Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಂಗೈಯಲ್ಲಿ 'ಜೀವರಕ್ಷಕ ರೇಖೆ' ಇರುವವರು ತುಂಬಾನೇ ಅದೃಷ್ಟವಂತರು!
ಜ್ಯೋತಿಷ್ಯಾಸ್ತ್ರ ಭಾರತದಲ್ಲಿ ಪ್ರಾರಂಭವಾದರೂ ಇದರ ಜನಪ್ರಿಯತೆಯ ಕಾರಣದಿಂದ ಈಜಿಪ್ಟ್, ಚೀನಾ ಹಾಗೂ ಯೋರೋಪ್ ಖಂಡದ ದೇಶಗಳಲ್ಲಿಯೂ ನಿಧಾನಕ್ಕೆ ವ್ಯಾಪಿಸಿತು. ಜ್ಯೋತಿಷ್ಯಾಸ್ತ್ರದಲ್ಲಿ ವ್ಯಕ್ತಿಯ ಹಸ್ತವನ್ನು ಸೂಕ್ಷ್ಮವಾಗಿ ಗಮನಿಸಿ ರೇಖೆಗಳನ್ನು ನೋಡುವ ಮೂಲಕ ಆ ವ್ಯಕ್ತಿಯ ನಡತೆ ಹಾಗೂ ಮುಂದಾಗಲಿರುವ ಘಟನೆಗಳ ಬಗ್ಗೆ ಸ್ಥೂಲವಾಗಿ ತಿಳಿಸಲಾಗುತ್ತದೆ.
ಈ ಜಗತ್ತಿನ ಎರಡು ವ್ಯಕ್ತಿಗಳ ಹಸ್ತಗಳ ರೇಖೆಗಳು ಒಂದೇ ಬಗೆಯದ್ದಾಗಿರುವುದಿಲ್ಲ. ಈ ರೇಖೆಗಳನ್ನು ಅಭ್ಯಸಿಸುವ ಮೂಲಕ ಬಹಳಷ್ಟನ್ನು ಕಲಿಯಬಹುದು. ಹಸ್ತದಲ್ಲಿ ಕೆಲವು ರೇಖೆಗಳು ಪ್ರಮುಖವಾಗಿ ಹಾಗೂ ಹೆಚ್ಚು ದಪ್ಪ ಹಾಗೂ ಸ್ಪಷ್ಟವಾಗಿದ್ದು ಉಳಿದವು ಅಸ್ಪಷ್ಟವಾಗಿರುತ್ತವೆ. ಈ ಸ್ಪಷ್ಟ ಗೆರೆಗಳು ಒಂದೊಂದು ವಿಷಯಕ್ಕೆ ಸಂಬಂಧಪಟ್ಟದ್ದಾಗಿವೆ. ಇದರಲ್ಲೊಂದು ರೇಖೆ ಜೀವರಕ್ಷಕ ಗೆರೆಯಾಗಿದೆ. ಈ ಗೆರೆ ಎಲ್ಲಾ ವ್ಯಕ್ತಿಗಳಲ್ಲಿ ಸ್ಪಷ್ಟವಾಗಿರುವುದಿಲ್ಲ. ಆದರೆ ಕೆಲವರಲ್ಲಿ ಇದು ಸ್ಪಷ್ಟವಾಗಿದ್ದು ಇದೇ ಕಾರಣಕ್ಕೆ ಇವರು ಪ್ರಮುಖರಾಗಿದ್ದಾರೆ. ಈ ರೇಖೆ ಇರುವ ವ್ಯಕ್ತಿಗಳು ತುಂಬಾ ಅದೃಷ್ಟವಂತರು ಎಂದು ಹೇಳಲಾಗುತ್ತದೆ...

ಜೀವರಕ್ಷಕ ರೇಖೆ
ಈ ರೇಖೆ ಅತ್ಯಂತ ಪ್ರಬಲ ರೇಖೆಯೆಂದು ಭಾವಿಸಲಾಗಿದ್ದು ಒಂದು ವೇಳೆ ನಿಮ್ಮ ಹಸ್ತದಲ್ಲಿದ್ದರೆ ನಿಮ್ಮನ್ನು ಯಾವುದೋ ಅದೃಶ್ಯ ಶಕ್ತಿ ನಿಮ್ಮನ್ನು ಗಮನಿಸುತ್ತಿದೆ ಎಂದು ಹೇಳಲಾಗುತ್ತದೆ. ನಿಮ್ಮ ಪ್ರಯತ್ನಗಳು ಸಫಲಗೊಳ್ಳಲು ಈ ಶಕ್ತಿ ಯತ್ನಿಸುತ್ತದೆ ಹಾಗೂ ದುಷ್ಟಶಕ್ತಿಗಳು ನಿಮ್ಮ ಬಳಿ ಸುಳಿಯದಂತೆ ನಿಮ್ಮನ್ನು ರಕ್ಷಿಸುತ್ತದೆ.

ಇದೊಂದು ಸೂಚನೆಯಾಗಿದೆ
ಈ ರೇಖೆಯ ಇನ್ನೊಂದು ಸೂಚನೆ ಎಂದರೆ ಒಂದು ವೇಳೆ ನೀವು ಅತಿಯಾಗಿ ಪ್ರೀತಿಸುವ ವ್ಯಕ್ತಿ ನಿಮ್ಮಿಂದ ದೂರವಾಗಿದ್ದರೆ ಈಗ ನಿಮ್ಮ ಜೀವರಕ್ಷಕ ಶಕ್ತಿಯೊಂದು ನಿಮ್ಮೊಂದಿಗೆ ಸದಾ ಚಲಿಸುತ್ತಿದ್ದು ನಿಮ್ಮನ್ನು ಎಲ್ಲಾ ಕಷ್ಟದ ಸಮಯದಲ್ಲಿ ರಕ್ಷಿಸುತ್ತದೆ.

ಈ ರೇಖೆ ಎಲ್ಲಿದೆ?
ಈ ರೇಖೆ ತೆಳ್ಳಗಿದ್ದು ಜೀವನರೇಖೆ ಎಂಬ ಸ್ಪಷ್ಟವಾದ ರೇಖೆಯ ಪಕ್ಕದಲ್ಲಿಯೇ ಕಮಾನಿನಾಕೃತಿಯಲ್ಲಿರುತ್ತದೆ. ಪ್ರಾರಂಭದಲ್ಲಿ ಇದು ಜೀವನರೇಖೆಗೆ ಸಮಾನಾಂತರವಾಗಿದ್ದು ಮುಂದುವರೆದು ಜೀವನರೇಖೆಯ ತಲೆಯ ಭಾಗದಲ್ಲಿ ರೇಖೆಯನ್ನು ಹಾದು ಹೋಗುತ್ತದೆ. ಈ ಭಾಗ ನೀವು ನಿಮ್ಮ ಆತ್ಮೀಯರೊಬ್ಬರನ್ನು ಕಳೆದುಕೊಂಡಿರುವ ಸೂಚನೆಯಾಗಿದೆ.

ಈ ರೇಖೆ ಬಹುತೇಕ ಎಡಹಸ್ತದಲ್ಲಿರುತ್ತದೆ
ಈ ರೇಖೆ ಎಡಹಸ್ತದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಬಲಹಸ್ತದಲ್ಲಿ ಕಾಣಿಸಿಕೊಳ್ಳುವುದು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಎಡಹಸ್ತದ ಜೀವನ ರೇಖೆಗೆ ಸಮಾನಾಂತರವಾಗಿ ಸಾಗುತ್ತದೆ. ಇದು ನಿಮ್ಮ ಜೀವರಕ್ಷಕ ನಿಮ್ಮೊಂದಿಗೆ ಇರುವ ಮೂಲಕ ನಿಮ್ಮನ್ನು ಹರಸುತ್ತಾ ಹಾಗೂ ನಿಮ್ಮನ್ನು ಎಲ್ಲಾ ಕಷ್ಟಕರ ಪರಿಸ್ಥಿತಿಗಳಿಂದ ರಕ್ಷಿಸುತ್ತದೆ.

ಈ ರೇಖೆಯ ಅರ್ಥ
ಈ ರೇಖೆ ನಿಮ್ಮ ಹಸ್ತದಲ್ಲಿದೆ ಎಂದರೆ ನಿಮ್ಮ ಕಷ್ಟದ ಸಮಯದಲ್ಲಿ ನೀವು ಸಹಾಯಕ್ಕಾಗಿ ಇಡುವ ಮೊರೆಯನ್ನು ಕೇಳಿ ತಕ್ಷಣ ನಿಮ್ಮ ನೆರವಿಗೆ ಆಗಮಿಸಲು ಜೀವರಕ್ಷಕ ಶಕ್ತಿಯೊಂದಿದೆ ಎಂದು ತಿಳಿದುಕೊಳ್ಳಬೇಕು. ಅಷ್ಟೇ ಅಲ್ಲ, ಈ ಶಕ್ತಿ ನಿಮ್ಮನ್ನು ನಿಮ್ಮ ಸುತ್ತಮುತ್ತಲಿರುವ ವ್ಯಕ್ತಿಗಳ ದುಷ್ಟ ಕಣ್ಣುಗಳಿಂದ ಹಾಗೂ ನಿಮ್ಮ ಕೇಡು ಬಯಸುವ ವ್ಯಕ್ತಿಗಳಿಂದಲೂ ರಕ್ಷಣೆ ನೀಡುತ್ತದೆ.

ಹೃದಯದ ರೇಖೆ
ಈ ರೇಖೆ ಹೃದಯ ಅಥವಾ ಆತ್ಮೀಯ ಸಂಗತಿಗಳನ್ನು ಪ್ರತಿನಿಧಿಸುತ್ತದೆ. ಈ ರೇಖೆ ಆಳವಾಗಿದ್ದಷ್ಟೂ ಹೃದಯದಿಂದ ಯೋಚಿಸುವ ಗುಣ ನಿಮ್ಮಲ್ಲಿ ಹೆಚ್ಚಾಗಿದ್ದು ನೀವು ಆತ್ಮೀಯತೆಗೆ ಹೆಚ್ಚಿನ ಮಹತ್ವ ನೀಡುವ ವ್ಯಕ್ತಿ ಎಂದು ಸೂಚಿಸುತ್ತದೆ. ಒಂದು ವೇಳೆ ಈ ರೇಖೆ ತುದಿಯಲ್ಲಿ ಕವಲೊಡೆದಿದ್ದರೆ ಈ ವ್ಯಕ್ತಿ ಒಂದೇ ನಿಟ್ಟಿನಲ್ಲಿ ಯೋಚಿಸದೇ ಎರಡು ಬಗೆಯಲ್ಲಿ ಯೋಚಿಸುತ್ತಿದ್ದಾರೆಂದು ಅರ್ಥ.

ಶಿರದ ರೇಖೆ
ಇವು ಒಂದಕ್ಕಿಂತ ಹೆಚ್ಚಿದ್ದು ಹೆಚ್ಚಿನ ವ್ಯಕ್ತಿಗಳು ಎರಡು ರೇಖೆಗಳನ್ನು ಹೊಂದಿರುತ್ತಾರೆ. ಇವು ಶಿರದ ಅಥವಾ ಮೆದುಳಿನಿಂದ ಯೋಚಿಸುವ ವಿಷಯಗಳಿಗೆ ಸಂಬಂಧಪಟ್ಟಿವೆ. ಈ ರೇಖೆ ಉದ್ದವಾಗಿದ್ದಷ್ಟೂ ವ್ಯಕ್ತಿ ಹೆಚ್ಚಿನ ವಿಷಯಗಳಲ್ಲಿ ಆಸಕ್ತಿ ಹೊಂದಿರುವುದನ್ನು ಸೂಚಿಸುತ್ತದೆ.ಇವು ಒಂದಕ್ಕಿಂತ ಹೆಚ್ಚಿದ್ದು ಹೆಚ್ಚಿನ ವ್ಯಕ್ತಿಗಳು ಎರಡು ರೇಖೆಗಳನ್ನು ಹೊಂದಿರುತ್ತಾರೆ. ಇವು ಶಿರದ ಅಥವಾ ಮೆದುಳಿನಿಂದ ಯೋಚಿಸುವ ವಿಷಯಗಳಿಗೆ ಸಂಬಂಧಪಟ್ಟಿವೆ. ಈ ರೇಖೆ ಉದ್ದವಾಗಿದ್ದಷ್ಟೂ ವ್ಯಕ್ತಿ ಹೆಚ್ಚಿನ ವಿಷಯಗಳಲ್ಲಿ ಆಸಕ್ತಿ ಹೊಂದಿರುವುದನ್ನು ಸೂಚಿಸುತ್ತದೆ.

ಜೀವನದ ರೇಖೆ
ಈ ರೇಖೆ ಉದ್ದವಾಗಿದ್ದಷ್ಟೂ ಆಯಸ್ಸೂ ಹೆಚ್ಚು ಎಂದು ತಿಳಿದುಕೊಳ್ಳಬಹುದು. ಒಂದು ವೇಳೆ ಈ ರೇಖೆ ನಡುವೆ ತುಂಡಾಗಿದ್ದಂತೆ ಕಂಡುಬಂದರೆ ಜೀವನದಲ್ಲಿ ಎಲ್ಲೋ ಒಂದು ಕಡೆಯಲ್ಲಿ ಅಪಘಾತ ಅಥವಾ ಮಾರಕ ಕಾಯಿಲೆ ಎದುರಾಗಬಹುದು ಎಂದು ಸೂಚಿಸುತ್ತದೆ.

ವಿಧಿಯ ರೇಖೆ
ಈ ರೇಖೆಯನ್ನು ಅದೃಷ್ಟದ ರೇಖೆ ಎಂದೂ ಕರೆಯಲಾಗುತ್ತದೆ. ಇದರ ಮೂಲಕ ವ್ಯಕ್ತಿಯ ನಿಯಂತ್ರಣಕ್ಕೆ ಮೀರಿದ ವಿಷಯಗಳು ಆತನ ವ್ಯಕ್ತಿತ್ವ ಹಾಗೂ ಜೀವನದ ಮೇಲೆ ಎಷ್ಟು ಪ್ರಭಾವಶಾಲಿಯಾಗಿದೆ ಎಂದು ತಿಳಿಸುತ್ತದೆ.

ಸೂರ್ಯನ ರೇಖೆ (ಅಪೋಲೋ)
ಈ ರೇಖೆ ವ್ಯಕ್ತಿಯ ಅದೃಷ್ಟ, ಜನಪ್ರಿಯತೆ, ಶ್ರೀಮಂತಿಕೆ ಹಾಗೂ ಕಳಂಕವನ್ನೂ ಸೂಚಿಸುತ್ತದೆ. ಈ ರೇಖೆ ಆಳವಾಗಿದ್ದಷ್ಟೂ ಜನಪ್ರಿಯತೆ ಮತ್ತು ಐಶ್ವರ್ಯ ಹೆಚ್ಚುತ್ತದೆ. ಈ ರೇಖೆ ಎಷ್ಟು ಉದ್ದವಿರುತ್ತದೆಯೋ ಅಷ್ಟೂ ಈ ಐಶ್ವರ್ಯ ಹಾಗೂ ಜನಪ್ರಿಯತೆ ಉಳಿದುಕೊಳ್ಳುವ ಕಾಲಾವಧಿಯನ್ನು ಸೂಚಿಸುತ್ತದೆ.



Click it and Unblock the Notifications
