ಗೌಳಿ ಶಾಸ್ತ್ರ: ಬನ್ನಿ ಬನ್ನಿ ಹಲ್ಲಿ ಶಕುನ ಕೇಳ ಬನ್ನಿ!

By: manu
Subscribe to Boldsky

ಸಾಮಾನ್ಯವಾಗಿ ಹಲ್ಲಿ ವ್ಯಕ್ತಿಯ ಮೇಲೆ ಬಿದ್ದರೆ ಅದನ್ನು ದುರದೃಷ್ಟಕರ ಮತ್ತು ಕೆಟ್ಟ ಶಕುನ ಎಂದು ಪರಿಗಣಿಸಲಾಗುತ್ತದೆ. ಪ್ರಾಚೀನ ಲಿಪಿಯ ಪ್ರಕಾರ ದೇಹದ ಕೆಲವು ಭಾಗಗಳಲ್ಲಿ ಹಲ್ಲಿ ಬಿದ್ದರೆ ಅದು ಭವಿಷ್ಯದ ವಿಚಾರವನ್ನು ಹೇಳುತ್ತದೆ ಎನ್ನಲಾಗುವುದು. ಹಲ್ಲಿ ಮೈ ಮೇಲೆ ಬೀಳುವುದು ಒಂದು ಬಗೆಯ ಅಸಹ್ಯ ಹಾಗೂ ಹೆದರಿಕೆಯನ್ನು ಉಂಟುಮಾಡುತ್ತದೆಯಾದರೂ, ಇದು ಕೆಲವೊಂದು ಅದೃಷ್ಟದ ಶಕುನವನ್ನು ಮತ್ತು ಕೆಟ್ಟ ಅದೃಷ್ಟವನ್ನು ಹೇಳುತ್ತದೆ.

ಅಕಸ್ಮಾತ್ ಆಗಿ ಹಲ್ಲಿ ಮೈಮೇಲೆ ಬಿದ್ದರೆ ಅಪಶಕುನವೇ?

ಗೌಳಿ ಶಾಸ್ತ್ರ ಎಂಬ ಅಧ್ಯಯನದ ಪ್ರಕಾರ ಗೋಡೆ ಮೇಲೆ ಹರೆಯುವ ಹಲ್ಲಿಗಳು ಮೈ ಮೇಲೆ ಬಿದ್ದರೆ ಏನೆಲ್ಲಾ ಅರ್ಥವನ್ನು ನೀಡುತ್ತದೆ? ಹಾಗೂ ನಮ್ಮ ದೇಹದ ಯಾವ ಭಾಗದಲ್ಲಿ ಹಲ್ಲಿ ಬಿದ್ದರೆ ಏನು ಭವಿಷ್ಯವನ್ನು ನುಡಿಯುತ್ತದೆ ಎನ್ನುವುದನ್ನು ವಿವರವಾಗಿ ಹೇಳಲಾಗಿದೆ. ನಿಮಗೂ ಈ ವಿಷಯದ ಕುರಿತು ಹೆಚ್ಚು ಕುತೂಹಲ ಹಾಗೂ ಆಸಕ್ತಿ ಮೂಡುತ್ತಿದೆ ಎಂದಾದರೆ ಇಲ್ಲಿದೆ ನೋಡಿ ಹೆಚ್ಚಿನ ವಿವರಣೆ....

ತಲೆಯ ಮೇಲೆ ಬಿದ್ದರೆ- ವಿವಾದಗಳು/ಸಂಘರ್ಷಗಳಿಗೆ ಸಿದ್ಧರಾಗಿರಿ!

ತಲೆಯ ಮೇಲೆ ಬಿದ್ದರೆ- ವಿವಾದಗಳು/ಸಂಘರ್ಷಗಳಿಗೆ ಸಿದ್ಧರಾಗಿರಿ!

ತಲೆಯ ಮೇಲ್ಭಾಗದಲ್ಲಿ - ಸಾವಿನ ಭಯವನ್ನು ಸೂಚಿಸುತ್ತದೆ.

ಮುಖದ ಮೇಲೆ - ಹಣಕಾಸಿನ ಲಾಭವನ್ನು ಸೂಚಿಸುತ್ತದೆ

ಎಡ ಕಣ್ಣಿನ ಮೇಲೆ - ಇದು ಒಳ್ಳೆಯ ಸೂಚನೆ

ಬಲ ಕಣ್ಣಿನ ಮೇಲೆ- ವಿಫಲ/ವೈಫಲ್ಯ/ನಷ್ಟವನ್ನು ಸೂಚಿಸುತ್ತದೆ

ಹಣೆಯ ಮೇಲೆ - ಬೇರ್ಪಡಿಕೆಯನ್ನು ಸೂಚಿಸುತ್ತದೆ.

ಬಲ ಕೆನ್ನೆಯ ಮೇಲೆ ಬಿದ್ದರೆ -ದುಃಖ

ಎಡ ಕಿವಿ -ಲಾಭದಾಯಕ/ಆದಾಯ ಹೆಚ್ಚುವುದು

ಮೇಲಿನ ತುಟಿ- ವಿವಾದಗಳಿಗೆ ಸಿದ್ಧರಾಗಿ ಎನ್ನುವ ಸೂಚನೆ ನೀಡುತ್ತದೆ.

ಹಲ್ಲಿ ಪುರುಷರ ಮೇಲೆ ಬಿದ್ದರೆ ಹೇಳುವ ಭವಿಷ್ಯದ ಮುಂದುವರಿದ ಭಾಗ...

ಹಲ್ಲಿ ಪುರುಷರ ಮೇಲೆ ಬಿದ್ದರೆ ಹೇಳುವ ಭವಿಷ್ಯದ ಮುಂದುವರಿದ ಭಾಗ...

ಕೆಳ ತುಟಿ- ಆರ್ಥಿಕ ಲಾಭದ ನಿರೀಕ್ಷೆ

ಎರಡು ತುಟಿಯ ಮೇಲೆ ಒಮ್ಮೆಲೇ ಬಿದ್ದರೆ- ಸಾವಿನ ಭಯ

ಬಾಯಿ ಮೇಲೆ - ಕೆಟ್ಟ ಆರೋಗ್ಯದ ಭಯ

ಬೆನ್ನಿನ ಎಡಭಾಗದಲ್ಲಿ - ಪುನಃ ಜಯ

ಮಣಿಕಟ್ಟು - ಸೌಂದರ್ಯವರ್ಧಕ/ ಹೊಸ ಮಾರ್ಪಾಡು

ತೋಳಿನ ಮೇಲೆ - ಆರ್ಥಿಕ ನಷ್ಟ/ ವೈಫಲ್ಯ

ಬೆರಳಿನ ಮೇಲೆ - ಹಳೆಯ ಸ್ನೇಹಿತರ ಭೇಟಿ

ಬಲಗೈ ಮೇಲೆ - ತೊಂದರೆ/ಸಂಕೀರ್ಣತೆ

ಎಡಗೈ ಮೇಲೆ - ಅವಮಾನ ಉಂಟಾಗುವುದು

ತೊಡೆ- ಉಡುಪು ನಷ್ಟ

ಮೀಸೆ- ಅಡಚಣೆಗಳುಂಟಾಗುವುದು

ಹಿಮ್ಮಡಿ- ಪ್ರಯಾಣಕ್ಕೆ ಸಿದ್ಧರಾಗಿ ಎನ್ನುವ ಸೂಚನೆ

ಪಾದದ ಹೆಬ್ಬೆಟ್ಟು- ಶಾರೀರಿಕ ಅನಾರೋಗ್ಯ

ಮಹಿಳೆಯರ ಮೇಲೆ ಬಿದ್ದರೆ ಹೇಳುವ ಭವಿಷ್ಯ

ಮಹಿಳೆಯರ ಮೇಲೆ ಬಿದ್ದರೆ ಹೇಳುವ ಭವಿಷ್ಯ

ತಲೆಯ ಮೇಲೆ ಬಿದ್ದರೆ - ಸಾವಿನ ಭಯ

ಕೇಶರಾಶಿಯ ಗಂಟು- ಅನಾರೋಗ್ಯದ ಚಿಂತೆ

ಮೊಣಕಾಲಿನ ಹಿಂಭಾಗ- ಸಂದರ್ಶಕರ ಆಗಮನ

ಎಡ ಕಣ್ಣು- ನಿರೀಕ್ಷಿತ ವ್ಯಕ್ತಿಯಿಂದ ಪ್ರೀತಿ ಪಡೆಯುವಿರಿ

ಬಲ ಕಣ್ಣು- ಮಾನಸಿಕ ಒತ್ತಡ

ಎದೆ- ಇದು ಒಳ್ಳೆಯದು

ಬಲ ಕೆನ್ನೆ- ಗಂಡು ಮಗು ಹುಟ್ಟುವುದು

ಬಲ ಕಿವಿ- ಹಣಕಾಸಿನ ಲಾಭ

ಮೇಲಿನ ತುಟಿ- ವಿವಾದಗಳಿಗೆ ಸಿದ್ಧರಾಗಿ

ಮಹಿಳೆಯರ ಮೇಲೆ ಬಿದ್ದರೆ ಹೇಳುವ ಭವಿಷ್ಯದ ಮುಂದುವರಿದ ಭಾಗ

ಮಹಿಳೆಯರ ಮೇಲೆ ಬಿದ್ದರೆ ಹೇಳುವ ಭವಿಷ್ಯದ ಮುಂದುವರಿದ ಭಾಗ

ಕೆಳ ತುಟಿ- ಹೊಸ ವಸ್ತುಗಳನ್ನು ಪಡೆಯುವಿರಿ

ಎರಡು ತುಟಿಗಳ ಮೇಲೆ ಒಮ್ಮೆಲೆ ಬಿದ್ದರೆ- ತೊಂದರೆಗಳನ್ನು ಎದುರಿಸಲು ಸಿದ್ಧರಾಗಿ

ಸ್ತನ- ಅತೃಪ್ತಿ ಸಂಭವಿಸುವುದು

ಬೆನ್ನಿನ ಮೇಲೆ - ಸಾವಿನ ಸುದ್ದಿ ನಿರೀಕ್ಷಿಸಬಹುದು.

ಉಗುರುಗಳ ಮೇಲೆ - ಘರ್ಷಣೆ ಉಂಟಾಗುವುದು

ಮಹಿಳೆಯರ ಮೇಲೆ ಬಿದ್ದರೆ ಹೇಳುವ ಭವಿಷ್ಯದ ಮುಂದುವರಿದ ಭಾಗ

ಮಹಿಳೆಯರ ಮೇಲೆ ಬಿದ್ದರೆ ಹೇಳುವ ಭವಿಷ್ಯದ ಮುಂದುವರಿದ ಭಾಗ

ಕೈಗಳ ಮೇಲೆ -ಆರ್ಥಿಕ ಲಾಭ

ಎಡಗೈ -ಮಾನಸಿಕ ಒತ್ತಡ

ಬೆರಳುಗಳು- ಆಭರಣಗಳ ಪಡೆಯುವಿರಿ

ಬಲಗೈ- ಪ್ರಣಯ ಸಂಭವಿಸಬಹುದು

ಭುಜದ ಮೇಲೆ ಬಿದ್ದರೆ- ಆಭರಣಗಳನ್ನು ಪಡೆಯುವಿರಿ

ತೊಡೆ- ಪ್ರಣಯವನ್ನು ನಿರೀಕ್ಷಿಸಿ

ಮಂಡಿ- ಅವಿವೇಕದ ಪ್ರೀತಿ ನಿರೀಕ್ಷೆ

ಪಾದದ ಗಂಟು/ಪಾದದ ಕೀಲು- ತೊಂದರೆ ಉಂಟಾಗುವುದು

ಬಲ ಕಾಲು- ಸೂಲು/ ನಷ್ಟವಾಗುವುದು

ಪಾದದ ಹೆಬ್ಬೆಟ್ಟು- ಹುಟ್ಟುವ ಮಗು ಗಂಡಾಗಿರುವ ಸೂಚನೆ

English summary

Did You Know That Lizards Can Predict A Person's Future?

Generally, when a lizard falls on a person, it is considered to be unlucky and a bad omen. As per ancient scripts, it is mentioned that falling of lizards on certain parts of the body can signify something or predict details of future.
Subscribe Newsletter