ಮುಗ್ಧನಂತೆ ವರ್ತಿಸಿ ಕೊನೆಗೆ ಅತ್ಯಾಚಾರ ಮಾಡಿದ ಪಾಪಿ ಬಾಲಕ!

By: Hemanth
Subscribe to Boldsky

ಕಲಿಯುಗದಲ್ಲಿ ಅನಾಚಾರ ಮತ್ತು ಅತ್ಯಾಚಾರಗಳು ಹೆಚ್ಚಾಗುತ್ತಾ ಇದೆ ಎಂದು ನಾವು ಪ್ರತಿನಿತ್ಯ ಓದುತ್ತಿರುವ ಪತ್ರಿಕೆ ಮತ್ತು ನೋಡುತ್ತಿರುವ ನ್ಯೂಸ್ ಚಾನೆಲ್‌ಗಳಿಂದ ತಿಳಿದು ಬರುತ್ತದೆ. ಬೆಳಿಗ್ಗೆ ಎದ್ದು ಟಿವಿ ಆನ್ ಮಾಡಿದರೆ ಅತ್ಯಾಚಾರದ ಸುದ್ದಿ ಇಲ್ಲದ ದಿನವೇ ಇಲ್ಲ. ಯಾವುದಾದರೊಂದು ಊರಿನಲ್ಲಿ ಅತ್ಯಾಚಾರವಾದಂತಹ ಸುದ್ದಿ ನಮಗೆ ಸಿಕ್ಕಿಯೇ ಸಿಗುತ್ತದೆ. ಹೆಂಡತಿ ಮೇಲೇ ಅತ್ಯಾಚಾರ ಮಾಡಲು ಸ್ನೇಹಿತನಿಗೆ ಸಹಕರಿಸಿದ ಪಾಪಿ ಪತಿ!

ನಮ್ಮ ರಾಜ್ಯ ಅಥವಾ ದೇಶದಲ್ಲಿ ಹೀಗೆ ಯಾಕೆ ಆಗುತ್ತಿದೆ? ನಮ್ಮಲ್ಲಿ ದುಷ್ಟರು ತುಂಬಿ ಹೋಗಿದ್ದಾರೆಯಾ ಎನ್ನುವ ಪ್ರಶ್ನೆ ಕಾಡುವುದು ಸಹಜ. ಇದು ಮಾನಸಿಕ ಸ್ಥಿತಿಯಲ್ಲದೆ ಬೇರೇನೂ ಅಲ್ಲವೆನ್ನಬಹುದು. ಯಾಕೆಂದರೆ ಸಣ್ಣ ಮಗುವಿನಿಂದ ಹಿಡಿದ ವೃಯೋವೃದ್ಧ ಅಜ್ಜಿಯ ತನಕ ಪ್ರತಿಯೊಬ್ಬರೂ ಅತ್ಯಾಚಾರಕ್ಕೆ ಒಳಗಾಗುತ್ತಿರುವುದು ನಮಗೆ ಗೊತ್ತು. ಅತ್ಯಾಚಾರ ಪ್ರಕರಣ ಹೆಚ್ಚಾಗಿರುವ ವಿಶ್ವದ ಪ್ರತಿಷ್ಠಿತ ರಾಷ್ಟ್ರಗಳು

ಕೆಲವು ಮಂದಿ ಹುಡುಗಿಯರು ತಾವು ಅತ್ಯಾಚಾರಕ್ಕೆ ಒಳಗಾದರೂ ಇದರ ಬಗ್ಗೆ ಚಕಾರವೆತ್ತದೆ ಕುಳಿತಿರುತ್ತಾರೆ. ತನ್ನ ಹಾಗೂ ಕುಟುಂಬದವರ ಮಾನ ಮರ್ಯಾದೆಯ ಪ್ರಶ್ನೆ ಅವರಲ್ಲಿ ಕಾಡುತ್ತಾ ಇರುತ್ತದೆ. ಇದರಿಂದ ಅತ್ಯಾಚಾರಿಗಳಿಗೆ ಕೂಡ ಮತ್ತೊಂದು ಕೃತ್ಯ ಮಾಡಲು ಸಾಧ್ಯವಾಗುತ್ತದೆ. ತಂಗಿಯ ಮೇಲೇ ಅತ್ಯಾಚಾರ ಎಸಗಿದ ಹನ್ನೊಂದರ ಪೋರ! 

ಆದರೆ ಈ ಲೇಖನದಲ್ಲಿ ಹೇಳಲು ಹೊರಟಿರುವುದು 3 ವರ್ಷದ ಹುಡುಗಿಯೊಬ್ಬಳು 10 ವರ್ಷದ ಬಾಲಕನಿಂದಲೇ ಅತ್ಯಾಚಾರಕ್ಕೆ ಒಳಗಾಗಿರುವುದು. ಇದನ್ನು ಕೇಳಿ ನಿಮಗೆ ಅಚ್ಚರಿಯಾಗಬಹುದು. 3 ವರ್ಷದ ಬಾಲಕಿಯನ್ನು ನೋಡಿಕೊಳ್ಳುತ್ತಾ ಇದ್ದ ಬಾಲಕ ಹಲವು ವರ್ಷಗಳ ಕಾಲ ಈ ಕೃತ್ಯ ಎಸಗಿದ್ದಾನೆ. ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ....

ಆಕೆ 3 ವರ್ಷದ ಬಾಲಕಿ

ಆಕೆ 3 ವರ್ಷದ ಬಾಲಕಿ

ಖರ್ಚುವೆಚ್ಚಗಳು ಹೆಚ್ಚಾಗುತ್ತಿರುವ ಕಾರಣದಿಂದ ಇಂದಿನ ದಿನಗಳಲ್ಲಿ ಪತಿ ಹಾಗೂ ಪತ್ನಿ ಇಬ್ಬರೂ ವೃತ್ತಿಯಲ್ಲಿರುವುದು ಸಾಮಾನ್ಯವಾಗುತ್ತಿದೆ. ಈ ಘಟನೆಯಲ್ಲಿ ದಂಪತಿ ತಮ್ಮ ಮೂರು ವರ್ಷದ ಮಗುವನ್ನು ನೋಡಿಕೊಳ್ಳಲು 10 ವರ್ಷದ ಬಾಲಕ ಸುನಿಲ್ ಎಂಬಾತನನ್ನು ಆಯ್ಕೆ ಮಾಡಿಕೊಂಡರು. ಆತ ನೋಡಲು ತುಂಬಾ ಮುಗ್ಧನಂತಿದ್ದ.

ಪ್ರತಿಯೊಬ್ಬರಿಗೂ ಆತನ ಮೇಲೆ ನಂಬಿಕೆ

ಪ್ರತಿಯೊಬ್ಬರಿಗೂ ಆತನ ಮೇಲೆ ನಂಬಿಕೆ

ಪ್ರತಿಯೊಬ್ಬರ ವಿಶ್ವಾಸವನ್ನು ಆತ ಗೆದ್ದುಕೊಂಡಿದ್ದ. ಸಣ್ಣ ಮಗು ಆತನನ್ನು ಅಣ್ಣ ಎಂದು ಕರೆಯುತ್ತಾ ಇತ್ತು. ಮಗುವನ್ನು ಆತ ಆಟವಾಡಲು ಕರೆದುಕೊಂಡು ಹೋಗುತ್ತಾ ಇದ್ದ. ಮಗುವಿಗೆ ಕೂಡ ಆತನೊಂದಿಗೆ ಆಡುವುದು ತುಂಬಾ ಇಷ್ಟವಾಗುತ್ತಾ ಇತ್ತು. ಯಾಕೆಂದರೆ ಮಗುವಿನೊಂದಿಗೆ ಆತ ಮಾತ್ರ ಜತೆಗಿರುತ್ತಿದ್ದ.

ಹಸ್ತ ಮೈಥುನ ಮಾಡುವುದನ್ನು ನೋಡಿದ ಮಗು

ಹಸ್ತ ಮೈಥುನ ಮಾಡುವುದನ್ನು ನೋಡಿದ ಮಗು

ಆತ ಒಂದು ದಿನ ಹಸ್ತುಮೈಥುನ ಮಾಡಿಕೊಳ್ಳುತ್ತಾ ಇದ್ದದನ್ನು ನೋಡಿದ ಮಗು ಅದು ಏನು ಮತ್ತು ಅದರಲ್ಲಿ ನೀನು ಏನು ಮಾಡುತ್ತಾ ಇದ್ದಿ ಎಂದು ಮುಗ್ಧತೆಯಿಂದ ಕೇಳಿದ್ದಳು. ಆಗ ಮಗುವಿಗೆ ಸುಮಾರು 6 ವರ್ಷ ಮಾತ್ರ. ಇದರ ಬಳಿಕ ಎಲ್ಲವೂ ಆರಂಭವಾಯಿತು.

ಕ್ಯಾಂಡಿ ಆಟ ಆರಂಭ!

ಕ್ಯಾಂಡಿ ಆಟ ಆರಂಭ!

ಮುಗ್ಧ ಬಾಲಕಿಗೆ ಏನೂ ಅರಿಯದೆ ಇದ್ದ ಕಾರಣ ಆತ ಹೇಳಿರುವುದನ್ನು ನಂಬಿಕೊಂಡು ಆತನ ಜನನಾಂಗದೊಂದಿಗೆ ಆಡಲು ಆರಂಭಿಸಿದಳು ಮತ್ತು ಯಾವಾಗಲೂ ಇದು ಅಭ್ಯಾಸವಾಯಿತು. ಈ ವೇಳೆ ಬಾಲಕ ಆಗಾಗ ಶೌಚಾಲಯಕ್ಕೆ ಓಡುತ್ತಾ ಇದ್ದ. ಇದರ ಬಗ್ಗೆ ಬಾಲಕಿಗೆ ತಿಳಿಯಲೇ ಇಲ್ಲ.

ವರ್ಷಗಳ ಕಾಲ ಕ್ಯಾಂಡಿ ಆಟ ಮುಂದುವರಿಯಿತು!

ವರ್ಷಗಳ ಕಾಲ ಕ್ಯಾಂಡಿ ಆಟ ಮುಂದುವರಿಯಿತು!

ವರ್ಷಗಳಿಂದ ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಾ ಇದ್ದ ಆತ ಯಾವುದಾದರೊಂದು ಕಾರಣ ನೀಡಿ ಆಕೆಯೊಂದಿಗೆ ಇದನ್ನು ಮುಂದುವರಿಸಿದ. ಮನೆಯಲ್ಲಿ ಇದನ್ನು ಯಾರಿಗೂ ಹೇಳದಂತೆ ಬೆದರಿಕೆ ಕೂಡ ನೀಡಿದ್ದ. ಕೇವಲ 11 ವರ್ಷದವಳಾಗಿದ್ದ ಹುಡುಗಿಯನ್ನು ಆತ ಅತ್ಯಾಚಾರ ಮಾಡಿದ. ಈ ವೇಳೆ ಆಕೆಗೆ ಏನೂ ತಿಳಿದೇ ಇರಲಿಲ್ಲ. ಆದರೆ ನೋವಿನಿಂದ ಬೊಬ್ಬೆ ಹಾಕುತ್ತಾ ಇದ್ದರೂ ಆತ ಇದನ್ನು ಮುಂದುವರಿಸುತ್ತಲೇ ಇದ್ದ.

ಅಂತಿಮವಾಗಿ ಆಕೆ ಇದನ್ನು ತಾಯಿಗೆ ಹೇಳಿದಳು...

ಅಂತಿಮವಾಗಿ ಆಕೆ ಇದನ್ನು ತಾಯಿಗೆ ಹೇಳಿದಳು...

ತನ್ನೊಂದಿಗೆ ಏನೋ ತಪ್ಪಾಗಿದೆ ಎಂದು ಅರಿತ ಹುಡುಗಿ ಇದೆಲ್ಲವನ್ನೂ ತಾಯಿಗೆ ತಿಳಿಸಿದಳು. ಆರಂಭದಲ್ಲಿ ನಡೆಯುತ್ತಿದ್ದ ಕ್ಯಾಂಡಿ ಆಟ ಮತ್ತು ಇದರ ಬಳಿಕ ನಡೆಯುತ್ತಿದ್ದ ಅತ್ಯಾಚಾರದ ಬಗ್ಗೆ ತಿಳಿಸಿದಳು. ಈ ಕ್ರೂರ ಕೃತ್ಯಕ್ಕೆ ಹುಡುಗನನ್ನು ಬಂಧಿಸಲಾಯಿತು.

ಆಘಾತದಿಂದ ಇನ್ನೂ ಚೇತರಿಸಿದ ಹುಡುಗಿ

ಆಘಾತದಿಂದ ಇನ್ನೂ ಚೇತರಿಸಿದ ಹುಡುಗಿ

ಈ ದುಸ್ವಪ್ನದಿಂದ ಹೊರಗೆ ಬರಲು ಬಾಲಕಿಯನ್ನು ಕೌನ್ಸಿಲಿಂಗ್‌ಗೆ ಒಳಪಡಿಸಲಾಗಿದೆ. ಆಕೆ ಇದರಿಂದ ಬೇಗನೆ ಚೇತರಿಸಿಕೊಳ್ಳಲಿ ಮತ್ತು ಇಂತಹ ಪರಿಸ್ಥಿತಿ ಮತ್ತೆ ಯಾರಿಗೂ ಬರದಿರಲಿ ಎಂದು ಬಯಸುವ.

ಈ ಬಗ್ಗೆ ನಿಮ್ಮಿಂದ ಏನಾದರೂ ಕಮೆಂಟ್ ಇದ್ದರೆ ಕೆಳಗಡೆ ಇರುವ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.

 
English summary

Girl Who Was Raped By Her Caretaker!

This is one such case where a young girl who was barely 3 years old was left in the care of a 10-year-old guy who became her caretaker for years! Read further to know how this little girl was exploited by the young guy who was hardly a teen and how he raped the innocence of the little girl that too repeatedly.
Please Wait while comments are loading...
Subscribe Newsletter