ನೀವು ಬಚ್ಚಿಟ್ಟ ವಿಚಾರಗಳನ್ನು ರಾಶಿಚಕ್ರ ಬಿಚ್ಚಿಡುತ್ತದೆ ಹುಷಾರು!

By: manu
Subscribe to Boldsky

ರಾಶಿ ಚಕ್ರವು ನಮ್ಮ ಜೀವನದ ಬಗ್ಗೆ ಎಲ್ಲವನ್ನೂ ಬಹಿರಂಗಪಡಿಸುತ್ತದೆ. ಸಾಮಾನ್ಯವಾಗಿ ರಾಶಿ ಚಕ್ರವು ನಮ್ಮ ಭವಿಷ್ಯದ ಬಗ್ಗೆ ಹಾಗೂ ಮುಂಬರುವ ಕಷ್ಟ ನಷ್ಟಗಳ ಬಗ್ಗೆ ಹೇಳುತ್ತದೆ ಎಂದು ನಂಬಲಾಗುತ್ತದೆ. ಆದರೆ ರಾಶಿ ಚಕ್ರ ಎನ್ನುವುದು ನಮ್ಮ ಕಲ್ಪನೆಗೂ ಮೀರಿರುವ ಅನೇಕ ವಿಚಾರಗಳನ್ನು ಹೇಳುತ್ತದೆ.

ನಮ್ಮ ಭಾವನೆಗಳು ಹಾಗೂ ಮನಸ್ಸಿನ ಮಾತುಗಳು ರಾಶಿ ಚಕ್ರವನ್ನೇ ಆಧರಿಸಿರುತ್ತದೆ ಎನ್ನುತ್ತದೆ. ಪ್ರತಿಯೊಂದು ರಾಶಿ ಚಕ್ರವೂ ವಿಭಿನ್ನ ಮನಸ್ಥಿತಿಯನ್ನು ಬಹಿರಂಗ ಪಡಿಸುತ್ತದೆ. ನಿಮ್ಮವರ ಹಾಗೂ ಸ್ನೇಹಿತರ ಮನದಾಳದ ಮಾತುಗಳನ್ನು ರಾಶಿಚಕ್ರದ ಆಧಾರದ ಮೇಲೆ ತಿಳಿದುಕೊಳ್ಳಬಹುದು. ಈ ವಿಚಾರ ನಿಮಗೆ ಇನ್ನಷ್ಟು ಕುತೂಹಲ ಮೂಡಿಸುತ್ತಿದೆ ಎಂದಾದರೆ ತಡಮಾಡದೆ ಮುಂದೆ ಓದಿ... ವಿಶೇಷವಾದ ನಿಮ್ಮ ವ್ಯಕ್ತಿತ್ವ ಹಾಗೂ ಭಾವನೆಗಳ ಬಗ್ಗೆ ಅರಿಯಿರಿ... 

ಮೇಷ

ಮೇಷ

ಇವರು ಹೆಸರಾಂತ ವ್ಯಕ್ತಿಗಳಾಗುತ್ತಾರೆ. ವಿಶೇಷ ವ್ಯಕ್ತಿತ್ವದವರಾದ ಇವರು ಇವರದೇ ಆದ ನೀತಿಯನ್ನು ಹೊಂದಿರುತ್ತಾರೆ. ಇತರರನ್ನು ಅನುಸರಿಸುವುದಕ್ಕಿಂತ ಹೆಚ್ಚಾಗಿ ಜನರಿಗೆ ದಾರಿ ದೀಪವಾಗುತ್ತಾರೆ. ಅತಿಯಾದ ಪ್ರೀತಿ ಕಾಳಜಿ ತೋರಿಸುವ ಇವರು ತಮಾಷೆಯ ಪ್ರವೃತ್ತಿಯನ್ನು ಹೋದಿರುತ್ತಾರೆ.

ವೃಷಭ

ವೃಷಭ

ಆಳವಾದ ಬಯಕೆ ಉಳ್ಳವರಾದ ಇವರು ಭದ್ರತೆಯನ್ನು ಬಯಸುತ್ತಾರೆ. ಕೆಲವು ಅಗತ್ಯತೆಗಳನ್ನು ಪೂರೈಸಬೇಕಾದ ಸ್ಥಿತಿ ಎದುರಾದಾಗ ಸ್ಥಿರತೆಯನ್ನು ಹೊಂದುತ್ತಾರೆ. ಇವರ ಕೆಲವು ಮೊಂಡು ಸ್ವಭಾವ ಜನರಿಗೆ ತಪ್ಪಾಗಿ ಅರ್ಥೈಸುತ್ತದೆ.

ಮಿಥುನ

ಮಿಥುನ

ಇವರು ದೊಡ್ಡ ದೊಡ್ಡ ಅಪೇಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಹೊಸ ಹೊಸ ಸವಾಲನ್ನು ಸ್ವೀಕರಿಸುವ ಮನೋಭಾವ ಹೊಂದುವಂತವರಾದ ಇವರು ಸದಾ ಪ್ರಯಾಣದಲ್ಲಿರಲು ಬಯಸುತ್ತಾರೆ. ಸದಾ ಸ್ವತಂತ್ರವಾಗಿರಲು ಇಷ್ಟ ಪಡುತ್ತಾರೆ.

ಕರ್ಕ

ಕರ್ಕ

ಇವರದ್ದು ಅನೇಕ ಗುರಿಗಳಿರುತ್ತವೆ. ಅವುಗಳ ಈಡೇರಿಕೆಗೆ ಸ್ವತಂತ್ರವಾಗಿ ಹೋರಾಡಲು ಇಷ್ಟಪಡುತ್ತಾರೆ. ಮನಸ್ಸಿಗೆ ಏನಾದರೂ ಪಡೆದುಕೊಳ್ಳಬೇಕು ಎಂದಾದರೆ, ಅದನ್ನು ಪಡೆದುಕೊಳ್ಳುವವರೆಗೂ ಹೋರಾಟ ನಡೆಸುತ್ತಲೇ ಇರುತ್ತಾರೆ. ಇವರನ್ನು ಇತರರು ತುಳಿಯಲು ಸಾಧ್ಯವಿಲ್ಲ. ಇವರು ಬಹಳ ಮುಜುಗರ ಹಾಗೂ ಸಂವೇದನಾಶೀಲ ಪ್ರವೃತ್ತಿಯವರೂ ಹೌದು.

ಸಿಂಹ

ಸಿಂಹ

ಇವರು ಮಾಡುವ ಕೆಲಸಕ್ಕೆ ಸದಾ ಯಶಸ್ಸು ದೊರೆಯುವುದು. ಮೆಚ್ಚುಗೆಯೂ ಹರಿದು ಬರುವುದು. ಗೌರವದಿಂದ ಇರಲು ಬಯಸುವ ಇವರು ಗುರಿ ಸಾಧನೆಗೆ ತಮ್ಮ ದಾರಿಯನ್ನು ಬಿಟ್ಟು ಹೋಗುತ್ತಾರೆ.

ಕನ್ಯಾ

ಕನ್ಯಾ

ಇವರಿಗೆ ಇಷ್ಟವಾದವರನ್ನು ಬಹಳ ಆಳವಾಗಿ ಪ್ರೀತಿಸುತ್ತಾರೆ. ಇವರು ರೋಮಾಂಚಕ ಹಾಗೂ ರೋಮ್ಯಾಂಟಿಕ್ ವಿಚಾರದಲ್ಲಿ ಹತಾಶೆಯನ್ನು ಹೊಂದುತ್ತಾರೆ. ತಮ್ಮ ಪ್ರೀತಿಯಲ್ಲಿ ನಂಬಿಕೆಯನ್ನು ಇಡುತ್ತಾರೆ.

ತುಲಾ

ತುಲಾ

ಇವರ ಆಸೆ ಮತ್ತು ಸ್ಪಷ್ಟತೆ ಸಮತೋಲನದಲ್ಲಿರುತ್ತದೆ. ಮನಸ್ಸಿಗೆ ಬೇಡದ ಅಥವಾ ಅಸ್ಪಷ್ಟತೆಯ ವಿಚಾರಗಳ ಬಗ್ಗೆ ಹೆಚ್ಚು ಚಿಂತಿಸದೆ ಅದನ್ನು ತಳ್ಳುವ ಪ್ರಯತ್ನ ಮಾಡುತ್ತಾರೆ. ಎಲ್ಲವನ್ನೂ ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ.

ವೃಶ್ಚಿಕ

ವೃಶ್ಚಿಕ

ಇವರು ಅತ್ಯಂತ ಮಹತ್ವಾಕಾಂಕ್ಷೆ ಹೊಂದಿರುವ ವ್ಯಕ್ತಿತ್ವದವರು. ಸಾಮಾಜಿಕ ಚಿಂತನೆಗಳಿಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಪ್ರಪಂಚವನ್ನು ಬದಲಿಸುವಂತಹ ಆಳವಾದ ಆಸೆಯನ್ನು ಇವರು ಹೊಂದಿರುತ್ತಾರೆ. ಭಾವೋದ್ರಿಕ್ತರಾಗಿರುವ ಇವರು ಸ್ವತಂತ್ರವಾಗಿರಲು ಇಷ್ಟ ಪಡುತ್ತಾರೆ.

ಧನು

ಧನು

ಹೊಸ ಹೊಸ ವಿಚಾರಗಳ ಬಗ್ಗೆ ಹೆಚ್ಚು ಆಸಕ್ತಿ ಹಾಗೂ ಅವುಗಳ ನಿರ್ಮಾಣಕ್ಕೆ ಹೆಚ್ಚು ಆಸಕ್ತರಾಗಿರುತ್ತಾರೆ. ಪ್ರಯಾಣ, ಸಾಹಸ ಕ್ರೀಡೆ ಹಾಗೂ ಅಪರಿಚಿತರಿಗೆ ಅನ್ವೇಷಿಸಲು ಸದಾ ಸಿದ್ಧರಾಗಿರುತ್ತಾರೆ. ಇವರು ಮನೆಯಲ್ಲಿ ಅತ್ಯಂತ ಮುಕ್ತ ಮನೋಭಾದ ಜೀವಿಗಳಾಗಿರುತ್ತಾರೆ.

ಮಕರ

ಮಕರ

ಇವರು ತಮ್ಮ ಸ್ನೇಹಿತರು ಹಾಗೂ ಪ್ರೀತಿ ಪಾತ್ರರಲ್ಲಿ ಸದಾ ಗೌರವದಿಂದ ಇರಲು ಇಷ್ಟ ಪಡುತ್ತಾರೆ. ಇವರ ಈ ಬಯಕೆ ಪೂರೈಸದಿದ್ದರೆ ಅದರ ಬಗ್ಗೆಯೇ ಹಂಬಲಿಸುತ್ತಿರುತ್ತಾರೆ. ಕೆಲವೊಮ್ಮೆ ಬಹಳ ಮೂಡಿ ಸ್ವಭಾವವನ್ನು ಹೊಂದಿರುತ್ತಾರೆ.

ಕುಂಬ

ಕುಂಬ

ಇವರ ದಾರಿಯಲ್ಲಿ ಇವರು ಸದಾ ಮುಂದಿರಲು ಬಯಸುತ್ತಾರೆ. ಇವರ ಶ್ರೇಯಸ್ಸು ಹಾಗೂ ಜಯದ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಳ್ಳಲು ಇಷ್ಟ ಪಡರು.

ಮೀನ

ಮೀನ

ಇವರು ಕಲೆ ಮತ್ತು ಪ್ರತಿಭೆಗೆ ಹೆಚ್ಚು ಗೌರವಾನ್ವಿತರಾಗಿ ಮತ್ತು ಪೂಜ್ಯನೀಯವಾಗಿರಲು ಇಷ್ಟಪಡುತ್ತಾರೆ. ಗೌರವಾನ್ವಿತ ಅಗತ್ಯವು ತೀವ್ರವಾಗಿರುತ್ತದೆ. ಇದು ಸುತ್ತಲಿನ ಜನರೊಂದಿಗೆ ಅಪಶ್ರುತಿಗೆ ಕಾರಣವಾಗುವುದು.

English summary

Deep Dark Desires Revealed According To Zodiac Signs!

Find out about the deepest desire of each zodiac sign in this article and know what your zodiac has to show. These are the desires that most of the people are afraid to share with the world, as they fear of being judged for their choices. Some of these desires die within the person, as they cannot express these emotions with the world. Take a look.
Story first published: Friday, July 28, 2017, 23:31 [IST]
Subscribe Newsletter