ಜೀವನದ ಕಷ್ಟ-ಸುಖದ ಬಗ್ಗೆ ತಿಳಿಯಲು ಅಂಗೈ ನೋಡಿ ಸಾಕು!

Posted By: Divya Pandith
Subscribe to Boldsky

ಪ್ರತಿಯೊಬ್ಬರಿಗೂ ಭವಿಷ್ಯದಲ್ಲಿ ಏನಾಗಬಹುದು ಎನ್ನುವುದನ್ನು ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಆದರೆ ಆ ವಿಚಾರವನ್ನು ಅಷ್ಟು ಸುಲಭವಾಗಿ ಅರಿಯಲು ಕಷ್ಟ. ಆದರೆ ಯಾವೆಲ್ಲಾ ಸನ್ನಿವೇಶಗಳು ಅಥವಾ ಸಂಗತಿಗಳು ಸಂಭವಿಸಬಹುದು ಎನ್ನುವುದನ್ನು ಅರಿಯಬಹುದು. ಇಂತಹ ಒಂದು ಸಂಗತಿಯನ್ನು ತಿಳಿಸಿಕೊಡುವ ಪ್ರಯತ್ನವನ್ನು ಜ್ಯೋತಿಷ್ಯ ಶಾಸ್ತ್ರ ಮಾಡುತ್ತದೆ. ಭವಿಷ್ಯದಲ್ಲಿ ನಡೆಯುವ ಒಳ್ಳೆಯ ಮತ್ತು ಕೆಟ್ಟ ವಿಚಾರಗಳೆರಡನ್ನೂ ಸುಲಭವಾಗಿ ತಿಳಿಸಿಕೊಡುತ್ತದೆ.

ಹೌದು, ಭವಿಷ್ಯವನ್ನು ತಿಳಿದುಕೊಳ್ಳಲು ಜ್ಯೋತಿಷ್ಯ ಮಾರ್ಗದಲ್ಲಿ ಹಲವಾರು ಮಜಲುಗಳಿವೆ. ಅವುಗಳಲ್ಲಿ ಹಸ್ತ್ರ ಮುದ್ರಿಕೆಯೂ ಒಂದು. ನಮ್ಮ ಹಸ್ತದಲ್ಲಿ ಮೂಡಿರುವ ಪ್ರಮುಖ ರೇಖೆಗಳಿಗೆ ಒಂದೊಂದು ವಿಶೇಷ ಸ್ಥಾನವನ್ನು ನೀಡಲಾಗಿದೆ. ಇವು ಯಾವ ಪರ್ವತದಲ್ಲಿ ಹುಟ್ಟುತ್ತವೆ? ಎಲ್ಲಿ ಸೇರುತ್ತವೆ?

ಯಾವ ಚಿಹ್ನೆಗಳು ಇದರ ಮೇಲೆ ನಿಂತಿವೆ, ಎಲ್ಲಿ ಅಂತ್ಯವಾಗಿವೆ? ಎನ್ನುವುದರ ಆಧಾರದ ಮೇಲೆ ಭವಿಷ್ಯವು ಅಡಗಿರುತ್ತವೆ. ಆ ರೇಖೆಗಳನ್ನು ಗುರುತಿಸುವುದು ಹಾಗೂ ಅದ ಬಗ್ಗೆ ನಿಜಾರ್ಥವೇನು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಇಂತಹ ಒಂದು ವಿಶೇಷ ವಿಚಾರಗಳನ್ನು ತಿಳಿಸಿಕೊಡುವ ಪ್ರಯತ್ನವನ್ನು ಬೋಲ್ಡ್ ಸ್ಕೈ ಮಾಡುತ್ತಿದೆ. ನಿಮಗೂ ನಿಮ್ಮ ಪ್ರೀತಿ ಹಾಗೂ ಜೀವನದ ಭವಿಷ್ಯ ತಿಳಿದು ಕೊಳ್ಳಬೇಕೆಂದಿದ್ದರೆ ಮುಂದಿನ ಭಾಗವನ್ನು ಓದಿ....

ಹೃದಯ ರೇಖೆ

ಹೃದಯ ರೇಖೆ

ಅಂಗೈ ಅಲ್ಲಿ ಮೊದಲು ಹೃದಯ ರೇಖೆಯನ್ನು ಗುರುತಿಸಬೇಕಾಗಿರುವುದು ಪ್ರಮುಖವಾದ ವಿಷಯ. ನಿಮ್ಮ ಬಲಗೈ ಅನ್ನು ನೋಡಿ. ಹೊರಗಿನ ಭಾಗದಿಂದ ಹೃದಯ ರೇಖೆಯು ಪ್ರಾರಂಭವಾಗುತ್ತದೆ. (ಚಿತ್ರದಲ್ಲಿ ತೋರಿಸಿರುವಂತೆ ಇರುತ್ತದೆ.)

ಸಂಬಂದಗಳ ರೇಖೆ

ಸಂಬಂದಗಳ ರೇಖೆ

ಹೃದಯ ರೇಖೆಯ ಇನ್ನೊಂದು ಹೆಸರು ಪ್ರೀತಿಯ ರೇಖೆ. ನಿಮ್ಮ ಜೀವನದಲ್ಲಿ ಪ್ರೀತಿಯ ಸಂಬಂಧಗಳ ಬಗ್ಗೆ ಈ ರೇಖೆಯು ಚಿತ್ರಣವನ್ನು ನೀಡುತ್ತದೆ. ನಿಮ್ಮ ಮನೋಭಾವ, ಸಂಬಂಧ ಮತ್ತು ಭಾವನೆಗಳನ್ನು ನಿಮ್ಮ ಹೃದಯದ ರೇಖೆಯಲ್ಲಿ ಕಾಣಬಹುದು.

 ಗಾತ್ರದ ವಿಚಾರ

ಗಾತ್ರದ ವಿಚಾರ

ಅಧ್ಯಯನದ ಪ್ರಕಾರ ನಿಮ್ಮ ಹೃದಯದ ರೇಖೆಯ ಉದ್ದವು ನಿಮ್ಮ ವ್ಯಕ್ತಿತ್ವದ ಪ್ರಮುಖ ಸೂಚಕವಾಗಿ ಪರಿಗಣಿಸಲಾಗಿದೆ. ಒಂದು ಸಾಲಿನ ಉದ್ದವು ನೀವು ಎಷ್ಟು ಸಮಯದವರೆಗೆ ಬದುಕುತ್ತೀರಿ ಎನ್ನುವುದನ್ನು ತಿಳಿಸುತ್ತದೆ. ಅದು ನಿಮ್ಮ ಜೀವನಕ್ಕೆ ಸಂಬಂಧಿಸಿದ ಕೆಲವು ಘಟನೆಗಳ ಬಗ್ಗೆ ಸೂಚಿಸುತ್ತದೆ. ಚಿಕ್ಕದಾದ ಹೃದಯ ರೇಖೆ ಹೊಂದಿದ್ದರೆ ವ್ಯಕ್ತಿಯು ಸ್ವಯಂ-ಕೇಂದ್ರಿತ ಮತ್ತು ನಿರ್ದಯರಾಗಿರುತ್ತಾರೆ. ಉದ್ದವಾದ ಹೃದಯ ರೇಖೆಯನ್ನು ಹೊಂದಿದ್ದರೆ ವ್ಯಕ್ತಿಯು ನೇರವಾದ ಮತ್ತು ನಿಷ್ಪರಿಣಾಮಕಾರಿಯಾರುತ್ತಾರೆ. ಅವರು ನಂಬಿಗಸ್ತರಾಗಿ ಪರಿಗಣಿಸಲ್ಪಟ್ಟಿರುತ್ತಾರೆ.

ರೇಖೆ ಕವಲು ಮತ್ತು ಕೊಂಬೆಯಂತಿದ್ದರೆ

ರೇಖೆ ಕವಲು ಮತ್ತು ಕೊಂಬೆಯಂತಿದ್ದರೆ

ಹೃದಯ ರೇಖೆಯು ಕವಲು ಮತ್ತು ಕೊಂಬೆಗಳನ್ನು ಹೊಂದಿರುವಂತೆ ಇದ್ದರೆ ಹಲವಾರು ಅರ್ಥಗಳನ್ನು ನೀಡುತ್ತದೆ. ಮೇಲ್ಮುಖವಾಗಿ ಇರುವ ಕೊಂಬೆಗಳು ಒಳ್ಳೆಯ ಸೂಚಕವಾಗಿರುತ್ತದೆ. ಕೆಳಮುಖವಾಗಿರುವ ಕೊಂಬೆಗಳು ವಿವಾಹ ಜೀವನ ಅಥವಾ ಪ್ರೀತಿಯ ಜೀವನವು ಕೊನೆಯಾಗಿರುವುದಿಲ್ಲ. ಕವಲುಗಳು ಕೆಲಮುಖವಾಗಿ ತಿರುಗಿಕೊಂಡಿದ್ದರೆ ವ್ಯಕ್ತಿಯು ಪ್ರೀತಿಗಾಗಿ ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧನಾಗಿರುತ್ತಾನೆ ಎಂದು ಅರ್ಥವಾಗುತ್ತದೆ.

ದ್ವೀಪ

ದ್ವೀಪ

ನಿಮ್ಮ ಪ್ರೀತಿಯ ಸಾಲಿನಲ್ಲಿರುವ ದ್ವೀಪಗಳು ತಮ್ಮ ಜೀವನದಲ್ಲಿ ಪ್ರಮುಖ ಪ್ರಣಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಸೂಚಿಸುತ್ತದೆ. ಇದು ಏಕೈಕ ಅಥವಾ ಅವ್ಯವಸ್ಥೆಯ ವಿಘಟನೆಯ ಸಮಯವನ್ನು ಒಳಗೊಂಡಿರುತ್ತದೆ.

ಹೃದಯ ರೇಖೆ ಮಧ್ಯ ಬೆರಳೆಡೆಗೆ ಹೋಗಿದ್ದರೆ

ಹೃದಯ ರೇಖೆ ಮಧ್ಯ ಬೆರಳೆಡೆಗೆ ಹೋಗಿದ್ದರೆ

ಹೃದಯ ರೇಖೆ ಮಧ್ಯ ಬೆರಳೆಡೆಗೆ ಹೋಗಿದ್ದರೆ ವ್ಯಕ್ತಿಯ ಬುದ್ಧಿವಂತ, ಮಹತ್ವ ಕಾಂಕ್ಷೆಯುಳ್ಳ ಮತ್ತು ಸ್ವತಂತ್ರವಾಗಿರುತ್ತಾನೆ ಎಂದು ತೋರಿಸುತ್ತದೆ. ಈ ವ್ಯಕ್ತಿಯು ನಿಸ್ವಾರ್ಥಿಗಳಾಗಿರುತ್ತಾರೆ ಎಂದು ತೋರಿಸುತ್ತದೆ.

ಹೃದಯ ರೇಖೆ ಮಧ್ಯ ಮತ್ತು ತೋರು ಬೆರಳಿನ ನಡುವೆ ಹೋಗಿದ್ದರೆ

ಹೃದಯ ರೇಖೆ ಮಧ್ಯ ಮತ್ತು ತೋರು ಬೆರಳಿನ ನಡುವೆ ಹೋಗಿದ್ದರೆ

ಹೃದಯ ರೇಖೆ ಮಧ್ಯ ಮತ್ತು ತೋರು ಬೆರಳಿನ ನಡುವೆ ಹೋಗಿದ್ದರೆ ಇದೊಂದು ಒಳ್ಳೆಯ ಸೂಚನೆಯಾಗಿರುತ್ತದೆ. ಇದರ ಅರ್ಥ ವ್ಯಕ್ತಿಯು, ದಯೆ ಮತ್ತು ವಿಶ್ವಾಸಾರ್ಹ ಗುಣಗಳಿಂದ ಕೂಡಿರುತ್ತಾನೆ ಎಂದು ತಿಳಿಸುತ್ತದೆ. ಹೆಚ್ಚಿನ ಸಮಯ ಇವರು ಹಗಲುಗನಸು ಕಾಣುವ ಪ್ರವೃತ್ತಿಯನ್ನು ಹೊಂದಿರುತ್ತಾರೆ ಎನ್ನಲಾಗುವುದು.

ಹೃದಯ ರೇಖೆ ತೋರು ಬೆರಳೆಡೆಗೆ ಹೋಗಿದ್ದರೆ

ಹೃದಯ ರೇಖೆ ತೋರು ಬೆರಳೆಡೆಗೆ ಹೋಗಿದ್ದರೆ

ಹೃದಯ ರೇಖೆ ತೋರು ಬೆರಳೆಡೆಗೆ ಹೋಗಿದ್ದರೆ ಅವರು ಯಾವುದನ್ನಾದರೂ ಸಂತೋಷಪಡುತ್ತಾರೆ. ಎಲ್ಲದರಲ್ಲೂ ಸಂತೋಷ ಪಡುತ್ತಾರೆ. ಒಂಟಿಯಾಗಿರಲಿ, ಸಂಸಾರಿಯಾಗಿರಲಿ ಅಥವಾ ಪ್ರೇಮಿಯಾಗಿರಲಿ ಜೀವನವನ್ನು ಹೇಗೆ ಸಂಪೂರ್ಣವಾಗಿ ಆನಂದಿಸಬಹುದು ಎನ್ನುವುದನ್ನು ತಿಳಿದಿರುತ್ತಾರೆ.

ಹೃದಯ ರೇಖೆಯು ಹೆಬ್ಬೆರಳೆಡೆಗೆ ಹೋಗಿದ್ದರೆ

ಹೃದಯ ರೇಖೆಯು ಹೆಬ್ಬೆರಳೆಡೆಗೆ ಹೋಗಿದ್ದರೆ

ಹೃದಯ ರೇಖೆಯು ಹೆಬ್ಬೆರಳೆಡೆಗೆ ಹೋಗಿದ್ದರೆ ವ್ಯಕ್ತಿಯು ಶಾಂತ ಮತ್ತು ಕಾಳಜಿಯುಳ್ಳ ವ್ಯಕ್ತಿತ್ವವನ್ನು ಹೊಂದಿರುತ್ತಾನೆ. ಇವರು ಎಲ್ಲಾ ವಿಚಾರದಲ್ಲೂ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಎನ್ನಲಾಗುವುದು.

English summary

Everything That You Need To Know About Your Heart Line

Do you know that everything that you need to know about your love life, or what your future holds, is in the palm of your hands? Well, according to Palmistry, most of the things that are related to you can be predicted, by just having a look at it. Here, in this article, we arediscussing about the Heart line and things that are related to the heart line. These facts are based on the deep research done by the palmists who know the depth of the subject. So, learn about everything that is related to the heart line.