ಈ ಪ್ರಾಣಿ-ಪಕ್ಷಿಗಳಿಂದ ನಾವು ನೋಡಿ ಕಲಿಯುವುದು ಸಾಕಷ್ಟಿದೆ...

By: manu
Subscribe to Boldsky

ಪ್ರಾಚೀನ ಕಾಲದಿಂದಲೂ ಮಾನವ ಪ್ರಾಣಿಗಳಿಗೆ ವಿಶೇಷವಾದ ಸ್ಥಾನ ಮತ್ತು ಗೌರವವನ್ನು ನೀಡುತ್ತಾ ಬಂದಿದ್ದಾನೆ. ಅವುಗಳ ಸಂವೇದನೆ ಮತ್ತು ವರ್ತನೆಗಳಿಗೆ ವಿಶೇಷವಾದ ಬೆಲೆ ನೀಡಿದ್ದಾನೆ. ಮನುಷ್ಯನಿಗೂ ಗುರುತಿಸಲಾಗದ ವಿಶೇಷ ಶಕ್ತಿಯನ್ನು ಪ್ರಾಣಿಗಳು ಗುರುತಿಸುತ್ತವೆ.

ನಮ್ಮ ಸುತ್ತಲು ನಡೆಯುವ ಘಟನೆ ಅಥವಾ ಸಂದೇಶಗಳಿಗೆ ಕಾರಣವಾಗುವ ಅಥವಾ ಹೇಳಲು ಅಸಾಧ್ಯವಾದ ವಿಚಾರಗಳನ್ನು ಪ್ರಾಣಿ -ಪಕ್ಷಿಗಳು ಗುರುತಿಸುತ್ತವೆ ಎಂದು ವೇದದಲ್ಲಿ ಸಾರಲಾಗಿದೆ. 

ಬುದ್ಧಿಶಕ್ತಿಯಲ್ಲಿ ಮನುಷ್ಯರಿಗೇ ಸವಾಲೆಸೆಯುವ ಪ್ರಾಣಿ, ಪಕ್ಷಿಗಳು

ಪ್ರಾಣಿ-ಪಕ್ಷಿಗಳ ನಡವಳಿಕೆಯನ್ನು ಗಮನಿಸಿದರೆ ನಮ್ಮ ಸುತ್ತಲಿರುವ ಶಕ್ತಿಯ ಬಗ್ಗೆ ಹೆಚ್ಚಿನ ತಿಳುವಳಿಕೆ ಹೊಂದಬಹುದು. ನಮ್ಮ ನಡುವೆಯೇ ಇರುವ ಈ ಪ್ರಾಣಿ ಪಕ್ಷಿಗಳು ಯಾವವು? ಅವುಗಳ ವರ್ತನೆಗಳೇನು? ಅವರ ಸಂದೇಶ ಹೇಗಿರುತ್ತದೆ ಎನ್ನುವ ವಿಚಾರವನ್ನು ಈ ಕೆಳಗೆ ವಿವರಿಸಲಾಗಿದೆ... ಮುಂದೆ ಓದಿ

ಹದ್ದು/ಗರುಡ

ಹದ್ದು/ಗರುಡ

ಈ ಪಕ್ಷಿಯನ್ನು ಆಧ್ಯಾತ್ಮಿಕ ರಕ್ಷಣೆಯ ಸಂಕೇತ ಎಂದು ಪರಿಗಣಿಸಲಾಗಿದೆ. ನಮ್ಮ ನಡುವಿನ ಹದ್ದು ಅಥವಾ ಹದ್ದಿನ ಚಿತ್ರವನ್ನು ನೋಡಿದಾಗ ನಮ್ಮ ಪ್ರಜ್ಞಾ ಕ್ಷೇತ್ರದಲ್ಲಿ ಹೊಸತನವನ್ನು ಅರ್ಥೈಸಲು ಸಹಾಯ ಮಾಡುತ್ತದೆ.

ಕಾಗೆ

ಕಾಗೆ

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಾಮಾನ್ಯವಾಗಿ ಕಾಣುವ ಪಕ್ಷಿಗಳಲ್ಲಿ ಇದು ಒಂದು. ಇದರ ಕೂಗನ್ನು ವಿಭಿನ್ನ ಬಗೆಯ ಶಕುನ ಎಂದು ಪರಿಗಣಿಸಲಾಗಿದೆ. ಸಾವು ಮತ್ತು ಪುನರ್ಜನ್ಮದ ಜೀವನ ಚಕ್ರದ ಬಗ್ಗೆ ತಿಳಿಸಿಕೊಡುತ್ತದೆ.

ಗೂಬೆ

ಗೂಬೆ

ಗೂಬೆ ತನ್ನದೆ ಆದ ವಿಶೇಷ ಒಳನೋಟವನ್ನು ಹೊಂದಿದೆ. ಇದರ ಕೂಗು ಸುತ್ತಲಿನ ವಿಶೇಷ ಶಕ್ತಿಯ ಬದಲಾವಣೆಯನ್ನು ಸೂಚಿಸುತ್ತದೆ.

ಕಾರ್ಡಿನಲ್

ಕಾರ್ಡಿನಲ್

ಈ ಪಕ್ಷಿಯ ತೀರಿಹೋದ ತಂದೆಯ ಸಂದೇಶವನ್ನು ನೀಡುತ್ತದೆ. ನಾವು ಎದುರಿಸುವ ಸನ್ನಿವೇಶ ಅಥವಾ ಘಟನೆಗಳಿಗೆ ಹೆಚ್ಚು ವಿಶ್ವಾಸದಿಂದ ಪಾರಾಗಬೇಕು ಎನ್ನುವ ಸಂದೇಶ ನೀಡುತ್ತದೆ.

ಬ್ಲೂ ಜೇ

ಬ್ಲೂ ಜೇ

ಈ ಪಕ್ಷಿಯು ಸತ್ತ ಮಹಿಳಾ ವ್ಯಕ್ತಿಯ ಸಂದೇಶವನ್ನು ಹೇಳುತ್ತದೆ. ನಮ್ಮ ಸೃಜನ ಶೀಲತೆಯ ಯೋಜನೆಗಳನ್ನು ತಿಳಿಸಲು ಸಹಾಯ ಮಾಡುತ್ತದೆ.

ಮಿಡತೆ

ಮಿಡತೆ

ಜೀವನದಲ್ಲಿ ನೆಮ್ಮದಿ/ಶಾಂತಿ ಲಭಿಸುವುದು ಎನ್ನುವ ಸಂದೇಶವನ್ನು ನೀಡುತ್ತದೆ. ತಾಳ್ಮೆಯ ಶಕ್ತಿ ಹೊಂದಿರಬೇಕು ಎನ್ನುವ ಸಂದೇಶವೇ ಇದರ ಕೂಗು.

ಹಲ್ಲಿ

ಹಲ್ಲಿ

ನಮ್ಮ ಗುರಿ ಮತ್ತು ಕನಸುಗಳಿಗೆ ಹೆಚ್ಚು ಬೇಡಿಕೆ ಇದೆ ಎಂಬುದನ್ನು ಹಲ್ಲಿ ತಿಳಿಸುತ್ತದೆ. ನಾವು ಏನಾದರೂ ಹೇಳುವಾಗ ಅಥವಾ ಯೋಚಿಸುವಾಗ ಹಲ್ಲಿ ಕೂಗಿದರೆ ಆ ವಿಚಾರವು ಭವಿಷ್ಯದಲ್ಲಿ ನಿಜವಾಗುವುದು ಎಂದು ಹೇಳುತ್ತಾರೆ.

ಹಾವು

ಹಾವು

ಹಾವಿನ ಜಾತಿಯಲ್ಲಿ ಅನೇಕ ಬಗೆಗಳಿವೆ. ಅದರಲ್ಲಿ ಕೆಲವು ವಿಶೇಷ ಜಾತಿಯ ಹಾವನ್ನು ಮಾತ್ರ ದೇವರೆಂದು ಭಾವಿಸುತ್ತೇವೆ. ಇದು ನಮ್ಮ ಕುಂಡಲಿಯಲ್ಲಿರುವ ದೋಷವನ್ನು ಹೇಳುತ್ತದೆ.

ಜೇಡ

ಜೇಡ

ಇದು ಸೃಷ್ಟಿ ಮತ್ತು ಆಧ್ಯಾತ್ಮಿಕ ಶಕ್ತಿಯ ಸಂಪರ್ಕದ ಸಂಕೇತವಾಗಿದೆ. ಇದು ಆತ್ಮಗಳ ಜಗತ್ತಿಗೆ ಪ್ರಬಲ ಸಂಪರ್ಕವನ್ನು ಹೊಂದಿದೆ. ಒಂದು ಆತ್ಮ ನಮ್ಮ ಬಳಿ ಏನೋ ಹೇಳಲು ಪ್ರಯತ್ನಿಸುತ್ತಿದೆ ಎನ್ನುವುದನ್ನು ಹೇಳುತ್ತದೆ.

ಡ್ರಾಗನ್ ಫ್ಲೈ

ಡ್ರಾಗನ್ ಫ್ಲೈ

ಇದು ಆಧ್ಯಾತ್ಮಿಕ ಹಾದಿಯನ್ನು ಸೂಚಿಸುತ್ತದೆ. ಸುತ್ತಲಿನಲ್ಲಿರುವ ಗಾರ್ಡಿಯನ್ ದೇವತೆಗಳು ಮತ್ತು ಆತ್ಮ ನಿಮ್ಮನ್ನು ಮಾರ್ಗದರ್ಶನ ಮಾಡುತ್ತದೆ ಎನ್ನುವ ಸಂದೇಶವನ್ನು ನೀಡುತ್ತದೆ.

ಲೇಡಿ ಬಗ್

ಲೇಡಿ ಬಗ್

ಇದನ್ನು ಅದೃಷ್ಟದ ಚಿಹ್ನೆಯೆಂದು ಭಾವಿಸಲಾಗುತ್ತದೆ. ಸರಿಯಾದ ಸಮಯದಲ್ಲಿ ಇವು ಕಣ್ಣಿಗೆ ಕಂಡರೆ ನಮ್ಮ ಕನಸು ನನಸಾಗುವುದು ಎನ್ನುವ ಸಂದೇಶ ನೀಡುತ್ತದೆ.

ಚಿಟ್ಟೆ

ಚಿಟ್ಟೆ

ಇದನ್ನು ರೂಪಾಂತರ ಚಿಹ್ನೆಗೆ ಹೋಲಿಸಲಾಗುತ್ತದೆ. ಜೀವನದ ಬದಲಾವಣೆ ಚಕ್ರವನ್ನು ತಿಳಿಸುತ್ತದೆ.

ತೋಳ

ತೋಳ

ನಮ್ಮ ಸುತ್ತಲು ಇರುವ ವ್ಯಕ್ತಿಯನ್ನು ಹತ್ತಿರದಿಂದ ನೋಡಬೇಕು ಎಂದು ಎಚ್ಚರಿಸುತ್ತದೆ. ತೋಳವನ್ನು ನೋಡಿದರೆ ಇತರ ವ್ಯಕ್ತಿಗಳಿಂದ ಸಹಾಯ ಬೇಡಬೇಕಾಗುವುದು ಎನ್ನುವ ಸೂಚನೆಯನ್ನು ನೀಡುತ್ತದೆ.

ನರಿ

ನರಿ

ನಮ್ಮ ಸುತ್ತಲಿನ ವಿಷಯಗಳಿಗೆ ವಿಭಿನ್ನ ಮಾರ್ಗವನ್ನು ತೋರುವ ಸಂದೇಶ ನೀಡುತ್ತದೆ. ಎಲ್ಲಾ ಸಮಯದಲ್ಲೂ ಗಂಭೀರತೆ ಯೋಗ್ಯವಲ್ಲ ಎನ್ನುವುದನ್ನು ಹೇಳುತ್ತದೆ.

English summary

Cosmic Connect With These Animals Reveals An Untold Sign

It is believed that by observing the animals' behaviour, one can obtain a better understanding of the energy around us, and we gain insight into intuitive messages and signs. Check out what it means when you see or come across these different animals...
Subscribe Newsletter