ಮೂರು ದಿನಗಳವರೆಗೆ ಈಕೆ ನೀರಿನಲ್ಲಿಯೇ ಸಿಲುಕಿಬಿಟ್ಟಳು! ಮೈ ಜುಂ ಅನ್ನುತ್ತೆ!!

By: Arshad
Subscribe to Boldsky

ಜ್ವಾಲಾಮುಖಿ ಸಿಡಿಯುವ ಮುನ್ಸೂಚನೆ ಇದ್ದರೆ ಅಕ್ಕಪಕ್ಕದ ಗ್ರಾಮಗಳಿಂದ ಜನರನ್ನು ಖಾಲಿ ಮಾಡಿಸುತ್ತಾರೆ. ಆದರೆ 1985ರಲ್ಲಿ ಕೊಲಂಬಿಯಾದ ಒಂದು ಜ್ವಾಲಾಮುಖಿ ಸಿಡಿದು ಗ್ರಾಮದ ಮೇಲೆ ಆವರಿಸಿದ ಬಳಿಕ ಇದರ ಕಾರಣದಿಂದ ಉಂಟಾದ ಭೂಕುಸಿತದಲ್ಲಿ ಹನ್ನೆರಡು ವರ್ಷದ ಒಮೈರಾ ಸಾಂಚೆಜ್ ಎಂಬ ಬಾಲಕಿ ಮೂಗಿನ ಮಟ್ಟದ ನೀರಿನಲ್ಲಿ ಸಿಲುಕಿ ಸುಮಾರು ಮೂರು ದಿನಗಳ ಕಾಲ ನೆರವಿಗೆ ಕಾಯುತ್ತಾ ಬದುಕಿದ್ದಳು.

ಈ ಸಂದರ್ಭದಲ್ಲಿ ತೆಗೆದ ಚಿತ್ರವನ್ನು ಇತ್ತೀಚೆಗೆ ನಡೆದ The World Press Photo foundationನ ಐವತ್ತನೆಯ ವರ್ಷಾಚರಣೆಯಲ್ಲಿ ಪ್ರದರ್ಶಿಸಲಾಗಿದ್ದು ಈ ಬಾಲಕಿಯ ದೈನ್ಯ ನೋಟ ಎಲ್ಲರ ಗಮನ ಸೆಳೆಯಿತು. ಈ ಬಾಲಕಿಯನ್ನು ಉಳಿಸಿಕೊಳ್ಳಲು ರಕ್ಷಣಾದಳದ ಅಧಿಕಾರಿಗಳು ತಮ್ಮೆಲ್ಲ ಪ್ರಯತ್ನ ನಡೆಸಿದರೂ ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವೇ ಆಗಿರಲಿಲ್ಲ.

ನಿಃಸ್ಸಹಾಯಕರಾದ ಅವರು ಆಕೆಯನ್ನು ಶಾಂತಿಯುತವಾದ ಸಾವು ಪಡೆಯುವಲ್ಲಿ ನೆರವಾದರು. ಬಾಲಕಿಗೂ ತಾನು ಉಳಿಯುವುದಿಲ್ಲ ಎಂದು ಗೊತ್ತಾಗಿದ್ದರೂ ಯಾವುದೇ ಬಗೆಯ ಭಾವಾವೇಶಕ್ಕೆ ಒಳಗಾಗದೇ ನಿರಾಳವಾಗಿದ್ದಳು ಹಾಗೂ ಹಾಡೊಂದನ್ನು ಗುನುಗುನಿಸುತ್ತಿದ್ದಳು. ಬನ್ನಿ, ಹೃದಯವನ್ನೇ ಹಿಂಡುವ ಈ ವಿದ್ರಾವಕ ಘಟನೆಯ ಬಗ್ಗೆ ಹಲವು ವಿವರಗಳನ್ನು ನೋಡೋಣ....

ಈಕೆಯ ಚಿತ್ರ ತಕ್ಷಣ ಎಲ್ಲರ ಗಮನಸೆಳೆಯತೊಡಗಿತು

ಈಕೆಯ ಚಿತ್ರ ತಕ್ಷಣ ಎಲ್ಲರ ಗಮನಸೆಳೆಯತೊಡಗಿತು

ಜ್ವಾಲಾಮುಖಿ ಸಿಡಿದ ಬಳಿಕ ಇಡಿಯ ಗ್ರಾಮದ ಮೇಲೆ ಎರಗಿದ ಕೆಸರು ಮನೆಗಳನ್ನೇ ಕೊಚ್ಚಿಕೊಂಡು ಕ್ಷಣಮಾತ್ರದಲ್ಲಿ ಗ್ರಾಮವನ್ನು ಕಸದ ತೊಟ್ಟಿಯಾಗಿಸಿತು. ಬಳಿಕ ಆಗಮಿಸಿದ ರಕ್ಷಣಾ ಪಡೆಯ ಕಾರ್ಯಕರ್ತರು ಯಾರಾದರೂ ಬದುಕಿದ್ದಾರೆಯೇ ಎಂದು ಹುಡುಕುತ್ತಾ ಬಂದಾಗ ದೀನ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದ ಈ ಬಾಲಕಿಯನ್ನು ಕಂಡರು. ಆಗ ಆಕೆ ಬದುಕಿದ್ದಳು.

ಆಕೆಯ ದೀನ ನೋಟ

ಆಕೆಯ ದೀನ ನೋಟ

ಆಕೆ ಭಾರೀ ನೋವಿನಲ್ಲಿದ್ದರೂ ಆಕೆಯ ಮುಖದಲ್ಲಿ ನೋವಿನ ಛಾಯೆ ಇರಲಿಲ್ಲ. ಆಕೆಯನ್ನು ಉಳಿಸಲು ಹಾಗೂ ಅಲ್ಲಿಂದ ಹೊರತೆಗೆಯಲು ಕಾರ್ಯಕರ್ತರು ತಕ್ಷಣವೇ ತಮ್ಮೆಲ್ಲಾ ಪ್ರಯತ್ನಗಳನ್ನು ನಡೆಸಿದರು. ಆದರೆ ಭಾರೀ ಗಾತ್ರದ ಕಾಂಕ್ರೀಟಿನ ಭಾಗಗಳ ನಡುವೆ ಆಕೆಯ ಕಾಲು ಸಿಲುಕಿಕೊಂಡಿದ್ದು ಅಲ್ಲಿ ನೀರು ಸಹಾ ತುಂಬಿಕೊಂಡಿದ್ದು ಬಾಲಕಿಯ ಮೂಗಿನ ಮಟ್ಟದಲ್ಲಿತ್ತು. ನೀರನ್ನು ಖಾಲಿ ಮಾಡಲು ಹಾಗೂ ಕಾಂಕ್ರೀಟನ್ನು ನಿವಾರಿಸಲು ಆ ಕ್ಷಣದಲ್ಲಿ ಸಾಧ್ಯವೇ ಇರಲಿಲ್ಲ.

ಆಕೆಯ ಮೃತ ಚಿಕ್ಕಮ್ಮ ಕಾಲನ್ನು ಹಿಡಿದಿದ್ದಳು

ಆಕೆಯ ಮೃತ ಚಿಕ್ಕಮ್ಮ ಕಾಲನ್ನು ಹಿಡಿದಿದ್ದಳು

ಈಕೆಯ ಕಾಲನ್ನು ಅಡಿಯಿಂದ ಆಕೆಯ ಚಿಕ್ಕಮ್ಮ ಹಿಡಿದಿದ್ದುದನ್ನು ಕಾರ್ಯಕರ್ತರು ಗಮನಿಸಿದರು. ಆಕೆ ಕಾಂಕ್ರೀಟಿನ ಅವಶೇಷಗಳ ಅಡಿಯಲ್ಲಿ ಆಗಲೇ ಸಿಲುಕಿದ್ದು ಜ್ವಾಲಮುಖಿ ಸಿಡಿದ ಕೆಲವೇ ಕ್ಷಣಗಳಲ್ಲೇ ಸಾವನ್ನಪ್ಪಿದ್ದಳು. ಈ ಬಾಲಕಿಯ ಶಕ್ತಿ ಉಡುಗುತ್ತಾ ಬಂದಿದ್ದು ನಿಲ್ಲಲು ಸಾಧ್ಯವಾಗದೇ ಮುಳುಗಿ ಸಾಯುವ ಸ್ಥಿತಿಯಲ್ಲಿದ್ದಳು. ಆಕೆಯನ್ನು ಜೀವಂತ ಹೊರತೆಗೆಯಲು ಸಾಧ್ಯವೇ ಇರಲಿಲ್ಲ.

ಆ ಸಮಯದಲ್ಲಿ ಆಕೆ ಮನೆಯಲ್ಲಿದ್ದಳು

ಆ ಸಮಯದಲ್ಲಿ ಆಕೆ ಮನೆಯಲ್ಲಿದ್ದಳು

ಜ್ವಾಲಾಮುಖಿ ಸಿಡಿದಾಗ ಆಕೆ ಮನೆಯಲ್ಲಿದ್ದಳು ಹಾಗೂ ಆಕೆಯೊಂದಿಗೆ ಆಕೆಯ ತಂದೆ ತಾಯಿ, ಸಹೋದರ, ಚಿಕ್ಕಮ್ಮ ಎಲ್ಲರೂ ಇದ್ದರು. ತುಪತುಪನೇ ಉದುರಿದ ಬೂದಿ ಮನೆಯನ್ನು ಕ್ಷಣಮಾತ್ರದಲ್ಲಿ ಚಿಂದಿಯಾಗಿಸಿ ಎಲ್ಲರೂ ಅದರೊಳಗೆ ಸಿಲುಕಿಕೊಂಡರೂ ಈ ಬಾಲಕಿ ಹೇಗೋ ಕೆಲ ಹೆಜ್ಜೆ ಹಾಕಿ ಹೊರಬಂದಿದ್ದಳು. ಆದರೆ ಆಕೆಯ ಕಾಲನ್ನು ಆಕೆಯ ಚಿಕ್ಕಮ್ಮ ಹಿಡಿದ ಸಮಯಕ್ಕೇ ಕಾಂಕ್ರೀಟಿನ ಬಾಗಿಲೊಂದು ಆಕೆಯ ಮೇಲೆ ಬಿದ್ದು ಆಕೆ ಹಿಡಿದಿದ್ದ ಬಾಲಕಿಯ ಕಾಲು ಸಹಾ ಕಾಂಕ್ರೀಟಿನ ಅಡಿಯಲ್ಲಿ ಬಂಧಿಯಾಗಿತ್ತು.

ಮುಳುಗುವುದರಿಂದ ರಕ್ಷಣೆ

ಮುಳುಗುವುದರಿಂದ ರಕ್ಷಣೆ

ನೀರಿನಲ್ಲಿ ಇನ್ನೂ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗದುದನ್ನು ಗಮನಿಸಿದ ಕಾರ್ಯಕರ್ತರು ಎಲ್ಲಿಂದಲೋ ಒಂದು ವಾಹನದ ಟೈರನ್ನು ತಂದು ಆಕೆಯ ಶರೀರ ಟೈರಿನಲ್ಲಿ ತೂರುವಂತೆ ಮಾಡಿದರು. ಈ ಮೂಲಕ ಬಾಲಕಿಯನ್ನು ಮುಳುಗುವುದರಿಂದ ಬದುಕಿಸಲಾಯ್ತು.

ಆಕೆಯ ಅಂತಿಮ ಕ್ಷಣಗಳು

ಆಕೆಯ ಅಂತಿಮ ಕ್ಷಣಗಳು

ಒಟ್ಟು ಅರವತ್ತು ಗಂಟೆಯ ಕಾಲ ಆಕೆ ಆ ಸ್ಥಿತಿಯಲ್ಲಿಯೇ ಇದ್ದಳು. ಅಚ್ಚರಿ ಎಂದರೆ ಪ್ರಾರಂಭದ ಗಂಟೆಗಳಲ್ಲಿ ಪ್ರಾರ್ಥನೆ ಮಾಡುವುದು, ಕೊಂಚ ಅಳುವುದು, ಕೊಂಚ ಹೆದರಿಕೆಯನ್ನು ವ್ಯಕ್ತಪಡಿಸುತ್ತಿದ್ದರೆ ಅಂತಿಮ ಕ್ಷಣಗಳಲ್ಲಿ ಅತಿ ನಿರಾಳವಾಗಿದ್ದಳು ಹಾಗೂ ತನ್ನ ನೆಚ್ಚಿನ ಹಾಡನ್ನೂ ಗುನುಗುನಿಸುತ್ತಿದ್ದಳು.

ಆಕೆ ಸಿಹಿ ಬೇಕೆಂದೂ ಕೇಳಿದ್ದಳು

ಆಕೆ ಸಿಹಿ ಬೇಕೆಂದೂ ಕೇಳಿದ್ದಳು

ಈ ಸಮಯದಲ್ಲಿ ಆಕೆಗೆ ಆಗಾಗ ಆಹಾರವನ್ನು ನೀಡುತ್ತಾ ಆಕೆಯನ್ನು ಬದುಕಿಸಲು ಕಾರ್ಯಕರ್ತರು ತಮ್ಮ ಪ್ರಯತ್ನ ನಡೆಸುತ್ತಿದ್ದರು. ಆಹಾರವನ್ನು ಸ್ವೀಕರಿಸಿದ ಆಕೆ ಸೋಡಾ ಬೇಕು, ಸಿಹಿತಿಂಡಿ ಬೇಕು ಎಂದೂ ಕೇಳುತ್ತಿದ್ದಳು. ತನ್ನ ರಕ್ಷಣೆಗೆ ದಿನರಾತ್ರಿ ಶ್ರಮಿಸುತ್ತಿದ್ದ ಕಾರ್ಯಕರ್ತರಿಗೆ ಆಕೆ ಈಗ ಹೋಗಿ ಕೊಂಚ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಹೇಳಿದಾದ ಭೂಮಿಯ ಮೇಲೆ ದೇವತೆಯೇ ಈಕೆಯ ರೂಪದಲ್ಲಿ ಬಂದಿದ್ದಾಳೆಯೇ ಎಂದು ಕಾರ್ಯಕರ್ತರಿಗೆ ಅನ್ನಿಸಿತ್ತು.

ಅಂತಿಮ ದಿನದಲ್ಲಿ ಆಕೆಗೆ ಭ್ರಾಂತಿ ಎದುರಾಗಿತ್ತು

ಅಂತಿಮ ದಿನದಲ್ಲಿ ಆಕೆಗೆ ಭ್ರಾಂತಿ ಎದುರಾಗಿತ್ತು

ಮೂರನೆಯ ಹಾಗೂ ಅಂತಿಮ ದಿನದ ರಾತ್ರಿ ಆಕೆಗೆ ಭ್ರಮೆಗಳು ಮೂಡಲು ತೊಡಗಿದವು. ತನ್ನನ್ನು ಬೇಗನೇ ಬಿಡಿ, ಶಾಲೆಗೆ ತಡವಾಗುತ್ತಿದೆ ಎಂದೆಲ್ಲಾ ಬಡಬಡಿಸತೊಡಗಿದಳು. ಈ ಹೊತ್ತಿನಲ್ಲಿ ಆಕೆಯ ಮುಖ ಊದಿಕೊಂಡಿತ್ತು, ಕೈಗಳು ಬಿಳಿಯಾಗಿದ್ದವು, ಕಣ್ಣುಗಳು ಕೆಂಪಗಾಗಿದ್ದವು.

ಅರವತ್ತು ಗಂಟೆಗಳ ಬಳಿಕ ಆಕೆ ಸಾವಿಗೆ ಶರಣಾದಳು

ಅರವತ್ತು ಗಂಟೆಗಳ ಬಳಿಕ ಆಕೆ ಸಾವಿಗೆ ಶರಣಾದಳು

ಅರವತ್ತು ಗಂಟೆಗಳಿಗೂ ಹೆಚ್ಚು ಕಾಲ ಇದೇ ಸ್ಥಿತಿಯಲ್ಲಿದ್ದ ಆಕೆ ಕಡೆಗೂ ನಿಸರ್ಗದ ಪ್ರಕೋಪಕ್ಕೆ ಶರಣಾದಳು. ಆಕೆಯ ಸಾವಿಗೆ ಗ್ಯಾಂಗ್ರೀನ್ ಹಾಗೂ ಲಘೂಷ್ಣತೆ ( hypothermia) ಎಂದು ದಾಖಲಾಗಿದೆ. ಆಕೆಯನ್ನು ಉಳಿಸಲು ಸಾಧ್ಯವಾಗದೇ ಇರುವ ಕಾರಣ ಅಕೆಯ ಅಂತಿಮ ಸಮಯವನ್ನು ಆಕೆ ಶಾಂತಿಯುತವಾಗಿ ಕಳೆದು ಸಹಜ ಸಾವನ್ನು ಪಡೆಯುವಲ್ಲಿ ಕಾರ್ಯಕರ್ತರು ನೆರವಾದರು.

Image Source

English summary

Final Moments Of The Girl Who Was Trapped For 3 Days!

Here are the details of the struggle that the little girl went through during her last moments and she knew her end was nearing, yet kept her calm and even sang a song while the rescue operators worked on her. Check out on some of the heart-breaking moments that were recorded of this little girl.
Subscribe Newsletter