ಈ ದೇಶಗಳಲ್ಲಿ ಸ್ತನ ಕಾಣುವ ಹಾಗೆ ಡ್ರೆಸ್ ಮಾಡಿದರೆ, ಜೈಲಿಗೆ ತಳ್ಳುತ್ತಾರೆ!!

By: Arshad
Subscribe to Boldsky

ಈ ವಿಶ್ವದ ಪ್ರತಿ ದೇಶದಲ್ಲಿಯೂ ತನ್ನದೇ ಆದ ಕಾನೂನುಗಳಿದ್ದು ಒಂದು ದೇಶದ ಕಾನೂನಿನಂತೆ ಇನ್ನೊಂದು ದೇಶದಲ್ಲಿ ಇರಲಾರದು. ಈ ಬಗ್ಗೆ ಅರಿವಿಲ್ಲದೇ ಒಂದು ದೇಶದಲ್ಲಿ ಅನುಸರಿಸುತ್ತಿದ್ದ ಯಾವುದೋ ಕ್ರಮ ಇನ್ನೊಂದು ದೇಶದಲ್ಲಿ ಅನುಸರಿಸಿದರೆ ಆ ದೇಶದ ಕಾನೂನಿನ ಪ್ರಕಾರ ಅಪರಾಧ ಎಸಗಿದಂತಾಗಬಹುದು. ಇಂತಹ ಒಂದು ಕಠಿಣ ಕಾನೂನು ಎಂದರೆ ಮಹಿಳೆಯರಿಗೆ ತೆರೆದೆದೆಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು.

ಈ ದೇಶಗಳಲ್ಲಿ ಕುಡಿದು ಮಜಾ ಮಾಡಿದರೆ, ಶಿಕ್ಷೆ ಹೇಗಿರುತ್ತೆ ಗೊತ್ತೇ?

ಕೆಲವು ದೇಶಗಳಲ್ಲಿ ಈ ಪರಿ ದಂಡನಾರ್ಹ ಅಪರಾಧವಾಗಿದ್ದು ಈ ಬಗ್ಗೆ ಆ ದೇಶಗಳಿಗೆ ಭೇಟಿ ನೀಡುವ ಪ್ರತಿಯೊಬ್ಬರೂ ಅರಿತುಕೊಂಡಿರುವುದು ಅಗತ್ಯವಾಗಿದೆ. ಕೆಲವು ದೇಶಗಳಲ್ಲಿ ಈ ಬಗ್ಗೆ ವಿಚಾರಣೆಯನ್ನೂ ಎದುರಿಸಬೇಕಾಗಬಹುದು, ಗೊತ್ತಿದ್ದೂ ಎಸಗಿದ್ದರೆ ಜೈಲುವಾಸವನ್ನೂ ಅನುಭವಿಸಬೇಕಾಗಬಹುದು. ಬನ್ನಿ, ಈ ದೇಶಗಳು ಯಾವುವು ಎಂಬುದನ್ನು ನೋಡೋಣ...

ಮೆಕ್ಸಿಕೋ

ಮೆಕ್ಸಿಕೋ

ಮೆಕ್ಸಿಕೋ ದೇಶದ ರಾಜಧಾನಿ ಮೆಕ್ಸಿಕೋ ಸಿಟಿ ಸುಂದರ ಹಾಗೂ ಸ್ವತಂತ್ರ ಮಹಿಳೆಯರಿಗಾಗಿ ಹೆಸರುವಾಸಿಯಾಗಿದೆ. ವಿಶ್ವವಿಖ್ಯಾತ ನಟಿ ಸಲ್ಮಾ ಹಾಯೆಕ್ ಸಹಾ ಈ ನಗರದವರೇ. ಆದರೆ ಈ ನಗರದಲ್ಲಿ ತೆರೆದೆದೆಯ ಪ್ರದರ್ಶನಕ್ಕೆ ನಿಷೇಧವಿದ್ದು ಯಾವುದೇ ರೀತಿಯಲ್ಲಿ ತೆರೆದೆದೆಯ ಮಹಿಳೆಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಂತೆ ಕಾನೂನು ರಚಿಸಲಾಗಿದೆ.

ಐರ್ಲೆಂಡ್

ಐರ್ಲೆಂಡ್

ಜಗತ್ತಿನಲ್ಲಿ ಆಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕುತ್ತಿರುವ ದೇಶಗಳಲ್ಲಿ ಅರ್ಲೆಂಡ್ ಸಹಾ ಒಂದು. ಆದರೆ ಅಭಿವೃದ್ದಿಯ ಹೆಸರಿನಲ್ಲಿ ತೆರೆದೆದೆಯ ಪ್ರದರ್ಶನಕ್ಕೆ ಈ ದೇಶದಲ್ಲಿ ಅವಕಾಶವಿಲ್ಲ. ಕಾನೂನಿನ ಪ್ರಕಾರ ಸಾರ್ವಜನಿಕವಾಗಿ ತೆರೆದೆದೆಯ ಪ್ರದರ್ಶನ ನೀಡಿದ ಮಹಿಳೆಗೆ 634.87 ಯೂರೋ (ಸುಮಾರು 48857 ರೂಪಾಯಿಗಳು) ನಷ್ಟು ಭಾರೀ ದಂಡವನ್ನು ತೆರಬೇಕಾಗಿ ಬರಹುದು ಹಾಗೂ ವಿಚಾರಣೆಯ ಬಳಿಕ ಆರು ತಿಂಗಳ ಜೈಲುಶಿಕ್ಷೆಯೂ ಆಗಬಹುದು.

ಅಚ್ಚರಿ ಜಗತ್ತು: ಸೆಕ್ಸ್ ವಿಷಯದಲ್ಲಿ, ಜಗತ್ತಿನ ವಿಚಿತ್ರ ಕಾನೂನು!

ಟರ್ಕಿ

ಟರ್ಕಿ

ಈ ದೇಶದಲ್ಲಿ ಮಹಿಳೆಯರಿಗೆ ತೆರೆದೆದೆಯ ಪ್ರದರ್ಶನಕ್ಕೆ ದಂಡ ತೆರಬೇಕಾಗಿ ಬರುತ್ತದೆ. ಈ ದೇಶದಲ್ಲಿ ಮಹಿಳೆಯರು ತೆರೆದೆದೆಯ ಪ್ರದರ್ಶನ ಮಾಡುವುದಿರಲಿ, ಸಾರ್ವಜನಿಕವಾಗಿ ಮುಕ್ತವಾಗಿ ನಗಲೂಬಾರದು ಎಂದು ಕಾನೂನು ಹೊರಡಿಸಬೇಕು ಎಂದು ಅಲ್ಲಿನ ಪ್ರಧಾನ ಮಂತ್ರಿಗಳೇ ಪ್ರಸ್ತಾವನೆ ಮುಂದಿಟ್ಟಿದ್ದಾರೆ.

 ಬ್ರೆಜಿಲ್

ಬ್ರೆಜಿಲ್

ಈ ದೇಶದಲ್ಲಿ ವಾತಾವರಣ ಎಷ್ಟು ಆಹ್ಲಾದಕರವಾಗಿದ್ದರೂ ನಗ್ನತೆಗೆ ಸಂಬಂಧಿಸಿದಂತೆ ಕಾನೂನು ಮಾತ್ರ ತುಂಬಾ ಬಿಗಿಯಾಗಿದೆ. ತೆರೆದೆದೆಯ ಪ್ರದರ್ಶನ ಮಾಡುವ ಮಹಿಳೆಯರಿಗೆ ಈ ದೇಶದಲ್ಲಿ ದಂಡ ಮಾತ್ರವಲ್ಲ, ಜೈಲುವಾಸದ ಶಿಕ್ಷೆಯೂ ಖಚಿತವಾಗಿದೆ.

ರಷ್ಯಾ

ರಷ್ಯಾ

ಈ ದೇಶದ ಕಾನೂನುಗಳು ರಾಷ್ಟ್ರನಾಯಕರಿಗೊಂದು, ಸಾರ್ವಜನಿಕರಿಗೊಂದು ಎಂಬಂತೆ ಬಳಕೆಯಾಗುತ್ತಿರುವ ವಿರುದ್ದ ಈ ದೇಶದ ಜನತೆಗೆ ಭಾರೀ ಅಸಮಾಧಾನವಿದೆ. ಏಕೆಂದರೆ ಇಲ್ಲಿನ ನಾಯಕರು ಕಾನೂನು ಉಲ್ಲಂಘಿಸಿ ತೆರೆದೆದೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ಮೆರೆಯುತ್ತಾರೆ. ಆದರೆ ಈ ದೇಶದ ಮಹಿಳೆಯರಿಗೆ ಮಾತ್ರ ತೆರೆದೆದೆಯ ಪ್ರದರ್ಶನಕ್ಕೆ ಅವಕಾಶವಿಲ್ಲ. ಮಾಡಿದರೆ ಐವತ್ತು ಯೂರೋ ದಂಡ! ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.

English summary

Exposing Breasts In Public Can Get Women In Trouble Here

Different countries have different laws for women who expose their assets in these countries out in the open. You can actually be prosecuted if you display your breasts in these countries. So, continue reading to know which are the countries where you can even be jailed for exposing your breasts!
Subscribe Newsletter