For Quick Alerts
ALLOW NOTIFICATIONS  
For Daily Alerts

ಈತ ಜೀವಂತ ಹಾವುಗಳನ್ನು ತಿನ್ನುವ ವಿಚಿತ್ರ ವ್ಯಕ್ತಿ! ವಿಡಿಯೋ ವೈರಲ್....

By Arshad
|

ನಾಲ್ಕು ಜನರ ಗಮನ ಸೆಳೆಯಲು ಜನರು ಏನೇನು ಮಾಡುತ್ತಾರೆ ಎಂಬುದಕ್ಕೆ ಲೆಕ್ಕವೇ ಇಲ್ಲ. ಕೆಲವರು ಒಳ್ಳೆಯ ಕೆಲಸದ ಮೂಲಕ ಪ್ರಚಾರ ಬಯಸಿದರೆ ಕೆಲವರು ಯಾರೂ ಮಾಡದುದನ್ನು ಸಾಧಿಸಿ ಪ್ರಚಾರ ಬಯಸತೊಡಗುತ್ತಾರೆ. ಇಂತಹವರು ಮಾಡುವ ದಾಖಲೆಗಳನ್ನು ಗಿನ್ನೆಸ್ ಸಹಾ ಪರಿಗಣಿಸುತ್ತದೆ. ಉದಾಹರಣೆಗೆ ಒಂಟಿಕಾಲಿನಲ್ಲಿ ಅತಿ ಹೆಚ್ಚು ಬಾರಿ ಹಗ್ಗಬೀಸುತ್ತಾ ಜಿಗಿಯುವುದು.

ಇದರಿಂದ ಹೀಗೆ ಜಿಗಿದವರ ಕಾಲಿನ ಸ್ನಾಯುಗಳು ಹುರಿಗಟ್ಟುತ್ತವೆಯೇ ಹೊರತು ಬೇರಾರಿಗೂ ನಾಲ್ಕಾಣೆಯ ಪ್ರಯೋಜನವಿಲ್ಲ. ಕೆಲವರು ಅಪಾಯಕಾರಿಯಾದ ಪಟ್ಟುಗಳನ್ನು ಪ್ರಕಟಿಸಿ ತಮಗೂ ತಮ್ಮನ್ನು ಅನುಸರಿಸುವವರಿಗೂ ಅಪಾಯ ತಂದೊಡ್ಡುತ್ತಾರೆ. ಇಂತಹ ಒಂದು ಪ್ರಯತ್ನವೇ ಜೀವಂತ ಹಾವನ್ನು ನುಂಗುವುದು! ಇಂತಹ ಒಂದು ವಿಡಿಯೋ ಈಗ ವೈರಲ್ ಆಗುತ್ತಿದ್ದು ಜನರು ಇದನ್ನು ನೋಡಿದ ಬಳಿಕ ಛೀ ಎಂದು ಉಗಿಯುತ್ತಿದ್ದರೂ ಈ ವಿಡಿಯೋವನ್ನು ಪ್ರಕಟಿಸಿದ ಮೂಲ ಉದ್ದೇಶವನ್ನು ಸಫಲಗೊಳಿಸುತ್ತಿದ್ದಾರೆ. ಬನ್ನಿ, ಅಷ್ಟಕ್ಕೂ ಈ ಕ್ರಿಯೆಯಲ್ಲಿ ಹಾವು ಹೇಗೆ ನೋವಿನಿಂದ ವಿಲಿವಿಲಿ ಒದ್ದಾಡುತ್ತಿದೆ ಎಂದು ನೋಡಿ...

ಮೊದಲು ಈತ ಹಾವನ್ನು ಕಚ್ಚಲಿಕ್ಕೆ ಅನುವುಮಾಡಿಕೊಟ್ಟ

ಮೊದಲು ಈತ ಹಾವನ್ನು ಕಚ್ಚಲಿಕ್ಕೆ ಅನುವುಮಾಡಿಕೊಟ್ಟ

ಮೊದಲು ಈ ವ್ಯಕ್ತಿ ಹಾವನ್ನು ತನ್ನ ಶರೀರದ ಮೇಲೆ ಹಲವೆಡೆ ಕಚ್ಚಲು ಅನುವು ಮಾಡಿಕೊಟ್ಟ. ಇದರಲ್ಲಿ ಬೆರಳು, ಕಿವಿ, ಕೈ ಹಾಗೂ ನಾಲಿಗೆಗಳೂ ಸೇರಿವೆ. ಬಳಿಕ ಈತ ಬಾಲದಿಂದ ಪ್ರಾರಂಭಿಸಿ ಹಾವನ್ನು ತಿನ್ನಲಾರಂಭಿಸಿದ, ಅದೂ ಯಾವುದೋ ಸ್ವಾದಿಷ್ಟ ತಿಂಡಿಯಂತೆ!

ಮೊದಲು ಈತ ಹಾವನ್ನು ಕಚ್ಚಲಿಕ್ಕೆ ಅನುವುಮಾಡಿಕೊಟ್ಟ

ಮೊದಲು ಈತ ಹಾವನ್ನು ಕಚ್ಚಲಿಕ್ಕೆ ಅನುವುಮಾಡಿಕೊಟ್ಟ

ಯಾವುದೇ ಪ್ರಾಣಿಯನ್ನು ಜೀವಂತವಾಗಿ ತಿನ್ನುವುದು ಅತ್ಯಂತ ಅಸಹ್ಯವಾದ ಕ್ರಿಯೆಯಾಗಿದೆ. ಅದರಲ್ಲೂ ಎಲ್ಲರೂ ಹೇಸಿಗೆ ಪಡುವ ಹಾವನ್ನು ತಿನ್ನುವುದೆಂದರೆ? ಆದರೆ ಈ ಹೇಸಿಗೆಯನ್ನು ನೋಡಲು ಇಚ್ಛಿಸಿದವರಿಂದಲೇ ಈತ ವಿಶ್ವವಿಖ್ಯಾತಿ ಪಡೆದಿದ್ದಾನೆ. ಭಾರತೀಯನಾಗಿರುವ ಈತನನ್ನು ಜನರು "ಭಾರತದ ಬೇರ್ ಗ್ರಿಲ್ಸ್' ಎಂಬ ಅನ್ವರ್ಥನಾಮವನ್ನೂ ನೀಡಿದ್ದಾರೆ. ಬೇರ್ ಗ್ರಿಲ್ಸ್ ಬ್ರಿಟಿಷ್

ನಾಗರಿಕರಾಗಿದ್ದು ಟಿವಿ ಸರಣಿಯ ಬಾರ್ನ್ ಸರ್ವೈವರ್ ಎಂಬ ಸರಣಿಯಲ್ಲಿ ನಿರಾಹಾರದ ಸಮಯದಲ್ಲಿ ಹಾವುಗಳನ್ನು ತಿಂದೂ ಬದುಕಿರಬಹುದಾದ ಸಾಧ್ಯತೆಗಳ ವೈಜ್ಞಾನಿಕ ಹಾಗೂ ಉಳಿವಿನ ರಹಸ್ಯಗಳನ್ನು ಪ್ರದರ್ಶಿಸುವ ಖ್ಯಾತಿ ಪಡೆದಿದ್ದಾರೆ. ಆದರೆ ಈ ವ್ಯಕ್ತಿ ಹಾವುಗಳನ್ನು ಹಿಡಿದು ಚಕ್ಕುಲಿಯಂತೆ ಚಕಚಕನೇ ತಿನ್ನುವುದು ಮಾತ್ರ ಯಾರಿಗಾದರೂ ಹೊಟ್ಟೆ ತೊಳೆಸುತ್ತದೆ. ಈತ ಹೇಗೆ ಹಾವು

ತಿನ್ನುತ್ತಿತ್ತಾನೆಂಬುದನ್ನು ಈ ವಿಡಿಯೋ ಮೂಲಕ ನೋಡಿ: ಹಾವಿನ ಮಾಂಸದ ಬಗ್ಗೆ ಹೆಚ್ಚಿನ ಮಾಹಿತಿ ಕೆಳಗಿದೆ.

ವಿಡಿಯೋ

ಈ ವಿಡಿಯೋ ಮೂಲಕ ನೋಡಿ

ಹಾವಿನ ಮಾಂಸದ ಖಾದ್ಯಗಳು ಇಲ್ಲಿ ಹೆಚ್ಚು ಖ್ಯಾತಿ ಪಡೆದಿವೆ

ಹಾವಿನ ಮಾಂಸದ ಖಾದ್ಯಗಳು ಇಲ್ಲಿ ಹೆಚ್ಚು ಖ್ಯಾತಿ ಪಡೆದಿವೆ

ಈ ವಿಶ್ವದ ಕೆಲವು ದೇಶಗಳಲ್ಲಿ ಹಾವಿನ ಮಾಂಸ ಕಾನೂನುಬದ್ಧವಾಗಿದ್ದು ಹೋಟೆಲುಗಳಲ್ಲಿ ವಿಶೇಷ ಅಡುಗೆಗಳ ರೂಪದಲ್ಲಿ ಬಡಿಸಲಾಗುತ್ತದೆ. ಇದರಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವುದೆಂದರೆ ಹಾವಿನ ಸೂಪ್. ಚೀನಾ ದೇಶದಲ್ಲಿ ಹೆಚ್ಚು ಪ್ರಚಲಿತವಾಗಿರುವ ಈ ಸೂಪ್ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವರ್ಷದ ಇತಿಹಾಸ ಪಡೆದಿದೆ. ಚೀನಾದ ಗುವಾಂಗ್ಜೊಹು ಪ್ರದೇಶದಲ್ಲಿ ಈ ಸೂಪ್ ಹೆಚ್ಚು ಪ್ರಚಲಿತವಾಗಿದ್ದು ಈ ಸೂಪ್ ಕುಡಿಯುವ ಮೂಲಕ ಆರೋಗ್ಯ ವೃದ್ಧಿಸುತ್ತದೆ ಎನ್ನಲಾಗುತ್ತದೆ.

 ಈ ಸೂಪ್ ಹೇಗೆ ತಯಾರಿಸುತ್ತಾರೆ?

ಈ ಸೂಪ್ ಹೇಗೆ ತಯಾರಿಸುತ್ತಾರೆ?

ಈ ಸೂಪ್ ಕುಡಿಯುವವರು ಈ ಸೂಪ್ ಮಾಡುವುದನ್ನು ನೋಡದೇ ಇದ್ದರೇ ಒಳ್ಳೆಯದು. ಏಕೆಂದರೆ ಒಂದು ದೊಡ್ಡ ಪಾತ್ರೆಯಲ್ಲಿ ನೀರು ಕುದಿಸಿ ಕನಿಷ್ಠ ಎರಡು ವಿಧಗಳ ಹಾವುಗಳನ್ನು ಹಾಕಲಾಗುತ್ತದೆ. ಇದರೊಂದಿಗೆ ಸೇವಂತಿಗೆಯಂತಹ ಒಂದು ಬಗೆಯ ಹೂವಿನ ಗಿಡದ (chrysanthemum) ಎಲೆಗಳನ್ನೂ ಸೇರಿಸಲಾಗುತ್ತದೆ. ಇದು ಸೂಪ್‌ಗೆ ಸಿಹಿಯಾದ ರುಚಿ ನೀಡುತ್ತದೆ. ಇದರ ಜೊತೆಗೆ ವಿವಿಧ ಮಸಾಲೆಗಳನ್ನೂ ಸೇರಿಸಲಾಗುತ್ತದೆ. ಹಾವಿನ ಮಾಂಸ ಬೆಂದು ನುಚ್ಚುನೂರಾಗಿ ಚಿಕ್ಕ ಚಿಕ್ಕ ದಾರಗಳಂತೆ ಸೂಪ್‌ನಲ್ಲಿ ಮಿಶ್ರಣಗೊಳ್ಳುತ್ತವೆ. ಇದನ್ನು ಸೇವಿಸಿದವರು ವ್ಹಾ! ಥೇಟ್ ಚಿಕನ್ ನಂತೆಯೇ ಇದೆ ಎಂದು ಚಪ್ಪರಿಸುತ್ತಾರೆ.

ಇದರ ಆರೋಗ್ಯಕರ ಗುಣಗಳು

ಇದರ ಆರೋಗ್ಯಕರ ಗುಣಗಳು

ಹಾವಿನ ಸೂಪ್ ಕುಡಿಯುವ ಮೂಲಕ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ ಎಂದು ಚೀನೀಯರು ನಂಬುತ್ತಾರೆ. ವಿಶೇಷವಾಗಿ ರಕ್ತ ಶುದ್ಧೀಕರಣ, ಚರ್ಮದ ಕಾಂತಿ ಮತ್ತು ಸೆಳೆತ ಹೆಚ್ಚುವುದು ಹಾಗೂ ವ್ಯಕ್ತಿಯ ಶಕ್ತಿಯನ್ನು ಹೆಚ್ಚಿಸಲೂ ನೆರವಾಗುತ್ತದೆ ಎಂದು ಹೇಳಲಾಗುತ್ತದೆ.

English summary

Disgusting Viral Video Of A Man Eating Live Snake! Yikes!!

People do anything to grab others' attention. If this includes going out of the way and doing something bizarre, people do not mind. This is one such video that was taken in India where a man is seen relishing on a live snake in the video! This is going all viral and people are feeling disgusted with what they have just witnessed. Check out the video of the man who is seen relishing on the live snake, while the snake is seen wriggling in pain!
Story first published: Wednesday, August 9, 2017, 20:37 [IST]
X
Desktop Bottom Promotion