For Quick Alerts
ALLOW NOTIFICATIONS  
For Daily Alerts

ನಮ್ಮ ಕುಂಡಲಿಯಲ್ಲಿ ದೋಷವಿರುತ್ತದೆಯಾ? ಅದರ ಪರಿಹಾರ ಹೇಗೆ?

By Divya Pandith
|

ಜ್ಯೋತಿಷ್ಯ ಎನ್ನುವುದು ಒಂದು ವಿಶಾಲವಾದ ವಿಚಾರ. ನಮ್ಮ ಜೀವನದ ಅದೃಷ್ಟ ಹಾಗೂ ವಿಫಲತೆಗಳೆಲ್ಲವೂ ನಮ್ಮ ಭವಿಷ್ಯವನ್ನು ಆಧರಿಸಿಯೇ ಇರುತ್ತದೆ. ಕೆಲವೊಮ್ಮೆ ನಮ್ಮ ಜಾತಕದಲ್ಲಿ ಅಥವಾ ಭವಿಷ್ಯದಲ್ಲಿ ದೋಷದ ಫಲ ವಿರುತ್ತದೆ. ಈ ದೋಷಗಳಿಂದ ನಾವು ಮಾಡುವ ಕೆಲಸ ಕಾರ್ಯದಲ್ಲಿ ಯಶಸ್ಸು ದೊರೆಯದೆ ಇರುವುದು ಮತ್ತು ಜೀವನ ಸದಾ ನೋವಿನಿಂದ ಕೂಡಿರುತ್ತದೆ. ದೋಷ ಎನ್ನುವ ಪದವು "ಅನಪೇಕ್ಷಿತ ಅಥವಾ ಒಳ್ಳೆಯ ಫಲಿತಾಂಶ ಪಡೆಯದ ವಿಚಾರ" ಎನ್ನುವ ಅರ್ಥವನ್ನು ನೀಡುತ್ತದೆ.

ಜ್ಯೋತಿಷ್ಯದಲ್ಲಿ ದೋಷಗಳು ಮನುಷ್ಯನ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅದರಿಂದಲೇ ಅನೇಕ ನೋವು ನಷ್ಟಗಳು ಉಂಟಾಗುತ್ತದೆ ಎನ್ನಲಾಗುತ್ತದೆ. ಜಾತಕದಲ್ಲಿರುವ 12 ಮನೆಗಳಲ್ಲಿ ಸಂಚರಿಸುವ ಗ್ರಹಗತಿಗಳ ಆಧಾರದ ಜೊತೆಗೆ ದೋಷಗಳು ಕೂಡಿಕೊಂಡಿರುತ್ತದೆ. ದೋಷಗಳು ಇರುವಾಗ ಕೆಲವು ಗ್ರಹಗತಿಗಳ ಸಂಚಾರವು ಹೆಚ್ಚು ಪ್ರಾಭವಕ್ಕೆ ಒಳಗಾಗಿರುತ್ತದೆ.

ನೀವು ನಿಮ್ಮ ಜೀವನದಲ್ಲಿ ಬಹಳಷ್ಟು ಕಷ್ಟ ನೋವುಗಳನ್ನು ಒಂದಾದ ಮೇಲೊಂದರಂತೆ ಅನುಭವಿಸುತ್ತಿದ್ದೀರಿ ಎಂದಾದರೆ ಮೊದಲು ನಿಮ್ಮ ಜಾತಕದಲ್ಲಿ ಯಾವ ದೋಷಗಳಿವೆ ಎಂದು ತಿಳಿದುಕೊಳ್ಳಿ. ದೋಷಗಳಲ್ಲಿಯೂ ಹಲವಾರು ಬಗೆಯ ದೋಷಗಳಿವೆ. ಒಂದೊಂದು ಸಹ ವಿಭಿನ್ನ ಬಗೆಯ ಅನುಭವ ಹಾಗೂ ತೊಂದರೆಯನ್ನುಂಟು ಮಾಡುತ್ತವೆ. ಅವುಗಳ ಕುರಿತು ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಮುಂದಿರುವ ವಿವರಣೆಯನ್ನು ನೋಡಿ...

ಮಾಂಗಲಿಕ ದೋಷ

ಮಾಂಗಲಿಕ ದೋಷ

ವ್ಯಕ್ತಿಯೋರ್ವನ ಜಾತಕದಲ್ಲಿ ಹನ್ನೆರಡು ಮನೆಗಳಿರುತ್ತವೆ. ಒ೦ದು ಮ೦ಗಳನು ಒ೦ದನೆಯ, ಎರಡನೆಯ, ನಾಲ್ಕನೆಯ, ಏಳನೆಯ, ಎ೦ಟನೆಯ, ಅಥವಾ ಹನ್ನೆರಡನೆಯ ಮನೆಗಳಲ್ಲಿ ಆರೋಹಣ ಕ್ರಮದಲ್ಲಿ ಕ೦ಡುಬ೦ದಲ್ಲಿ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಆ ವ್ಯಕ್ತಿಗೆ ಕುಜದೋಷವಿದೆಯೆ೦ದು ಹೇಳಲಾಗುತ್ತದೆ. ಕುಜದೋಷವುಳ್ಳ ವ್ಯಕ್ತಿಯೋರ್ವರು ಮ೦ಗಳ ಗ್ರಹನ ಋಣಾತ್ಮಕ ಪ್ರಭಾವದಡಿಯಲ್ಲಿ ಸಿಲುಕಿಕೊ೦ಡಿರುತ್ತಾರೆ ಎ೦ದು ಹೇಳಲಾಗುತ್ತದೆ. ವೈವಾಹಿಕ ವಿಚಾರದಲ್ಲಿ ಈ ಪ್ರಭಾವವು ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತದೆ. ಏಕೆ೦ದರೆ, ವಧೂವರರ ಜಾತಕಗಳನ್ನು ಪರಸ್ಪರ ಹೋಲಿಸಿ ಪರಿಶೀಲಿಸುವ ವೇಳೆಯಲ್ಲಿ ಕುಜನ ಸ್ಥಾನಮಾನವು ಒ೦ದು ಅತ್ಯ೦ತ ಪ್ರಮುಖವಾದ ಮಾನದ೦ಡವಾಗಿರುತ್ತದೆ. ವ್ಯಕ್ತಿಯೋರ್ವವರ ಜಾತಕವನ್ನು ಕುಜದೋಷಕ್ಕಾಗಿ ಪರಿಶೀಲಿಸಬೇಕಾಗುತ್ತದೆ ಹಾಗೂ ಆ ವ್ಯಕ್ತಿಯ ಮತ್ತು ಅವರ ಬಾಳಸ೦ಗಾತಿಯಾಗುವವರ ಜಾತಕಗಳು ಹೊ೦ದಾಣಿಕೆಯಾಗುತ್ತವೆಯೇ ಎ೦ಬುದನ್ನು ಮದುವೆಗೆ ಮೊದಲು ತೀರ್ಮಾನಿಸಬೇಕಾಗುತ್ತದೆ.

ನಾಡಿ ದೋಷ

ನಾಡಿ ದೋಷ

ವಿವಾಹದ ಸಂದರ್ಭದಲ್ಲಿ ಗಂಡು ಹೆಣ್ಣಿನ ಜಾತಕವು ಕೂಡುತ್ತದೆಯೇ ಎಂದು ನೋಡುತ್ತಾರೆ. ಕೂಡುತ್ತದೆ ಎಂದಾದರೆ ಕುಂಡಲಿಯಲ್ಲಿ ಕೆಲವು ವಿಚಾರಗಳು ಹೊಂದಾಣಿಕೆಯಾಗುವಂತೆ ಇರಬೇಕು. ಹೀಗೆ ತಾಳೆನೋಡುವಾಗ ವ್ಯಕ್ತಿ ಯಾವ ನಾಡಿಯನ್ನು ಹೊಂದಿದ್ದಾನೆ ಎನ್ನುವುದು ಕುಂಡಲಿಯಲ್ಲಿ ಇರುತ್ತದೆ. ಹುಡುಗ ಮತ್ತು ಹುಡುಗಿಯ ಕುಂಡಲಿಯಲ್ಲಿ ಒಂದೇ ನಾಡಿಯಿದ್ದರೆ ನಾಡಿ ದೋಷ ಉಂಟಾಗುತ್ತದೆ. ನಾಡಿ ಒಂದೇ ಇದ್ದರೆ ವೈವಾಹಿಕ ಜೀವನದಲ್ಲಿ ಅನೇಕ ಸಮಸ್ಯೆಗಳು

ಉಂಟಾಗುತ್ತದೆ ಎನ್ನಲಾಗುತ್ತದೆ.

ಪಿತೃದೋಷ

ಪಿತೃದೋಷ

ನಮ್ಮ ಪೂರ್ವಜರು ಅಥವಾ ಕುಟುಂಬದ ಮುಖ್ಯಸ್ಥರಾದವರು ಕೆಟ್ಟದನ್ನು ಮಾಡಿದಾಗ ಈ ದೋಷ ಸಂಭವಿಸುತ್ತದೆ. ಕುಂಡಲಿಯಲ್ಲಿರುವ ಸಂಪತ್ತಿನ ಮನೆಯಾದ 9ನೇ ಮನೆಯಲ್ಲಿ ಈ ದೋಷವಿರುತ್ತದೆ. ಇದು ಜಾತಕದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಈ ಮನೆಯನ್ನು ತಂದೆ ಮತ್ತು ಮನುಷ್ಯನ ಮನೆ ಎಂದು ಪರಿಗಣಿಸಲಾಗುತ್ತದೆ. ಈ ದೋಷ ಇದ್ದ ವ್ಯಕ್ತಿಗೆ ಪ್ರಗತಿ ಹೊಂದಲು ಕಷ್ಟವಾಗುತ್ತದೆ.

ಪಿತೃದೋಷ

ಪಿತೃದೋಷ

ನಾವು ಮಾಡಿದಂತಹ ಒಳ್ಳೆಯ ಕೆಲಸಗಳು ಅಥವಾ ಪಾಪಗಳು ನಮ್ಮನ್ನು ಬಿಟ್ಟು ಹೋಗುವುದಿಲ್ಲವೆಂದು ಹಿಂದೂ ಧರ್ಮದಲ್ಲಿ ಹೇಳಲಾಗುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಅದರಿಂದ ನಮ್ಮ ಮುಂದಿನ ಪೀಳಿಗೆ ಕೂಡ ಒಳ್ಳೆಯದಾಗುತ್ತಾ ಹೋಗುತ್ತದೆ. ಅದೇ ಪಾಪಕರ್ಮಗಳನ್ನು ಮಾಡಿದರೆ ಅದು ಮುಂದಿನ ಪೀಳಿಗೆಯನ್ನು ಕಾಡುತ್ತಾ ಇರುತ್ತದೆ. ಕೆಲವೊಂದು ಸಂದರ್ಭದಲ್ಲಿ ನಾವು ಎಷ್ಟೇ ಕಷ್ಟಪಟ್ಟರೂ ನಮ್ಮ ಏಳಿಗೆಯೇ ಆಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಹಿಂದಿನವರು ಮಾಡಿರುವಂತಹ ಪಾಪಕರ್ಮಗಳು. ವ್ಯಾಪಾರ ಹಾಗೂ ವಿವಾಹದ ವೇಳೆ ನಮ್ಮ ಹಿರಿಯರು ಮಾಡಿದಂತಹ ಒಳ್ಳೆಯ ಹಾಗೂ ಪಾಪ ಕರ್ಮಗಳು ಬೆಳಕಿಗೆ ಬರುತ್ತದೆ. ಮದುವೆಗಳು ವಿಳಂಬವಾಗುವುದು ಕೂಡ ನಮ್ಮ ಹಿರಿಯುರು ಮಾಡಿರುವಂತಹ ಪಾಪಕರ್ಮಗಳಿಂದಲೇ ಎಂದು ಹೇಳಲಾಗುತ್ತದೆ. ಕೆಲವರಿಗೆ ಎಷ್ಟು ಹುಡುಕಾಡಿದರೂ ಸರಿಯಾದ ಸಂಗಾತಿ ಸಿಗದೆ ಇರುವುದರಿಂದ ಮದುವೆ ವಿಳಂಬವಾಗಿರುತ್ತದೆ. ಇದಕ್ಕೆ ಹಿಂದೂ ಧರ್ಮದ ಪ್ರಕಾರ ಪಿತೃ ದೋಷ

ಕಾರ್ತಿಕ್ ಜನ್ಮ ದೋಷ

ಕಾರ್ತಿಕ್ ಜನ್ಮ ದೋಷ

ಹಿಂದೂ ಪುರಾಣಗಳ ಪ್ರಕಾರ ಈ ದೋಷವು ಕಾರ್ತಿಕ್ ತಿಂಗಳಲ್ಲಿ ಸಂಭವಿಸುತ್ತದೆ. ಅಕ್ಟೋಬರ್ ಮಧ್ಯದಲ್ಲಿ ಪ್ರಾರಂಭವಾಗುತ್ತದೆ. ಮತ್ತು ನವೆಂಬರ್ ಮಧ್ಯದಲ್ಲಿ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ಸೂರ್ಯನು ದುರ್ಬಲನಾಗಿರುತ್ತಾನೆ. ಈ ಸಮಯದಲ್ಲಿ ಉಂಟಾಗುವ ದೋಷವು ವ್ಯಕ್ತಿ ಹಾಗೂ ಆತನ ಕುಟುಂಬದ ಮೇಲೂ ದೋಷ ಪರಿಣಾಮ ಬೀರುತ್ತದೆ. ಈ ಅವಧಿಯಲ್ಲಿ ಜನಿಸಿದ ವ್ಯಕ್ತಿಯು ಕಾರ್ತಿಕ ಜನ್ಮ ದೋಷವನ್ನು ಹೊಂದಿರುತ್ತಾನೆ ಎಂದು ಹೇಳಲಾಗುತ್ತದೆ.

ಕಾಳಸರ್ಪ ದೋಷ

ಕಾಳಸರ್ಪ ದೋಷ

ಇದು ವ್ಯಕ್ತಿಯ ಜಾತಕದಲ್ಲಿ ಗಂಭೀರವಾದ ಸ್ಥಿತಿಯಾಗಿದೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಇದು ವ್ಯಕ್ತಿಯ ಜೀವನದಲ್ಲಿ ಎಲ್ಲವನ್ನೂ ಹಾಳುಮಾಡುತ್ತದೆ. ಉತ್ತಮ ಗ್ರಹಗಳ ಸಂಚಾರವಿದ್ದರೂ ಈ ದೋಷದಿಂದ ದುರಾದೃಷ್ಟ ಸಂಭವಿಸುತ್ತದೆ. ಇವುಗಳಿಗೆ ಜ್ಯೋತಿಷ್ಯದಲ್ಲಿರುವ ಪರಿಹಾರ ಕ್ರಮವನ್ನು ಅನುಸರಿಸಿ ದೋಷದಿಂದ ಮುಕ್ತರಾಗಬಹುದು.

English summary

Do You Know About The Different Types Of Doshas?

Astrology is a vast subject and Doshas play a vital role in it. To understand what a Dosha is and what it signifies, we need to learn the basics of astrology. The word dosha means 'unfavourable or something that does not get good results'.
Story first published: Tuesday, October 24, 2017, 10:08 [IST]
X
Desktop Bottom Promotion