ಹಣವಿದ್ದವರು ಇಲ್ಲಿ ವೈನ್, ಕಾಫಿ, ಗ್ರೀನ್ ಟೀಯಲ್ಲಿ ಸ್ನಾನ ಮಾಡಬಹುದು!!

By: manu
Subscribe to Boldsky

ಪ್ರವಾಸ ಆನಂದಿಸಬೇಕಾದರೆ ಸ್ಪಾಗಳಿಗೆ ಹೋಗಿ ಏನಾದರೂ ಒಂದು ರೀತಿಯ ಮಸಾಜ್ ಅಥವಾ ಹೊಸತನ ಹುಡುಕುಬೇಕು. ಅದರಲ್ಲೂ ಕೆಲವೊಂದು ಸ್ಪಾಗಳು ತುಂಬಾ ವಿಶೇಷವಾಗಿರುವುದು. ಜಪಾನ್ ನಲ್ಲಿರುವ ಸ್ಪಾದಲ್ಲಿ ವೈನ್, ಗ್ರೀನ್ ಟೀ ಮತ್ತು ಕಾಫಿಯಿಂದ ಸ್ನಾನ ಮಾಡಬಹುದು. ಇದು ತುಂಬಾ ವಿಚಿತ್ರವಾಗಿ ಕಾಣಿಸಬಹುದು.

ಆದರೆ ಜಪಾನ್ ಗೆ ಪ್ರವಾಸ ಕೈಗೊಂಡರೆ ಈ ಸ್ಪಾಗೆ ಹೋಗಲು ಮರೆಯದಿರಿ. ಯುಮೆಸ್ಸೊನ್ ಸ್ಪಾ ರೆಸಾರ್ಟ್‌ನಲ್ಲಿ ನೂಡಲ್ಸ್ ಸ್ನಾನವು ಇದೆಯಂತೆ! ಈ ವಿಶೇಷವಾಗಿರುವ ಸ್ಪಾದ ಬಗ್ಗೆ ಮುಂದಕ್ಕೆ ಓದುತ್ತಾ ತಿಳಿಯಿರಿ...

ರೆಸಾರ್ಟ್ ಪ್ರಕಾರ

ರೆಸಾರ್ಟ್ ಪ್ರಕಾರ

ಕೆಂಪು ವೈನ್ ನಲ್ಲಿ ಈಜಾಡವುದು ದೇಹಕ್ಕೆ ಪುನಶ್ಚೇತನ ನೀಡುವುದು ಎಂದು ರೆಸಾರ್ಟ್ ಹೇಳುತ್ತದೆ. ವಿವಿಧ ರೀತಿಯ ಈಜುಕೊಳಗಳಲ್ಲಿ ಬೇರೆ ಬೇರೆ ರೀತಿಯ ವೈನ್ ಗಳಿವೆ. ಇದರಿಂದ ಬೇರೆ ಬೇರೆ ಆರೋಗ್ಯ ಲಾಭಗಳು ಸಿಗುವುದು.

ವೈನ್‌ನ ಈಜುಕೊಳ

ವೈನ್‌ನ ಈಜುಕೊಳ

ವೈನ್ ನ ಈಜುಕೊಳದಲ್ಲಿ ಸ್ನಾನ ಮಾಡುವುದು ತುಂಬಾ ಪರಿಣಾಮಕಾರಿ. ಇದರಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್ ಚರ್ಮವನ್ನು ಹೊರಗಿನ ಹಾನಿಯಿಂದ ತಡೆಯುವುದು. ಈ ಈಜುಕೊಳದಲ್ಲಿ ಸ್ನಾನ ಮಾಡುವುದು ತುಂಬಾ ಪರಿಣಾಮಕಾರಿ. ವೈನ್ ನಲ್ಲಿ ಸ್ನಾನ ಮಾಡುವುದು ಮಾತ್ರವಲ್ಲದೆ ಪ್ರವಾಸಿಗಳಿಗೆ ಕುಡಿಯಲು ಬೇರೆ ವೈನ್ ನೀಡಲಾಗುತ್ತದೆ.

ಗ್ರೀನ್ ಟೀ ಈಜುಕೊಳ

ಗ್ರೀನ್ ಟೀ ಈಜುಕೊಳ

ಜಪಾನ್ ನ ಟ್ಯಾನ್ಜಾವಾ ಮತ್ತು ಹಕೊನ್ ಪರ್ವತಗಳಲ್ಲಿ ಬೆಳೆದ ಹಸಿರು ಚಹಾದಿಂದ ತುಂಬಿದ ಸಣ್ಣ ಹೊರಾಂಗಣ ಕೊಳ ಇದಾಗಿದೆ. ಗ್ರೀನ್ ಟೀಯಲ್ಲಿ ಕ್ಯಾಟ್ಚಿನ್ಸ್ ಎನ್ನುವ ಆ್ಯಂಟಿಆಕ್ಸಿಡೆಂಟ್ ಇದ್ದು, ಇದು ಕೋಶಗಳನ್ನು ರಕ್ಷಿಸುವುದು ಮತ್ತು ಚರ್ಮವು ಯೌವನಭರಿತವಾಗಿರುವಂತೆ ಮಾಡುವುದು. ಮೂಲಗಳ ಪ್ರಕಾರ ಈ ಚಹಾ ಕೊಳವನ್ನು ಸುಮಾರು 42 ಡಿಗ್ರಿಯಷ್ಟು ಬಿಸಿಯಲ್ಲಿಡಲಾಗುತ್ತದೆ.

ಸ್ನಾನದ ಇತರ ಆಯ್ಕೆಗಳು

ಸ್ನಾನದ ಇತರ ಆಯ್ಕೆಗಳು

ಈ ರೆಸಾರ್ಟ್‌ನಲ್ಲಿ ಸ್ನಾನದ ಇತರ ಕೆಲವು ಆಯ್ಕೆಗಳು ಕೂಡ ಲಭ್ಯವಿದೆ. ಚಾಕಲೇಟ್ ಅಥವಾ ಉಪ್ಪು ನೀರಿನ ಸ್ನಾನವು ಇಲ್ಲಿ ಲಭ್ಯವಿದೆ. ಉಪ್ಪು ನೀರು ತುಂಬಾ ದಪ್ಪವಾಗಿರುವ ಕಾರಣದಿಂದ ಇದರ ಮೇಲೆ ತೇಲಾಡಬಹುದಾಗಿದೆ. ಇದು ತುಂಬಾ ವಿಶೇಷವಾದ ಪರಿಕಲ್ಪನೆಯಲ್ಲವೇ?ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮಗೆ ತಿಳಿಸಲು ಮರೆಯಬೇಡಿ. ಕಮೆಂಟ್ ಸೆಕ್ಸನ್ ನಿಮಗಾಗಿ ತೆರೆದಿದೆ.

English summary

Dip Yourself In A Pool Of Wine, Green Tea And Coffee Here!

When you are on a holiday what else would be better than you realising that the spa offers a wine, green tea or even a coffee bath? Sounds crazy, right? But there is a spa in Japan where one can enjoy all these facilities when on a vacation! According to sources, the Yunesson Spa Resort even offers a ramen noodle bath at the spa, as well as seasonal specials! So, check out on this unique spa!
Subscribe Newsletter