For Quick Alerts
ALLOW NOTIFICATIONS  
For Daily Alerts

ಹೌದು ಸ್ವಾಮಿ, ಇನ್ನು ಸತ್ತವರನ್ನು ಬದುಕಿಸುವುದು ಒಂದೇ ಬಾಕಿ ಇರುವುದು!!

By Hemanth
|

ಪ್ರಕೃತಿಯು ತುಂಬಾ ವಿಶಿಷ್ಟವಾಗಿದೆ ಎಂದು ಸುತ್ತಲು ಕಣ್ಣು ಹಾಯಿಸಿ ನೋಡಿದಾಗ ನಮಗೆ ತಿಳಿದುಬರುತ್ತದೆ. ಪ್ರಾಣಿ ಸಂಕುಲದಲ್ಲಿ ಕೆಲ ಪ್ರಾಣಿಗಳು ತಮ್ಮ ದೇಹದ ಭಾಗವನ್ನು ತುಂಡರಿಸಿಕೊಂಡರೂ ಅದು ಕೆಲವೇ ದಿನಗಳಲ್ಲಿ ಮತ್ತೆ ಬೆಳೆಯುತ್ತದೆ. ಮನೆಯ ಗೋಡೆಯ ಮೇಲಿರುವ ಕೆಲವು ಹಲ್ಲಿಗಳನ್ನು ನೋಡಿದರೆ ಅವುಗಳಿಗೆ ಬಾಲ ಇಲ್ಲದೆ ಇರಬಹುದು. ಆದರೆ ಕೆಲವೇ ದಿನಗಳಲ್ಲಿ ಅವುಗಳು ಬಾಲವನ್ನು ಮತ್ತೆ ಬೆಳೆಸಿಕೊಳ್ಳುತ್ತವೆ. ಆದರೆ ಮಾನವನಿಗೆ ಇಂತಹ ಅವಕಾಶವನ್ನು ಪ್ರಕೃತಿ ನೀಡಿಲ್ಲ.

ಮಾನವನಿಗೂ ತನ್ನ ದೇಹದ ಕೆಲವೊಂದು ಅಂಗಾಂಗಗಳೂ ಮರಳಿ ಬೆಳೆಯಬೇಕು ಎನ್ನುವ ಆಸೆ ಮಾತ್ರ ಇದ್ದೇ ಇರುತ್ತದೆ. ಮನುಷ್ಯನ ದೇಹದ ಅಂಗಾಂಗಳು ಮರಳಿ ಬೆಳೆಯಲು ಸಾಧ್ಯವೇ ಎಂದು ವಿಜ್ಞಾನಿಗಳು ಹಲವಾರು ವರ್ಷಗಳಿಂದ ಸಂಶೋಧನೆ ಮಾಡುತ್ತಲೇ ಇದ್ದಾರೆ. ಇದರಲ್ಲಿ ಕೆಲವೊಂದರಲ್ಲಿ ಅವರಿಗೆ ಯಶಸ್ಸು ಕೂಡ ಸಿಕ್ಕಿದೆ. ಮಾನವ ದೇಹದ ಎಂಟು ಭಾಗಗಳನ್ನು ಮತ್ತೆ ಬೆಳೆಸಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದರ ಬಗ್ಗೆ ತಿಳಿದುಕೊಳ್ಳಿ....

ಡಿಂಬನಾಳ ಕಾಂಡಕೋಶ (ಫಾಲೋಪಿಯನ್ ಟ್ಯೂಬ್)

ಡಿಂಬನಾಳ ಕಾಂಡಕೋಶ (ಫಾಲೋಪಿಯನ್ ಟ್ಯೂಬ್)

ಬರ್ಲಿನ್ ನಲ್ಲಿರುವ ಮ್ಯಾಕ್ಸ್ ಫ್ಲಾನಕ್ ಇನ್ ಸ್ಟಿಟ್ಯೂಟ್ ಫಾರ್ ಇನ್ ಫೆಕ್ಷನ್ ಬಯೋಲಾಜಿಯಲ್ಲಿ ಮಾನವ ದೇಹದ ಡಿಂಬನಾಳದ ಅತ್ಯಂತ ಸೂಕ್ಷ್ಮ ಪದರವನ್ನು ಬೆಳೆಸಿದ್ದಾರೆ. ಈ ಭಾಗವು ಅಂಡಾಶಯ ಮತ್ತು ಗರ್ಭಕೋಶವನ್ನು ಸಂಪರ್ಕಿಸುವುದು.

ಸಣ್ಣ ಮೆದುಳು

ಸಣ್ಣ ಮೆದುಳು

ಚರ್ಮದ ಕೋಶಗಳನ್ನು ಬಳಸಿಕೊಂಡು ಈ ಪ್ರಯೋಗಾಲಯದಲ್ಲಿ ಪೆನ್ಸಿಲ್‌ನ ರಬ್ಬರ್‌ನ ಗಾತ್ರದ ಮೆದುಳನ್ನು ಬೆಳೆಸಲಾಗಿದೆ. ಈ ಮೆದುಳು ತಾಯಿ ಗರ್ಭದಲ್ಲಿರುವ ಐದು ವಾರದ ಶಿಶುವಿನ ಮೆದುಳಿನಷ್ಟೇ ರಚನಾತ್ಮಕ ಹಾಗೂ ತಳೀಯವಾಗಿ ಸಮಾನವಾಗಿದೆ ಎಂದು ಒಹಿಯೋ ಸ್ಟೇಟ್ ಯೂನಿವರ್ಸಿಟಿ ವಿಜ್ಞಾನಿಗಳು ಹೇಳುತ್ತಾರೆ.

ಕಿರು ಹೃದಯ

ಕಿರು ಹೃದಯ

ಸಂಶೋಧಕರು ಕಾಂಡಕೋಶಗಳನ್ನು ಹೃದಯದ ಸ್ನಾಯುಗಳು ಮತ್ತು ಅಂಗಾಂಶಗಳ ಅಭಿವೃದ್ಧಿಗೆ ಬಳಸಿಕೊಂಡಿದ್ದಾರೆ. ಇದು ಬಡಿಯಲು ಆರಂಭಿಸುತ್ತಿರುವಂತೆ ಇದನ್ನು ಸಣ್ಣ ಚೆಂಬರ್‌ಗಳು ಮತ್ತು ವಯೊಲಾಗಳಾಗಿ ಆಯೋಜಿಸಲಾಗಿದೆ ಎಂದು ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ಬಯೋಇಂಜಿನಿಯರಿಂಗ್‌ನ ಪ್ರಾಧ್ಯಾಪಕ ಮತ್ತು ಹಿರಿಯ ಸಹ ಲೇಖಕ ಕೆವಿನ್ ಹೀಲಿ ಹೇಳಿದ್ದಾರೆ. ಈ ತಂತ್ರಜ್ಞಾನವು ಹುಟ್ಟುವ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಹೃದಯ ಸಮಸ್ಯೆಯನ್ನು ಪತ್ತೆಯಹಚ್ಚಲು ನೆರವಾಗಲಿದೆ ಮತ್ತು ಗರ್ಭದಲ್ಲಿರುವಾಗ ಯಾವ ಔಷಧಿಯು ಅಪಾಯಕಾರಿ ಎಂದು ತಿಳಿದುಬರಲಿದೆ.

ಕಿರು ಕಿಡ್ನಿ

ಕಿರು ಕಿಡ್ನಿ

ಕಿಡ್ನಿಯ ಜೀವಕೋಶಗಳ ಮೂರು ವಿಭಿನ್ನ ರೀತಿಯ ಅಂಗಾಂಗಳನ್ನು ರೂಪಿಸಲು ಕಾಂಡಕೋಶಗಳನ್ನು ಪ್ರತ್ಯೇಕಿಸಿ ಕಿರು ಕಿಡ್ನಿಯನ್ನು ಆಸ್ಟ್ರೇಲಿಯಾದ ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಸಂಶೋಧನೆ ವೇಳೆ ಅಂಗವನ್ನು ಸಾಮಾನ್ಯ ಕಿಡ್ನಿ ಬೆಳೆಯುವ ರೀತಿಯಲ್ಲೇ ಬೆಳೆಸಲಾಗಿದೆ.

ಕಿರು ಶ್ವಾಸಕೋಶ

ಕಿರು ಶ್ವಾಸಕೋಶ

ವಿವಿಧ ಸಂಸ್ಥೆಗಳಿಂದ ಜತೆ ಸೇರಿದ ವಿಜ್ಞಾನಿಗಳು 3ಡಿ ಶ್ವಾಸಕೋಶವನ್ನು ಬೆಳೆಸಿದ್ದಾರೆ. ಇದು ಶ್ವಾಸಕೋಶ ಮತ್ತು ಶ್ವಾಸಕೋಶದ ಚೀಲಗಳನ್ನು ಬೆಳೆಸಿದೆ.

ಸಣ್ಣ ಹೊಟ್ಟೆ

ಸಣ್ಣ ಹೊಟ್ಟೆ

ಇದು ಅಸಾಧ್ಯವೆಂದು ನಮಗೆ ಅನಿಸುವುದುಂಟು. ಆದರೆ ವೈದ್ಯಕೀಯ ಜಗತ್ತಿನಲ್ಲಿ ಅಸಾಧ್ಯವೆನ್ನುವುದು ಇಲ್ಲ. ಸಂಶೋಧನೆಗಳ ಪ್ರಕಾರ ಕೇವಲ ಒಂದು ತಿಂಗಳ ಅವಧಿಯಲ್ಲಿ ಸಣ್ಣ ಹೊಟ್ಟೆಯನ್ನು ಬೆಳಸಬಹುದಾಗಿದೆ. ಅಂಡಾಕಾರ ಮತ್ತು ಟೊಳ್ಳು ವಿನ್ಯಾಸದ ಎರಡು ರೀತಿಯ ಹೊಟ್ಟೆಯನ್ನು ತಯಾರಿಸಲಾಗಿದೆ.

ಯೋನಿ

ಯೋನಿ

ಯೋನಿಯ ಆಕಾರದ ಸ್ಕ್ಯಾಫೋಲ್ಡ್ನಲ್ಲಿ ಮಹಿಳೆಯ ಜೀವಕೋಶಗಳನ್ನು ಪೋಷಿಸಿ ಪ್ರಯೋಗಾಲಯದಲ್ಲಿ ಬೆಳೆಸಿರುವಂತಹ ಯೋನಿಯನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ ಎಂದು ಪ್ರಮುಖ ಜರ್ನಲ್ ಒಂದು ವರದಿ ಮಾಡಿದೆ. ಅಧ್ಯಯನಗಳ ಪ್ರಕಾರ ಕೆಲವು ವರ್ಷಗಳ ಮೊದಲೇ 13ರಿಂದ 18ರ ವಯಸ್ಸಿನ ಹುಡುಗಿಯರಿಗೆ ಈ ಕಸಿಯನ್ನು ಮಾಡಲಾಗಿದೆ. ಜನನಾಂಗದ ತೊಂದರೆ ಇರುವಂತವರಿಗೆ ಈ ಕಸಿ ನಡೆಸಲಾಗಿದೆ. ಯೋನಿ ಮತ್ತು ಗರ್ಭಕೋಶ ಬೆಳೆಯದೇ ಇರುವುದು ಅಥವಾ ಇಲ್ಲದೇ ಇರುವಂತವರಿಗೆ ಈ ಕಸಿ ಮಾಡಲಾಗಿದೆ. ಕಸಿ ಮಾಡಿದ ಅಂಗವು ಸಾಮಾನ್ಯದಂತೆ ಕಾರ್ಯ ನಿರ್ವಹಿಸುತ್ತಿದೆಯಾ ಎಂದು ತಿಳಿಯಲು ಹದಿಹರೆಯದ ಹುಡುಗಿಯರನ್ನು ಸುಮಾರು 8 ವರ್ಷಗಳ ಕಾಲ ಪರೀಕ್ಷಿಸಲಾಯಿತು ಎಂದು ಜರ್ನಲ್‌ನಲ್ಲಿ ವರದಿಯಾಗಿದೆ.

English summary

Different Body Parts That Are Grown In A Lab!

When a lizard gets into its defensive mode, the first thing it does is sheds its tail and this is an action of defense mechanism. But the fact is it regrows its tail in couple of days again. Don't we humans always wish we could also regrow some of our body parts in any accidental case? Here, in this article, we are throwing light on some of the science bit, where one can regrow 8 different human body parts and this is NO JOKE, as it is scientifically proven. Check them out.
X
Desktop Bottom Promotion