For Quick Alerts
ALLOW NOTIFICATIONS  
For Daily Alerts

ಅದೃಷ್ಟವನ್ನೇ ಖುಲಾಯಿಸುವ 'ರಾಶಿ ಭವಿಷ್ಯ'-ನಿಮ್ಮದೂ ಪರಿಶೀಲಿಸಿಕೊಳ್ಳಿ

By Manu
|

ಜ್ಯೋತಿಷ್ಯ ಶಾಸ್ತ್ರವನ್ನು ಹೆಚ್ಚಾಗಿ ನಂಬುವಂತಹ ಭಾರತೀಯರು ಪ್ರತಿಯೊಂದು ಘಳಿಗೆ, ದಿನದ ಫಲಾಫಲಗಳನ್ನು ಇದರ ಮೂಲಕವೇ ತಿಳಿದುಕೊಳ್ಳುತ್ತಾರೆ. ವ್ಯಕ್ತಿಯೊಬ್ಬನ ಜೀವನ, ನಡತೆ ಹಾಗೂ ಇತರ ಕೆಲವೊಂದು ವಿಚಾರಗಳನ್ನು ಕೂಡ ಆತನ ರಾಶಿಯನ್ನು ನೋಡಿಯೇ ತಿಳಿದುಕೊಳ್ಳಲು ಬಯಸುತ್ತಾರೆ...

ನಮಗೆಲ್ಲಾ ಗೊತ್ತಿರುವ ಹಾಗೆ ಈ ಜಗತ್ತಿನಲ್ಲಿ ಒಬ್ಬರು ಇರುವಂತೆ ಇನ್ನೊಬ್ಬರು ಇರುವುದಿಲ್ಲ. ಪ್ರತಿಯೊಬ್ಬರಲ್ಲೂ ಒಂದು ವಿಶೇಷತೆ ಇದ್ದೇ ಇರುತ್ತದೆ. ಈ ವಿಶೇಷತೆಯೇ ಅವರ ಸಾಮರ್ಥ್ಯವಾಗಿರುತ್ತದೆ. ಆದರೆ ಯಾವಾಗ ಈ ಸಾಮರ್ಥ್ಯ ತನ್ನದು ಎಂದು ಅರ್ಥವಾಯಿತೋ ಆಗ ಜೀವನ ಸುಂದರವಾಗುತ್ತದೆ ಹಾಗೂ ಜೀವನದಲ್ಲಿ ಬಹಳಷ್ಟನ್ನು ಸಾಧಿಸಲು ನೆರವಾಗುತ್ತದೆ.

ರಾಶಿಯ ಅದೃಷ್ಟ-ದುರಾದೃಷ್ಟದ ದಿನಾಂಕಗಳು, ನಿಮ್ಮದೂ ಪರಿಶೀಲಿಸಿಕೊಳ್ಳಿ!

ಪ್ರತಿ ಯಶಸ್ಸಿನ ಹಿಂದೆ ಹಲವಾರು ತೊಡಕುಗಳಿರುತ್ತವೆ. ಆದರೆ ಸತತ ಶ್ರಮ ಮತ್ತು ಸಾಧನೆ ಈ ತೊಡಕುಗಳನ್ನು ಎದುರಿಸಿ ಮುಂದುವರೆಯಲು ಸಾಧ್ಯವಾಗಿಸುತ್ತದೆ. ಇದಕ್ಕೆ ಹಲವಾರು ಪರಿಸ್ಥಿತಿ, ವ್ಯಕ್ತಿಗಳು, ಪರಿಸರ, ಸಂದರ್ಭಗಳು ಪೂರಕವಾಗಿರಬೇಕು. ಇವನ್ನು ತಾಳೆಹಾಕಿ ಪ್ರತಿ ಗ್ರಹಗತಿಯ ವ್ಯಕ್ತಿಗಳಿಗೆ ಯಾವ ಗುಣಗಳು ಸೂಕ್ತ ಎಂಬ ವಿವರವನ್ನು ನೀಡಿದ್ದೇವೆ ಮುಂದೆ ಓದಿ...

ಮೇಷ

ಮೇಷ

ಈ ರಾಶಿಯವರು ಜೀವನವನ್ನು ಸದಾ ಧನಾತ್ಮಕರೂಪದಲ್ಲಿ ಕಾಣುತ್ತಾರೆ ಹಾಗೂ ಸದಾ ಜೀವನದಲ್ಲಿ ಆಶಾವಾದಿಗಳಾಗಿರುತ್ತಾರೆ. ಇವರು ಹೆಚ್ಚಾಗಿ ಸ್ವಂತ ವ್ಯಕ್ತಿತ್ವವುಳ್ಳವರಾಗಿದ್ದು ಯಾವುದೇ ಹಂಗಿನಲ್ಲಿ ಇರಲು ಇಚ್ಛಿಸುವುದಿಲ್ಲ. ಈ ರಾಶಿಯವರು ಉತ್ತಮ ಮಾತುಗಾರಿಕೆಯನ್ನು ಹೊಂದಿರುತ್ತಾರೆ. ಇವರಲ್ಲಿ ಮಾತಿನ ಕಲೆ, ಆತ್ಮವಿಶ್ವಾಸ ಮತ್ತು ಹಠಾತ್ ಆಗಿ ನಿರ್ಧಾರಕ್ಕೆ ಬರುವ ಇವರಿಗೆ ಸರಿಯಾಗಿ ಹೊಂದಿಕೊಳ್ಳುವ ಕೆಲಸವೆಂದರೆ ಸರ್ಕಾರಿ ಕಚೇರಿಗಳಲ್ಲಿ ಉದ್ಯೋಗ, ಕಾಮಗಾರಿ ವೃತ್ತಿ, ಹೊಟೇಲ್ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಉದ್ಯೋಗವು ಸೂಕ್ತವಾಗಿರುವುದು

ವೃಷಭ

ವೃಷಭ

ಈ ರಾಶಿಯ ಜನರಿಗೆ ವಿಶಾಲವಾದ ಹೃದಯವಿದ್ದು ಎಲ್ಲಾ ಪ್ರಸಂಗಗಳಲ್ಲಿ ತಾಳ್ಮೆಯಿಂದ ವ್ಯವಹರಿಸುವ ಶಕ್ತಿಯಿದೆ. ಹತ್ತಿರದಿಂದ ಬಲ್ಲವರು ನಿಮ್ಮ ನಿಷ್ಠೆ ಮತ್ತು ನಂಬುಗೆಯನ್ನು ಇಷ್ಟಪಡುತ್ತಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಪುಸ್ತಕ. ಪ್ರತಿಬಾರಿ ನೀವು ಒಂದು ಪುಸ್ತಕವನ್ನು ಓದಿದಾಗ ಅದರಿಂದ ನಿಮಗೆ ಶಾಂತಿ ಮತ್ತು ನೆಮ್ಮದಿ ದೊರಕುತ್ತದೆ. ಅಲ್ಲದೆ ಇವರಿಗೆ ಹೊಂದಿಕೆಯಾಗುವಂತಹ ವೃತ್ತಿಗಳೆಂದರೆ ಹಣಕಾಸು, ಲೆಕ್ಕಪತ್ರ ನಿರ್ವಹಣಿ, ಇಂಟೀರಿಯರ್ ಡಿಸೈನ್, ನರ್ಸಿಂಗ್, ಇಂಜಿನಿಯರಿಂಗ್, ಕಾನೂನು, ಮಾರ್ಕೆಟಿಂಗ್ ಮತ್ತು ಪಿಆರ್ ವೃತ್ತಿ ಮಾಡಬಹುದಾಗಿದೆ.

ಮಿಥುನ

ಮಿಥುನ

ಈ ರಾಶಿಯ ಜನರು ಸದಾ ಚಟುವಟಿಕೆಯುಳ್ಳವರಾಗಿದ್ದು ಸ್ನೇಹಪರ ಮತ್ತು ತಮಾಷೆಯ ವ್ಯಕ್ತಿತ್ವದವರಾಗಿದ್ದಾರೆ. ಇವರ ಕಲ್ಪನೆ ವಿಪರೀತ ತೂಪ ಪಡೆದು ಇದಕ್ಕೆ ವಿಚಿತ್ರವಾದ ಉತ್ತರವನ್ನೂ ಪಡೆಯುವಲ್ಲಿ ಸಫಲಾರಾಗುತ್ತಾರೆ. ಈ ರಾಶಿಯ ಜನರಿಗೆ ಅದೃಷ್ಟ ತರುವ ಗುಣವೆಂದರೆ ಅವರ ಕುಟುಂಬ. ಪ್ರತಿ ಬಾರಿ ವಿಚಿತ್ರ ಕಲ್ಪನೆಯ ಕಾರಣ ಅಸಂಭವವನ್ನು ಸಾಧಿಸಲು ಹೋಗಿ ತೊಂದರೆಗೆ ಒಳಗಾದಾಗ ನಿಮ್ಮ ಕುಟುಂಬವೇ ನಿಮ್ಮನ್ನು ರಕ್ಷಿಸುತ್ತದೆ. ಅಲ್ಲದೆ ಈ ರಾಶಿಯವರಿಗೆ ಹೊಂದಿಕೊಳ್ಳುವ ವೃತ್ತಿಗಳೆಂದರೆ ಕಲೆ, ವಿನ್ಯಾಸ, ವಾಸ್ತುಶಿಲ್ಪ, ನರ್ಸಿಂಗ್, ಮಾರಾಟ, ಕಾನೂನು ಜಾರಿ ಮತ್ತು ಅಗ್ನಿಶಾಮಕದಲ್ಲಿ ಕೆಲಸಗಳು.

ಕಟಕ ಅಥವಾ ಕರ್ಕಾಟಕ

ಕಟಕ ಅಥವಾ ಕರ್ಕಾಟಕ

ಈ ರಾಶಿಯ ಜನರು ನಿಷ್ಠಾವಂತರು ಹಾಗೂ ನಂಬಿಕೆಗೆ ಅರ್ಹರಾದ ಜನರಾಗಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಿ ನಿಮ್ಮನ್ನು ನಂಬಿದವರನ್ನು ಕೈಬಿಡದ ಗುಣ ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯ ತಳೆಯಲು ಸಾಧ್ಯವಾಗುತ್ತದೆ. ಅದೃಷ್ಟ ತರುವ ಗುಣವೆಂದರೆ ನಿಮ್ಮ ಸಾಕುಪ್ರಾಣಿ. ಇದು ಅವರಿಗೆ ನಿಷ್ಠೆಯಿಂದಿದ್ದು ಸದಾ ನಿಮ್ಮ ಬೆಂಗಾವಲಿಗಿರುತ್ತದೆ.ಇವರಿಗೆ ಹೊಂದಿಕೆಯಾಗುವ ವೃತ್ತಿಗಳೆಂದರೆ ಸರ್ಕಾರಿ ಕೆಲಸ, ಕಾನೂನು ಸೇವೆ, ಜಾಹೀರಾತು, ಉನ್ನತ ಶಿಕ್ಷಣ, ಯಂತ್ರಗಳ ನಿರ್ವಹಣೆ, ಸಾರಿಗೆ ಮತ್ತು ಸೇನೆ.

ಸಿಂಹ

ಸಿಂಹ

ಈ ರಾಶಿಯ ಜನರು ಸಿಂಹದಂತೆಯೇ ದೃಢನಿಶ್ಚಯವುಳವರು ಮತ್ತು ದಿಟ್ಟ ಸ್ವಭಾವದವರಾಗಿರುತ್ತಾರೆ. ನಿಮಗೆ ಬಹಳಷ್ಟು ಕನಸುಗಳಿದ್ದು ಮಹತ್ವಾಕಾಂಕ್ಷಿಗಳೂ ಆಗಿರುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಸ್ನೇಹ. ಜೀವನಸಂಗಾತಿ ಅಥವಾ ಪ್ರಾಣಸ್ನೇಹಿತ/ಸ್ನೇಹಿತೆಯ ಸ್ನೇಹಕ್ಕೆ ನೀವು ಅತಿಹೆಚ್ಚಿನ ಪ್ರಾಮುಖ್ಯತೆ ನೀಡುತ್ತೀರಿ. ಇವರಿಗೆ ಸರ್ಕಾರಿ ಕೆಲಸ, ಕಾನೂನು ಸೇವೆ, ಕಲೆ, ವಿನ್ಯಾಸ, ವಾಸ್ತುಶಿಲ್ಲ, ಇಂಜಿನಿಯರಿಂಗ್, ಮನೋರಂಜನೆ, ರಿಯಲ್ ಎಸ್ಟೇಟ್ ಅಥವಾ ಶಿಕ್ಷಣ ಕ್ಷೇತ್ರವು ಹೊಂದಿಕೆಯಾಗುತ್ತದೆ.

ಕನ್ಯಾ

ಕನ್ಯಾ

ಈ ರಾಶಿಯ ಜನರು ಇತರರಿಗಿಂತ ಎರಡು ಹೆಜ್ಜೆ ಮುಂದಿರುತ್ತಾರೆ. ಇದಕ್ಕೆ ನೀವು ಸಮಾಜವನ್ನು ಸೂಕ್ಷ್ಮವಾಗಿ ಗಮನಿಸುವ ಗುಣವೇ ಕಾರಣ. ನೀವು ಸಾಮಾನ್ಯವಾಗಿ ಎಲ್ಲರಿಗೂ ಸಹಾಯ ಮಾಡುವ ಮನಸ್ಸುಳ್ಳವರಾಗಿದ್ದು ವ್ಯವಹಾರಿಕ ಅಥವಾ ಕಾರ್ಯರೂಪದ ಕೆಲಸಗಳನ್ನೇ ಹಮ್ಮಿಕೊಳ್ಳುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಒಂಟಿತನ. ಇನ್ನು ಇವರು ಜ್ಞಾನ ಮತ್ತು ಅರ್ಥದ ಕಡೆ ಆಕರ್ಷಿತರಾಗುವಂತಹ ವ್ಯಕ್ತಿಗಳಾಗಿರುತ್ತಾರೆ. ನಿಖರತೆ, ವಿವರ ಮತ್ತು ಸಂಶೋಧನೆ ಎನ್ನುವುದು ಇವರ ವ್ಯಕ್ತಿತ್ವದಲ್ಲೇ ಇರುತ್ತದೆ. ಇವರಿಗೆ ಹೊಂದಿಕೆಯಾಗುವಂತಹ ಕೆಲಸಗಳೆಂದರೆ ಸಮಾಜ ಸೇವೆ, ಮಾರಾಟ, ಸಂಕಲನ, ಬರಹ ಮತ್ತು ಅಡುಗೆಯಲ್ಲಿ ತೊಡಗಿಕೊಳ್ಳಬಹುದು.

 ತುಲಾ

ತುಲಾ

ಈ ರಾಶಿಯ ಜನರು ಶಾಂತಿಪ್ರಿಯರಾಗಿದ್ದು ಆದರ್ಶವಾದಿಗಳಾಗಿರುತ್ತಾರೆ. ನಿಮ್ಮ ಸುತ್ತಮುತ್ತ ಶಾಂತಿ ಮತ್ತು ಸೌಹಾರ್ದತೆ ಪಡೆಯಲು ಸದಾ ಯತ್ನಿಸುತ್ತಿರುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ಹೂವುಗಳು. ನಿಮ್ಮ ಸುತಮುತ್ತ ಹೂವುಗಳಿರುವಂತೆ ಮತ್ತ ಸದಾ ನಗುನಗುತಾ ಇರುವಂತೆ ನೋಡಿಕೊಳ್ಳುತ್ತೀರಿ. ಅಂತೆಯೇ ಸದಾ ಹಸನ್ಮುಖಿಯಾಗಿರಲು ಹೂವುಗಳ ನಡುವೆಯೇ ಇರಲು ಇಚ್ಛಿಸುತ್ತೀರಿ. ಇನ್ನು ವೃತ್ತಿಯಲ್ಲಿ ಇವರಿಗೆ ಸಂತೋಷ ಸಿಗಬೇಕಾದರೆ ಮನುಷ್ಯರೊಂದಿಗೆ ಸಂವಾದ ಮಾಡುತ್ತಾ ಇರಬೇಕು. ಇವರು ತುಂಬಾ ಸಹಕಾರಿಗಳು ಮತ್ತು ಹೊಂದಾಣಿಕೆಯ ಸ್ವಭಾವದವರು. ಇವರಲ್ಲಿ ನ್ಯಾಯ ಹಾಗೂ ನಿಷ್ಠೆಯಿರುತ್ತದೆ. ಇವರಿಗೆ ಸರ್ಕಾರಿ, ಸಾಮಾಜಿಕ ಕೆಲಸ ಮತ್ತು ಕಾನೂನು ಜಾರಿ ವೃತ್ತಿ ಸೂಕ್ತವಾಗಿರುತ್ತದೆ.

ವೃಶ್ಚಿಕ

ವೃಶ್ಚಿಕ

ಈ ರಾಶಿಯ ಜನರು ಕ್ರಿಯಾತ್ಮಕರಾಗಿದ್ದು ತಾವಂದುಕೊಂಡಿದ್ದನ್ನೇ ಸಾಧಿಸುವ ಛಲವುಳ್ಳವರಾಗಿರುತ್ತಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಸ್ವಂತಿಕೆ. ನಿಮ್ಮ ಸ್ವಂತಿಕೆಯ ಮೇರೆಯಂತೆಯೇ ನಡೆಯುವ ನಿಮಗೆ ಬೇರೆಯವರಿಂದ ಎರವಲು ಪಡೆದ ಯಾವುದೇ ಕ್ರಮ ಇಷ್ಟವಾಗುವುದಿಲ್ಲ. ಇನ್ನು ಇವರು ಒಳ್ಳೆಯ ಪತ್ತೆದಾರರು ಮತ್ತು ಸತ್ಯವನ್ನು ಹೊರತೆಗೆಯುವ ಸಾಮರ್ಥ್ಯವನ್ನು ಹೊಂದಿರುವವರಾಗಿರುತ್ತಾರೆ. ಇವರಿಗೆ ಹೊಂದಿಕೆಯಾಗುವಂತಹ ಕೆಲಸವೆಂದರೆ ಕಾನೂನು ಸೇವೆ, ಇಂಜಿನಿಯರಿಂಗ್, ವಿಜ್ಞಾನ, ಶಿಕ್ಷಣ ಮತ್ತು ಕಾಮಗಾರಿ.

ಧನಸ್ಸು

ಧನಸ್ಸು

ಈ ರಾಶಿಯ ಜನರು ಸದಾ ಧನಾತ್ಮಕ ಚಿಂತನೆ ನಡೆಸುವವರಾಗಿದ್ದು ಜೀವನದ ಚಿಕ್ಕ ಪುಟ್ಟ ತೊಂದರೆಗಳಿಗೆ ಇವರು ಕಿಂಚಿತ್ತೂ ಚಿಂತಿಸುವುದಿಲ್ಲ. ಯಾವುದೇ ಪರಿಸ್ಥಿತಿಗೆ ಒಳಗಾದರೂ ಇದರಿಂದ ಹೊರಬರಲು ಸತತ ಪ್ರಯತ್ನ ನಡೆಸುತ್ತಲೇ ಇರುತ್ತಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಬಾಲ್ಯದ ಗೆಳೆಯರು. ನಿಮ್ಮ ಬಾಲ್ಯದ ಗೆಳೆತನವನ್ನು ಇಡಿಯ ಜೀವಮಾನ ಕಾಪಾಡುವ ನಿಮಗೆ ಬಾಲ್ಯದ ನೆನಪುಗಳು ಅತಿಹೆಚ್ಚಿನ ಸಂತೋಷ ನೀಡುತ್ತದೆ.ಇವರಿಗೆ ಹೊಂದಾಣಿಕೆಯಾಗುವ ಕೆಲಸವೆಂದರೆ ಸಂಕಲನ, ಬರಹ, ಮಾರ್ಕೆಟಿಂಗ್, ಮನೋರಂಜನೆ, ಸೇನೆ ಮತ್ತು ಸಾರ್ವಜನಿಕ ಸಂಪರ್ಕ.

ಮಕರ

ಮಕರ

ಈ ರಾಶಿಯ ಜನರು ವ್ಯವಹಾರ ಕುಶಲರಾಗಿದ್ದು ಕೆಲಸವನ್ನು ಹೇಗೆ ಮಾಡಿಸಿಕೊಳ್ಳಬೇಕು ಎಂದು ಗೊತ್ತಿರುವ ಜನರಾಗಿದ್ದಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ಸಿನೇಮಾ ವೀಕ್ಷಣೆ. ಸಿನೇಮಾ ಅಥವಾ ನೆಚ್ಚಿನ ಧಾರಾವಾಹಿಯಲ್ಲಿ ಸಂಪೂರ್ಣವಾಗಿ ಮುಳುಗುವ ನೀವು ಆ ಲೋಕದಲ್ಲಿಯೇ ಮುಳುಗಿಬಿಡುತ್ತೀರಿ. ಜೀವನದಲ್ಲಿ ಯಾವಾಗ ತೊಂದರೆ ಕಾಡಿತೋ ಆಗೆಲ್ಲಾ ಈ ಸಿನೆಮಾದಲ್ಲಿ ಎದುರಾದ ಸನ್ನಿವೇಶದಲ್ಲಿ ನಾಯಕ ಅನುಸರಿಸಿದ ನೀತಿಯನ್ನೇ ಅನುಸರಿಸಿ ಈ ತೊಂದರೆಯಿಂದ ಬಿಡುಗಡೆ ಪಡೆಯಲು ಯತ್ನಿಸುತ್ತೀರಿ. ಇವರಿಗೆ ಹೊಂದಿಕೆಯಾಗುವ ವೃತ್ತಿಯೆಂದರೆ ಕಲೆ, ವಿನ್ಯಾಸ, ವಾಸ್ತುಶಿಲ್ಪ, ನರ್ಸಿಂಗ್, ಕೃಷಿ ಮತ್ತು ಅಡುಗೆ.

ಕುಂಭ

ಕುಂಭ

ಈ ರಾಶಿಯ ವ್ಯಕ್ತಿಗಳು ಮಾನವತಾವಾದಿಗಳಾಗಿದ್ದು ಸುತ್ತಮುತ್ತಲ ಜನರಲ್ಲಿ ನೋವು ಕಾಣಲು ಇಷ್ಟಪಡುವುದಿಲ್ಲ. ಇವರ ಕಷ್ಟಗಳಿಗೆ ಸ್ಪಂದಿಸುವ ನೀವು ಸದಾ ನಿಮ್ಮ ಕೈಲಾದ ಸಹಾಯವನ್ನು ಮಾಡಲು ಯತ್ನಿಸುತ್ತಿರುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ನೀರು. ನಿಮ್ಮ ಸುತ್ತ ಮುತ್ತ ನೀರು ಇದ್ದಾಗ ನೀವು ಸದಾ ಶಾಂತರಾಗಿ ಉದ್ವೇಗರಹಿತರಾಗಿರುತ್ತೀರಿ. ಇವರಿಗೆ ಹೊಂದಿಕೆಯಾಗುವ ವೃತ್ತಿಗಳೆಂದರೆ ಖಗೋಲಶಾಸ್ತ್ರ, ಫೋಟೋಗ್ರಾಫಿ, ವಾಯುಯಾನ ಮತ್ತು ಕಂಪ್ಯೂಟರ್ ತಂತ್ರಜ್ಞಾನ.

ಮೀನ

ಮೀನ

ಈ ರಾಶಿಯ ಜನರು ಸಹಾನುಭೂತಿ ತೋರುವ ವ್ಯಕ್ತಿಗಳಾಗಿದ್ದು ಜನರ ಸಮಸ್ಯೆಗಳ ಪರಿಹಾರಕ್ಕೆ ತಮ್ಮ ಸಮಯ ವಿನಿಯೋಗಿಸುವುದರಲ್ಲಿಯೇ ಪರಿಪೂರ್ಣತೆಯನ್ನು ಅನುಭವಿಸುತ್ತಾರೆ. ಜನರನ್ನು ಅವರಿದ್ದ ಹಾಗೇ ಸ್ವೀಕರಿಸುವ ನಿಮ್ಮ ಪರಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ಸಂಗೀತ. ನಿಮ್ಮ ಮನೋಭಾವವನ್ನು ಉತ್ತಮಗೊಳಿಸಲು ಸಂಗೀತ ನಡೆಯುತ್ತಿದ್ದರೆ ಸಾಕಾಗುತ್ತದೆ. ಸಂಗೀತದ ಅಲೆ ಸುತ್ತ ತೇಲುತ್ತಿರುವಾಗ ನಿಮಗೆ ಹೊಸ ವಿಷಯಗಳು ಹೊಳೆಯುತ್ತವೆ ಹಾಗೂ ಹೆಚ್ಚು ಕ್ರಿಯಾತ್ಮಕರಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.ಇವರಿಗೆ ಹೊಂದಿಕೆಯಾಗುವ ವೃತ್ತಿಯೆಂದರೆ ಆರೋಗ್ಯ, ಆರೈಕೆ, ಸಾಮಾಜಿಕ ಕೆಲಸ ಮತ್ತು ಲೋಕೋಪಕಾರ.

English summary

Find Out What Your Lucky Charm is Knowing Your Zodiacal Sign

If luck has been passing you by lately, you might be in need of a lucky charm that could bring it back to you. Here are the items that attract luck for each zodiacal ...
X
Desktop Bottom Promotion