For Quick Alerts
ALLOW NOTIFICATIONS  
For Daily Alerts

ಶಾಲೆಯಲ್ಲಿ ಪಿಶಾಚಿ ಕಾಟ! ಎಲ್ಲಾ ಘಟನೆಗಳು ಸಿಸಿಟಿವಿಯಲ್ಲಿ ಸೆರೆ!

By Lekhaka
|

ಪ್ರೇತ ಪಿಶಾಚಿಗಳು ಇಲ್ಲವೆಂದು ನಂಬುವವರು ನಾಸ್ತಿಕರು ಮಾತ್ರ ಎಂದು ಹೇಳಲಾಗುತ್ತದೆ. ಯಾಕೆಂದರೆ ದೇವರಿದ್ದ ಮೇಲೆ ಅಲ್ಲಿ ಪ್ರೇತಪಿಶಾಚಿಗಳು ಇರಲೇಬೇಕು. ಇದನ್ನು ಕೆಲವರು ಮೌಢ್ಯ, ಭ್ರಮೆ ಅಥವಾ ಮನಸ್ಸಿನೊಳಗಿನ ಭಯ ಎಂದು ಹೇಳಬಹುದು. ಯಾರು ಏನೇ ಹೇಳಿದರೂ ಪ್ರೇತಪಿಶಾಚಿಗಳು ಇರುವುದಂತೂ ನಿಜ ಎನ್ನುವುದು ಹಲವಾರು ಘಟನೆಗಳಿಂದ ಸಾಬೀತಾಗಿದೆ. ಇಂಟರ್ನೆಟ್ ನಲ್ಲಿ ಹುಡುಕಲು ಹೋದರೆ ನಿಮಗೆ ಪ್ರೇತ ಪಿಶಾಚಿಗಳಿಗೆ ಸಂಬಂಧಿಸಿದ ಸಾವಿರಾರು ವೀಡಿಯೋಗಳು ಲಭ್ಯವಾಗಬಹುದು. ಆದರೆ ಇದರಲ್ಲಿ ಕೆಲವೊಂದು ಗ್ರಾಫಿಕ್ ಕೈಚಳಕವಾಗಿರುತ್ತದೆ.

ಇದು ನಮ್ಮಲ್ಲಿ ಭೀತಿ ಉಂಟು ಮಾಡಿದರೂ ಇದರ ಹಿಂದೆ ಇರುವುದು ಗ್ರಾಫಿಕ್ಸ್ ಎಂದು ತಿಳಿದಾಗ ಭಯವೆಲ್ಲಾ ಕರಗಿ ನೀರಾಗುವುದು. ಈ ಲೇಖನದಲ್ಲಿ ಹೇಳಲು ಹೊರಟಿರುವುದು ಒಂದು ಶಾಲೆಯ ಬಗ್ಗೆ. ಈ ಶಾಲೆಯ ಸಿಸಿಟಿವಿ ಕ್ಯಾಮರಾದಲ್ಲಿ ಭೂತ ಪಿಶಾಚಿಗಳ ಚಲನವಲಗಳು ಕಂಡುಬಂದಿವೆ. ಆದರೆ ಇದನ್ನು ನಂಬಲು ಶಾಲೆಯ ಪ್ರಿನ್ಸಿಪಾಲ್ ಸಾಹೇಬರು ಕೂಡ ತಯಾರು ಇರಲಿಲ್ಲ. ಆದರೆ ತಿಂಗಳಲ್ಲಿ ಎರಡನೇ ಸಲ ಇಂತಹ ಘಟನೆ ನಡೆದಾಗ ಅವರಿಗೆ ನಂಬದೆ ಬೇರೆ ಉಪಾಯವೇ ಇರಲಿಲ್ಲ. ಶಾಲೆಯ ಸಿಸಿಟಿವಿ ಕ್ಯಾಮರಾದಲ್ಲಿ ಕಂಡುಬಂದ ಭೂತ ಪಿಶಾಚಿಗಳ ಚಲನವಲನಗಳನ್ನು ನೀವು ನೋಡಿ....

ಮೊದಲ ಚಟುವಟಿಕೆ

ಮೊದಲ ಚಟುವಟಿಕೆ

ಐರ್ಲೆಂಡ್‌ನ ಕಾರ್ಕ್ ನಲ್ಲಿರುವ ಡೀರ್ ಪಾರ್ಕ್ ಸಿಬಿಎಸ್ ನಲ್ಲಿ ಮುಂಜಾನೆ ಸುಮಾರು ಮೂರು ಗಂಟೆ ವೇಳೆಗೆ ಭೂತ ಪಿಶಾಚಿ ಚಲನವಲನಗಳು ಕಂಡುಬಂದಿದೆ. ಇದರ ಸಂಪೂರ್ಣ ವೀಡಿಯೋ ಶಾಲೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸಿಸಿಟಿವಿಯಲ್ಲಿ ಏನಿದೆ?

ಸಿಸಿಟಿವಿಯಲ್ಲಿ ಏನಿದೆ?

ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಗಳಲ್ಲಿ ಭೂತಗಳ ಚಲನವಲನಗಳು ಸಂಪೂರ್ಣವಾಗಿ ತಿಳಿದುಬರುವುದು. ಲಾಕರ್ ಗಳು ಅಲ್ಲಾಡುತ್ತದೆ, ಕಾಗದಗಳು ಹಾರಾಡುತ್ತದೆ ಮತ್ತು ಬಾಗಿಲು ಬಡಿದುಕೊಳ್ಳುವುದು. ಪ್ಲಾಸ್ಟಿಕ್ ಫಲಕವು ನೆಲದಿಂದ ಮೇಲೆ ಬಂದಿರುವುದು ಕೂಡ ಇದರಲ್ಲಿ ಸೆರೆಯಾಗಿದೆ.

ಪ್ರಿನ್ಸಿಪಾಲ್ ಇದನ್ನು ಪರಿಶೀಲಿಸಿದರು

ಪ್ರಿನ್ಸಿಪಾಲ್ ಇದನ್ನು ಪರಿಶೀಲಿಸಿದರು

ಈ ಭೀತಿಗೊಳಿಸುವ ದೃಶ್ಯಾವಳಿಗಳನ್ನು ಪ್ರಿನ್ಸಿಪಾಲ್ ಅವರಿಗೂ ತೋರಿಸಲಾಯಿತು. ಅವರು ನೋಡಿ ದಂಗಾದರು. ಆದರೆ ಇದು ಭೂತಗಳ ಕಾಟ ಎಂದು ಶೇ. ನೂರರಷ್ಟು ನಂಬಲು ತಯಾರಾಗಲಿಲ್ಲ. ಇದು ತಯಾಷೆ ಮತ್ತು ಅದನ್ನು ಒಳ್ಳೆಯ ರೀತಿ ಮಾಡಲಾಗಿದೆ ಎಂದರು.

ಶಾಲೆಯ ಇತಿಹಾಸ

ಶಾಲೆಯ ಇತಿಹಾಸ

ಪ್ರಿನ್ಸಿಪಾಲ್ ಅವರು ಹೇಳಿವಂತೆ 19ನೇ ಶತಮಾನದಲ್ಲಿ ಶಾಲೆಯಿರುವ ಜಾಗದಲ್ಲಿ ಕೈದಿಗಳಿಗೆ ಗಲ್ಲು ನೀಡಲಾಗುತ್ತಿತ್ತು. ನಮಗೆ ಇದರ ಬಗ್ಗೆ ಸೋಮವಾರವಷ್ಟೇ ತಿಳಿದುಬಂದಿದೆ. ಇಲ್ಲಿಗೆ ಸಮೀಪದ ಪಬ್ ನ್ನು ಗ್ಯಾಲೋಸ್(ನೇಣುಗಂಬ) ಎಂದು ಕರೆಯಲಾಗುತ್ತಿತ್ತು ಎಂದರು.

ವೀಡಿಯೋ

ವೀಡಿಯೋದಲ್ಲಿ ಶಾಲೆಯಲ್ಲಿ ಭೂತದ ಚಲನವಲನಗಳು ಯಾವ ರೀತಿಯಲ್ಲಿದ್ದವು ಎಂದು ತಿಳಿದುಬರುತ್ತದೆ. ನೀವು ಇದನ್ನು ನೋಡಿ ಭಯಭೀತರಾಗುವುದು ಖಚಿತ.

ಎರಡನೇ ಸಲ ಬಂದ ಭೂತ

ಎರಡನೇ ಸಲ ಬಂದ ಭೂತ

ಇದು ಯಾರೋ ತಮಾಷೆಗೆ ಮಾಡಿರಬಹುದೆಂದು ಪ್ರಿನ್ಸಿಪಾಲ್ ಅವರು ಯೋಚಿಸುತ್ತಾ ಇದ್ದಂತೆ ಮತ್ತೊಂದು ಕ್ಯಾಮರಾದಲ್ಲಿ ಭೂತದ ಚಟುವಟಿಕೆಗಳು ಸೆರೆಯಾಗಿದೆ.

ಎರಡನೇ ವಿಡಿಯೋ

ಎರಡನೇ ವಿಡಿಯೋ

ಎರಡನೇ ದೃಶ್ಯಾವಳಿಗಳನ್ನು ಶಾಲೆಯ ಭದ್ರತಾ ಕ್ಯಾಮರಾ ಸೆರೆ ಹಿಡಿದಿದೆ. ಇದು ಮುಂಜಾನೆ ಸುಮಾರು 5.30ರ ವೇಳೆಗೆ ಸೆರೆಯಾಗಿರುವ ವೀಡಿಯೋ. ಇದರಲ್ಲಿ ತುಂಬಾ ಭೀತಿ ಹುಟ್ಟಿಸುವಂತಹ ದೃಶ್ಯಗಳು ಇವೆ. ಒಂದು ಕುರ್ಚಿ ತನ್ನಷ್ಟಕ್ಕೆ ಹಾಲ್ ನ ಕಡೆಗೆ ಸಾಗುತ್ತಿದೆ. ಶಾಲೆಯ ಬ್ಯಾಗ್ ಗಳು ಕೂಡ ಮೇಲಕ್ಕೆ ಜಿಗಿಯುತ್ತಿವೆ. ಗೋಡೆ ಮೇಲಿರುವ ಪೋಸ್ಟರ್ ಗಳು ಕೂಡ ಹಾರಾಡುತ್ತಿದೆ.

ಪ್ರಿನ್ಸಿಪಾಲ್ ಬಹಿರಂಗ

ಪ್ರಿನ್ಸಿಪಾಲ್ ಬಹಿರಂಗ

ಎರಡನೇ ದೃಶ್ಯಾವಳಿಗಳನ್ನು ನೋಡಿದ ಬಳಿಕ ಪ್ರಿನ್ಸಿಪಾಲ್ ಕೂಡ ಇದನ್ನು ಒಪ್ಪಿಕೊಂಡಿದ್ದಾರೆ. ಸುಮಾರು 200 ವರ್ಷ ಹಳೆಯ ಶಾಲೆಗೆ ಭೂತಭಾದೆ ಇರಬಹುದು ಎಂದಿದ್ದಾರೆ. ಹಿಂದೆ ಕೂಡ ಶಾಲೆಯಲ್ಲಿ ಕೆಲವೊಂದು ವಿವರಿಸಲಾಗದ ಘಟನೆಗಳು ನಡೆದಿರುವುದು ಇದೆ ಎಂದು ಹೇಳಿದ್ದಾರೆ.

ಎರಡನೇ ದೃಶ್ಯಾವಳಿಯ ವಿಡಿಯೋ

ಈ ವಿಡಿಯೋವನ್ನು ನೋಡಿದ ಬಳಿಕ ನೀವೇ ಇದನ್ನು ನಿಜವಾ ಅಥವಾ ತಮಾಷೆಗಾಗಿ ಮಾಡಿದ್ದಾ ಎಂದು ನಿರ್ಧರಿಸಿ. ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅನಿಸಿಕೆ ಬರೆಯಲು ಮಾತ್ರ ಹೆದರಬೇಡಿ....!

English summary

ghost activity caught on camera in a high school

There are so many videos that you would have come across on the net and most of these videos seem to have special graphics, which people get fooled with and on the other end, there are those videos too that give us real goosebumps! This is a real story of a school, where a ghost activity was caught on camera and, initially, the principle of the school assumed that it was just a hoax, but he was eventually convinced when he saw the same kind of incident occur in the same month again.
X
Desktop Bottom Promotion