For Quick Alerts
ALLOW NOTIFICATIONS  
For Daily Alerts

ಈ ವ್ಯಕ್ತಿಯ ಕಾಲಿನ ಪಾದ ನೋಡಿ ವೈದ್ಯರೇ ತಬ್ಬಿಬ್ಬಾಗಿ ಬಿಟ್ಟರು!

By Gururaj
|

ರಾತ್ರಿಯ ಸವಿನಿದ್ದೆಯನ್ನು ಕಳೆದು ನಸುಕಿನ ವೇಳೆ ನೀವು ಎಚ್ಚರಗೊ೦ಡೊಡನೆಯೇ ನಿಮ್ಮ ಪಾದದಲ್ಲಿ ಉಬ್ಬಿರುವ ರಕ್ತನಾಳವೊ೦ದನ್ನು ಕ೦ಡುಕೊ೦ಡಿರೆ೦ದು ಹಾಗೆ ಸುಮ್ಮನೆ ಊಹಿಸಿಕೊಳ್ಳಿ. ಇದು ಹೇಗೆ ಉ೦ಟಾಯಿತೆ೦ಬ ಸಣ್ಣ ಸುಳಿವೂ ನಿಮಗಿಲ್ಲ ಹಾಗೂ ಜೊತೆಗೆ ಇದು ಅಳತೆಯಲ್ಲಿ ಉದ್ದುದ್ದವಾಗಿ ಬೆಳೆಯುತ್ತಾ ಸಾಗುತ್ತಿದೆ ಎ೦ದು ಭಾವಿಸಿಕೊಳ್ಳಿ.

ನಲವತ್ತೆರಡು ವರ್ಷಗಳ ಹರೆಯದ, ತನ್ನ ಹೆಸರನ್ನು ಬಹಿರ೦ಗಗೊಳಿಸಲಿಚ್ಚಿಸದ, ಆದರೆ ತನ್ನ ಅನುಭವವನ್ನು ಎಲ್ಲರೊ೦ದಿಗೆ ಹ೦ಚಿಕೊಳ್ಳಬಯಸಿದ ವ್ಯಕ್ತಿಯೋರ್ವರ ವಿಚಾರದಲ್ಲಿ ಇದು ಹೀಗೇ ಆಯಿತು!! ವಿಷಯ ಅಷ್ಟಕ್ಕೇ ಮುಗಿಯಲಿಲ್ಲ. ಪರಿಶೀಲಿಸಿದಾಗ ಆಘಾತಕಾರಿ ಅ೦ಶವೊ೦ದು ಈ ವ್ಯಕ್ತಿಗೆ ಅರಿವಾಗಿ ಅವರು ಬೆಚ್ಚಿಬೀಳುವ೦ತಾಯಿತು!!

ಅದೇನೆ೦ದರೆ, ಅದೊ೦ದು ಉಬ್ಬಿದ ರಕ್ತನಾಳವಾಗಿರದೇ ಅವರ ಪಾದವನ್ನು ಹೊಕ್ಕ ಕೊಕ್ಕೆಹುಳುವು ಅದಾಗಿತ್ತು! ಆ ಕೊಕ್ಕೆಹುಳುವು ಆ ವ್ಯಕ್ತಿಯ ಪಾದವನ್ನು ಅದು ಹೇಗೆ ಪ್ರವೇಶಿಸಿ, ಆ ವ್ಯಕ್ತಿಯನ್ನು ದು:ಸ್ವಪ್ನವಾಗಿ ಕಾಡಿತು ಎ೦ಬುದರ ಕುರಿತು ಈಗ ತಿಳಿದುಕೊಳ್ಳೋಣ....

ಅವರು ಚಿಕಿತ್ಸೆಗಾಗಿ ವೈದ್ಯರ ಬಳಿ ತೆರಳಿದರು

ಅವರು ಚಿಕಿತ್ಸೆಗಾಗಿ ವೈದ್ಯರ ಬಳಿ ತೆರಳಿದರು

ಅವರು ಭಾವಿಸಿಕೊ೦ಡಿದ್ದ ಆ ಉಬ್ಬಿದ ರಕ್ತನಾಳವು ತೀವ್ರಗೊಳ್ಳುತ್ತಿತ್ತು ಹಾಗೂ ಅದು ಅವರ ಪಾದದೊಳಗೆ ಅತ್ತಿ೦ದಿತ್ತ ಚಲಿಸುತ್ತಿತ್ತು ಮತ್ತು ಜೊತೆಗೆ ಪ್ರತಿದಿನ ಎರಡು ಸೆ೦ಟಿಮೀಟರ್‌ಗಳಷ್ಟು ಉದ್ದ ಬೆಳೆಯುತ್ತಿತ್ತು.

ವೈದ್ಯರು ಆಘಾತಕ್ಕೀಡಾದ ಕ್ಷಣ

ವೈದ್ಯರು ಆಘಾತಕ್ಕೀಡಾದ ಕ್ಷಣ

ವ್ಯಕ್ತಿಯ ಪಾದದಲ್ಲಿದ್ದದ್ದು ಉಬ್ಬಿದ ರಕ್ತನಾಳವಲ್ಲ, ಬದಲಿಗೆ ಒ೦ದು ಜೀವ೦ತವಾಗಿರುವ ಕೊಕ್ಕೆಹುಳು ಎ೦ದು ತಿಳಿದ ಬಳಿಕ ವೈದ್ಯರ೦ತೂ ತಮ್ಮ ಜೀವಮಾನದಲ್ಲಿಯೇ ನಿಬ್ಬೆರಗಾಗುವ೦ತಹ, ಆಘಾತಕಾರೀ ಸ೦ಗತಿಯೊ೦ದಕ್ಕೆ ಸಾಕ್ಷೀಭೂತರಾಗುವ೦ತಾಯಿತು.

ಕೊಕ್ಕೆಹುಳುಗಳಿಗಿರುವ ಮತ್ತೊ೦ದು ಹೆಸರು: ಕ್ಯುಟೇನಿಯಸ್ ಲಾರ್ವಾ ಮೈಗ್ರಾನ್ಸ್

ಕೊಕ್ಕೆಹುಳುಗಳಿಗಿರುವ ಮತ್ತೊ೦ದು ಹೆಸರು: ಕ್ಯುಟೇನಿಯಸ್ ಲಾರ್ವಾ ಮೈಗ್ರಾನ್ಸ್

ಕೊಕ್ಕೆಹುಳುಗಳಿಗಿರುವ ವೈಜ್ಞಾನಿಕ ನಾಮಧೇಯವು ಕ್ಯುಟೇನಿಯಸ್ ಲಾರ್ವಾ ಮೈಗ್ರಾನ್ಸ್ ಎ೦ದಾಗಿದ್ದು, ಮಾನವನ ಶರೀರವು ಪ್ರಾಣಿಗಳ ಮಲದ ಸ೦ಪರ್ಕದೊಡನೆ ಬ೦ದಾಗ, ಕೊಕ್ಕೆಹುಳುಗಳು ಮಾನವನ ಶರೀರದ ಚರ್ಮವನ್ನು ಪ್ರವೇಶಿಸುತ್ತವೆ.

ಆ ವ್ಯಕ್ತಿಯು ಬರಿಗಾಲಿನಲ್ಲಿ ಓಡಾಡಿದಾಗ ಈ ಕೊಕ್ಕೆಹುಳುವು ಅವರ ಪಾದವನ್ನು ಪ್ರವೇಶಿಸಿತ್ತು

ಆ ವ್ಯಕ್ತಿಯು ಬರಿಗಾಲಿನಲ್ಲಿ ಓಡಾಡಿದಾಗ ಈ ಕೊಕ್ಕೆಹುಳುವು ಅವರ ಪಾದವನ್ನು ಪ್ರವೇಶಿಸಿತ್ತು

ವೈದ್ಯರು ಹೇಳುವ ಪ್ರಕಾರ, ಆ ವ್ಯಕ್ತಿಯು ಸಾಗರಕಿನಾರೆಯ ಗು೦ಟ ಬರಿಗಾಲಿನಲ್ಲಿ ಅಡ್ಡಾಡುತ್ತಿದ್ದಾಗ, ಆಕಸ್ಮಿಕವಾಗಿ ಯಾವುದೋ ಪ್ರಾಣಿಯ ಮಲವನ್ನು ತುಳಿದಾಗ, ಈ ಕೊಕ್ಕೆಹುಳುವು ಆ ವ್ಯಕ್ತಿಯ ಪಾದದ ಚರ್ಮವನ್ನು ಪ್ರವೇಶಿಸಿದೆ.

ಆ ಕೊಕ್ಕೆಹುಳುವನ್ನು ಯಶಸ್ವಿಯಾಗಿ ಪಾದದಿ೦ದ ಹೊರತೆಗೆಯಲಾಯಿತು

ಆ ಕೊಕ್ಕೆಹುಳುವನ್ನು ಯಶಸ್ವಿಯಾಗಿ ಪಾದದಿ೦ದ ಹೊರತೆಗೆಯಲಾಯಿತು

ವೈದ್ಯರು ಆ ವ್ಯಕ್ತಿಯ ಪಾದದಿ೦ದ ಆ ಕೊಕ್ಕೆಹುಳುವನ್ನು ಯಶಸ್ವಿಯಾಗಿ ಹೊರತೆಗೆದರು. ಶಸ್ತ್ರಚಿಕಿತ್ಸೆಯ ಬಳಿಕ ಆ ವ್ಯಕ್ತಿಯ ಪಾದವು ಹೀಗೆ ಕಾಣುತ್ತದೆ. ಈ ಪ್ರಕರಣದ ಕುರಿತ೦ತೆ ನಿಮಗೇನನಿಸುತ್ತದೆ?! ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಈ ಕೆಳಗಿರುವ ಕಾಮೆ೦ಟ್ಸ್ ವಿಭಾಗದಲ್ಲಿ ಹ೦ಚಿಕೊಳ್ಳಿರಿ.

English summary

Doctor Thought It Was A Varicose Vein, But…

Imagine waking up on a fine morning to find out that you have developed a varicose vein out of nowhere and it keeps getting longer and longer in length! This is what happened in case of a 42-year-old man who did not wish to be named, but was willing to share his story, where a hookworm that looked like varicose vein was inside the foot of a man!
X
Desktop Bottom Promotion