ಹುಷಾರು! ನೀವು ಕುಳಿತುಕೊಳ್ಳುವುದನ್ನು ನೋಡಿ ವ್ಯಕ್ತಿತ್ವ ನಿರ್ಧರಿಸಬಹುದಂತೆ!

By: manu
Subscribe to Boldsky

ವ್ಯಕ್ತಿ ನಡೆಯುವುದು, ಮಾತನಾಡುವುದು ಹಾಗೂ ಕುಳಿತುಕೊಳ್ಳುವುದು ಸಹ ಅವನ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಇವುಗಳಿಂದ ವ್ಯಕ್ತಿಯ ಸ್ವಭಾವ ಏನೆಂದು ತಿಳಿದುಕೊಳ್ಳಲು ಸುಲಭವಾಗುವುದು. ಒಬ್ಬ ವ್ಯಕ್ತಿ ಮಾತನಾಡುವುದು, ಕುಳಿತುಕೊಳ್ಳುವುದು ಹಾಗೂ ನಿಮ್ಮೊಂದಿಗೆ ವ್ಯವಹರಿಸುವುದನ್ನು ಸುಲಭವಾಗಿ ಬಹಿರಂಗಪಡಿಸಬಹುದು. ಕೆಲವೊಮ್ಮೆ ವ್ಯಕ್ತಿಯ ವೇಷ ಭೂಷಣಗಳು ಒಂದು ಬಗೆಯ ಅಭಿಪ್ರಾಯವನ್ನು ನೀಡಿದರೆ, ಅವರ ನಡವಳಿಕೆ ಮತ್ತು ಮಾತುಗಳೇ ಬೇರೆಯದನ್ನು ಹೇಳುತ್ತದೆ.

ಇಂತಹ ಸಮಸ್ಯೆಯಿಂದ ಹೊರ ಬಂದು, ವ್ಯಕ್ತಿಯ ವ್ಯಕ್ತಿತ್ವವನ್ನು ಸುಲಭವಾಗಿ ಕಂಡುಹಿಡಿಯಬಹುದು. ಜೊತೆಗೆ ನಮಗೆ ಸೂಕ್ತ ವ್ಯಕ್ತಿ ಎಂದೆನಿಸಿದರೆ ವ್ಯವಹಾರ ಮುಂದುವರಿಸಬಹುದು. ವ್ಯಕ್ತಿ ಕುಳಿತುಕೊಳ್ಳುವ ಭಂಗಿಯು ವ್ಯಕ್ತಿತ್ವದ ಬಹುಮುಖ್ಯ ವಿಚಾರವನ್ನು ಬಿಚ್ಚಿಡುತ್ತದೆ ಎಂದು ವ್ಯಕ್ತಿತ್ವ ವಿಕಸನ ವಿಚಾರದಲ್ಲಿ ಹೇಳಲಾಗುತ್ತದೆ. ನಿಮಗೂ ಕುಳಿತುಕೊಳ್ಳುವ ಶೈಲಿಯ ಬಗ್ಗೆ ತಿಳಿದು ಕೊಳ್ಳಬೇಕೆಂದೆನಿಸಿದರೆ ಮುಂದೆ ಓದಿ...

ಭಂಗಿ -1

ಭಂಗಿ -1

ಈ ರೀತಿ ಕುಳಿತುಕೊಳ್ಳುವವರು ಜವಾಬ್ದಾರಿಯುತ ವ್ಯಕ್ತಿ ಎಂದು ಹೇಳಲಾಗುತ್ತದೆ. ಸಮಸ್ಯೆಯಿಂದ ಹೊರ ಬರುವುದಕ್ಕಿಂತ, ಸಮಸ್ಯೆಯನ್ನು ಎದುರಿಸುವುದು ಸೂಕ್ತ ಎನ್ನುವುದು ಇವರ ಅಭಿಪ್ರಾಯವಾಗಿರುತ್ತದೆ. ಆಕರ್ಷಕ, ಸೃಜನ ಶೀಲ ಹಾಗೂ ನೇರ ನುಡಿಯ ಪ್ರವೃತ್ತಿಯವರು. ಆದರೆ ಪರಿಸ್ಥಿತ ಗಂಭೀರ ಎನಿಸಿದಾಗ ಸಮಸ್ಯೆಯನ್ನು ಸುಲಭವಾಗಿ ಬೇರೆಯವರ ಮೇಲೆ ಹಾಕುತ್ತಾರೆ.

ಭಂಗಿ-2- ಇವರು ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ!

ಭಂಗಿ-2- ಇವರು ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ!

ಇವರು ಸದಾ ಕಲ್ಪನೆಯ ಲೋಕದಲ್ಲಿ ಇರುತ್ತಾರೆ. ಸದಾ ವಿಭಿನ್ನವಾದ ನಿರ್ಣಯವನ್ನು ಕೈಗೊಳ್ಳೂತ್ತಾರೆ. ಇವರು ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ. ಜೀವನದ ಅವಧಿಯನ್ನು ಗೌರವಿಸುತ್ತಾರೆ. ಜೊತೆಗೆ ಜೀವನವನ್ನು ಆನಂದಿಸುತ್ತಾರೆ.

ಭಂಗಿ-3 - ಇವರು ಏನೇನೋ ವಿಚಾರಗಳ ಬಗ್ಗೆ ಚಿಂತಿಸುತ್ತಿರುತ್ತಾರೆ

ಭಂಗಿ-3 - ಇವರು ಏನೇನೋ ವಿಚಾರಗಳ ಬಗ್ಗೆ ಚಿಂತಿಸುತ್ತಿರುತ್ತಾರೆ

ಈ ವ್ಯಕ್ತಿಗಳನ್ನು ಸುಲಭವಾಗಿ ರಾಜಿಮಾಡಿಕೊಳ್ಳಲು ಸಾಧ್ಯವಿಲ್ಲ. ಇವರು ಸದಾ ಏನೇನೋ ವಿಚಾರಗಳ ಬಗ್ಗೆ ಚಿಂತಿಸುತ್ತಿರುತ್ತಾರೆ. ಒಂದೇ ವಿಷಯದ ಮೇಲೆ ಕೇಂದ್ರಿಕರಿಸುವುದಿಲ್ಲ. ಸದಾ ಆರಾಮದಾಯಕ ಜೀವನವನ್ನು ಇಷ್ಟಪಡುತ್ತಾರೆ.

ಭಂಗಿ-4- ಇವರು ಅತ್ಯಂತ ಶಿಸ್ತು ಬದ್ಧ ವ್ಯಕ್ತಿಗಳಾಗಿರುತ್ತಾರೆ

ಭಂಗಿ-4- ಇವರು ಅತ್ಯಂತ ಶಿಸ್ತು ಬದ್ಧ ವ್ಯಕ್ತಿಗಳಾಗಿರುತ್ತಾರೆ

ಇವರು ಅತ್ಯಂತ ಶಿಸ್ತು ಬದ್ಧ ವ್ಯಕ್ತಿಗಳಾಗಿರುತ್ತಾರೆ. ಸಮಯಕ್ಕೆ ತಕ್ಕಂತೆ ಇರುತ್ತಾರೆ. ಅಂತರ್ಮುಖಿ ವ್ಯಕ್ತಿತ್ವದವರಾದ ಇವರು ಸದಾ ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ. ಉತ್ತಮ ವ್ಯಕ್ತಿತ್ವ ಮತ್ತು ಶಿಸ್ತುಬದ್ಧವಲ್ಲದ ಜನರನ್ನು ಇಷ್ಟಪಡುತ್ತಾರೆ.

ಭಂಗಿ-5 - ಇವರು ಸ್ವಲ್ಪ ಮೊಂಡು ಸ್ವಭಾವದವರಾಗಿರುತ್ತಾರೆ

ಭಂಗಿ-5 - ಇವರು ಸ್ವಲ್ಪ ಮೊಂಡು ಸ್ವಭಾವದವರಾಗಿರುತ್ತಾರೆ

ಇವರು ಸ್ವಲ್ಪ ಮೊಂಡು ಸ್ವಭಾವದವರಾಗಿರುತ್ತಾರೆ. ಮೇಲ್ನೋಟಕ್ಕೆ ತಮ್ಮ ಸ್ವಭಾವವನ್ನು ತೋರಿಸಿಕೊಳ್ಳುವುದಿಲ್ಲ. ತಮ್ಮ ತೀರ್ಮಾನಗಳಲ್ಲಿ ಬಹಳ ಸ್ಥಿರತೆಯನ್ನು ಹೊಂದಿರುತ್ತಾರೆ. ಇವರು ಹಸಿವೆಯಿಂದ ಇರುವುದನ್ನು ಸಹಿಸುವುದಿಲ್ಲ.

English summary

Did You Know That The Way You Sit Can Reveal A Lot About You?

Here are a few things that reveal about the way a person would sit and it could let you know of certain personality traits of the person. Wondering how? Well, the different sitting positions and the style of sitting can let us know on what the person is like. Read to know about what your sitting posture tells about you.
Subscribe Newsletter