ಬುದ್ಧಿವಂತ ರೈತ ಬೆಳೆದಿದ್ದು ಒಂದೇ ಬೆಳೆ, ಆದರೆ ಪಡೆದದ್ದು ಸಾವಿರ ಬೆಲೆ!

By: Divya
Subscribe to Boldsky

ಕಾಲಕಾಲಕ್ಕೆ ಸರಿಯಾಗಿ ಮಳೆಯಾಗದಿದ್ದರೆ, ಅಥವಾ ಚಿಕ್ಕ ಹಿಡುವಳಿ ಹೊಂದಿದ್ದರೆ ರೈತ ಮಿಶ್ರ ಬೆಳೆಯ ಮೊರೆ ಹೋಗಬೇಕಾಗುತ್ತದೆ. ಇಲ್ಲವೇ ಒಂದು ಬೆಳೆಯ ಫಸಲಿನ ನಂತರ ಇನ್ನೊಂದು ಬೆಳೆಯನ್ನು ಬೆಳೆಯಬೇಕಾಗುತ್ತದೆ. ಈ ರೀತಿ ಮಾಡಿದರೂ ಅದೆಷ್ಟೋ ಬಾರಿ ಸರಿಯಾದ ಇಳುವರಿ ಸಿಗದೆ ಕೈ ಸುಟ್ಟಿಕೊಳ್ಳುವ ಸಾಧ್ಯತೆಯೇ ಹೆಚ್ಚಿರುತ್ತದೆ. ಇಂತಹ ಸಮಸ್ಯೆಗಳಿಂದ ದೂರ ಉಳಿಯಲು ಇಲ್ಲೊಬ್ಬ ರೈತ ತನ್ನ ಬುದ್ಧಿ ಉಪಯೋಗಿಸಿದ್ದಾನೆ.

ಜನರ ಫೋಟೋ, ಸೆಲ್ಫೀ ಎನ್ನವ ಹುಚ್ಚಿಗೆ ತನ್ನ ಕೃಷಿ ಭೂಮಿಯನ್ನು ವೇದಿಕೆಯನ್ನಾಗಿ ಮಾಡಿದ್ದಾನೆ. ಜೊತೆಗೆ ಆ ಕೃಷಿಯಿಂದ ಬರುವ ಆದಾಯಕ್ಕಿಂತ ಹೆಚ್ಚು ಆದಾಯವನ್ನು ಪಡೆಯುತ್ತಿದ್ದಾನೆ. ನಿಜ, ಯಾವುದೇ ಕೆಲಸದಲ್ಲಿ ಅಥವಾ ಸನ್ನಿವೇಶದಲ್ಲಿ ನಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿದರೆ ಉನ್ನತ ಸ್ಥಾನಕ್ಕೆ ಏರಬಹುದು ಎನ್ನವುದನ್ನು ತಿಳಿಸಿಕೊಟ್ಟಿದ್ದಾನೆ.....

ಅದ್ಯಾವ ಕೃಷಿ ಭೂಮಿ?

ಅದ್ಯಾವ ಕೃಷಿ ಭೂಮಿ?

ಜನರ ಫೋಟೋ ಮತ್ತು ಸೆಲ್ಫೀ ಕ್ರೇಜ್‍ಗೆ ಆಕರ್ಷಿಸಿದ್ದು ಸೂರ್ಯಕಾಂತಿ ಹೂವಿನ ತೋಟ. ಈ ಕೃಷಿ ಭೂಮಿಯಲ್ಲಿ ಉದ್ದಗಲಕ್ಕೂ ಸೂರ್ಯಕಾಂತಿಯ ಹೂವು ಕಂಗೊಳಿಸುತ್ತವೆ. ಇವುಗಳ ನೈಸರ್ಗಿಕ ಸೌಂದರ್ಯ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಒಮ್ಮೆಯಾದರೂ ಇಲ್ಲಿ ನಿಂತು ಸೌಂದರ್ಯ ವೀಕ್ಷಿಸಬೇಕು ಎನ್ನುವ ಆಸೆ ಮೂಡುತ್ತದೆ.

ಎಲ್ಲಿ ಇದು?

ಎಲ್ಲಿ ಇದು?

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಆವೃತ್ತಿಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದೆ ಈ ತೋಟ. ನಿತ್ಯವೂ ಸಾವಿರಾರು ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸುವುದು ರೈತರನಿಗೊಂದು ಆದಾಯದ ಮೂಲವಾಗಿದೆ.

ರೈತ ಯಾರು?

ರೈತ ಯಾರು?

ಗುಂಡ್ಲುಪೇಟೆಯ ಬೇಗೂರು ಎನ್ನುವ ಹಳ್ಳಿಯಲ್ಲಿರುವ 42 ವರ್ಷದ ಕುಮಾರ ಎನ್ನುವ ರೈತ. ಇವನಿಗೆ ಸುಮಾರು 6 ಎಕರೆ ಕೃಷಿ ಭೂಮಿಯಿದೆ. ಅದರಲ್ಲಿ ಸ್ವಲ್ಪ ಜಾಗ ರಸ್ತೆಗೆ ಸಮೀಪವಿದೆ.

ರಸ್ತೆಯ ಆಕರ್ಷಣೆ

ರಸ್ತೆಯ ಆಕರ್ಷಣೆ

ಈ ರೈತನ ಕೃಷಿ ಭೂಮಿಯ ಸಮೀಪದಲ್ಲಿಯೇ ರಾಷ್ಟ್ರೀಯ ಹೆದ್ದಾರಿ 766 ಹಾದು ಹೋಗುತ್ತದೆ. ಈ ಮಾರ್ಗದಲ್ಲಿ ಕೇರಳ ಮತ್ತು ಊಟಿ ಪ್ರವಾಸಿಗರು ಹೆಚ್ಚು ಸಂಚರಿಸುತ್ತಾರೆ. ಪ್ರವಾಸ ಪ್ರಿಯರಿಗೆ ರಸ್ತೆ ಮಾರ್ಗದಲ್ಲಿರುವ ಸೂರ್ಯಕಾಂತಿಯ ತೋಟ ಒಂದು ಆಕರ್ಷಕ ತಾಣವಾಗಿ ತಿರುಗಿದೆ.

ಸಂಪಾದನೆ ಹೇಗೆ?

ಸಂಪಾದನೆ ಹೇಗೆ?

ರೈತನ ಭೂಮಿಯಲ್ಲಿ ಸೂರ್ಯಕಾಂತಿ ಕಂಗೊಳಿಸುವುದನ್ನು ಕಂಡ ಪ್ರವಾಸಿಗರು ಹೂವಿನೊಂದಿಗೆ ಸೆಲ್ಫೀ, ಫೋಟೋ ತೆಗೆದುಕೊಳ್ಳಲು ಬರುತ್ತಿದ್ದರು. ದಿನದಲ್ಲಿ ಒಬ್ಬರು ಅಥವಾ ಇಬ್ಬರು ಬಂದಿದ್ದರೆ ತೊಂದರೆ ಇರುತ್ತಿರಲಿಲ್ಲ. ನೂರಾರು ಮಂದಿ ಬರುವುದರಿಂದ ಬೆಳೆಯ ನಾಶವೂ ಆಗುತ್ತಿತ್ತು. ಈ ವಿಷಯದ ಬಗ್ಗೆ ಹೆಚ್ಚು ಚಿಂತಿಸಿದ ರೈತ, ಫೋಟೋ ಮತ್ತು ಸೆಲ್ಫೀ ತೆಗೆಯಲು ಹಣವನ್ನು ನಿಗಧಿ ಪಡಿಸಿದ. ಹಾಗಾಗಿಯೇ ಬೆಳೆ ಹಾಳಾದರೂ ರೈತನಿಗೆ ಸಂಪಾದನೆಗೆ ತೊಂದರೆ ಆಗಲಿಲ್ಲ.

ಹಾಗಾದರೆ ಸಂಪಾದನೆ ಎಷ್ಟು?

ಹಾಗಾದರೆ ಸಂಪಾದನೆ ಎಷ್ಟು?

ರೈತ ಹೇಳುವ ಪ್ರಕಾರ ಒಬ್ಬ ವ್ಯಕ್ತಿ ಫೋಟೋ/ಸೆಲ್ಫೀ ತೆಗೆದುಕೊಳ್ಳಲು 20 ರೂಪಾಯಿ ನೀಡಬೇಕು ಎಂದು ಫಲಕ(ಬೋರ್ಡ್)ಹಾಕಿದ್ದೇನೆ. ಅದಕ್ಕೆ ಅನುಗುಣವಾಗಿ ಫೋಟೋ ಪ್ರಿಯರು ಹಣಕೊಟ್ಟು ಫೋಟೋ ತೆಗೆದುಕೊಳ್ಳುತ್ತಾರೆ. ರಜದ ಸಂದರ್ಭದಲ್ಲಿ ಹೆಚ್ಚು ಸಂಪಾದನೆಯಾಗುತ್ತದೆ. ಉಳಿದ ದಿನದಲ್ಲಿ ಸಾಧಾರಣ ಎನ್ನಬಹುದು. ಕಳೆದ ವಾರ ಸುಮಾರು 40,000 ರೂ ಸಂಪಾದನೆ ಆಗಿದೆ. ರಜ ಇರದ ದಿನಗಳಲ್ಲಿ ಫೋಟೋ ತೆಗೆದುಕೊಳ್ಳುವುದರ ಬೆಲೆ ಇಳಿಸುತ್ತೇನೆ ಎನ್ನುತ್ತಾರೆ.

ಲಾಭ ನಷ್ಟ ಎರಡೂ ಇದೆ

ಲಾಭ ನಷ್ಟ ಎರಡೂ ಇದೆ

ಫೋಟೋ ತೆಗೆಯಲು ಬಂದವರು ಹೂವನ್ನು ಕೀಳುವುದು, ಕೃಷಿ ಭೂಮಿಯಲ್ಲಿ ಓಡಾಡುವುದರಿಂದ ಬೆಳೆಗೆ ಹಾಕಿರುವ ಮಣ್ಣುಗಳು ಹರಡಿಕೊಳ್ಳುತ್ತವೆ. ಇದನ್ನು ಸರಿ ಪಡಿಸಿಕೊಳ್ಳಬೇಕು. ನಾಶವಾಗುವ ಬೆಳೆಯ ರಕ್ಷಣೆಗಾಗಿ ಈ ವಿಧಾನವನ್ನು ಅನುಸರಿಸಿದೆ. ಈಗ ಬೆಳೆಯ ರಕ್ಷಣೆ ಹಾಗೂ ಸಂಪಾದನೆ ಎರಡೂ ಅನುಕೂಲಕರವಾಗಿವೆ ಎಂದು ಸಂತಸ ಪಡುತ್ತಾರೆ.

Image courtesy

English summary

Farmer charges money for taking selfie with his sunflowers

The obsessive compulsive desire to take photos of one’s self and post them on social media– selfie, turned out to be a trend, too serious. And monetising this wave of the trend was long prophesied! An astute farmer from Chamarajanagar district decided to turn his scenic sunflower field along NH 766 into a quick business idea by charging money from those who take selfies with the flowers in the background.
Subscribe Newsletter