ಮೂಢನಂಬಿಕೆಯನ್ನೇ ತಮ್ಮ ಅದೃಷ್ಟವೆಂದು ನಂಬುವ ಖ್ಯಾತ ಕ್ರೀಡಾಪಟುಗಳು

Posted By: Jaya subramanya
Subscribe to Boldsky

ಹಿಂದಿನಿಂದಲೂ ಮೂಢನಂಬಿಕೆಗಳು ಮೌಢ್ಯತೆಯ ಸಂಕೇತವಾಗಿ ಪ್ರತಿನಿಧಿಸುತ್ತಿದ್ದರೂ, ಕೆಲವೆಡೆಗಳಲ್ಲಿ ಮೂಢನಂಬಿಕೆಯನ್ನು ಅದೃಷ್ಟವನ್ನಾಗಿ ಕಾಣುವವರಾಗಿದ್ದಾರೆ. ಭಾರತದಲ್ಲಿ ಮೂಢನಂಬಿಕೆಯನ್ನು ಎಷ್ಟೇ ಆಧುನಿಕ ವ್ಯಕ್ತಿ ಕೂಡ ಕೆಲವೊಮ್ಮೆ ನಂಬುತ್ತಾರೆ. ಏಕೆಂದರೆ ಈ ಮೂಢನಂಬಿಕೆಗಳು ನಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಅವಲಂಬಿಸಿರುವುದರಿಂದ ಇವುಗಳನ್ನು ಅನುಸರಿಸದೇ ಇರುವುದರಿಂದ ನಮಗೆ ಈ ಸೋಲು ಉಂಟಾಗಿರಬಹುದೇ ಎಂಬುದಾಗಿ ನಾವು ಆಲೋಚಿಸುತ್ತೇವೆ.

ಹೆಚ್ಚಿನ ಅಭಿಮಾನ ಬಳಗವನ್ನು ಹೊಂದಿರುವ ಕ್ರಿಕೆಟ್ ಕ್ಷೇತ್ರದಲ್ಲೂ ಈ ಮೌಢ್ಯತೆ ಬೇರು ಬಿಟ್ಟಿದೆ ಎಂಬುದನ್ನು ನೀವು ತಿಳಿದರೆ ಅಚ್ಚರಿಗೊಳ್ಳುವುದು ಖಂಡಿತ. ಕ್ರಿಕೆಟ್‌ಪಟುಗಳು ಕೂಡ ಕೆಲವೊಮ್ಮೆ ಮೂಢನಂಬಿಕೆಗಳನ್ನು ಅನುಸರಿಸಿಕೊಂಡು ಪಂದ್ಯಾಟವನ್ನು ಆಡುವವರಿದ್ದಾರೆ. ಹೆಚ್ಚಾಗಿ ಶಿಕ್ಷಿತರೇ ಇರುವ ಈ ಕ್ಷೇತ್ರದಲ್ಲಿ ಕೂಡ ಮೂಢನಂಬಿಕೆ ತನ್ನ ಸ್ಥಾನವನ್ನು ಕಂಡುಕೊಂಡಿದೆ.

ಕ್ರಿಕೆಟ್ ದೇವರು ಎಂದೇ ನಂಬಲಾಗಿರುವ ಸಚಿನ್ ತೆಂಡೂಲ್ಕರ್ ಕೂಡ ಮೂಢನಂಬಿಕೆಯನ್ನು ಆಧರಿಸಿಕೊಂಡೇ ಆಟವನ್ನು ಆಡುತ್ತಾರಂತೆ. ಇಂದಿನ ಲೇಖನದಲ್ಲಿ ಈ ಮೂಢನಂಬಿಕೆಗಳನ್ನು ನಂಬುವ ಕೆಲವೊಂದು ಆಟಗಾರರ ವಿವರಗಳನ್ನು ನೀಡುತ್ತಿದ್ದು ಇವರು ಯಾವ ರೀತಿಯ ಮೂಢನಂಬಿಕೆಯನ್ನು ವಿಶ್ವಸಿಸುತ್ತಿದ್ದಾರೆ ಎಂಬುದನ್ನು ನೋಡೋಣ....

ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್

ತೆಂಡೂಲ್ಕರ್ ಅವರು ಹೆಚ್ಚು ಮೂಢನಂಬಿಕೆಗಳನ್ನು ನಂಬುತ್ತಾರಂತೆ. ತಮ್ಮ ಬ್ಯಾಟಿಂಗ್ ಕೌಶಲ್ಯ ಮತ್ತು ಪರಿಶ್ರಮವನ್ನು ಇವರು ಹೊಂದಿದ್ದರೂ ತಮ್ಮ ಎಡ ಪ್ಯಾಡ್ ಅನ್ನು ಬಲದ ಕಾಲಿಗೆ ಕಟ್ಟಿಕೊಂಡು ಇವರು ಆಡುತ್ತಾರಂತೆ. ಇದು ಅವರಿಗೆ ಅದೃಷ್ಟವಂತೆ. ಆಟವನ್ನು ಗೆಲ್ಲಲು ಮತ್ತು ಹೆಚ್ಚು ರನ್ ಮಾಡಲು ಇದು ಅವರಿಗೆ ಸಹಾಯ ಮಾಡುತ್ತದಂತೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ಭಾರತ ತಂಡದ ನಾಯಕನಾಗಿರುವ ಕೊಹ್ಲಿ ಕೂಡ ಮೂಢನಂಬಿಕೆಯನ್ನು ಹೆಚ್ಚು ನಂಬುತ್ತಾರಂತೆ. ಒಂದೇ ರೀತಿಯ ಗ್ಲೌಸ್‌ಗಳನ್ನು ಇವರು ತಮ್ಮ ಅದೃಷ್ಟವೆಂದು ನಂಬುತ್ತಾರಂತೆ. ಇದು ಅವರಿಗೆ ಹೆಚ್ಚು ಸ್ಕೋರ್ ಮಾಡಲು ಸಹಾಯ ಮಾಡುತ್ತದೆ ಮತ್ತು ತಂಡವನ್ನು ಗೆಲ್ಲಿಸಲು ಸ್ಫೂರ್ತಿ ನೀಡುತ್ತದಂತೆ.

ಆರ್ ಅಶ್ವಿನ್

ಆರ್ ಅಶ್ವಿನ್

ಭಾರತದಲ್ಲಿರುವ ಉತ್ತಮ ಬೌಲರ್‌ಗಳಲ್ಲಿ ಅಶ್ವಿನ್ ಕೂಡ ಒಬ್ಬರು. ಅವರ ಬಳಿ ಇರುವ ಬ್ಯಾಗ್ ಅವರಿಗೆ ಅದೃಷ್ಟದ ಸಂಕೇತವಾಗಿದೆಯಂತೆ. ಬರಿ ಇವರಿಗೆ ಮಾತ್ರವಲ್ಲದೆ ಇಡಿಯ ತಂಡಕ್ಕೆ ಕೂಡ ಈ ಬ್ಯಾಗ್ ಅದೃಷ್ಟವಂತೆ. ಈ ಬ್ಯಾಗ್ ಅವರು ಕೊಂಡೊಯ್ಯವಲ್ಲೆಲ್ಲಾ ತಂಡ ಗೆಲ್ಲುತ್ತದಂತೆ.

ಯುವರಾಜ್ ಸಿಂಗ್

ಯುವರಾಜ್ ಸಿಂಗ್

ಕ್ಯಾನ್ಸರ್‌ನಂತಹ ಪ್ರಾಣಾಂತಕ ರೋಗವನ್ನು ಜಯಿಸಿದ ಸಾವಿಗೆ ಸಡ್ಡು ಹೊಡೆದ ಧೀರ ಕ್ರಿಕೆಟಿಗ ಯುವರಾಜ್ ಸಿಂಗ್ ಆಗಿದ್ದಾರೆ. ಬ್ಯಾಟಿಂಗ್ ವಿಷಯಕ್ಕೆ ಬಂದಾಗ ಕೂಡ ಇವರು ಮೂಢನಂಬಿಕೆಗಳನ್ನು ನಂಬುತ್ತಾರಂತೆ. ಅವರ ಅದೃಷ್ಟದ ಸಂಖ್ಯೆ 12. ಯಾವಾಗಲೂ 12 ಸಂಖ್ಯೆಯ ಜರ್ಸಿಯನ್ನೇ ಧರಿಸುತ್ತಾರೆ. 12 ನೇ ತಿಂಗಳಿನ 12 ರಂದು ಅವರು ಜನಿಸಿರುವುದರಿಂದ 12 ಅವರಿಗೆ ಅದೃಷ್ಟ ಸಂಖ್ಯೆಯಾಗಿದೆ.

ಎಮ್‌ಎಸ್ ಧೋನಿ

ಎಮ್‌ಎಸ್ ಧೋನಿ

ಕ್ಯಾಪ್ಟನ್ ಕೂಲ್ ಧೋನಿ ಕೂಡ ಮೂಢನಂಬಿಕೆಯನ್ನು ನಂಬುತ್ತಾರೆ. ತಮ್ಮ ಅದ್ಭುತ ಪ್ರದರ್ಶನಕ್ಕೆ ಕಾರಣವಾಗಿರುವುದು ಸಂಖ್ಯೆ 7 ಎಂಬುದು ಇವರ ನಂಬಿಕೆಯಾಗಿದೆ. ತಮ್ಮ ಅದೃಷ್ಟ ಸಂಖ್ಯೆ 7 ಎಂಬುದಾಗಿ ಇವರು ಮನಗಂಡಿದ್ದು 7 ಸಂಖ್ಯೆಯ ಜರ್ಸಿಯನ್ನೇ ಧರಿಸಿ ಇವರು ಕಣಕ್ಕೆ ಇಳಿಯುತ್ತಾರಂತೆ.

ಸನತ್ ಜಯಸೂರ್ಯ

ಸನತ್ ಜಯಸೂರ್ಯ

ಫಾಸ್ಟರ್ ಫಿಫ್ಟಿಸ್ ಮತ್ತು ಹಂಡ್ರೆಡ್ಸ್‌ಗೆ ಹೆಸರುವಾಸಿಯಾಗಿರುವ ಶ್ರೀಲಂಕಾ ತಂಡದ ಆಟಗಾರ ಸನತ್ ಜಯಸೂರ್ಯ ತಮ್ಮ ಅದೃಷ್ಟವನ್ನು ಕೊಂಡೊಯ್ಯಲು ಎಂದಿಗೂ ಮರೆಯುವುದಿಲ್ಲ. ತಮ್ಮ ಪ್ರತಿಭೆ ಮಾತ್ರವಲ್ಲದೆ, ಗ್ಲೌವ್ಸ್, ಪ್ಯಾಡ್ಸ್, ಹೆಲ್ಮೆಟ್ ಮತ್ತು ಪಾಕೆಟ್‌ಗಳನ್ನು ಪರಿಶೀಲಿಸದೆಯೇ ಅವರು ಬ್ಯಾಟಿಂಗ್ ಮಾಡುವುದಿಲ್ಲವಂತೆ.

ಮಿಶೇಲ್ ಕ್ಲಾರ್ಕ್

ಮಿಶೇಲ್ ಕ್ಲಾರ್ಕ್

ತಮ್ಮ ಕ್ರಿಕೆಟ್ ಸ್ಕೋರ್‌ಗಳ ಹೊರತಾಗಿ ಕೆಲವೊಂದು ಸಂಗತಿಗಳು ಈ ಆಸ್ಪ್ರೇಲಿಯನ್ ಕ್ರಿಕೆಟ್ ಪಟು ಬಗ್ಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ಬ್ಯಾಟಿಂಗ್ ಮಾಡುವಾಗ ಗಟ್ಟಿಯಾದ ಸಂಗೀತ ಕೇಳುವುದು ಇವರಿಗೆ ಅದೃಷ್ಟವಾಗಿದೆಯಂತೆ. ಬ್ಯಾಟಿಂಗ್ ಮಾಡುವ ಮುಂಚೆ ಇವರು ಸಂಗೀತವನ್ನು ಕೇಳಿ ಆಡುತ್ತಾರಂತೆ. ಇದರಿಂದ ಹೆಚ್ಚು ಸ್ಕೋರ್ ಇವರು ಮಾಡುತ್ತಾರೆ.

ಮಹೇಲಾ ಜಯವರ್ಧನೆ

ಮಹೇಲಾ ಜಯವರ್ಧನೆ

ಲಂಕಾ ತಂಡಕ್ಕಾಗಿ ಹೆಚ್ಚಿನ ವಿಜಯಗಳನ್ನು ದಾಖಲಿಸಿರುವ ಮಹೇಲಾ ಜಯವರ್ಧನೆ ಕ್ರಿಕೆಟ್ ಮೈದಾನದಲ್ಲಿ ಕೆಲವೊಂದು ಅಂಶಗಳನ್ನು ತಮ್ಮ ಅದೃಷ್ಟವೆಂದು ಭಾವಿಸಿದ್ದಾರೆ. ಇವರ ಮೂಢನಂಬಿಕೆ ಇರುವುದು ಬ್ಯಾಟ್ ಮೇಲೆ ಆಗಿದೆ. ಮಧ್ಯಂತರಗಳ ನಡುವೆ ತಮ್ಮ ಬ್ಯಾಟ್ ಅನ್ನು ಚುಂಬಿಸುವುದರಿಂದ ಇವರಿಗೆ ಆಟದ ಮೈದಾನದಲ್ಲಿ ಉತ್ತಮ ಪ್ರದರ್ಶನವನ್ನು ನೀಡುವಲ್ಲಿ ಸಹಕಾರಿಯಾಗಿದೆಯಂತೆ.

ಸ್ಟೀವ್ ವಾ

ಸ್ಟೀವ್ ವಾ

ತಮ್ಮ ಅದೃಷ್ಟವನ್ನು ಧರಿಸದೆಯೇ ಅವರು ಕ್ರಿಕೆಟ್ ಮೈದಾನವನ್ನು ತಲುಪುದಿಲ್ಲವಂತೆ. ಕೆಂಪು ಕರವಸ್ತ್ರವನ್ನು ಇವರು ತೆಗೆದುಕೊಂಡು ಹೋಗುತ್ತಾರಂತೆ. ಇದು ಅವರಿಗೆ ತಮ್ಮ ಅಜ್ಜಿ ನೀಡಿರುವುದಾಗಿದೆಯಂತೆ. ತಮ್ಮ ಅಜ್ಜಿಯ ಮೇಲೆ ಗೌರವ ಹಾಗೂ ಪ್ರೀತಿಯನ್ನು ಇದು ತೋರಿಸುವುದು ಮಾತ್ರವಲ್ಲದೆ ಉತ್ತಮ ಸ್ಕೋರ್ ಮಾಡಲು ಇದು ನೆರವಾಗಿದೆ.

ಸೌರವ್ ಗಂಗೂಲಿ

ಸೌರವ್ ಗಂಗೂಲಿ

ಅಭಿಮಾನಿಗಳ ನೆಚ್ಚಿನ ಬ್ಯಾಟ್ಸ್‌ಮನ್ ಆಗಿರುವ ಸೌರವ್ ಗಂಗೂಲಿ ಕೂಡ ಅದೃಷ್ಟವನ್ನು ಬಹುವಾಗಿ ನಂಬುತ್ತಾರೆ. ಗಂಗೂಲಿಯವರು ಆಟ ಆಡುವಾಗ ತಮ್ಮ ಗುರುವಿನ ಫೋಟೋವನ್ನು ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಳ್ಳುತ್ತಾರಂತೆ. ಅಂತೆಯೇ ಉಂಗುರಗಳನ್ನು ಧರಿಸುವುದು ಮತ್ತು ಸರವನ್ನು ಧರಿಸುವುದಕ್ಕೂ ಇವರು ಆದ್ಯತೆಯನ್ನು ನೀಡುತ್ತಾರೆ.

English summary

cricketers-their-superstition-beliefs

Representing your country is a huge honour and a gratified part and hence cricketers leave no stone unturned to prove their luck on the field. These cricketers are not only superstitious by behaviour, but they don't shy away from doing and saying these things in front of the media. These cricketers have openly confessed about their superstitious beliefs on the field.
Story first published: Wednesday, November 29, 2017, 23:41 [IST]