For Quick Alerts
ALLOW NOTIFICATIONS  
For Daily Alerts

ವಸತಿ-ಗೃಹದಲ್ಲಿ ಅರ್ಧ ಉಳಿಸಿ ಬಿಟ್ಟ ಸೋಪನ್ನು ಏನು ಮಾಡುತ್ತಾರೆ ಗೊತ್ತೇ?

By Arshad
|
ಹೋಟೆಲ್ ಗಳಲ್ಲಿ ಅರ್ಧ ಉಪಯೋಗಿಸಿ ಬಿಟ್ಟ ಸೋಪ್ ಗಳು ಏನಾಗುತ್ತೆ ಗೊತ್ತಾ? | Oneindia Kannada

ಪ್ರವಾಸ, ಶುಭಕಾರ್ಯ ಮೊದಲಾದವುಗಳಿಗಾಗಿ ಪರವೂರಿಗೆ ಹೋದಾಗ ಉಳಿದುಕೊಳ್ಳಲು ವಸತಿಗೃಹದ ಸೇವೆ ಪಡೆದುಕೊಂಡಾಗ ಕೋಣೆಯಲ್ಲಿ ಗ್ರಾಹಕರಿಗೆಂದೇ ಚಿಕ್ಕ ಗಾತ್ರದ ಸೋಪು, ಟೂತ್ ಪೇಸ್ಟ್, ಶಾಂಪೂ ಇತ್ಯಾದಿಗಳನ್ನು ಒದಗಿಸಿರುತ್ತಾರೆ. ಸಾಮಾನ್ಯವಾಗಿ ನಾವು, ಭಾರತೀಯರು ಕೋಣೆಯನ್ನು ಬಿಡುವ ಸಮಯದಲ್ಲಿ ನಮ್ಮ ವಸ್ತುಗಳನ್ನು ಪ್ಯಾಕ್ ಮಾಡುವ ಜೊತೆಗೇ ಒಂದು ವೇಳೆ ಈ ಚಿಕ್ಕ ಸೋಪನ್ನು ಉಪಯೋಗಿಸದೇ ಇದ್ದರೆ ಅಥವಾ ಕೊಂಚವೇ ಖರ್ಚಾಗಿದ್ದರೆ ಈ ವಸ್ತುಗಳನ್ನೂ ಜೊತೆಗೇ ಕೊಂಡು ಹೋಗುತ್ತೇವೆ.

ಆದರೆ ಕೆಲವರು ಈ ಒಮ್ಮೆ ಬಳಸಿದ ಸೋಪು ಶಾಂಪೂಗಳನ್ನು ಅಲ್ಲಿಯೇ ಬಿಟ್ಟು ಬರುತ್ತಾರೆ. ನಾವು ವಸತಿಗೃಹವನ್ನು ಬಿಟ್ಟುಬಂದ ಬಳಿಕ ಈ ಸೋಪು ಶಾಂಪೂಗಳು ಏನಾಗುತ್ತವೆ? ಅತಿಹೆಚ್ಚು ಜನರು ನೀಡುವ ಸಾಮಾನ್ಯ ಉತ್ತರವೆಂದರೆ 'ವಸತಿಗೃಹದವರು ಕೋಣೆಯನ್ನು ಸ್ವಚ್ಛಗೊಳಿಸುವಾವ ಇವನ್ನೂ ನಿವಾರಿಸಿ ಎಸೆದುಬಿಡುತ್ತಾರೆ'.

ಆದರೆ ವಾಸ್ತವದಲ್ಲಿ ಹಾಗಿಲ್ಲ. ಅಭಿವೃದ್ದಿ ಹೊಂದಿರುವ ದೇಶಗಳಲ್ಲಿ ಈ ಸೋಪುಗಳನ್ನೂ ಮರುಬಳಕೆಗಾಗಿ ಉಪಯೋಗಿಸಲಾಗುತ್ತದೆ. ಅಮೇರಿಕಾದಲ್ಲಿ ಪ್ರಾರಂಭಗೊಂಡ ಒಂದು ಕ್ರಮವೊಂದು ಅಭಿನಂದನೀಯವಾಗಿದ್ದು ಉಳಿದವರೂ ಇದನ್ನು ಅನುಸರಿಸಬೇಕಾಗಿದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ....

ಅಮೇರಿಕಾದಲ್ಲಿ 46 ಲಕ್ಷ ಹೋಟೆಲು ಕೋಣೆಗಳಿವೆ

ಅಮೇರಿಕಾದಲ್ಲಿ 46 ಲಕ್ಷ ಹೋಟೆಲು ಕೋಣೆಗಳಿವೆ

ಅಮೇರಿಕಾದ ಅಷ್ಟೂ ಹೋಟೆಲುಗಳ ಒಟ್ಟು ಕೋಣೆಗಳನ್ನು ಲೆಕ್ಕ ಹಾಕಿದರೆ 46 ಲಕ್ಷಕ್ಕೂ ಹೆಚ್ಚಿವೆ. ಈ ಕೋಣೆಗಳಲ್ಲಿ ಗ್ರಾಹಕರ ಬಳಕೆಗೆ ಸೋಪು, ಶಾಂಪೂ, ಟೂತ್ ಪೇಸ್ಟ್ ಮೊದಲಾದ ದಿನಬಳಕೆಯ ಚಿಕ್ಕ ಗಾತ್ರದ ವಸ್ತುಗಳನ್ನು ನೀಡಲಾಗುತ್ತದೆ. ಆದರೆ ಬಹುತೇಕ ಹೆಚ್ಚಿನ ಗ್ರಾಹಕರು ಆ ದಿನದ ಮಟ್ಟಿಗೆ ಮಾತ್ರವೇ ಬಳಸಿ ಉಳಿದ ಭಾಗವನ್ನು ಹಾಗೇ ಬಿಡುತ್ತಾರೆ.

ಇದಕ್ಕಾಗಿ ಒಂದು ಉಪಕ್ರಮ ಪ್ರಾರಂಭವಾಯಿತು

ಇದಕ್ಕಾಗಿ ಒಂದು ಉಪಕ್ರಮ ಪ್ರಾರಂಭವಾಯಿತು

ಒಮ್ಮೆ ಬಳಸಿದ ಮಾತ್ರಕ್ಕೆ ಆ ಸೋಪನ್ನು ಸುಮ್ಮನೇ ಎಸೆಯುವ ಬದಲು ಇವನ್ನೆಲ್ಲಾ ಸಂಗ್ರಹಿಸಿ ಮರುಬಳಕೆ ಮಾಡಿ ಬಡದೇಶಗಳಿಗೆ ಒದಗಿಸುವ, ಈ ಮೂಲಕ ವ್ಯರ್ಥವಾಗುವುದನ್ನು ತಪ್ಪಿಸುವ ಒಂದು ಅಭಿಯಾನವನ್ನು "Clean the World"ಎಂಬ ಸಂಸ್ಥೆಯೊಂದು ಪ್ರಾರಂಭಿಸಿತು. ಈ ಅಭಿಯಾನಕ್ಕೆ "Global Soap Project (GSP)" ಎಂಬ ಹೆಸರನ್ನೂ ನೀಡಿ ಈ ಸೋಪುಗಳಿಂದ ಹೊಸ ಸೋಪುಗಳನ್ನು ತಯಾರಿಸಿ ಬಡದೇಶಗಳಿಗೆ ರವಾನಿಸಲಾಗುತ್ತಿದೆ.

ಈ ದೇಶಗಳಿಗೆ ಸ್ವಚ್ಛತೆಯ ಹೆಚ್ಚು ಅಗತ್ಯವಿತ್ತು

ಈ ದೇಶಗಳಿಗೆ ಸ್ವಚ್ಛತೆಯ ಹೆಚ್ಚು ಅಗತ್ಯವಿತ್ತು

ಇಂದಿಗೂ ಈ ಜಗತ್ತಿನ ಹಲವೆಡೆ ಸ್ವಚ್ಛತೆಯ ವಸ್ತುಗಳ ಕೊರತೆ ಇರುವ ಸ್ಥಳಗಳಿದ್ದು ಸ್ವಚ್ಛ ನೀರು ಮತ್ತು ಸೋಪು ಮೊದಲಾದವು ಜನಸಾಮಾನ್ಯರಿಗೆ ಸುಲಭವಾಗಿ ದಕ್ಕುತ್ತಿಲ್ಲ. ಈ ಕಾರಣದಿಂದ ಸಾಂಕ್ರಾಮಿಕ ರೋಗಗಳಾದ ನ್ಯುಮೋನಿಯಾ ಮತ್ತು ಆಮಶಂಕೆ ವ್ಯಾಪಕವಾಗಿವೆ. ಈ ಸ್ಥಳಗಳಲ್ಲಿ ಸೋಪನ್ನು ಒದಗಿಸುವ ಮೂಲಕ ಜನರು ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗಿಸುವುದು ಹಾಗೂ ರೋಗಗಳನ್ನು ಕಡಿಮೆ ಮಾಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ಮರುಬಳಕೆಯ ವೆಚ್ಚ

ಮರುಬಳಕೆಯ ವೆಚ್ಚ

ಒಂದು ಕೋಣೆಯಿಂದ ಒಂದು ತಿಂಗಳು ಸಂಗ್ರಹಿಸಲಾದ ಅರ್ಧ ಬಳಸಿದ ಸೋಪನ್ನು ಮರುಬಳಕೆಗೆ ಒದಗಿಸಲು ತಗಲುವ ವೆಚ್ಚ ಕೇವಲ ಎಪ್ಪತ್ತೈದು ಸೆಂಟುಗಳು (ಸುಮಾರು ನಲವತ್ತೆಂಟು ರೂಪಾಯಿ). ಅರ್ಧ ಉಳಿದ ಸೋಪು, ಶಾಂಪೂ, ಕಂಡೀಶನರ್ ಮೊದಲಾದವುಗಳನ್ನುಸಂಗ್ರಹಿಸಿ, ಸಂಸ್ಕರಿಸಿ, ಸೋಂಕುರಹಿತವಾಗಿಸಿ, ಮರುಬಳಕೆಗೆ ಅರ್ಹ ಎಂದು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಸುರಕ್ಷಿತ ಎಂದು ಖಚಿತಪಡಿಸಿಕೊಂಡ ಬಳಿಕವೇ ಅಗತ್ಯವಿರುವ ದೇಶಗಳಿಗೆ ರವಾನಿಸಲಾಗುತ್ತದೆ.

ಈ ಉಪಕ್ರಮದಿಂದ ಪಡೆದ ಬದಲಾವಣೆ

ಈ ಉಪಕ್ರಮದಿಂದ ಪಡೆದ ಬದಲಾವಣೆ

ಕೆಲವು ಹೋಟೆಲುಗಳು ಈ ಉಪಕ್ರಮವನ್ನು ಗಮನಿಸಿ ತಮ್ಮಲ್ಲಿ ಉಳಿದ ಸೋಪು ಶಾಂಪೂಗಳನ್ನು ಸ್ಥಳೀಯ ಅನಾಥ ಅಥವಾ ನಿರ್ಗತಿಕ ಮಹಿಳೆಯರ ಕಲ್ಯಾಣ ಸಂಘಗಳಿಗೆ, ಕೆಲವು ಹೋಟೆಲುಗಳು ಸ್ಥಳೀಯ ವಿಮೋಚನಾ ಸೈನ್ಯ, ಅನಾಥಾಲಯ ಅಥವಾ ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಕ್ಲಿನಿಕ್ಕುಗಳಿಗೆ ಉಚಿತವಾಗಿ ವಿತರಿಸುತ್ತಿವೆ.

ಕೆಲವು ಹೋಟೆಲುಗಳು ಹೀಗೆ ಮಾಡುತ್ತಿವೆ

ಕೆಲವು ಹೋಟೆಲುಗಳು ಹೀಗೆ ಮಾಡುತ್ತಿವೆ

ಕೆಲವು ಹೋಟೆಲುಗಳಲ್ಲಿ ಒಮ್ಮೆ ಬಳಸಲು ಅಗತ್ಯವಿರುವಷ್ಟು ಪ್ರಮಾಣದ ಶಾಂಪೂ, ದ್ರವೀಕರಿಸಿದ ಸೋಪು ಇತ್ಯಾದಿಗಳನ್ನು ಮರುತುಂಬಿಸಬಹುದಾದ ಡಿಸ್ಪೆನ್ಸರ್‌ಗಳಲ್ಲಿ ತುಂಬಿಸಿ ಇಡಲಾಗುತ್ತದೆ. ಗ್ರಾಹಕರು ಬಳಸಿದ ಬಳಿಕ ಈ ಡಿಸ್ಪೆನ್ನರುಗಳನ್ನು ತೊಳೆದು ಮುಂದಿನ ಗ್ರಾಹಕರಿಗಾಗಿ ಮತ್ತೊಮ್ಮೆ ಅಷ್ಟೇ ಪ್ರಮಾಣದಲ್ಲಿ ತುಂಬಿಸಿ ಇಡಲಾಗುತ್ತದೆ. ಈ ಮೂಲಕ ಸೋಪು ಶಾಂಪೂ ಮೊದಲಾದವು ಪೋಲಾಗುವುದನ್ನು ತಪ್ಪಿಸಬಹುದು.ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.

English summary

Ever Wondered What Happens To The Half-used Hotel Soaps?

But if you are the one who used them and leave these bottles half used, then have you ever imagined what happens to them after we leave? You would be amazed to know what exactly happens when you leave these half-used soaps in the hotel rooms. This is an initiative that has started in the US and we guess, the trend needs to be followed all across the world, as it is quite useful. So find out...
X
Desktop Bottom Promotion