ವ್ಯಕ್ತಿಯ ಹಸ್ತಾಕ್ಷರವನ್ನು ಪರಿಗಣಿಸಿ ವ್ಯಕ್ತಿತ್ವವನ್ನು ತಿಳಿಯಬಹುದು!

By Arshad
Subscribe to Boldsky

ಓರ್ವ ವ್ಯಕ್ತಿಯ ವ್ಯಕ್ತಿತ್ವವನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ ಕೆಲವು ವಿಧಾನಗಳು ಮತ್ತು ಕ್ರಮಗಳಿದ್ದು ಇವನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಇದರಲ್ಲಿ ಸುಲಭವಾದ ವಿಧಾನವೆಂದರೆ ಆ ವ್ಯಕ್ತಿಯ ಬರವಣಿಗೆಯನ್ನು ಅವಲೋಕಿಸುವುದು. ಈ ವಿಧಾನಕ್ಕೆ ವೈಜ್ಞಾನಿಕವಾಗಿ ಗ್ರಾಫಾಲಜಿ ಎಂದು ಕರೆಯುತ್ತಾರೆ.

ವ್ಯಕ್ತಿತ್ವ ಅಳೆಯಲು ಸುಲಭ ಉಪಾಯ ಏನು ಗೊತ್ತಾ? ಅದೇ ನಿಮ್ಮ ಮುಷ್ಟಿ!

ಈ ವಿದ್ಯೆಯೇನೂ ಕಷ್ಟವಾದುದಲ್ಲ. ಆದರೆ ಬರವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುವಂತಹ ಚಾಕಚಕ್ಯತೆಯನ್ನು ಕಲಿತುಕೊಳ್ಳಬೇಕಾಗುತ್ತದೆ. ಬನ್ನಿ, ಈ ಚಾಕಚಕ್ಯತೆಯನ್ನು ಹೇಗೆ ಪಡೆಯಬಹುದು ಎಂಬುದನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ. ಮೊದಲಿಗೆ ನಿಮಗೆ ಪರಿಚಯವಿರುವ ಸ್ನೇಹಿತರ, ಬಂಧುಗಳ ಹಸ್ತಾಕ್ಷರವನ್ನು ಪರಿಗಣಿಸಿ. ಬಳಿಕವೇ ಅಪರಿಚಿತರ ಹಸ್ತಾಕ್ಷರವನ್ನು ನೋಡಲು ಪ್ರಯತ್ನಿಸಿ...   

ಅಕ್ಷರಗಳ ಗಾತ್ರ

ಅಕ್ಷರಗಳ ಗಾತ್ರ

ಅಧ್ಯಯನಗಳ ಪ್ರಕಾರ, ಅಕ್ಷರಗಳ ಗಾತ್ರ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಬಹಳಷ್ಟನ್ನು ಹೇಳುತ್ತವೆ. ಚಿಕ್ಕ ಅಕ್ಷರಗಳನ್ನು ಬರೆಯುವ ವ್ಯಕ್ತಿಗಳು ಸಾಮಾನ್ಯವಾಗಿ ಸಂಕೋಚದ ಸ್ವಭಾವ ಹೊಂದಿರುತ್ತಾರೆ. ಆದರೆ ಇವರು ವಿಷಯವನ್ನು ಸೂಕ್ಷ್ಮವಾಗಿ ಅವಲೋಕಿಸುವ ಹಾಗೂ ಹೆಚ್ಚಿನ ವಿಷಯಗಳನ್ನು ಅರಿತುಕೊಳ್ಳಲು ಯತ್ನಿಸುವ ವ್ಯಕ್ತಿಗಳಾಗಿರುತ್ತಾರೆ. ತದ್ವಿರುದ್ದವಾಗಿ ಅಕ್ಷರಗಳ ಗಾತ್ರ ದೊಡ್ಡಾದಾಗಿದ್ದರೆ ಈ ವ್ಯಕ್ತಿಗಳು ಹೊರಗೆ ತಿರುಗಾಡುವುದನ್ನು ಹೆಚ್ಚು ಇಷ್ಟಪಡುವವರು ಹಾಗೂ ಇತರರ ಗಮನವನ್ನು ತಮ್ಮೆಡೆಗೆ ಸೆಳೆಯಲು ಬಯಸುವವರೂ ಆಗಿರುತ್ತಾರೆ.

ಅಕ್ಷರ ಬಲಗಡೆಗೆ ವಾಲಿರುವುದು

ಅಕ್ಷರ ಬಲಗಡೆಗೆ ವಾಲಿರುವುದು

ಒಂದು ವೇಳೆ ಅಕ್ಷರಗಳು ಬಲಗಡೆಗೆ ವಾಲಿರುವಂತೆ ಕಂಡರೆ ಇವರು ಸ್ನೇಹಪರರೂ, ಹೃದಯದಿಂದ ಯೋಚಿಸುವಂತಹವರೂ, ಭಾವಜೀವಿಗಳು ಹಾಗೂ ಆವೇಶದಿಂದ ಮುನ್ನುಗ್ಗುವವರೂ ಆಗಿರುತ್ತಾರೆ. ಇವರಿಗೆ ಸಂಬಂಧಿಕರು ಹಾಗೂ ಸ್ನೇಹಿತರು ಅತಿ ಮುಖ್ಯ ವ್ಯಕ್ತಿಗಳಾಗಿರುತ್ತಾರೆ.

ಅಕ್ಷರಗಳು ನೆಟ್ಟಗಿರುವುದು

ಇವರು ತಾರ್ಕಿಕವಾಗಿ ಯೋಚಿಸುವ ಹಾಗೂ ಭಾವಾವೇಶಕ್ಕೆ ಒಳಗಾಗದೇ ಇರುವ ವ್ಯಕ್ತಿಗಳಾಗಿದ್ದಾರೆ. ಇವರು ನೇರವಾಗಿ ಯೋಚಿಸುವವರು ಹಾಗೂ ಜೀವನದಲ್ಲಿ ಸದಾ ಕಾರ್ಯಶೀಲರಾಗಿರುತ್ತಾರೆ.

ಅಕ್ಷರಗಳು ಎಡಕ್ಕೆ ವಾಲಿರುವುದು

ಈ ವ್ಯಕ್ತಿಗಳು ಇತರ ವ್ಯಕ್ತಿಗಳಿಗಿಂತಲೂ ತಮಗೆ ಇಷ್ಟವಾದ ವಿಷಯಗಳೊಂದಿಗೆ ಹೆಚ್ಚಿನ ಸಮಯ ಕಳೆಯಲು ಉತ್ಸುಕರಾಗಿರುತ್ತಾರೆ. ಅಲ್ಲದೇ ಇವರಲ್ಲಿ "ನಾನು" ಎಂಬ ಅಹಮ್ಮಿಕೆ ಇರುತ್ತದೆ.

ಅಕ್ಷರಗಳ ಮೇಲಿನ ಒತ್ತಡ

ಅಕ್ಷರಗಳ ಮೇಲಿನ ಒತ್ತಡ

ಅತಿ ಹೆಚ್ಚು ಒತ್ತಡ: ಈ ವ್ಯಕ್ತಿಗಳು ಭಾವನೆಗಳ ಮೇಲೆ ಹೆಚ್ಚಿನ ಹತೋಟಿಯುಳ್ಳವರು ಹಾಗೂ ಪ್ರತಿ ವಿಷಯವನ್ನೂ ಸೂಕ್ಷ್ಮವಾಗಿ ಗಮನಿಸುವವರಾಗಿರುತ್ತಾರೆ. ಇವರು ಯಾವುದೇ ಕ್ರಿಯೆಗೆ ಥಟ್ಟನೇ ಪ್ರತಿಕ್ರಿಯೆ ನೀಡುವವರಾಗಿರುತ್ತಾರೆ.

ಸಾಮಾನ್ಯ ಒತ್ತಡ:

ಇವರು ಎಲ್ಲರೊಂದಿಗೂ ಸುಲಭವಾಗಿ ಬೆರೆಯುವ ಹಾಗೂ ಚಲನಶೀಲ ವ್ಯಕ್ತಿಗಳಾಗಿರುತ್ತಾರೆ. ಇವರು ಭಾವನೆಗಳಿಗೆ ಅಷ್ಟು ಸುಲಭವಾಗಿ ಬಗ್ಗುವುದಿಲ್ಲ.

ಅಕ್ಷರಗಳ ಮೇಲಿನ ಭಾಗ

ಅಕ್ಷರಗಳ ಮೇಲಿನ ಭಾಗ

ಇಂಗ್ಲಿಷ್ ಭಾಷೆಯ 'L' ಅಕ್ಷರದ (ಚಿಕ್ಕ ಅಕ್ಷರ) ಕುಣಿಕೆ ದೊಡ್ಡದಿದ್ದಷ್ಟೂ ಇವರು ದೊಡ್ಡ ಕನಸುಗಳನ್ನು ಕಾಣುವ ವ್ಯಕ್ತಿಗಳು ಎಂದು ತಿಳಿಯಬಹುದು.

ಇಂಗ್ಲಿಷ್ ಭಾಷೆಯ 'L' ಅಕ್ಷರದ ಕುಣಿಕೆ ತುದಿಯಲ್ಲಿ ತೀರಾ ಚಿಕ್ಕದಾಗಿದ್ದರೆ ಇವರು ನಕರಾತ್ಮಕ ಭಾವನೆಯ ವ್ಯಕ್ತಿಗಳು ಹಾಗೂ ಕನಸುಗಳನ್ನು ಹಾಗೂ ಭರವಸೆಗಳನ್ನು ಮರೆಮಾಚುವ ವ್ಯಕ್ತಿಗಳಾಗಿರುತ್ತಾರೆ.ಇಂಗ್ಲಿಷ್ ಭಾಷೆಯ 'T' ಅಕ್ಷರದ (ಚಿಕ್ಕ ಅಕ್ಷರ) ಕುಣಿಕೆ ದೊಡ್ಡದಿದ್ದರೆ ಇವರು ಟೀಕೆಗಳಿಗೆ ಸ್ಪಂದಿಸುವ ಹಾಗೂ ಭಾವಾವೇಶಕ್ಕೆ ಒಳಗಾಗುವ ವ್ಯಕ್ತಿಗಳಾಗಿರುತ್ತಾರೆ.

ಇಂಗ್ಲಿಷ್ ಭಾಷೆಯ 'T' ಅಕ್ಷರದ ಕುಣಿಕೆ ತುದಿಯಲ್ಲಿ ತೀರಾ ಚಿಕ್ಕದಾಗಿದ್ದರೆ ಇವರು ಉತ್ತಮ ಕಾರ್ಮಿಕರು ಹಾಗೂ ತಮಗೆ ವಹಿಸಿದ ಕೆಲಸವನ್ನು ಶಿಸ್ತು ಹಾಗೂ ಕಷ್ಟಪಟ್ಟು ನಿರ್ವಹಿಸುವವರಾಗಿರುತ್ತಾರೆ.

ಅಕ್ಷರದ ಕೆಳಭಾಗ

ಅಕ್ಷರದ ಕೆಳಭಾಗ

ಇಂಗ್ಲಿಷ್ ಭಾಷೆಯ 'y' ಅಕ್ಷರದ (ಚಿಕ್ಕ ಅಕ್ಷರ)ದ ಕೆಳಗಿನ ಕುಣಿಕೆ ಚಿಕ್ಕದಾಗಿದ್ದರೆ ಇವರು ತಮ್ಮ ಸ್ನೇಹಿತರನ್ನು ಸೂಕ್ಷ್ಮವಾಗಿ ಗಮನಿಸಿ ಆಯ್ಕೆ ಮಾಡುವವರಾಗಿರುತ್ತಾರೆ.

ಇಂಗ್ಲಿಷ್ ಭಾಷೆಯ 'y' ಅಕ್ಷರದ ಕೆಳಗಿನ ಕುಣಿಕೆ ದೊಡ್ಡದಾಗಿದ್ದರೆ ಇವರಿಗೆ ಹೆಚ್ಚಿನ ಸ್ನೇಹಿತವೃಂದ ಇರುತ್ತದೆ

ಇಂಗ್ಲಿಷ್ ಭಾಷೆಯ 'y' ಅಕ್ಷರದ ಕೆಳಗಿನ ಕುಣಿಕೆ ನೀಳವಾಗಿದ್ದರೆ ಈ ವ್ಯಕ್ತಿಗಳು ಸದಾ ಪ್ರಯಾಣ ಮಾಡಬಯಸುವವರಾಗಿರುತ್ತಾರೆ.

ಇಂಗ್ಲಿಷ್ ಭಾಷೆಯ 'y' ಅಕ್ಷರದ ಕೆಳಗಿನ ಕುಣಿಕೆ ತೀರಾ ಚಿಕ್ಕದಾಗಿದ್ದರೆ ಇವರು ಮನೆಯಲ್ಲಿ ಹೆಚ್ಚಿನ ಸಮಯ ಕಳೆಯ ಬಯಸುವ ವ್ಯಕ್ತಿಗಳಾಗಿರುತ್ತಾರೆ.

ಅಕ್ಷರಗಳನ್ನು ಬೆಸೆಯುವ ಕ್ರಮ

ಅಕ್ಷರಗಳನ್ನು ಬೆಸೆಯುವ ಕ್ರಮ

ಎಲ್ಲಾ ಅಕ್ಷರಗಳು ಬೆಸೆದಿದ್ದರೆ: ಈ ವ್ಯಕ್ತಿಗಳು ತಾರ್ಕಿಕವಾಗಿ ಯೋಚಿಸುವ ಹಾಗೂ ಸಮಸ್ಯೆಗಳನ್ನು ವಿಧಾನಗಳ ಮೂಲಕ ಬಿಡಿಸುವ ವ್ಯಕ್ತಿಗಳಾಗಿದ್ದು ನಿರ್ಧಾರಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ಕೈಗೊಳ್ಳುವವರಾಗಿರುತ್ತಾರೆ.ಬಿಡಿಬಿಡಿಯಾಗಿದ್ದರೆ: ಈ ವ್ಯಕ್ತಿಗಳು ಚತುರರೂ ಅಂತರ್ದೃಷ್ಟಿ ಹೊಂದಿರುವ ವ್ಯಕ್ತಿಗಳೂ ಆಗಿರುತ್ತಾರೆ.

ಇಂಗ್ಲಿಷ್ ಐ ಅಕ್ಷರದ ಮೇಲಿನ ಚುಕ್ಕೆ

ಇಂಗ್ಲಿಷ್ ಐ ಅಕ್ಷರದ ಮೇಲಿನ ಚುಕ್ಕೆ

ಈ ಚುಕ್ಕೆ ಚುಕ್ಕೆಯಂತಿಲ್ಲದೇ ಚಿಕ್ಕ ವೃತ್ತದಂದಿತ್ತದೆ ಈ ವ್ಯಕ್ತಿಗಳು ಮಕ್ಕಳ ಮನಸ್ಸುಳ್ಳವರು ಹಾಗೂ ಸದಾ ವಿನೋದ ಬಯಸುವ ವ್ಯಕ್ತಿಗಳಾಗಿರುತ್ತಾರೆ. ಇವರು ಉತ್ತಮ ಕಲಾವಿದರೂ ಗುಂಪಿನಲ್ಲಿ ಎಲ್ಲರ ಗಮನ ಸೆಳೆಯಬಯಸುವ ವ್ಯಕ್ತಿಗಳೂ ಆಗಿರುತ್ತಾರೆ.ಒಂದು ವೇಳೆ ಈ ಚುಕ್ಕೆ ಚಿತ್ರದಲ್ಲಿ ತೋರಿಸಿರುವಂತೆ ಸ್ಪಷ್ಟವಾಗಿದ್ದರೆ ಈ ವ್ಯಕ್ತಿಗಳು ಎಲ್ಲಾ ವಸ್ತುಗಳು ಚಲ್ಲಾಪಿಲ್ಲಿಯಾಗಿರುವುದನ್ನು ಸಹಿಸುವುದಿಲ್ಲ ಹಾಗೂ ಇವರು ಮಾಡುವ ಕಾರ್ಯದಲ್ಲಿ ಪೂರ್ಣಪ್ರಮಾಣದ ಗಮನವನ್ನು ನೀಡಿ ಆ ಕೆಲಸ ಪರಿಪೂರ್ಣವಾಗಲು ಶ್ರಮಿಸುತ್ತಾರೆ.

ಇಂಗ್ಲಿಷ್ ಟಿ ಅಕ್ಷರದ ಬಾಗುವಿಕೆ

ಇಂಗ್ಲಿಷ್ ಟಿ ಅಕ್ಷರದ ಬಾಗುವಿಕೆ

ಮೊದಲ ಚಿತ್ರದಲ್ಲಿ ತೋರಿಸಿರುವಂತೆ ಟಿ ಅಕ್ಷರವನ್ನು ಬಾಗಿಸಿದ್ದರೆ ಈ ವ್ಯಕ್ತಿಗಳು ಜೀವನದಲ್ಲಿ ದೊಡ್ಡದನ್ನು ಸಾಧಿಸಲು ಬಯಸುವವರಾಗಿದ್ದು ಹೆಚ್ಚಿನ ಆತ್ಮವಿಶ್ವಾಸ ಹೊಂದಿರುತ್ತಾರೆ. ಒಂದು ವೇಳೆ ಈ ಅಕ್ಷರ ಎರಡನೇ ಚಿತ್ರದಲ್ಲಿರುವಂತಿದ್ದರೆ ಇವರು ಕಡಿಮೆ ಆತ್ಮವಿಶ್ವಾಸ ಹೊಂದಿರುತ್ತಾರೆ ಹಾಗೂ ಜೀವನದಲ್ಲಿ ಸದಾ ಅನಿಶ್ಚಿತತೆಯ ಭಾವನೆಯಲ್ಲಿರುತ್ತಾರೆ.

ಎರಡು ಸಾಲುಗಳ ನಡುವಣ ಅಂತರ

ಎರಡು ಸಾಲುಗಳ ನಡುವಣ ಅಂತರ

ಒಂದು ವೇಳೆ ಎರಡು ಸಾಲುಗಳ ನಡುವೆ ಅತಿ ಕಡಿಮೆ ಅಂತರವಿದ್ದರೆ ಇವರು ತಮ್ಮ ಸಮಯವನ್ನು ನಿವರ್ಹಿಸಲು ಅಸಮರ್ಥರಾಗಿರುತ್ತಾರೆ. ಸೂಕ್ತ ಅಂತರವನ್ನು ಇರಿಸಿರುವ ವ್ಯಕ್ತಿಗಳು ತಮ್ಮ ಮಿತಿಯ ಬಗ್ಗೆ ಅರಿವಿದ್ದು ಆ ಪ್ರಕಾರವೇ ನಡೆಯುವ ವ್ಯಕ್ತಿಗಳಾಗಿರುತ್ತಾರೆ.

For Quick Alerts
ALLOW NOTIFICATIONS
For Daily Alerts

    English summary

    Handwriting Analysis That Can Define Your Personality

    While trying to understand a person in a better way, there are different ways and tricks that we would want to try and learn. Analysing a person's characteristic based on the person's handwriting is one of the easiest options. The process of analysing handwriting is called graphology. It helps us understand the person's character by just seeing his/her handwriting. So, go ahead and find more details on this interesting analysis to know of how your friends and family members are character wise.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more