಏನಾದರೊಂದನ್ನು ಪ್ರಾರಂಭಿಸುವವರೂ, ಯಾವುದೇ ಸಂದರ್ಭವನ್ನೂ ಎದೆಗುಂದದೇ

ಎದುರಿಸುವವರೂ ಆಗಿರುತ್ತಾರೆ.

ಅಕ್ಷರ “M” ನಿಂದ ಪ್ರಾರಂಭವಾಗುವ ಹೆಸರುಗಳು

ಅಕ್ಷರ “M” ನಿಂದ ಪ್ರಾರಂಭವಾಗುವ ಹೆಸರುಗಳು

ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಧೈರ್ಯವಂತರೂ, ಬುದ್ಧಿವಂತರೂ ಮತ್ತು ಶ್ರಮಜೀವಿಗಳೂ ಆಗಿರುತ್ತಾರೆ. ಇವರಿಗೆ ಯಾವುದೇ ಕೆಲಸದಲ್ಲಿ ಅಡ್ಡಕಸುಬು ಇಷ್ಟವಾಗದ ವಿಷಯವಾಗಿರುತ್ತದೆ. ಇವರು ಸ್ನೇಹ ಮತ್ತು ಸ್ನೇಹಿತರಿಗೆ ಹೆಚ್ಚು ಬೆಲೆ ಕೊಡುವ ವ್ಯಕ್ತಿಗಳಾಗಿದ್ದು ಹೆಚ್ಚು ಭಾವನಾಶೀಲರೂ, ಸೂಕ್ಷ್ಮಪ್ರವೃತ್ತಿಯುಳ್ಳವರೂ ಆಗಿರುತ್ತಾರೆ. ಇವರು ಪರಿಸ್ಥಿತಿ ಬದಲಾಗುವುದನ್ನು ಕಾಯುವ ಬದಲು ತಾವೇ ಬದಲಾವಣೆಗೆ ಒಳಗಾಗಿ ಆ ಪರಿಸ್ಥಿತಿ ಎದುರಾಗುವುದನ್ನು ಬಯಸುತ್ತಾರೆ.

ಅಕ್ಷರ “N” ನಿಂದ ಪ್ರಾರಂಭವಾಗುವ ಹೆಸರುಗಳು

ಅಕ್ಷರ “N” ನಿಂದ ಪ್ರಾರಂಭವಾಗುವ ಹೆಸರುಗಳು

ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಶ್ರಮಜೀವಿಗಳಾಗಿದ್ದು ಎಲ್ಲರೊಡನೆ ಬೆರೆಯುವ ಸ್ವಭಾವದವರಾಗಿರುತ್ತಾರೆ. ಇವರು ಬರವಣಿಗೆ ಅಥವಾ ಕಲಾಪ್ರಾಕಾರವೊಂದರಲ್ಲಿ ಅತಿ ಹೆಚ್ಚಿನ ಕುಶಲತೆ ಹೊಂದಿದ್ದು ತಮ್ಮ ಭಾವನೆಗಳನ್ನು ಮತ್ತು ಜ್ಞಾನವನ್ನು ಇತರರಿಗೆ ಹಂಚುವಲ್ಲಿ ಹೆಚ್ಚಿನ ನೈಪುಣ್ಯ ಹೊಂದಿರುತ್ತಾರೆ. ಇವರು ಸಾಮಾನ್ಯವಾಗಿ ಸಂಕೋಚ ಸ್ವಭಾವದವರಂತೆ ಕಂಡರೂ ಇವರಿಗೆ ಅವಕಾಶ ಸಿಕ್ಕಾಗ ಈ ಭಾವನೆಯನ್ನು ಬದಲಿಸುತ್ತಾರೆ.

ಅಕ್ಷರ “O” ನಿಂದ ಪ್ರಾರಂಭವಾಗುವ ಹೆಸರುಗಳು

ಅಕ್ಷರ “O” ನಿಂದ ಪ್ರಾರಂಭವಾಗುವ ಹೆಸರುಗಳು

ಈ ಅಕ್ಷರ, ಶಿಕ್ಷಣ ಮತ್ತು ಜ್ಞಾನವನ್ನು ಬಿಂಬಿಸುತ್ತದೆ. ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ತಮ್ಮ ಜೀವನಸಂಗಾತಿಯನ್ನು ಚಿಕ್ಕ ವಯಸ್ಸಿನಲ್ಲಿಯೇ ಪಡೆದಿದ್ದು ಏಕಸಂಗಾತಿಗೆ ನಿಷ್ಠರಾಗಿರುತ್ತಾರೆ. ಇವರು ಉತ್ತಮ ಪ್ರೇಮಿಗಳೂ, ಜೀವನವನ್ನು ಪ್ರೀತಿಸುವವರೂ, ತಮ್ಮ ಸುತ್ತಮುತ್ತಲಿನವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವವರೂ ಆಗಿರುತ್ತಾರೆ.

ಅಕ್ಷರ “P”ನಿಂದ ಪ್ರಾರಂಭವಾಗುವ ಹೆಸರುಗಳು

ಅಕ್ಷರ “P”ನಿಂದ ಪ್ರಾರಂಭವಾಗುವ ಹೆಸರುಗಳು

ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ತೀಕ್ಷ್ಣಮತಿಗಳೂ, ಬುದ್ಧಿವಂತರೂ ಹಾಗೂ ಕ್ರಿಯಾತ್ಮಕರೂ ಆಗಿರುತ್ತಾರೆ. ಇವರು ಸಾಮಾನ್ಯವಾಗಿ ಬಾಯಿಬಡುಕರಾಗಿದ್ದು ಸದಾ ಮಾತನಾಡುತ್ತಲೇ ಇರಲು ಇಷ್ಟಪಡುವ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ವಯಸ್ಸಿಗೆ ಮೀರಿದ ಪಾಂಡಿತ್ಯವನ್ನು ಹೊಂದಿರುತ್ತಾರೆ.

ಅಕ್ಷರ ”Q” ನಿಂದ ಪ್ರಾರಂಭವಾಗುವ ಹೆಸರುಗಳು

ಅಕ್ಷರ ”Q” ನಿಂದ ಪ್ರಾರಂಭವಾಗುವ ಹೆಸರುಗಳು

ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಲೇಖನಿಯನ್ನೇ ತಮ್ಮ ಅಸ್ತ್ರವನ್ನಾಗಿಸಿಕೊಳ್ಳುವವರಾಗಿರುತ್ತಾರೆ. ಇವರು ತಮ್ಮ ಕಾರ್ಯಕ್ಷೇತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿರುತ್ತಾರೆ ಹಾಗೂ ಚರ್ಚೆಯ ವಿಷಯ ಬಂದಾಗ ಇವರನ್ನು ಸೋಲಿಸುವುದು ಬಹಳ ಕಷ್ಟವಾಗುತ್ತದೆ.

ಅಕ್ಷರ “R” ನಿಂದ ಪ್ರಾರಂಭವಾಗುವ ಹೆಸರುಗಳು

ಅಕ್ಷರ “R” ನಿಂದ ಪ್ರಾರಂಭವಾಗುವ ಹೆಸರುಗಳು

ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ನಿಷ್ಠಾವಂತರೂ, ಸುತ್ತಮುತ್ತಲ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವವರೂ ಮತ್ತು ಪ್ರೀತಿಪಾತ್ರರೂ ಆಗಿರುತ್ತಾರೆ. ಇವರು ಯಾವುದೇ ವ್ಯಕ್ತಿಯೊಂದಿಗೆ ಅಲ್ಪಕಾಲದಲ್ಲಿಯೇ ವಿಶ್ವಾಸ ಬೆಳೆಸಿಕೊಳ್ಳುತ್ತಾರೆ. ಇವರಿಗೆ ಸವಾಲುಗಳನ್ನು ಎದುರಿಸುವುದು ಇಷ್ಟವಾದ ಕ್ರಿಯೆಯಾಗಿದ್ದು ತಮ್ಮ ಕೆಲಸಗಳನ್ನು ಪೂರ್ಣಗೊಳಿಸದೇ ವಿರಾಮ ಪಡೆಯದಿರುವ ವ್ಯಕ್ತಿತ್ವ ಹೊಂದಿರುತ್ತಾರೆ. ಇವರು ಶಾಂತಿಯುತ ಜೀವನವನ್ನು ನಡೆಸಲು ಹೆಚ್ಚು ಇಷ್ಟಪಡುತ್ತಾರೆ.

ಅಕ್ಷರ “S”ನಿಂದ ಪ್ರಾರಂಭವಾಗುವ ಹೆಸರುಗಳು

ಅಕ್ಷರ “S”ನಿಂದ ಪ್ರಾರಂಭವಾಗುವ ಹೆಸರುಗಳು

ಈ ಅಕ್ಷರ ಕಾಮ, ಆಕರ್ಷಣೆ ಮತ್ತು ಭಾವಪೂರ್ಣತೆಯ ಸಂಕೇತವಾಗಿದೆ. ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಆಕರ್ಷಣೆಯ ಕೇಂದ್ರವಾಗಿರಲು ಇಚ್ಛಿಸುತ್ತಾರೆ. ಇವರು ತಮ್ಮ ಜೀವನದ ಗುರಿಯನ್ನು ಸಾಧಿಸಲು ಹೆಚ್ಚು ಪರಿಶ್ರಮ ಪಡುವ ವ್ಯಕ್ತಿಗಳಾಗಿದ್ದು ಜೀವನದಲ್ಲಿ ಹೆಚ್ಚಿನ ಧನಸಂಪಾದನೆಯ ಗುರಿಯನ್ನು ಹೊಂದಿರುತ್ತಾರೆ. ಇವರು ಪ್ರಾಮಾಣಿಕರೂ, ಹಲವಾರು ಅಭಿರುಚಿಗಳನ್ನು ಹೊಂದಿರುವವರೂ ಮತ್ತು ದೊಡ್ಡ ದೊಡ್ಡ ಕನಸುಗಳನ್ನು ಕಾಣುವವರೂ ಆಗಿದ್ದಾರೆ.

ಅಕ್ಷರ “T” ನಿಂದ ಪ್ರಾರಂಭವಾಗುವ ಹೆಸರುಗಳು

ಅಕ್ಷರ “T” ನಿಂದ ಪ್ರಾರಂಭವಾಗುವ ಹೆಸರುಗಳು

ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ನಮ್ಮ ವೃತ್ತಿಗೆ ಹೆಚ್ಚಿನ ಆದ್ಯತೆ ನೀಡುವ ವ್ಯಕ್ತಿಗಳಾಗಿದ್ದು ತಮ್ಮ ಸುತ್ತಮುತ್ತಲಿನವರೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಇಚ್ಛಿಸುವ ವ್ಯಕ್ತಿಗಳಾಗಿದ್ದಾರೆ. ಆದರೆ ಇವರು ತಮ್ಮ ಸಂಪರ್ಕದಲ್ಲಿರುವವರು ಬೇರೊಬ್ಬರೊಂದಿಗೆ ಸಲುಗೆಯಿಂದಿರುವುದನ್ನು ಕಂಡರೆ ಸಹಿಸದ ವ್ಯಕ್ತಿತ್ವ ಹೊಂದಿರುತ್ತಾರೆ.

ಅಕ್ಷರ “U” ನಿಂದ ಪ್ರಾರಂಭವಾಗುವ ಹೆಸರುಗಳು

ಅಕ್ಷರ “U” ನಿಂದ ಪ್ರಾರಂಭವಾಗುವ ಹೆಸರುಗಳು

ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ತಮ್ಮ ಸ್ಥಳವನ್ನು ಅಸ್ತವ್ಯಸ್ತವಾಗಿರಿಸಿಕೊಂಡಿರುವವರೂ, ಅನಗತ್ಯ ವಸ್ತುಗಳನ್ನು ಸಂಗ್ರಹಿಸುವವರೂ ಆಗಿರುತ್ತಾರೆ. ಇವರಿಗೆ ಸಾಹಸ, ಉದ್ವೇಗ ಮತ್ತು ಸ್ವಾತಂತ್ರ್ಯ ಇಷ್ಟವಾಗಿದ್ದು ಇದೇ ನಿಟ್ಟಿನಲ್ಲಿ ತಮ್ಮ ಉದ್ಯೋಗಗಳನ್ನೂ ಆರಿಸಿಕೊಳ್ಳುತ್ತಾರೆ.

ಅಕ್ಷರ “V”ನಿಂದ ಪ್ರಾರಂಭವಾಗುವ ಹೆಸರುಗಳು

ಅಕ್ಷರ “V”ನಿಂದ ಪ್ರಾರಂಭವಾಗುವ ಹೆಸರುಗಳು

ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಪ್ರೀತಿಪಾತ್ರವೂ, ಬದ್ಧತೆಯನ್ನು ಕಾಯ್ದುಕೊಳ್ಳುವವರೂ ಮತ್ತು ಉದಾರ ಮನಸ್ಸಿನವರೂ ಆಗಿರುತ್ತಾರೆ. ಇವರ ಉತ್ಸಾಹ ಎಲ್ಲೆ ಮೀರುವಂತಹದ್ದಾಗಿದ್ದು ಹಿಡಿದ ಕೆಲಸ ಪೂರ್ಣಗೊಳ್ಳುವವರೆಗೂ ವಿಶ್ರಾಂತಿ ಬಯಸದ ವ್ಯಕ್ತಿತ್ವ ಹೊಂದಿರುತ್ತಾರೆ.

ಅಕ್ಷರ “W” ನಿಂದ ಪ್ರಾರಂಭವಾಗುವ ಹೆಸರುಗಳು:

ಅಕ್ಷರ “W” ನಿಂದ ಪ್ರಾರಂಭವಾಗುವ ಹೆಸರುಗಳು:

ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ತಾವು ಸುಂದರರಾಗಿ ಕಾಣಬೇಕೆಂಬ ಇಚ್ಚೆಯುಳ್ಳವರೂ, ಆಕರ್ಷಕ ವರ್ಚಸ್ಸಿನವರೂ ಮತ್ತು ಉತ್ತಮ ಪ್ರೇಮಿಗಳೂ ಆಗಿರುತ್ತಾರೆ. ಇವರನ್ನು ಅರ್ಥ ಮಾಡಿಕೊಳ್ಳುವುದು ಕೊಂಚ ಕಷ್ಟಕರವಾಗಿದ್ದು ಇವರ ಬಗ್ಗೆ ತಿಳಿದುಕೊಳ್ಳುವುದರಿಂದ ಇತರರಿಗೆ ಲಾಭವೇ ಆಗುತ್ತದೆ. ಇವರು ತಮ್ಮ ಮನಸ್ಸಿನಲ್ಲಿರುವುದನ್ನು ನೇರವಾಗಿ ಹೇಳುವ ಸ್ವಭಾವದವರಾಗಿದ್ದು ತಮ್ಮ ಏಕಾಂತವನ್ನು ಇಷ್ಟಪಡುವವರೂ ಮತ್ತು ರಕ್ಷಣಾತ್ಮಕರೂ ಆಗಿರುತ್ತಾರೆ.

ಅಕ್ಷರ “X” ನಿಂದ ಪ್ರಾರಂಭವಾಗುವ ಹೆಸರುಗಳು

ಅಕ್ಷರ “X” ನಿಂದ ಪ್ರಾರಂಭವಾಗುವ ಹೆಸರುಗಳು

ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಆರಾಮಜೀವಿಗಳೂ ನಾಯಕನನ್ನು ಹಿಂಬಾಲಿಸುವವರೂ ಆಗಿರುತ್ತಾರೆ. ಇವರಿಗೆ ಒಂದೇ ಕಡೆ ಅಥವಾ ಒಂದೇ ಸಂಬಂಧದಲ್ಲಿ ಕಟಿಬದ್ಧತೆ ಇಷ್ಟವಿಲ್ಲದ ಸಂಗತಿಯಾಗಿದ್ದು ವಿರುದ್ಧ ಲಿಂಗಿಗಳೊಡನೆ ಕಾಡು ಹರಟೆ ಹೊಡೆಯುವುದು ಇವರಿಗೆ ರಕ್ತಗತವಾಗಿ ಬಂದಿರುವ ಗುಣವಾಗಿದೆ.

ಅಕ್ಷರ “Y” ನಿಂದ ಪ್ರಾರಂಭವಾಗುವ ಹೆಸರುಗಳು

ಅಕ್ಷರ “Y” ನಿಂದ ಪ್ರಾರಂಭವಾಗುವ ಹೆಸರುಗಳು

ಈ ಅಕ್ಷರ ಸ್ವಾತಂತ್ರ್ಯ ಮತ್ತು ಬಿಡುಗಡೆಯ ಸಂಕೇತವಾಗಿದೆ. ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಧೈರ್ಯವಂತರೂ ವ್ಯಾಪಾರದಲ್ಲಿ ಹೆಚ್ಚು ಉತ್ಸುಕರೂ ಆಗಿರುತ್ತಾರೆ. ಇವರು ಯಾವುದೇ ವಿಷಯದಲ್ಲಿ ಮುನ್ನುಗ್ಗಿ ಪರಿಸ್ಥಿತಿಯನ್ನು ಎದುರಿಸಿ ಗೆಲ್ಲಲು ಉತ್ಸುಕರಾಗಿರುತ್ತಾರೆ.

ಅಕ್ಷರ “Z” ನಿಂದ ಪ್ರಾರಂಭವಾಗುವ ಹೆಸರುಗಳು

ಅಕ್ಷರ “Z” ನಿಂದ ಪ್ರಾರಂಭವಾಗುವ ಹೆಸರುಗಳು

ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ನಂಬಿಕಸ್ತರೂ ಸದಾ ಸ್ನೇಹಿತರ ಒಡನಾಟದಲ್ಲಿರಲು ಇಚ್ಛಿಸುವ ವ್ಯಕ್ತಿಗಳೂ ಆಗಿರುತ್ತಾರೆ. ಇವರು ತಮ್ಮ ಪ್ರೇಮವನ್ನು ಪಡೆಯಲು ಯಾವುದೇ ಅಪಾಯವನ್ನು ಎದುರಿಸಲು ಸಿದ್ಧರಿರುತ್ತಾರೆ. ಒಮ್ಮೆ ಇವರು ತಮ್ಮ ಸ್ನೇಹ ಅಥವಾ ಸಂಬಂಧಕ್ಕೆ ಬದ್ಧರಾದರೋ, ಈ ಬದ್ಧತೆಯನ್ನು ಕಾಪಾಡಿಕೊಳ್ಳಲು ಇವರು ಶ್ರಮಿಸುತ್ತಾರೆ.

 
For Quick Alerts
ALLOW NOTIFICATIONS
For Daily Alerts

    English summary

    Have You Ever Wondered What Your Name Says About You?

    Check out this piece of information, as we are sharing the associated characteristics of all the 26 alphabets. Read on to know more. Have You Ever Wondered What Your Name Says About You?
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more