For Quick Alerts
ALLOW NOTIFICATIONS  
For Daily Alerts

ಅಬ್ಬಬ್ಬಾ! ಸ್ಮಶಾನದಲ್ಲಿ ನಡೆದ ಭಯಾನಕ ಘಟನೆ, ಮೈ ಜುಂ ಅನ್ನುತ್ತೆ!!

By Hemanth
|

ಸ್ಮಶಾನ ಗೃಹಗಳಲ್ಲಿ ಕೆಲಸ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಇದಕ್ಕೆ ಎಂಟೆದೆ ಬೇಕು. ಯಾಕೆಂದರೆ ಸುತ್ತಮುತ್ತಲಿನ ವಾತಾವರಣ ಅಂದುಕೊಂಡಂತೆ ಇರಲ್ಲ. ಸತ್ತವರ ಕುಟುಂಬದವ ಅಳು ಕೂಡ ಕೆಲವೊಮ್ಮೆ ಕಣ್ಣಿಗೆ ಕಾಣಿಸುತ್ತಾ ಇರುವುದು. ಇದರೊಂದಿಗೆ ಕೆಲವೊಂದು ಸಲ ಭಯಭೀತಿಗೊಳಿಸುವ ಘಟನೆಗಳು ನಡೆಯುತ್ತದೆ.

ಎಂತಹ ಧೈರ್ಯವಂತರನ್ನೂ ಬೆಚ್ಚಿ ಬೀಳಿಸುವ ಸ್ಮಶಾನಗಳು

ಇದನ್ನು ಕೇಳಿದರೆ ನಿಮಗೆ ರೋಮಾಂಚನವಾಗಬಹುದು. ಸ್ಮಶಾನ ಗೃಹದಲ್ಲಿ ಕೆಲಸ ಮಾಡುವ ಕೆಲವರು ನೋಡಿದಂತಹ ಅತ್ಯಂತ ಭಯಾನಕ ಘಟನೆಗಳ ಬಗ್ಗೆ ನಿಮಗೆ ಹೇಳಿಕೊಡಲಿದ್ದೇವೆ. ಇದನ್ನು ಓದಿಕೊಂಡ ಬಳಿಕ ರಾತ್ರಿ ವೇಳೆ ನಿದ್ರೆ ಮಾಡಲು ನಿಮಗೆ ಕಷ್ಟವಾಗಬಹುದು. ಆದರೂ ಮನಸ್ಸು ಗಟ್ಟಿ ಮಾಡಿಕೊಂಡು ಓದುತ್ತಾ ಸಾಗಿ...

ಶವ ಎದ್ದು ಕುಳಿತಾಗ

ಶವ ಎದ್ದು ಕುಳಿತಾಗ

ಶವಾಗಾರಕ್ಕೆ ಹೊಸ ಸಿಬ್ಬಂದಿಯೊಬ್ಬನನ್ನು ನೇಮಕ ಮಾಡಲಾಯಿತು. ಆತ ತನ್ನ ಕರ್ತವ್ಯ ನಿರ್ವಹಿಸುತ್ತಾ ಇರುವಾಗ ಹಿಂದಿನಿಂದ ಏನೋ ಶಬ್ಧ ಬಂದಂತೆ ಆಯಿತು. ಹಿಂತಿರುಗಿ ನೋಡಿದರೆ ಶವಾಗಾರದಲ್ಲಿ ಇಟ್ಟಂತಹ ಹೊಸ ಶವವೊಂದು ಕುಳಿತುಕೊಂಡಿದೆ. ಆತನ ಜೀವನದಲ್ಲಿ ಶವಾಗಾರದ ಕೊನೇ ಕೆಲಸ ಇದಾಗಿರಬಹುದು.

ಅಂತಿಮ ಹಿಡಿತ!

ಅಂತಿಮ ಹಿಡಿತ!

ವೈದ್ಯಕೀಯ ಕಾಲೇಜುಗಳಲ್ಲಿ ಶವವನ್ನು ಮಲಗಿಸಿಕೊಂಡು ಅದರ ಬಗ್ಗೆ ಅಧ್ಯಯನ ನಡೆಸುವುದು ಸಾಮಾನ್ಯ ವಿಚಾರ. ವೈದ್ಯಕೀಯ ತಂತ್ರಜ್ಞನೊಬ್ಬ ಶವದ ಕೈ ಹಾಗೂ ಕಾಲಿನ ಕೂದಲನ್ನು ತೆಗೆಯುತ್ತಾ ಇರುವಾಗ ಶವದ ಒಂದು ಬೆರಳು ನಿಧಾನವಾಗಿ ತಂತ್ರಜ್ಞಾನ ಕೈಯನ್ನು ಹಿಡಿಯಲು ಪ್ರಯತ್ನಿಸಿತು. ಶವವು ಅಂತಿಮ ಸಲ ಹೀಗೆ ಮಾಡಲು ಪ್ರಯತ್ನಿಸಿರಬೇಕು.

ಸತ್ತವರ ನರಳಾಟ

ಸತ್ತವರ ನರಳಾಟ

ಸತ್ತವರ ದೇಹದಿಂದ ನರಳಾಟದ ಶಬ್ಧ ಬಂದರೆ ಹೇಗಾಗಬೇಡ. ಖಂಡಿತವಾಗಿಯೂ ಎದೆ ಬಡಿತ ನಿಂತುಹೋಗಬಹುದು. ಅದರಲ್ಲೂ ಕೆಲವೊಮ್ಮೆ ನಾವು ನಿರೀಕ್ಷಿಸಿಸದೆ ಇರುವ ಸಮಯದಲ್ಲಿ ಇಂತಹ ಶಬ್ಧ ಬಂದರೆ ಅದು ಭೀತಿಯನ್ನು ಮತ್ತಷ್ಟು ಹೆಚ್ಚಿಸುವುದು.

ಸತ್ತವರ ನರಳಾಟ

ಸತ್ತವರ ನರಳಾಟ

ಧ್ವನಿ ತಂತುಗಳ ಮೂಲಕ ಗಾಳಿ ಒಳಗೆ ಹೋದಾಗ ಸತ್ತವರ ದೇಹದಿಂದಲೂ ಶಬ್ಧ ಬರುವುದು ಮತ್ತು ಇದು ತುಂಬಾ ಭೀತಿಯುಂಟು ಮಾಡುವುದು. ಶವವನ್ನು ಸಾಗಿಸುತ್ತಿರುವ ವೇಳೆ ಅದರಿಂದ ನರಳಾಟದ ಶಬ್ಧ ಬಂದರೆ ನೀವು ಭೀತಿಗೊಳಗಾಗಬೇಡಿ.

ಶವದಿಂದ ನೀರು ಹೊರಬರುವುದು

ಶವದಿಂದ ನೀರು ಹೊರಬರುವುದು

ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋದ ಶವದಿಂದ ನೀರು ಹೊರಗೆ ಬರಲು ಆರಂಭವಾಯಿತು. ಆದರೆ ಶವದ ಅಲಂಕಾರ ಮಾಡುತ್ತಿದ್ದವರು ದೇಹವನ್ನು ಪ್ಲಾಸ್ಟಿಕ್ ನಿಂದ ಮುಚ್ಚಿ ಡ್ರೆಸ್ ಮಾಡಿದರು. ಶವದಿಂದ ನೀರು ಹೊರಬರುವುದನ್ನು ನೋಡಿ ಮನೆಯವರು ಭೀತಿಗೊಳಗಾಗುವುದು ಬೇಡ ಎನ್ನುವುದೇ ಅವರ ಉದ್ದೇಶವಾಗಿತ್ತು.

ಬೆಳಕು ಮಿಂಚುವುದು!

ಬೆಳಕು ಮಿಂಚುವುದು!

ಶವಾಗಾರಕ್ಕೆ ಯಾವುದೇ ಶವ ತೆಗೆದುಕೊಂಡು ಬಂದಾಗ ಬೆಳಕು ಮಿಂಚುತ್ತಾ ಇತ್ತು ಎಂದು ನರ್ಸ್ ಒಬ್ಬಳು ಹೇಳಿದ್ದಾಳೆ. ಬೆಳಕು ಯಾವಾಗಲೂ ಇಲ್ಲಿ ಸಾಮಾನ್ಯವಾಗಿರುವುದು.

ಬೆಳಕು ಮಿಂಚುವುದು!

ಬೆಳಕು ಮಿಂಚುವುದು!

ಆದರೆ ಹೊಸ ಶವ ಇಲ್ಲಿಗೆ ಬಂದಾಗ ಬೆಳಕು ಮಿಂಚುತ್ತಾ ಇರುತ್ತದೆ. ಇದು ಶವವನ್ನು ಸ್ವಾಗತಿಸುವ ವಿಧಾನವಾಗಿರಬಹುದು! ಇನ್ನಷ್ಟು ಭಯಾನಕ ವಿಷಯಗಳನ್ನು ಓದಬೇಕೆಂದು ನಿಮಗೆ ಅನಿಸುತ್ತಾ ಇದ್ದರೆ ಕಮೆಂಟ್ ಬಾಕ್ಸ್ ನಲ್ಲಿ ಪ್ರತಿಕ್ರಿಯೆ ತಿಳಿಸಿ.

English summary

Creepiest Things That Have Happen At Funeral Homes

There is a lot that can creep out many of those who work at funeral homes. This is a place where you are surrounded by grief. The people you interact with have death on their mind. And that is a tough environment to be in. Check out for some of the creepiest experiences that the employees of funeral homes have faced. These are the confessions that can simply creep you out and give you nightmares for nights. Read on further to know more on these creepy cases.
X
Desktop Bottom Promotion