ಈತನ ಅವಸ್ಥೆ ಕೇಳಿ! 20 ವರ್ಷದಿಂದ, ಹಲ್ಲು ಉಜ್ಜದೇ ದಾಖಲೆ ಮಾಡಿದ್ದಾನೆ!!

By: Hemanth
Subscribe to Boldsky

ಮನುಷ್ಯನಾದ ಮೇಲೆ ದೇಹ ಹಾಗೂ ಮೈಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ. ಒಂದು ದಿನ ಸ್ನಾನ ಮಾಡದೆ ಇದ್ದರೆ ಮರುದಿನ ಕಿರಿಕಿರಿಯಾಗುವುದು. ಅದೇ ಹಲ್ಲುಜ್ಜದಿದ್ದರೆ ಬಾಯಿ ವಾಸನೆ ಬಂದು ತಮಗೆ ಹಾಗೂ ಇತರರಿಗೂ ಇದರ ದುರ್ನಾತ ಬೀರುವುದು. ಆದರೆ ಸುಮಾರು 20 ವರ್ಷ ಕಾಲ ಹಲ್ಲುಜ್ಜದಿದ್ದರೆ ಹೇಗಾಗಬಹುದು? ಇದನ್ನು ಊಹಿಸುವುದು ನಿಮಗೆ ತುಂಬಾ ಕಷ್ಟ.

ಆದರೆ ಕೇವಲ 21 ವರ್ಷದ ಯುವಕನೊಬ್ಬ ಕಳೆದ 20 ವರ್ಷಗಳಿಂದ ಹಲ್ಲುಜ್ಜಿಲ್ಲವೆಂದು ಹೇಳುತ್ತಿದ್ದಾನೆ. ತನ್ನ ಹಲ್ಲಿನ ಪರಿಸ್ಥಿತಿ ಬಗ್ಗೆ ಭೀತಿಗೊಳಗಾಗಿರುವಂತಹ ಈ ಯುವಕನಿಗೆ ಹಲ್ಲಿನ ವೈದ್ಯರ ಬಳಿ ಹೋಗಲು ಭೀತಿ. ಬಾಲ್ಯದಿಂದಲೂ ಈ ಯುವಕ ಹಲ್ಲುಜ್ಜುತ್ತಲೇ ಇರಲಿಲ್ಲ. ಆದರೆ ಇದರ ಬಗ್ಗೆ ಆತನ ಪೋಷಕರು ಮಾತ್ರ ಗಮನಹರಿಸಲೇ ಇಲ್ಲ. ಇದು ಹೀಗೆ ಮುಂದುವರಿದುಕೊಂಡು ಹೋಗಿ 20 ವರ್ಷ ಕಾಲ ಆತ ಹಲ್ಲುಜ್ಜದ್ದೆ ಇದ್ದಾನೆ....

ಈತನ ಕಥೆ ಭಾರೀ ಸುದ್ದಿಯಾಗಿದೆ

ಈತನ ಕಥೆ ಭಾರೀ ಸುದ್ದಿಯಾಗಿದೆ

21ರ ಹರೆಯದ ಜಯ್ ಎನ್ನುವಾತ ಜೀವಮಾನವಿಡಿ ಹಲ್ಲುಜ್ಜಲೇ ಇಲ್ಲ. ಆತ ಕೇವಲ ಬಾಯಿಗೆ ನೀರು ಹಾಕಿಕೊಂಡು ಬಾಯಿ ಮುಕ್ಕಳಿಸಿಕೊಳ್ಳುತ್ತಾ ಇದ್ದ. ಈ ವಿಚಿತ್ರದಿಂದಾಗಿ ಆತನ ಕಥೆ ಈಗ ಎಲ್ಲೆಡೆಯು ಹರಡಿದೆ. ಹಲ್ಲುಗಳ ಸ್ವಚ್ಛತೆ ಬಗ್ಗೆ ತನ್ನ ಪೋಷಕರು ಹೇಳಲೇ ಇಲ್ಲ ಮತ್ತು ಇದರಿಂದ ಹಲ್ಲುಗಳಿಗೆ ದೊಡ್ಡ ಮಟ್ಟದ ಸರಿಪಡಿಸುವಿಕೆ ಬೇಕಾಗಿದೆ.

ಹಲ್ಲಿನ ವೈದ್ಯರಲ್ಲಿ ತೋರಿಸಲು ಭೀತಿ

ಹಲ್ಲಿನ ವೈದ್ಯರಲ್ಲಿ ತೋರಿಸಲು ಭೀತಿ

ಆತನಿಗೆ ಹಲ್ಲಿನ ವೈದ್ಯರ ಬಳಿ ತೋರಿಸಲು ಭೀತಿ. ಆತನಿಗೆ ಇಂಜೆಕ್ಷನ್ ಮತ್ತು ಶಸ್ತ್ರಚಿಕಿತ್ಸೆಯ ಭೀತಿಯಿತ್ತು. ಆತನ ಹಲ್ಲುಗಳನ್ನು ಮತ್ತೆ ಸರಿಪಡಿಸಲು ಮತ್ತು ನಗುವನ್ನು ಪಡೆಯಬೇಕಾದರೆ ಹೆಚ್ಚಿನ ಹಣದ ಅವಶ್ಯಕತೆಯು ಆತನಿಗಿತ್ತು.

ಆತನ ಅಭ್ಯಾಸದಿಂದ ಕನಸುಗಳು ನುಚ್ಚುನೂರಾದವು

ಆತನ ಅಭ್ಯಾಸದಿಂದ ಕನಸುಗಳು ನುಚ್ಚುನೂರಾದವು

ನಾನು ಕ್ರೀಡೆ ಅಥವಾ ಫಿಸಿಯೋಥೆರಪಿಯಲ್ಲಿ ಕೆಲಸ ಮಾಡಲು ಬಯಸಿದ್ದೆ. ಆದರೆ ಹಲ್ಲುಗಳು ಸರಿಯಾಗಿರದ ಕಾರಣ ಇದು ಆಗಲಿಲ್ಲವೆಂದು ಹೇಳಿರುವ ಜಯ್, ನನ್ನ ಹಲ್ಲಿನ ಆರೈಕೆ ಮಾಡದೆ ಇರುವ ನಾನು ಬೇರೆಯವರಿಗೆ ತಮ್ಮ ದೇಹವನ್ನು ಸರಿಯಾಗಿಟ್ಟುಕೊಳ್ಳಿ ಎಂದು ಸಲಹೆ ನೀಡುವುದು ಹೇಗೆ ಎಂದು ಆತ ಹೇಳುತ್ತಾನೆ.

ಆತನಿಗೆ ತುಂಬಾ ಬಲಶಾಲಿ ಹಲ್ಲುಗಳಿವೆ!

ಆತನಿಗೆ ತುಂಬಾ ಬಲಶಾಲಿ ಹಲ್ಲುಗಳಿವೆ!

ಆತ ಸುಮಾರು 20 ನಿಮಿಷ ಕಾಲ ಹಲ್ಲುಜ್ಜದಿದ್ದರೂ ಆತನ 11 ಹಲ್ಲುಗಳನ್ನು ಮಾತ್ರ ಕೀಳಲಾಗಿದೆ. ಯಾಕೆಂದರೆ ಅವುಗಳನ್ನು ಸರಿಪಡಿಸುವುದು ತುಂಬಾ ಕಷ್ಟದ ಕೆಲಸವಾಗಿತ್ತು. ಹಲ್ಲುಗಳ ಬಗ್ಗೆ ಸರಿಯಾದ ಆರೈಕೆ ಮಾಡುತ್ತಾನೆಂಬ ಭರವಸೆಯೊಂದಿಗೆ ಆತನಿಗೆ ಹೊಸ ಹಲ್ಲುಗಳನ್ನಿಡಲಾಯಿತು.

ವಿಡಿಯೋ ನೋಡಿ....

ಚಿತ್ರಗಳು ತುಂಬಾ ಅಸಹ್ಯ ಮೂಡಿಸುತ್ತದೆ. ಆದರೆ ವೈದ್ಯರು ಆತನ ಹಲ್ಲುಗಳನ್ನು ಮರುಜೋಡಣೆ ಮಾಡಿದ ಬಳಿಕ ನಿಮಗೆ ತುಂಬಾ ಅಚ್ಚರಿಯಾಗಬಹುದು. ಈ ವೀಡಿಯೋವನ್ನು ನೋಡಿ ಮತ್ತು ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಿ.

English summary

Guy Who Did Not Brush His Teeth For 20 Long Years!

What happens when you do not brush your teeth for 20 long years? This sounds disgusting, right? But this has happened in real where a guy who is just 21 years old claims to have not brushed his teeth for 20 long years! Check out the bizarre story of a 21-year-old guy who did not wish to visit a dentist, as he was scared of his tooth condition.
Subscribe Newsletter