Latest Updates
-
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್! -
ದೆಹಲಿಯಲ್ಲಿ ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸೊಳ್ಳೆ ಮುಕ್ತವಾಗಿಸಲು 20 ನಿಮಿಷಗಳ ಈ ಚೆಕ್ಲಿಸ್ಟ್ ಬಳಸಿ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಕಲಬೆರಕೆ ಸಿಹಿತಿಂಡಿ ಪತ್ತೆ ಹಚ್ಚುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ -
ನವರಾತ್ರಿ 4ನೇ ದಿನ: ರಾಯಲ್ ಬ್ಲೂ ಡ್ರೆಸ್ ಕೋಡ್ನಲ್ಲಿ ಮಿಂಚಲು ಇಲ್ಲಿದೆ ಸಿಂಪಲ್ ಸ್ಟೈಲಿಂಗ್ ಟಿಪ್ಸ್! -
ನವರಾತ್ರಿ 4ನೇ ದಿನ: ಉಪವಾಸದ ನಡುವೆಯೂ ಗರ್ಬಾ ಆಡಲು ಬೇಕಾದ ಶಕ್ತಿ ಮತ್ತು ಆರೋಗ್ಯದ ರಹಸ್ಯ ಇಲ್ಲಿದೆ! -
ನವರಾತ್ರಿ ಗರ್ಬಾ ಸಂಭ್ರಮ: ಬೆಂಗಳೂರಿನ ಕಪಲ್ಸ್ ಎಂಜಾಯ್ ಮಾಡಲು ಇಲ್ಲಿದೆ ಬೆಸ್ಟ್ ಸೇಫ್ಟಿ ಟಿಪ್ಸ್ -
ದೆಹಲಿ ವಾಯು ಮಾಲಿನ್ಯ: ಮನೆಯೊಳಗೆ ಶುದ್ಧ ಗಾಳಿ ಪಡೆಯಲು 20 ನಿಮಿಷದ ಈ ಸರಳ ಟ್ರಿಕ್ಸ್ ಫಾಲೋ ಮಾಡಿ -
ಹಣದುಬ್ಬರದ ಬಿಸಿ: ₹120ರ ಬಜೆಟ್ನಲ್ಲಿ ಪೌಷ್ಟಿಕ ಹೈ-ಪ್ರೋಟೀನ್ ಊಟ ತಯಾರಿಸುವುದು ಹೇಗೆ? -
ನವರಾತ್ರಿ 3ನೇ ದಿನ: ಕೆಂಪು ಬಣ್ಣದ ಲುಕ್ನಲ್ಲಿ ಆಫೀಸ್ನಿಂದ ನೇರ ಗರ್ಬಾಗೆ ಮಿಂಚುವ ಸ್ಮಾರ್ಟ್ ಟಿಪ್ಸ್! -
ಮುಂಬೈನಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ, ಇಲ್ಲದಿದ್ದರೆ ಅಪಾಯ!
ಅನಾಥವಾಗಿ ಬಿದ್ದ ಆಸ್ಪತ್ರೆಯಲ್ಲಿ ಈಗ ಭೂತ-ಪ್ರೇತಗಳದ್ದೇ ಕಾರುಬಾರು!
ಕಂಪೆನಿಗಳು, ಕಾರ್ಖಾನೆಗಳು ಲಾಭವಿಲ್ಲದ ಕಾರಣದಿಂದ ಮುಚ್ಚಿ ಹೋಗುತ್ತದೆ. ಇವುಗಳು ಹಾಗೆ ಅನಾಥ ಕಟ್ಟಡಗಳಾಗಿ ಇರುತ್ತದೆ. ಅದೇ ರೀತಿ ಕೆಲವು ಆಸ್ಪತ್ರೆಗಳು ಕೂಡ ಮುಚ್ಚಿಹೋಗಿರುವಂತಹ ಉದಾಹರಣೆಗಳು ನಮ್ಮ ಮುಂದಿದೆ. ಇಂತಹ ಆಸ್ಪತ್ರೆಗಳಲ್ಲಿ ಹಲವಾರು ರೀತಿಯ ಸಲಕರಣೆಗಳು, ಬೇಡವಾಗಿರುವಂತಹ ದಾಖಲೆಗಳು ಮತ್ತು ಇತರ ಹಲವಾರು ರೀತಿಯ ಸಲಕರಣೆಗಳು ಲಭ್ಯವಿರುತ್ತದೆ.
ಇವುಗಳನ್ನು ನೋಡಿದರೆ ಅದೊಂದು ಭೂತ ಬಂಗಲೆಯಂತೆ ಕಾಣುತ್ತಾ ಇರುತ್ತದೆ. ಇಂತಹ ಅನಾಥ ಆಸ್ಪತ್ರೆಗಳ ಫೋಟೋಗಳನ್ನು ಕ್ಲಿಕ್ ಮಾಡಲಾಗಿದೆ. ಇದು ಯಾವ ರೀತಿಯಿಂದ ನೋಡಿದರೂ ತುಂಬಾ ಭಯಾನಕವಾಗಿ ಕಾಣಿಸುತ್ತದೆ. ಈ ಫೋಟೋಗಳು ನಿಜವಾಗಿಯೂ ಭೀತಿಯನ್ನು ಮೂಡಿಸುತ್ತದೆ.
ತಾನು ಯಾವುದಕ್ಕೂ ಹೆದರುವುದಿಲ್ಲವೆಂದು ಹೇಳುವ ವ್ಯಕ್ತಿ ಕೂಡ ಈ ಫೋಟೋಗಳನ್ನು ನೋಡಿ ಭೀತಿ ಪಡಲೇಬೇಕು. ಇಂತಹ ಫೋಟೋಗಳು ನಿಮಗೆ ಖಂಡಿತವಾಗಿಯೂ ಭೀತಿಯನ್ನು ಉಂಟು ಮಾಡುತ್ತದೆ. ಇದು ಹೇಗೆಂದು ಫೋಟೋ ನೋಡುತ್ತಾ ಸಾಗಿದಾಗ ನಿಮಗೆ ತಿಳಿದುಬರುತ್ತದೆ....

ಈ ರೋಗಿಯ ಹಿಂದೆ ಕಾಣಿಸುತ್ತಿರುವುದು ಏನು?
ಈ ಚಿತ್ರಕ್ಕೆ ಹೆಚ್ಚಿನ ವಿವರಣೆ ಬೇಕೆಂದು ನಮಗೆ ಅನಿಸುವುದಿಲ್ಲ. ಈ ಫೋಟೋದಲ್ಲಿ ಆಸ್ಪತ್ರೆಯಲ್ಲಿರುವ ರೋಗಿಯು ಭೂಮಿಯ ಮೇಲೆ ಸುತ್ತುತ್ತಿರುವಂತೆ ಮಾಡಿ. ಆತ್ಮವು ರೋಗಿಯ ಹಾಸಿಗೆಯಿಂದ ಇಣುಕಿ ನೋಡುತ್ತಿರುವಂತಿದೆ.

ಏಕಾಂಗಿಯಾಗಿರುವ ಕ್ರಿಸ್ಮಸ್ ಗಿಡ
ಈ ಫೋಟೋವನ್ನು ಅನಾಥಾಶ್ರಮದಿಂದ ತೆಗೆಯಲಾಗಿದೆ. ಫೋಟೋ ತೆಗೆಯುವಾಗ ಈ ಬೆಳಕು ಎಲ್ಲಿಂದ ಬಂದಿದೆ ಎಂದು ಯಾರಿಗೂ ಇದುವರೆಗೆ ತಿಳಿದುಬಂದಿಲ್ಲ. ಈ ಬೆಳಕು ಕ್ರಿಸ್ಮಸ್‌ಗಿಡದಂತೆ ಕಾಣುತ್ತಿದೆ ಎಂದು ಹೆಚ್ಚಿನ ವೀಕ್ಷಕರು ಫೋಟೋವನ್ನು ನೋಡಿ ಅಭಿಪ್ರಾಯಪಟ್ಟಿದ್ದಾರೆ. ಕ್ರಿಸ್ಮಸ್ ಆಚರಣೆ ಮಾಡಲು ಈ ಅನಾಥ ಸ್ಥಳವನ್ನು ಯಾಕೆ ಆಯ್ಕೆ ಮಾಡಿಕೊಂಡರು ಎನ್ನುವ ಬಗ್ಗೆ ಈಗಲೂ ಗೊಂದಲವಿದೆ.

ಕ್ಯಾಮೆರಾದಲ್ಲಿ ತೆವಳುವುದನ್ನು ಕಾಣಬಹುದು
ರೋಗಿಯ ಹಾಸಿಗೆ ಮೇಲೆ ಕಾಣಿಸಿಕೊಂಡಿರುವ ಈ ಭಯಾನಕ ವಸ್ತುವನ್ನು ಬ್ಲರ್ ಮಾಡಲಾಗಿದೆ. ಈ ಫೋಟೋವನ್ನು ತೆಗೆದಿರುವಂತಹ ನರ್ಸ್ ಪ್ರಕಾರ ಫೋಟೋ ತೆಗೆದ ದಿನದ ರಾತ್ರಿಯೇ ಆ ರೋಗಿ ಮೃತಪಟ್ಟಿದ್ದನಂತೆ.

ರಕ್ತದ ಸ್ಯಾಂಪಲ್‌ಗಳು!
ಈ ಫೋಟೋದಲ್ಲಿ ಕಾಣಿಸುತ್ತಿರುವಂತಹ ಬಾಟಲಿಗಳಲ್ಲಿ ತುಂಬಾ ವಿಚಿತ್ರವಾಗಿರುವ ಪದಾರ್ಥಗಳು ಮತ್ತು ವಸ್ತುಗಳು ಕಾಣಿಸಿಕೊಂಡಿದೆ. ಕೆಲವು ಬಾಟಲಿಗಳಲ್ಲಿ ರಕ್ತದ ಸ್ಯಾಂಪಲ್‌ಗಳು ಇವೆ. ಕಾಲು ಹಾಗೂ ಕೈಯ ಬೆರಳುಗಳು ಕೂಡ ಹಾಗೆ ಇದೆ.

ಹದಿಹರೆಯದ ರೋಗಿಯ ಪಿಶಾಚಿ
ಈ ಫೋಟೋದಲ್ಲಿ ಬಲದ ಬದಿಯಲ್ಲಿ ಸಣ್ಣ ಹುಡುಗಿಯು ನಿಂತಿರುವುದನ್ನು ನೀವು ನೋಡಿದ್ದೀರಾ? ಅನಾಥವಾಗಿರುವ ಆಸ್ಪತ್ರೆಯಲ್ಲಿ ಸಣ್ಣ ಹುಡುಗಿಯ ಆತ್ಮವು ತಿರುಗುತ್ತಿರುವಂತೆ ಇಲ್ಲಿ ಭಾಸವಾಗುತ್ತಿದೆ.

ಅನಾಥವಾಗಿ ಇರುವಂತಹ ಸಣ್ಣ ಸುರಂಗ
ಆಸ್ಪತ್ರೆಯಲ್ಲಿ ಕಾಣಸಿಗುವಂತಹ ಈ ಸುರಂಗವು ತುಂಬಾ ಭೀತಿಯನ್ನು ಉಂಟು ಮಾಡುತ್ತದೆ. ಕೆಲವರ ಪ್ರಕಾರ ಈ ಸುರಂಗದಿಂದ ರೋಗಿಗಳನ್ನು ಕೊಂಡೊಯ್ಯಲಾಗುತ್ತಿತ್ತು ಎಂದು ಹೇಳಲಾಗಿದೆ. ರೋಗಿಗಳನ್ನು ಕೊಂಡೊಯ್ಯುವಾಗ ಬೇರೆಯವರು ನೋಡಬಾರದು ಎನ್ನುವುದೇ ಇದರ ಉದ್ದೇಶವಾಗಿದೆ.

ಬಾಗಿಲ ಬದಿಯಲ್ಲಿ ಆತ್ಮ!
ಕೋಣೆಯ ಮೂಲೆಯಲ್ಲಿ ಆತ್ಮವೊಂದು ನಿಂತಿರುವುದು ಈ ಫೋಟೊದಲ್ಲಿ ಕಾಣಸಿಗುತ್ತಿದೆ. ಮುಂಡ, ತಲೆ ಮತ್ತು ಕೈಗಳು ಇಲ್ಲಿ ಕಾಣವುದು. ಇದನ್ನು ನೋಡಿದ ಬಳಿಕ ಯಾರು ಕೂಡ ಈ ಪ್ರದೇಶದಿಂದ ಹೋಗಿರಲಿಕ್ಕಿಲ್ಲವೆಂದು ನಮ್ಮ ಭಾವನೆ.

ಬಾಗಿಲಲ್ಲಿ ಪರಚಿದ ಕಲೆಗಳು
ಅನಾಥವಾಗಿರುವಂತಹ ಈ ಆಸ್ಪತ್ರೆಯ ಗೋಡೆ ಮತ್ತು ಬಾಗಿಲುಗಳಲ್ಲಿ ಪರಚಿದ ಕಲೆಗಳು ಕಾಣಲು ಸಿಗುತ್ತಾ ಇದೆ. ಇದು ನೋಡುಗರ ತಲೆಯಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ವ್ಯಕ್ತಿ ಸರಿಯಾಗಿದ್ದಾನೆಯಾ? ಆ ವ್ಯಕ್ತಿ ಬಾಗಿಲಲ್ಲಿ ಪರಚಲು ಕಾರಣವೇನು?

ಚೆಕ್ ಔಟ್ ನಲ್ಲಿ ಕಾಯುತ್ತಿರುವ ವ್ಯಕ್ತಿ
ಅನಾಥ ಆಸ್ಪತ್ರೆಯ ಡೆಸ್ಕ್ ನಲ್ಲಿ ವ್ಯಕ್ತಿಯೊಬ್ಬನು ಕಾಯುತ್ತಾ ಇರುವಂತೆ ಕಾಣಿಸುತ್ತಾ ಇದೆ. ಈ ಫೋಟೋದ ತುಂಬಾ ಭಯಭೀತಿಗೊಳಿಸುವ ವಿಚಾರವೆಂದರೆ ಕ್ಯಾಮೆರಾದ ಬೆಳಕಿನಿಂದ ನಿಜ ವ್ಯಕ್ತಿಯೊಬ್ಬ ವಿಕೃತವಾಗಿರುವಂತೆ ಕಾಣಿಸುತ್ತದೆ. ಇದು ತುಂಬಾ ಭೀತಿಯನ್ನು ಉಂಟು ಮಾಡುತ್ತಿದೆಯಲ್ಲವೇ?

ಬೆಕ್ಕನ್ನು ಏನು ಕೊಂದಿದೆ ಎಂದು ಅಚ್ಚರಿಯಾಗುತ್ತಿದೆಯಾ?
ಈ ಬೆಕ್ಕು ಸತ್ತಿರುವ ಸ್ಥಿತಿ ನೋಡಿದರೆ ಅದು ತುಂಬಾ ಭೀತಿಯನ್ನು ಮೂಡಿಸುತ್ತದೆ. ಇದು ಈ ರೀತಿಯಾಗಲು ಕಾರಣವೇನೆಂದು ನಮಗೆ ತಿಳಿಯುತ್ತಿಲ್ಲ. ಬೆಕ್ಕು ಸಾವಿಗೆ ತುಂಬಾ ಹೆದರಿದೆ ಎಂದು ಇದರಿಂದ ತಿಳಿಯುತ್ತದೆ. ಭೀತಿಗೊಳಿಸುವ ಫೋಟೋಗಳನ್ನು ನೋಡಿದರೆ ನಿಮಗೆ ಖಂಡಿತವಾಗಿಯೂ ನಿದ್ರೆ ಬರಲಿಕ್ಕಿಲ್ಲ.



Click it and Unblock the Notifications
