Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮಗೆ ಗೊತ್ತಾ? ಈ ದೇಶಗಳು ಜನರಿಗೆ ನಗ್ನವಾಗಿ ಓಡಾಡಲು ಅನುಮತಿ ನೀಡಿದೆ!
ಪ್ರತಿಯೊಂದು ದೇಶದಲ್ಲೂ ಒಂದೊಂದು ವಿಶೇಷ ಕಾನೂನುಗಳಿರುತ್ತವೆ. ಅಲ್ಲಿಯ ವಾತಾವರಣಕ್ಕೆ ಅನುಗುಣವಾಗಿ ಉಡುಗೆ-ತೊಡುಗೆ, ಆಹಾರ ಪದ್ಧತಿಗಳಿರುತ್ತವೆ. ಹಾಗೆಯೇ ಗಂಡು-ಹೆಣ್ಣು ಎನ್ನುವ ಭೇದ ಭಾವವೂ ಇರುವುದಿಲ್ಲ. ತಮ್ಮ ಪ್ರೀತಿಯನ್ನು ಸಾಮಾಜಿಕ ಪ್ರದೇಶದಲ್ಲೂ ಮುಕ್ತವಾಗಿ ಪ್ರದರ್ಶಿಸಬಹುದು.
ತಮ್ಮ ಪ್ರೀತಿ ಪಾತ್ರರಿಗೆ ಸಾರ್ವಜನಿಕವಾಗಿ ಚುಂಬನ ನೀಡುವುದು ಕೆಲವು ದೇಶದಲ್ಲಿ ನಿರ್ಬಂಧಿಸಲಾಗಿರುತ್ತದೆ. ಆದರೆ ಕೆಲವು ದೇಶಗಳಲ್ಲಿ ಅವುಗಳಿಗೆ ಯಾವುದೇ ಕಟ್ಟುಪಾಡುಗಳಿಲ್ಲ.
ಇದು ತಮಾಷೆಯ ವಿಚಾರವಲ್ಲ. ಕೆಲವು ದೇಶಗಳಲ್ಲಿ ತಮ್ಮ ಪ್ರಜೆಗಳಿಗೆ ಹಾಗೂ ಪ್ರವಾಸಿಗರಿಗೆ ಮುಕ್ತವಾದ ಸ್ವಾತಂತ್ರ್ಯವನ್ನು ನೀಡಿದೆ. ಅಂತಹ ದೇಶಕ್ಕೆ ಒಮ್ಮೆ ಹೋಗಿ ಹೊಸ ಅನುಭವವನ್ನು ನಮ್ಮದಾಗಿಸಿಕೊಳ್ಳಬಹುದು. ನಿಮಗೂ ಈ ವಿಚಾರ ತಲೆಯಲ್ಲಿ ಆಗಾಗ ಓಡಾಡುತ್ತಿತ್ತು ಎನ್ನುವುದಾದರೆ ತಡ ಮಾಡಬೇಡಿ. ನಾವಿಲ್ಲಿ ಹೇಳುವ ಕೆಲವು ದೇಶಗಳಿಗೆ ಹೋಗಿ ಬನ್ನಿ...

ಫ್ರಾನ್ಸ್
ಈ ದೇಶದಲ್ಲಿ ಯಾವುದೇ ನಿಷೇಧಗಳಿಲ್ಲ. ಹಾಗಂತ ಸಂಪೂರ್ಣ ನಗ್ನವಾಗಿ ಓಡಾಡುವುದಕ್ಕೆ ಅನುಮತಿ ನೀಡುವುದಿಲ್ಲ. ಕೆಲವು ಸ್ಥಳಗಳಲ್ಲಿ ಅವಕಾಶಕಲ್ಪಿಸಿದೆ. ಸಾರ್ವಜಿಕ ಪ್ರದೇಶದಲ್ಲಿ ಲೈಂಗಿಕತೆ ಹೊಂದಲು ಅವಕಾಶವಿಲ್ಲ. ಆದರೆ ಇಲ್ಲಿರುವ "ಕ್ಯಾಪ್ ಡಿ" ಎನ್ನುವ ಕಡಲ ತೀರದ ಪಟ್ಟಣದಲ್ಲಿ ನಗ್ನವಾಗಿ ಇರಬಹುದಂತೆ. ಅಲ್ಲಿಯ ಕಡಲ ತೀರದಲ್ಲಿ ನೂರಾರು ಸ್ವಿಂಗರ್ಗಳೊಂದಿಗೆ ಸಾರ್ವಜನಿಕವಾಗಿ ಲೈಂಗಿಕತೆ ಅನುಭವಿಸಬಹುದಂತೆ.

ಕ್ರೋಷಿಯಾ
ಈ ದೇಶವು ಕ್ಯಾಂಪ್ ಸೈಟ್‍ಗಳು ಮತ್ತು ಹೋಟೆಲ್‍ಗಳನ್ನು ಹೊಂದಿದೆ. ಈ ದೇಶದ ಜನರು ಸಾರ್ವಜನಿಕ ಸ್ಥಳಗಳಲ್ಲಿ ಸ್ವತಂತ್ರವಾಗಿ ಸಂಚರಿಸಬಹುದು. ಇಲ್ಲಿ ಸಾರ್ವಜನಿಕವಾಗಿ ನಗ್ನವಾಗಿ ಓಡಾಡಿದರೂ ಯಾವುದೇ ಶಿಕ್ಷೆ ಇಲ್ಲ.

ನೆದರ್ಲ್ಯಾಂಡ್ಸ್
ಇಲ್ಲಿಯೂ ಜನರು ತಮ್ಮ ಇಷ್ಟ ಬಂದಂತೆ ನಗ್ನವಾಗಿ ಓಡಾಡಬಹುದು. ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ನಿಷೇದಿಸಲಾಗಿದೆ. ಇಲ್ಲಿಯವರಿಗೆ ಸಮಗ್ರ ಲೈಂಗಿಕ ಶಿಕ್ಷಣ, ಕಾನೂನು ಬದ್ಧ ವೇಶ್ಯಾವಾಟಿಕೆ, ಕಡಲ ತೀರದಲ್ಲಿ ನಗ್ನವಾಗಿರಲು ಈ ದೇಶ ಹೆಚ್ಚು ಪ್ರಸಿದ್ಧಿ ಪಡೆದಿದೆ.

ಫ್ಲೋರಿಡಾ
ಫ್ಲೋರಿಡಾದಲ್ಲಿರುವ ಮಿಯಾಮಿ ಕಡಲ ತೀರ ನಗ್ನವಾಗಿ ಓಡಾಡಲು ಪ್ರಸಿದ್ಧಿ ಪಡೆದಿದೆ. ಇಲ್ಲಿ ಯಾವುದೇ ಕಟ್ಟುಪಾಡುಗಳಿಲ್ಲ. ಸಾರ್ವಜನಿಕರು ಮನಸ್ಸಿಗೆ ಬಂದಂತೆ ನಗ್ನವಾಗಿ ಓಡಾಡಬಹುದು. ಈ ಪ್ರದೇಶ ಬೆತ್ತಲೆ ಮತ್ತು ತಾಯಿಯ ಪ್ರಕೃತಿ ಸೌಂದರ್ಯವನ್ನು ಆನಂದಿಸಲು ಅತ್ಯುತ್ತಮ ಸ್ಥಳ ಎಂದು ಹೇಳಲಾಗುತ್ತದೆ.

ಯುನೈಟೆಡ್ ಕಿಂಗ್‍ಡಮ್
ಈ ದೇಶದಲ್ಲಿ ಹಲವಾರು ವಿಶಾಲವಾದ ಕಡಲ ತೀರಗಳನ್ನು ಹೊಂದಿದೆ. ಎಲ್ಲಾ ಕಡಲ ತೀರದಲ್ಲೂ ನಗ್ನವಾಗಿ ಓಡಾಡಬಹುದು. ಇಲ್ಲಿ ಯಾವುದೇ ಕಾನೂನು ನಿರ್ಬಂಧವಿಲ್ಲ. ಹಲವಾರು ನಗ್ನವಾದಿ ಕಡಲ ತೀರ ಇರುವುದು ವಿಶೇಷ.

ಸ್ಪೇನ್
ನಗ್ನವಾಗಿರುವುದು ವ್ಯಕ್ತಿಯ ಮೂಲ ಭೂತ ಹಕ್ಕು ಎನ್ನುವುದು ಈ ದೇಶದ ನಿಯಮ. ಕಾನೂನಿನ ಪ್ರಕಾರ ಸಾರ್ವಜನಿಕರಿಗೆ ಭೂಮಿ, ಕಾಡು, ಉದ್ಯಾನವನಗಳು ಮತ್ತು ಬೀದಿಗಳಲ್ಲಿ ಸಾರ್ವತ್ರಿಕವಾಗಿ ನಗ್ನವಾಗಿ ಓಡಾಡಬಹುದು. ಇವರನ್ನು ನೋಡಿ ಆಘಾತಕ್ಕೆ ಒಳಗಾಗುವ ಅಗತ್ಯವಿಲ್ಲ. ಸಂಗಾತಿಗಳು ಅವರ ವಯಸ್ಸಿನವರೇ ಆಗಿರಬೇಕು ಎನ್ನುವ ಕಾನೂನನ್ನು ಒಳಗೊಂಡಿದೆ.

ಜರ್ಮನಿ
ಈ ದೇಶದಲ್ಲಿ ಸಾರ್ವಜನಿಕವಾಗಿ ನಗ್ನವಾಗಿ ಓಡಾಡುವುದನ್ನು ಅನುಮತಿಸಲಾಗಿದೆ. ಆದರೆ ಕೆಲವು ಸೀಮಿತ ಪ್ರದೇಶಗಳಲ್ಲಿ ಮಾತ್ರ. ಮುನೀಚ್ ನಗರದ ಸಾರ್ವಜನಿಕ ಸ್ಥಳಗಳಲ್ಲಿ ನಗ್ನವಾಗಿ ಮುಕ್ತವಾಗಿ ಓಡಾಡಬಹುದು.



Click it and Unblock the Notifications











