ಗಾಬರಿಪಡಿಸುವ ಸುದ್ದಿ! ಮನುಷ್ಯನ ಕಿವಿಯಲ್ಲಿ ಬಾಲವಿಲ್ಲದ ಹಲ್ಲಿ ಪತ್ತೆ!

By: manu
Subscribe to Boldsky

ಕೀಟ ಮತ್ತು ಪ್ರಾಣಿಗಳು ವಾಸಿಸುವ ಮನೆಗಳ ಬಗ್ಗೆ ಕೊಂಚ ಅಧ್ಯಯನ ಮಾಡಿದರೆ ಹಲವು ವೈಚಿತ್ರಗಳನ್ನು ಗಮನಿಸಬಹುದು. ವಿಶೇಷವಾಗಿ ದುರ್ಬಲವಾದ ಹಕ್ಕಿಗಳು ತಮಗಿಂತಲೂ ಸಬಲರಾದ, ಅಂದರೆ ಮೊಟ್ಟೆಗಳನ್ನು ಕದಿಯಲು ಬರುವ ವೈರಿಗಳನ್ನು ಏರಿ ಹೋಗುವ ಬಲಿಷ್ಟ ಹಕ್ಕಿಗಳ ಗೂಡಿರುವ ಆಸುಪಾಸಿನಲ್ಲಿಯೇ ಗೂಡು ಕಟ್ಟುತ್ತವೆ. ನಾವು, ಮನುಷ್ಯರು ಸಹಾ ಹೆಚ್ಚು ಜನರೆಲ್ಲಿದ್ದಾರೆಯೋ, ಅಲ್ಲಿ, ಅಂದರೆ ಹೆಚ್ಚು ಸವಲತ್ತುಗಳಿರುವಲ್ಲಿಯೇ ಮನೆಗಳನ್ನು ನಿರ್ಮಿಸಿಕೊಂಡು ಈ ಜಗತ್ತನ್ನು ಹೆಚ್ಚೂ ಕಡಿಮೆ ಕಾಂಕ್ರೀಟ್ ಕಾಡನ್ನಾಗಿ ಪರಿವರ್ತಿಸಿದ್ದೇವೆ.

ಕಾಡಿನ ಸ್ಥಳವನ್ನೆಲ್ಲಾ ಈ ಕಾಂಕ್ರೀಟ್ ಕಾಡುಗಳು ಆವರಿಸುತ್ತಾ ಬಂದರೆ ಇವುಗಳಲ್ಲಿ ಮನೆ ಕಟ್ಟಿಕೊಳ್ಳಬೇಕಾಗಿದ್ದ ಕೀಟಗಳು ಎಲ್ಲಿ ಹೋಗಬೇಕು? ಇವು ನಮ್ಮ ಮನೆಗಳ ಸಂದು ಗೊಂದಲುಗಳಲ್ಲಿ, ಮೊಳೆಹೊಡೆದ ತೂತಿನಲ್ಲಿ ಅಷ್ಟೇ ಏಕೆ, ಮನುಷ್ಯರ ಕಿವಿ ಮೂಗುಗಳಲ್ಲಿಯೂ ಮನೆ ಕಟ್ಟಿಕೊಳ್ಳುತ್ತಿವೆ. ಕಡೆಯ ವಾಕ್ಯ ಗಾಬರಿ ಮೂಡಿಸಿತೇ? ಆದರೆ ಇದು ಸತ್ಯವಾಗಿದ್ದು ಹಲವೆಡೆ ಕೀಟಗಳು ಮನುಷ್ಯರ ಕಿವಿ ಮೂಗುಗಳಲ್ಲಿ ಆಶ್ರಯ ಪಡೆದಿರುವ ಸಂಗತಿಗಳನ್ನು ಇತ್ತೀಚಿನ ವರದಿಗಳು ತಿಳಿಸಿವೆ. 

ಅಕಸ್ಮಾತ್ತಾಗಿ ಕಿವಿಯೊಳಗೆ ಕೀಟ ಹೊಕ್ಕಿದರೆ, ಕೂಡಲೇ ಈ ಟಿಪ್ಸ್ ಅನುಸರಿಸಿ

ಚಿಕ್ಕ ಪುಟ್ಟ ಕೀಟಗಳಾದರೆ ಪರವಾಗಿಲ್ಲ, ಆದರೆ ಈ ವ್ಯಕ್ತಿಯ ಕಿವಿಯಲ್ಲಿ ಸಾಮಾನ್ಯ ಮನೆ ಹಲ್ಲಿ (freakish gecko) ಯೊಂದು ಕಂಡುಬಂದಿತ್ತು ಹಾಗೂ ಇದರ ಬಾಲ ಕಾಣೆಯಾಗಿತ್ತು. ಕಿವಿಯಿಂದ ಹಲ್ಲಿಯನ್ನು ಹೊರತೆಗೆಯುವ ಚಿತ್ರಗಳು ಅಂತರ್ಜಾಲದಲ್ಲಿ ವ್ಯಾಪಕವಾಗುತ್ತಿದ್ದಂತೆಯೇ ಜನರಿಗೆ ಕಿವಿಯಲ್ಲಿ ಚಳಿ ಶುರುವಾಗಿದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ...

ಇದು ನಡೆದಿದ್ದು ಚೀನಾದಲ್ಲಿ

ಇದು ನಡೆದಿದ್ದು ಚೀನಾದಲ್ಲಿ

ಈ ವಿಚಿತ್ರ ವಿದ್ಯಮಾನ ಚೀನಾದಲ್ಲಿ ನಡೆದಿದೆ. ಚೀನೀ ಪುರುಷರೊಬ್ಬರು ಬೆಳಿಗ್ಗೆದ್ದಾಗ ಕಿವಿಯಲ್ಲಿ ತೀಕ್ಷ್ಣ ನೋವನ್ನು ಅನುಭವಿಸುತ್ತಿದ್ದರು. ಒಳಗೆ ಸೂಜಿಗಳಿಂದ ಇರಿಯುತ್ತಿದ್ದಂತೆ ನೋವಾಗುತ್ತಿದ್ದು ಇದಕ್ಕೆ ಕಾರಣವೇ ತಕ್ಷಣಕ್ಕೆ ಗೊತ್ತಾಗುತ್ತಿರಲಿಲ್ಲ.

ಈ ನೋವಿಗೆ ಕಾರಣ ಏನು ಎಂಬುದು ಜೀವನದ ದೊಡ್ಡ ಶಾಕ್!

ಈ ನೋವಿಗೆ ಕಾರಣ ಏನು ಎಂಬುದು ಜೀವನದ ದೊಡ್ಡ ಶಾಕ್!

ನೋವು ತಡೆಯಲಾರದೇ ವೈದ್ಯರ ಬಳಿ ಭೇಟಿ ನೀಡಿದ ಈ ವ್ಯಕ್ತಿಯ ಕಿವಿಯನ್ನು ಪರಿಶೀಲಿಸಿದ ವೈದ್ಯರಿಗೂ ದೊಡ್ಡ ಆಘಾತ, ಒಳಗೊಂದು ಜೀವಂತ ಹಲ್ಲಿ ಕೂತಿದೆ. ಈ ಮಾಹಿತಿಯನ್ನು ಅರಿತ ವ್ಯಕ್ತಿಗೂ ಜೀವನದ ಅತಿ ದೊಡ್ಡ ಆಘಾತ ಎದುರಾಗಿತ್ತು. ಕಿವಿಯ ಇಕ್ಕಟ್ಟಿನೊಳಗೆ ನಾಲ್ಕೂ ಕಾಲುಗಳಿಂದ ಒಳಗೋಡೆಗಳನ್ನು ಒತ್ತಿ ಕುಳಿತ ಕಾರಣ ಕಾಲಿನ ಉಗುರುಗಳು ಸೂಜಿಗಳಂತೆ ಚುಚ್ಚುತ್ತಿದ್ದುದು ಈ ನೋವಿಗೆ ಕಾರಣವಾಗಿದ್ದು ಒಳಗೋಡೆಯ ಮೇಲಿನ ಒತ್ತಡ ಭಾರೀ ತಲೆನೋವು ಹಾಗೂ ಕಿವಿಯೊಳಗೆ ತುರಿಕೆಯೂ ಕಾರಣವಾಗಿತ್ತು.

ಹಲ್ಲಿಗೆ ಅರವಳಿಕೆ

ಹಲ್ಲಿಗೆ ಅರವಳಿಕೆ

ಯಾವುದೇ ಪ್ರಾಣಿಯನ್ನು ಹಿಡಿದರೆ ಇದರಿಂದ ಬಿಡಿಸಿಕೊಳ್ಳಲು ಅದು ಕೊರಸಾಡುತ್ತದೆ. ಆದ್ದರಿಂದ ಇದನ್ನು ಹೊರತೆಗೆಯುವ ಪ್ರಯತ್ನದಲ್ಲಿ ಹಲ್ಲಿ ಕೊಸರಾಡಿ ಕಿವಿಯೊಳಗಿನ ಅತಿ ಸೂಕ್ಷ್ಮ ಅಂಗಗಳಿಗೆ ಹಾನಿಯಾಗಬಾರದೆಂದು ತಕ್ಷಣವೇ ವೈದ್ಯರು ಅತಿ ಚಾಕಚಕ್ಯತೆಯಿಂದ ಕಿರಿದಾದ ಸೂಜಿಯನ್ನು ಉಪಯೋಗಿಸಿ ಹಲ್ಲಿಗೆ ಅರವಳಿಕೆಯ ಇಂಜೆಕ್ಷನ್ ನೀಡಿದ್ದರು. ಹಲ್ಲಿ ನಿಷ್ಟೇಷ್ಟಿತವಾದ ಬಳಿಕ ಇಕ್ಕಳದಿಂದ ಹಲ್ಲಿಯನ್ನು ಹೊರತೆಗೆಯಲಾಯಿತು. ಈ ಪ್ರಕ್ರಿಯೆಗೆ ಕೇವಲ ಐದೇ ನಿಮಿಷ ತಗುಲಿತ್ತು. ಆದರೆ ಈ ವ್ಯಕ್ತಿಗೆ ಆ ಐದು ನಿಮಿಷಗಳು ಐದು ಯುಗದಂತೆ ಕಂಡಿರಬಹುದು.

ಆದರೆ ಬಾಲವೆಲ್ಲಿ ಹೋಯಿತು?

ಆದರೆ ಬಾಲವೆಲ್ಲಿ ಹೋಯಿತು?

ಸಾಮಾನ್ಯವಾಗಿ ಹಲ್ಲಿಗಳು ಕಷ್ಟಕರ ಸಮಯ ಬಂದಾಗ ತಾವೇ ಬಾಲವನ್ನು ಬೀಳಿಸಿಕೊಂಡು ಓಡುತ್ತವೆ. ಕೊಸರಾಡುವ ಬಾಲವನ್ನು ಕಂಡ ವೈರಿ ಬಾಲದತ್ತ ಗಮನ ಹರಿಸಿದಾಗ ಹಲ್ಲಿ ವಿರುದ್ದ ದಿಕ್ಕಿನಲ್ಲಿ ಪಲಾಯನ ಹೂಡುತ್ತವೆ. ಈ ಹಲ್ಲಿಯಲ್ಲಿ ಮಾತ್ರ ಬಾಲವೇ ಇರಲಿಲ್ಲ. ಹಾಗಾದರೆ ಇದರ ಬಾಲ ಮೊದಲೇ ತುಂಡಾಗಿತ್ತೇ? ಕಿವಿಯೊಳಗೇ ಉಳಿದಿತ್ತೇ ಎಂಬ ಪ್ರಶ್ನೆ ಮೊದಲು ಕಾಡಿದ್ದು ಆ ವೈದ್ಯರಿಗೆ.

ಆದರೆ ಬಾಲವೆಲ್ಲಿ ಹೋಯಿತು?

ಹಾಗಾಗಿ ಮತ್ತೊಮ್ಮೆ ವ್ಯಕ್ತಿಯ ಕಿವಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಕಿವಿಯೊಳಗಂತೂ ಬಾಲವಿಲ್ಲ ಹಾಗಾದರೆ ಇದು ಪ್ರವೇಶ ಪಡೆದಿರುವುದಕ್ಕಿಂತಲೂ ಮುಂಚಿತವಾಗಿಯೇ ಬಾಲವನ್ನು ಕಳೆದುಕೊಂಡಿರಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಕೆಳಗಿನ ವಿಡಿಯೋ ಮೂಲಕ ನೋಡಬಹುದು. ಇಂತಹ ವಿಚಿತ್ರ ಘಟನೆಗಳ ಬಗ್ಗೆ ನಿಮಗೆ ಅರಿವಿದ್ದರೆ ನಮಗೆ ಖಂಡಿತಾ ತಿಳಿಸಿ....

English summary

Disturbing Fact: Lizard Found In Man's Ear & Its Tail Is Missing!

Animals find some of the weirdest places to make homes. They are constantly seen exploring places to stay safe, all thanks to humans who have made the world a concrete jungle. On the other side, humans are also paying a heavy price for this as there are many cases of insects finding their homes in the warm opening of humans like the nostril and the ear canals! This sounds disturbing, right? But the fact is, off late there have been many reports of creepy things finding their hiding spots in these places.
Subscribe Newsletter