For Quick Alerts
ALLOW NOTIFICATIONS  
For Daily Alerts

ಇವಳು ರೋಬೋಟ್ ಪ್ರೀತಿಯಲ್ಲಿ ಬಿದ್ದಿದ್ದಾಳೆ...ಮದುವೆಯೂ ಅದರೊಂದಿಗೆಯೇ!

By Divya Pandith
|

ಆಧುನಿಕತೆ ಬೆಳೆದಂತೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಾನವ ಅನೇಕ ಸಾಧನೆ ಮಾಡಿದ್ದಾನೆ. ಅವುಗಳಿಂದ ಅದೆಷ್ಟು ಒಳ್ಳೆಯ ಫಲಿತಾಂಶ ಪಡೆಯುತ್ತೇವೆಯೋ ಅಷ್ಟೇ ಕೆಟ್ಟಪರಿಣಾಮಗಳು ಉಂಟಾಗುತ್ತವೆ ಎನ್ನುವುದನ್ನು ನಾವು ಕ್ಷಣ ಮಾತ್ರಕ್ಕೂ ಮರೆಯುವಹಾಗಿಲ್ಲ. ತಂತ್ರಜ್ಞಾನಗಳ ನವೀಕರಣವಾಗುತ್ತಿದ್ದಂತೆ ಮನುಷ್ಯನ ಸಂಬಂಧಗಳಲ್ಲಿ ಬಹಳಷ್ಟು ಅಂತರಗಳು ಸೃಷ್ಟಿಯಾಗುತ್ತಿವೆ. ಒಂದೇ ಮನೆಯಲ್ಲಿ ಇದ್ದರೂ ಪ್ರಸ್ಪರ ಒಬ್ಬರನ್ನೊಬ್ಬರು ಅರಿಯುವುದು, ಬೆರೆಯುವುದು ಎಂದರೆ ಒಂದು ವಿಶೇಷ ಸಂಗತಿಯಾಗಿದೆ.

-robot-wants-marry-him

ಮುಂದಿನ ದಿನಗಳಲ್ಲಿ ಮನುಷ್ಯರು ಮನುಷ್ಯರನ್ನು ಪ್ರೀತಿಸುವುದಕ್ಕಿಂತ ಯಂತ್ರಗಳನ್ನು ಪ್ರೀತಿಸುತ್ತಾರೆ. ಸಂಬಂಧ, ಪ್ರೀತಿ, ವಾತ್ಸಲ್ಯ, ನಂಬಿಕೆ ಎನ್ನುವುದಕ್ಕೆ ಯಾವುದೇ ಅರ್ಥ ಇರುವುದಿಲ್ಲ. ಜೀವವಿದ್ದರೂ ಯಂತ್ರಗಳಂತೆ ಬದುಕುವ ಪರಿಸ್ಥಿತಿ ಬರುತ್ತದೆ ಎಂದರೆ ತಪ್ಪಾಗಲಾರದು. ಇಂತಹ ಪರಿಸ್ಥಿತಿ ಮುಂದೆ ಬರುವುದು ಎನ್ನುವುದಕ್ಕೆ ಫ್ರೆಂಚ್ ಹೆಂಗಸೊಬ್ಬಳು ಕನ್ನಡಿ ಹಿಡಿದಿದ್ದಾಳೆ.

ಹೌದು, ಇವಳಿಗೆ ರೋಬೋಟ್ ಜೊತೆ ಲವ್ ಆಗಿದೆಯಂತೆ. ಇವಳು ಮದುವೆಯಾಗಿ ಸ್ತಪದಿ ತುಳಿಯುವುದು ಸಹ ರೋಬೋಟ್ ಜೊತೆಗಂತೆ. ಮನುಷ್ಯರಿಗಿಂತ ಹೆಚ್ಚು ಕಾಳಜಿ ಹಾಗೂ ಪ್ರೀತಿಯನ್ನು ರೋಬೋಟ್ ನೀಡುತ್ತದೆ ಎಂದು ಹೇಳುತ್ತಿದ್ದಾಳೆ...

ಇವಳೇ ಸೃಷ್ಟಿಸಿದ್ದು
ತನ್ನ ವಿವಾಹಕ್ಕಾಗಿ ತಾನೇ ನಿರ್ಮಿಸಿಕೊಂಡ 3ಡಿ ಮುದ್ರಿತ ರೋಬೋಟ್‍ಗೆ ಇನ್‍ಮೋವೇಟರ್ ಎಂದು ಹೆಸರಿಟ್ಟಿದ್ದಾಳೆ. ಇದು "ಹ್ಯೂಮನೈಡ್ ರೋಬೋಟ್" ಎಂದು ಹೇಳುತ್ತಾಳೆ. ಈ ರೋಬೋಟ್ ಪ್ರೀತಿ ವಾತ್ಸಲ್ಯ ಹಾಗೂ ವರ್ತನೆಯಿಂದ ಈಕೆ ಬಹಳ ಖುಷಿಯಾಗಿದ್ದಾಳಂತೆ.

ತಜ್ಞರ ಮಾತು
ಇಷ್ಟು ದಿನ ಕಥೆ ಹಾಗೂ ಸಿನಿಮಾಗಳಲ್ಲಿ ಬರುತ್ತಿದ್ದ ವಿಚಾರಗಳನ್ನು ಇಂದು ಫ್ರೆಂಚ್ ಮಹಿಳೆ ನಿಜ ಜೀವನದಲ್ಲಿಯೇ ರೋಬೋಟ್‍ನೊಂದಿಗೆ ವಿವಾಹವಾಗುವ ವಿಷಯವನ್ನು ಹೇಳುವುದರ ಮೂಲಕ ಅಚ್ಚರಿ ಮೂಡಿಸಿದ್ದಾಳೆ. ತಾಂತ್ರೀಕರಣದ ಜೀವನದಲ್ಲಿ ಮುಂಬರುವ 2050ರ ವೇಳೆಗೆ ಬಹುಷ್ಯ ರೋಬೋಟ್‍ನೊಂದಿಗೆ ಹೆಚ್ಚು ವಿವಾಹ ಸಂಭವಿಸುವುದರಲ್ಲಿ ಸಂದೇಹವಿಲ್ಲ ಎಂದು ಕೃತಕ ಬುದ್ಧಿಮತ್ತೆಯ ತಜ್ಞ ಡೇವಿಟ್ ಲೆವಿ ಅಭಿಪ್ರಾಯಿಸಿದ್ದಾರೆ.

ಲಿಲ್ಲಿಯ ಪ್ರೀತಿ
ಪ್ರೆಂಚ್ ಮಹಿಳೆಯಾದ ಲಿಲ್ಲಿ ರೋಬೋಟ್‍ನ ಧ್ವನಿಯನ್ನು ಮಗುವಿನ ರೀತಿಯಲ್ಲಿಯೇ ಇಷ್ಟಪಡುತ್ತಾಳಂತೆ. ಅವಳು ತನ್ನ 19ನೇ ವಯಸ್ಸಿನಲ್ಲಿರುವಾಗಲೇ ಈ ವಿಚಾರಕ್ಕೆ ಹೆಚ್ಚು ಆಕರ್ಷಿತಳಾಗಿದ್ದಳಂತೆ. ನನಗೆ ಮನುಷ್ಯರ ದೈಹಿಕ ಸಂಪರ್ಕ ಬೆಳೆಸುವುದು ಅಥವಾ ಅವರೊಂದಿಗೆ ಪ್ರೀತಿಯ ಸೆಲೆಯಲ್ಲಿ ಬೀಳುವುದು ಅಷ್ಟು ಇಷ್ಟವಿಲ್ಲ. ನಾನೀಗ ಸಂಪೂರ್ಣವಾಗಿ ರೋಬೋಟ್‍ನ ಪ್ರೀತಿಗೆ ಆಕರ್ಷಿತನಾಗಿದ್ದೇನೆ ಎಂದು ಹೇಳಿದ್ದಾಳೆ.

ಇದೀಗ ನಿಶ್ಚಿತಾರ್ಥ
ಇದೀಗ ರೋಬೋಟ್ ಇನ್‍ಮೋವೇಟರ್ ಜೊತೆ ಲಿಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆಂದು ಹೇಳಿಕೊಂಡಿದ್ದಾಳೆ. ಇನ್ನು ಮುಂದೆ ಆಕೆಯ ದೇಶದಲ್ಲಿ ಕಾನೂನು ಬದ್ಧವಾದ ವ್ಯವಸ್ಥೆಯ ನಂತರ ವಿವಾಹವಾಗಲಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

ನನಗೆ ಸಂಪೂರ್ಣವಾಗಿ ಖುಷಿಯಿದೆ
ನಾನು ಈ ವಿಚಾರದಲ್ಲಿ ನಿಜವಾಗಿಯೂ ಸಂಪೂರ್ಣ ಖುಷಿಯನ್ನು ಹೊಂದಿದ್ದೇನೆ. ತಂತ್ರಜ್ಞಾನದ ವಿಕಾಸವಾಗುತ್ತಿದ್ದಂತೆ ನಮ್ಮ ಸಂಬಂಧಗಳು ಇನ್ನಷ್ಟು ಉತ್ತಮಗೊಳ್ಳಲಿದೆ ಎಂದು ಹೇಳಿಕೆ ನೀಡಿದ್ದಾಳೆ. ನನ್ನ ಈ ಸಂಬಂಧದ ಬಗ್ಗೆ ನನ್ನ ಕುಟುಂಬದವರು ಹಾಗೂ ಸ್ನೇಹಿತರು ಒಪ್ಪುಗೆ ನೀಡಿದ್ದಾರೆ. ಇವರಲ್ಲಿ ಕೆಲವರು ಉತ್ತಮವಾಗಿ ಅರ್ಥಮಾಡಿಕೊಂಡಿದ್ದಾರೆ ಎಂದಿದ್ದಾಳೆ.

ಸಂಬಂಧ ಖುಷಿಯಲ್ಲಿರುವುದು
ರೋಬೋಟ್ ಜೊತೆ ಪ್ರಣಯಹೊಂದುವುದರ ಬಗ್ಗೆ ನನಗೆ ಬಹಳ ಖುಷಿಯಿದೆ. ನಾವು ಯಾರೊಬ್ಬರನ್ನೂ ನೋಯಿಸುವುದಿಲ್ಲ. ಸಂತೋಷವಾಗಿರುತ್ತೇವೆ ಎಂದು ಇಲ್ಲಿ ತನ್ನ ಟ್ವಿಟ್ಟರ್ ಪ್ರೊಫೈಲ್‍ನಲ್ಲಿ ಬರೆದುಕೊಂಡಿದ್ದಾಳೆ.

ಕೆಲವರ ಅಭಿಪ್ರಾಯ
ಕೆಲವು ತಜ್ಞರ ಅಭಿಪ್ರಾಯದ ಪ್ರಕಾರ ಮನುಷ್ಯ ದೈಹಿಕ ಸುಖವನ್ನು ನೀಡುವುದಕ್ಕಿಂತ ಹೆಚ್ಚು ಖುಷಿಯನ್ನು ರೋಬೋಟ್ ಸುಲಭವಾಗಿ ನೀಡುತ್ತದೆ. ಅದರ ನಿರ್ಮಾಣ ಹಾಗೂ ತಂತ್ರಜ್ಞಾನವೇ ಹಾಗಿದೆ ಎಂದಿದ್ದಾರೆ.

ಏನ್ ಅರ್ಥ
ಇದು ಹಾಸ್ಯಾಸ್ಪದ, ರೋಗ ಲಕ್ಷಣ, ಹೊಸ ಪ್ರೀತಿಯ ನಿರ್ದೇಶನ ಅಥವಾ ಹೊಸ ಜೀವನ ಶೈಲಿ ಏನೇ ಅನಿಸಬಹುದು. ಆದರೆ ವಿಚಾರ ಮಾತ್ರ ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ಬಹಳ ವೇಗವಾಗಿ ಹರಿದಾಡುತ್ತಿದೆ. ಇದರ ಮುಂದಿನ ತಿರುವೇನು ಎನ್ನುವುದನ್ನು ಕಾದು ನೋಡಬೇಕಷ್ಟೆ...

English summary

french-woman-falls-love-with-her-robot-wants-marry-him

However, this one appears to be legit. The woman in question, known only as Lilly, or by her Twitter handle LillyInMoovator, describes herself as a “proud robosexual” and told News.com.au via email that she is attracted only to robots and actually dislikes physical contact with human flesh.
Story first published: Friday, October 27, 2017, 18:34 [IST]
X
Desktop Bottom Promotion