ಅಂಗೈಯಲ್ಲಿ 'H' ಅಕ್ಷರ ಇದೆಯೇ ಎಂದು ಹುಡುಕಿ, ಇದ್ದರೆ ನೀವು ಅದೃಷ್ಟವಂತರು!

By: manu
Subscribe to Boldsky

ಹಸ್ತ ಮುದ್ರಿಕೆಯು ಒಂದು ವಿಶಾಲವಾದ ವಿಷಯ. ಇದು ಅನೇಕ ವಿಚಾರಗಳ ಬಗ್ಗೆ ಅರಿವು ಮೂಡಿಸುತ್ತದೆ. ಹಸ್ತದಲ್ಲಿ ಭಿನ್ನ ಬಗೆಯ ಚಿಹ್ನೆಗಳಿರುತ್ತವೆ. ಪ್ರತಿಯೊಂದು ವಿಶೇಷ ವಿಚಾರಗಳ ಕುರಿತು ಹೇಳುತ್ತವೆ. ವಿದ್ಯೆ, ವೃತ್ತಿ, ಹಣಕಾಸು, ಕುಟುಂಬ, ಸಂಗಾತಿ, ಮಕ್ಕಳು ಹೀಗೆ ಅನೇಕ ವಿಚಾರಗಳ ವಿಶೇಷತೆಗಳ ಬಗ್ಗೆ ತೆರೆದಿಡುತ್ತವೆ. ಅಂಗೈಯಲ್ಲಿರುವ ಚಿಹ್ನೆಗಳು ಅದರದ್ದೇ ಆದ ವಿಶೇಷತೆಯನ್ನು ಪಡೆದುಕೊಂಡಿವೆ. ಅವುಗಳಲ್ಲಿ ಇಂಗ್ಲಿಷ್ ವರ್ಣ ಮಾಲೆಯ ಚಿಹ್ನೆಗಳೂ ಒಂದು.

ಅಂಗೈಯಲ್ಲಿ 'M' ಅಕ್ಷರದ ಗುರುತು ಇದ್ದವರು ಅದೃಷ್ಟವಂತರು!

ಪ್ರತಿಯೊಬ್ಬರ ಹಸ್ತದಲ್ಲೂ ಬಗೆಬಗೆಯ ಚಿತ್ತಾರಗಳಿರುತ್ತವೆ. ಅವುಗಳನ್ನು ಸರಿಯಾಗಿ ಗುರುತಿಸುವ ಸಾಮರ್ಥ್ಯ ನಮಗಿರಬೇಕು. ಹಸ್ತದಲ್ಲಿಯ ಸ್ಥಳಗಳು ಒಂದೊಂದು ಗ್ರಹಗಳ ಸ್ಥಾನವನ್ನು ಹೇಳುತ್ತದೆ. ಈ ವಿಶೇಷವಾದ ಸ್ಥಳದಲ್ಲಿ ಕಾಣುವ ಚಿಹ್ನೆಗಳು ನಮ್ಮ ಭವಿಷ್ಯ ಹಾಗೂ ವ್ಯಕ್ತಿತ್ವವನ್ನು ಬಿಂಬಿಸುತ್ತವೆ. ವಿಶೇಷ ಚಿಹ್ನೆಗಳಲ್ಲಿ ಇಂಗ್ಲಿಷ್ ವರ್ಣ ಮಾಲೆಯ ಎಚ್ (H) ಅಕ್ಷರವೂ ಒಂದು. ಇದೊಂದು ಕುತೂಹಲಕಾರಿ ಸಮಾಚಾರ ಎನಿಸಿದರೆ ಈ ಕುರಿತು ಮುಂದೆ ಓದಿ.....

ಯಶಸ್ಸು ಯಾವಾಗ?

ಯಶಸ್ಸು ಯಾವಾಗ?

ಈ ಬಗೆಯ 'H' ಅಕ್ಷರವನ್ನು ಹೊಂದಿರುವ ಜನರಿಗೆ 40 ವರ್ಷದ ನಂತರ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ. ಈ ಮೊದಲು ಕಾಣದ ಅದೃಷ್ಟವು ಅವರನ್ನು ಹಿಂಬಾಲಿಸುತ್ತದೆ.

ಹಸ್ತರೇಖೆ: ಮಗು ಹುಟ್ಟುವ ಮೊದಲೇ ಭವಿಷ್ಯ ತಿಳಿಯಬಹುದು!

ಇದನ್ನೂ ನಂಬಬೇಕು!

ಇದನ್ನೂ ನಂಬಬೇಕು!

ಹಸ್ತಮುದ್ರಿಕೆಯ ಪ್ರಕಾರ 40 ವರ್ಷದ ನಂತರ ಇವರಿಗೆ ಒಮ್ಮೆಲೇ ಆರ್ಥಿಕ ವಿಚಾರವಾಗಿ ಆದಾಯ ಮತ್ತು ಆರೋಗ್ಯದ ವಿಚಾರದಲ್ಲಿ ಹಠಾತ್ ಏರಿಕೆ ಉಂಟಾಗುತ್ತದೆ. ಈ ರೀತಿಯ ಬದಲಾವಣೆ ಕಳೆದ ವರ್ಷಗಳಲ್ಲಿ ಕಂಡಿರುವುದಿಲ್ಲ.

ಇದರರ್ಥ ಹೀಗೂ ಆಗುವುದು

ಇದರರ್ಥ ಹೀಗೂ ಆಗುವುದು

ಜೀವನದಲ್ಲಿ ಪಟ್ಟ ಶ್ರಮಗಳಿಗೆ 40 ವರ್ಷದ ನಂತರ ಪ್ರತಿಫಲ ದೊರೆಯುವುದು. ಈ ಚಿಹ್ನೆ ಹೊಂದಿದವರು ಅತ್ಯಂತ ಭಾವನಾತ್ಮಕ ಸ್ವಭಾವದವರು ಎಂದು ಹೇಳಲಾಗುತ್ತದೆ.

ಅಚ್ಚರಿ, ಕುತೂಹಲ ಕೆರಳಿಸುವ ಎಡಗೈ ಹಸ್ತದಲ್ಲಿ ಮೂಡುವ ರೇಖೆ!

ಉದಾರಿಗಳು ಇವರು

ಉದಾರಿಗಳು ಇವರು

ಹಸ್ತದಲ್ಲಿ ಈ ಚಿಹ್ನೆ ಹೊಂದಿದವರು ಉದಾರಿಗಳು. ತಮ್ಮ ಸುತ್ತಲ ಜನರಿಗೆ ಸಹಾಯ ಮಾಡಲು ಸದಾ ಮುಂದಿರುತ್ತಾರೆ. ಇದರಿಂದ ಅನಗತ್ಯ ತೊಂದರೆಗಳನ್ನೂ ಅನುಭವಿಸುತ್ತಾರೆ. ಇವರ ಉದಾರ ಸ್ವಭಾವಕ್ಕೆ ಕೆಲವೊಮ್ಮೆ ಅವಮಾನಗಳನ್ನೂ ಅನುಭವಿಸುವ ಸಾಧ್ಯತೆ ಇರುತ್ತದೆ.

ನಿಮ್ಮ ಹಸ್ತಗಳನ್ನು ನೋಡಿ, ಆಮೇಲೆ ಈ ಲೇಖನವನ್ನು ತಪ್ಪದೇ ಓದಿ

ವಿರೋಧ ಅನುಭವಿಸಿರುತ್ತಾರೆ

ವಿರೋಧ ಅನುಭವಿಸಿರುತ್ತಾರೆ

ಈ ಅಕ್ಷರ ಹೊಂದಿದವರು ತಮ್ಮ ಜೀವನದಲ್ಲಿ ಹೆಚ್ಚು ತೊಂದರೆಗಳನ್ನು ಅನುಭವಿಸಿದವರಾಗಿರುತ್ತಾರೆ. ಜೀವನದ ಪ್ರತಿಯೊಂದು ಹಂತದಲ್ಲೂ ತೊಂದರೆ ಹಾಗೂ ವಿರೋಧವನ್ನು ಅನುಭವಿಸಿರುತ್ತಾರೆ.

ಸದಾ ಸಹಾಯಕ್ಕೆ ಸಿದ್ಧರು

ಸದಾ ಸಹಾಯಕ್ಕೆ ಸಿದ್ಧರು

ಇವರು ತಮ್ಮ ಪ್ರೀತಿ ಪಾತ್ರರಿಗೆ ಸಹಾಯ ಮಾಡಲು ಸದಾ ಸಿದ್ಧರಾಗಿರುತ್ತಾರೆ. ಆರಂಭಿಕ ವರ್ಷದಲ್ಲಿ ಅವರಿಗೆ ಯಾವುದೇ ಅದೃಷ್ಟ ದೊರೆಯದಿದ್ದರೂ ಭರವಸೆ ಕಳೆದುಕೊಳ್ಳುವುದಿಲ್ಲ.

ಧನಾತ್ಮಕ ಚಿಂತಕರು

ಧನಾತ್ಮಕ ಚಿಂತಕರು

ಇವರು ಸದಾ ಧನಾತ್ಮಕ ರೀತಿಯಲ್ಲಿ ಚಿಂತನೆ ನಡೆಸುತ್ತಾರೆ. ಕಷ್ಟಪಟ್ಟು ಕೆಲಸ ಮಾಡುವುದಕ್ಕೆ ಯಾವುದೇ ಬೇಸರ ವ್ಯಕ್ತ ಪಡಿಸುವುದಿಲ್ಲ. ಅತ್ಯಂತ ಸೂಕ್ಷ್ಮ ಮನಸ್ಸಿನವರಾದ ಇವರು ಬುದ್ಧಿವಂತರಾಗಿರುತ್ತಾರೆ.

ಸದಾ ಸಹಾಯಕ್ಕೆ ಸಿದ್ಧರು

ಸದಾ ಸಹಾಯಕ್ಕೆ ಸಿದ್ಧರು

ಇವರು ತಮ್ಮ ಪ್ರೀತಿ ಪಾತ್ರರಿಗೆ ಸಹಾಯ ಮಾಡಲು ಸದಾ ಸಿದ್ಧರಾಗಿರುತ್ತಾರೆ. ಆರಂಭಿಕ ವರ್ಷದಲ್ಲಿ ಅವರಿಗೆ ಯಾವುದೇ ಅದೃಷ್ಟ ದೊರೆಯದಿದ್ದರೂ ಭರವಸೆ ಕಳೆದುಕೊಳ್ಳುವುದಿಲ್ಲ.

ಅಂಗೈಯ ಹುಟ್ಟು ಮಚ್ಚೆ-ವ್ಯಕ್ತಿಯ ವ್ಯಕ್ತಿತ್ವ ಹೇಳುವ ಭವಿಷ್ಯವಾಣಿ!

English summary

Do You Have The Letter “H” On Your Palm?

There are many letters that are also seen when you have a look at your palm. From letter X to M and even the letter H has its own importance! Check out on what exactly does it mean if a person has the letter H on their palms...
Subscribe Newsletter