ನಂಬುತ್ತೀರೋ, ಬಿಡುತ್ತೀರೋ-ಜಗತ್ತಿನಲ್ಲಿ ಇಂತಹ ಜನರು ಕೂಡ ಇದ್ದಾರೆ!

By: Deepu
Subscribe to Boldsky

ನಮ್ಮ ಸೌಂದರ್ಯ ಸುಂದರವಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಕೆಲವರಂತೂ ಸೌಂದರ್ಯದ ರಕ್ಷಣೆಗಾಗಿ ಏನೆಲ್ಲಾ ಚಿಕಿತ್ಸೆಗೆ ಒಳಗಾಗುತ್ತಾರೆ. ದುಬಾರಿಯಾದರೂ ವಿಶೇಷ ಸೌಂದರ್ಯ ವರ್ಧಕ ಉತ್ಪನ್ನಗಳ ಮೊರೆ ಹೋಗುತ್ತಾರೆ. ಅದರ ಫಲಿತಾಂಶ ಹೇಗಿರುತ್ತದೆ ಎನ್ನುವುದರ ಬಗ್ಗೆ ಮೊದಲೆ ತಿಳಿದಿಲ್ಲವಾದರೂ ಸರಿ. ಪರೀಕ್ಷೆಯ ರೀತಿಯಲ್ಲಾದರೂ ಉಪಯೋಗಿಸುತ್ತಾರೆ. ನಂತರ ಸೌಂದರ್ಯ ಹೇಗಿತ್ತೋ ಹಾಗೆ ಇದ್ದರೂ ಸರಿ ಚಿಂತಿಸುವುದಿಲ್ಲ.

ನಿಜ, ಸೌಂದರ್ಯ ಆರೈಕೆ ಮತ್ತು ಚಿಕಿತ್ಸೆಯ ಬಗ್ಗೆ ಜನ ಏನೆಲ್ಲಾ ಮಾಡುತ್ತಾರೆ ಎಂದರೆ, ಕೆಲವೊಮ್ಮೆ ಕೇಳಲು ನೋಡಲು ಸಾಧ್ಯವಿಲ್ಲ. ಕೆಲವು ಪ್ರಾಣಿಗಳ ಮಲ, ರಕ್ತ, ಕ್ರೀಮಿ-ಕೀಟಗಳಿಂದ ಕಚ್ಚಿಸಿಕೊಳ್ಳುವುದು ಅಬ್ಬಾ! ಒಂದೇ ಎರಡೇ ಬೆಚ್ಚಿ ಬೀಳುವಂತಹ ರೀತಿಯಲ್ಲಿ ತಮ್ಮ ಸೌಂದರ್ಯ ಚಿಕಿತ್ಸೆ ಹಾಗೂ ಆರೈಕೆ ಮಾಡಿಕೊಳ್ಳುತ್ತಾರೆ. ಅಂತಹ ಅಪರೂಪ ಶೈಲಿಯ ಉಪಚಾರಗಳ ಬಗ್ಗೆ ಹೇಳುತ್ತೇನೆ ಮುಂದೆ ಓದಿ...

ಬಸವನ ಹುಳು ಫೇಶಿಯಲ್

ಬಸವನ ಹುಳು ಫೇಶಿಯಲ್

ಬಸವನ ಹುಳವನ್ನು ಮುಖದ ಮೇಲೆ ಬಿಟ್ಟಿಕೊಳ್ಳುವ ಸೌಂದರ್ಯ ಚಿಕಿತ್ಸೆ. ಹೀಗೆ ಮಾಡುವುದರಿಂದ ಹುಳದ ಲೋಳೆಯು ಮುಖಕ್ಕೆ ಮೆತ್ತಿಕೊಳ್ಳುತ್ತದೆ. ಈ ಲೋಳೆಯಲ್ಲಿ ಪೋಷಕಾಂಶ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಇರುವುದರಿಂದ ಇದೊಂದು ಉತ್ತಮ ಸೌಂದರ್ಯ ಚಿಕಿತ್ಸೆ ಎನ್ನುತ್ತಾರೆ. ಈ ಚಿಕಿತ್ಸೆ ಥೈಲ್ಯಾಂಡ್‍ನಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಒಮ್ಮೆ ಈ ಫೇಶಿಯಲ್ ಮಾಡಿಸಿಕೊಳ್ಳಲು 2000 ರೂ. ನೀಡಬೇಕಂತೆ!

ಬಿಯರ್ ಸ್ನಾನ...

ಬಿಯರ್ ಸ್ನಾನ...

ಯುರೋಪ್‍ನ ಮಧ್ಯಪ್ರದೇಶದಲ್ಲಿ ಬಿಯರ್ ಬಾತ್ ಚಿಕಿತ್ಸೆ ಬಹಳ ಜನಪ್ರಿಯತೆ ಪಡೆದುಕೊಂಡಿದೆ. ಈ ಚಿಕಿತ್ಸೆ ಎರಡು ಬಾರಿ ಪಡೆದರೆ ಸುಮಾರು 6000 ರೂ. ನೀಡಬೇಕು. ಬಿಯರ್ ಬಾತ್(ಬಿಯರ್ ಸ್ನಾನ) ಎಂದರೆ ಒಂದು ಟಬ್(ತೊಟ್ಟಿ)ನಲ್ಲಿ ಬಿಯರ್ ತುಂಬಿಸಿ, ಅದರಲ್ಲಿ ವ್ಯಕ್ತಿಯನ್ನು ಕೂರಿಸುತ್ತಾರೆ. ಈ ವೇಳೆ ವ್ಯಕ್ತಿ ಬಿಯರ್ ಕುಡಿಯುವುದು ಅಥವಾ ಬೇರೆ ಏನಾದರೂ ಸವಿಯಬಹುದು. 30 ನಿಮಿಷಗಳ ಕಾಲ ಬಿಯರ್‍ನಲ್ಲಿ ದೇಹವನ್ನು ನೆನೆಸಲಾಗುವುದು.

ಮೀನಿನ ಪಾದೋಪಚಾರ

ಮೀನಿನ ಪಾದೋಪಚಾರ

ಟರ್ಕಿಯಲ್ಲಿ ಪ್ರಸಿದ್ಧಿ ಪಡೆದ ಈ ಸೌಂದರ್ಯ ಚಿಕಿತ್ಸೆಗೆ ಸುಮಾರು 1500 ರೂ. ನೀಡಬೇಕಾಗುವುದು. ಬೆಚ್ಚಗಿನ ನೀರು ಮತ್ತು ಜೀವಂತ ಮೀನುಗಳ ರಾಶಿಯನ್ನು ಒಂದು ಟಬ್ (ತೊಟ್ಟಿ)ನಲ್ಲಿ ತುಂಬಿಡಲಾಗುತ್ತದೆ. ಇದರಲ್ಲಿ ಕಾಲು ಮತ್ತು ಪಾದಗಳನ್ನು ನೆನೆಯಿಡುತ್ತಾರೆ. ಹೀಗೆ ಮಾಡುವುದರಿಂದ ಮೀನುಗಳು ತ್ವಚೆಯ ಮೇಲಿರುವ ಸತ್ತ ಚರ್ಮಗಳನ್ನು ತಿನ್ನುತ್ತವೆ. ತ್ವಚೆಗೆ ಉತ್ತಮ ಆರೈಕೆ ಸಿಗುವುದು. ವೈದ್ಯರ ಪ್ರಕಾರ ಈ ಚಿಕಿತ್ಸೆ ಹೆಪಟೈಟಿಸ್-ಸಿ ಎನ್ನುವ ರೋಗ ಆವರಿಸಲು ಅವಕಾಶನೀಡುವುದು ಎನ್ನುತ್ತಾರೆ.

ಸ್ನೇಕ್ ಮಸಾಜ್

ಸ್ನೇಕ್ ಮಸಾಜ್

ಇದೊಂದು ಭಯಾನಕವಾದ ಮಸಾಜ್. ಇದು ಇಸ್ರೇಲ್ ದೇಶದಲ್ಲಿ ಹೆಚ್ಚು ಚಾಲನೆಯಲ್ಲಿದೆ. ಈ ಮಸಾಜ್‍ಗೆ ಸುಮಾರು 5000 ರೂ. ವಿವಿಧ ಬಗೆಯ ಹಾವು, ವಿಭಿನ್ನ ತೂಕ ಹೊಂದಿರುತ್ತವೆ. ಇವು ಮೈಮೇಲೆ ಓಡಾಡುವುದರಿಂದ ಒಂದು ಬಗೆಯ ಮಸಾಜ್ ಆಗುವುದು. ಮಸಾಜ್‍ನ ನಂತರ ಆರಾಮಧಾಯಕ ಅನುಭವ ಆಗುವುದು ಎನ್ನುತ್ತಾರೆ.

ರಾಮೆನ್ ಬಾತ್

ರಾಮೆನ್ ಬಾತ್

ಇದೊಂದು ಬಗೆಯ ನೂಡಲ್ಸ್‍ನ ಸ್ನಾನ. ಈ ನೂಡಲ್ಸ್‍ನ ರಾಶಿಯಲ್ಲಿ ಕುಳಿತುಕೊಳ್ಳುವುದು. ಇದು 2007ರಿಂದ ಈಚೆಗೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಈ ಸ್ನಾನದಿಂದ ಚರ್ಮದ ಆರೋಗ್ಯ ಹೆಚ್ಚುವುದು ಎನ್ನಲಾಗುತ್ತದೆ. ಟೊಕಿಯೋ ಮತ್ತು ಜಪಾನ್‍ಗಳಲ್ಲಿ ಈ ಚಿಕಿತ್ಸೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಒಮ್ಮೆ ಈ ಚಿಕಿತ್ಸೆ ಪಡೆಯಲು 2000 ರೂ. ನೀಡಬೇಕು.

Image courtesy

ರಕ್ತದ ಫೇಶಿಯಲ್

ರಕ್ತದ ಫೇಶಿಯಲ್

ಕೆನಡಾದಲ್ಲಿರುವ ಒಂದು ವಿಚಿತ್ರವಾದ ಸೌಂದರ್ಯ ಚಿಕಿತ್ಸೆ ಎನ್ನಬಹುದು. ಈ ಫೇಶಿಯಲ್‍ಗೆ ನಿಮ್ಮ ತೋಳಿನಿಂದ ಸ್ವಲ್ಪ ರಕ್ತವನ್ನು ತೆಗೆದು, ಅದರಲ್ಲಿ ಬಿಳಿ ಮತ್ತು ಕೆಂಪು ರಕ್ತಕಣಗಳನ್ನು ಬೇರ್ಪಡಿಸುತ್ತಾರೆ. ನಂತರ ಅದನ್ನು ಮುಖಕ್ಕೆ ಫೇಶಿಯಲ್ ರೂಪದಲ್ಲಿ ಅನ್ವಯಿಸುತ್ತಾರೆ. ಇದರ ಬೆಲೆ 60,000 ದಿಂದ ಒಂದು ಲಕ್ಷ ರೂಪಾಯಿ ಎಂದು ಹೇಳಲಾಗುತ್ತದೆ.

ಎದೆಹಾಲು ಫೇಶಿಯಲ್

ಎದೆಹಾಲು ಫೇಶಿಯಲ್

ಎದೆಹಾಲಿಗೆ ಬಿಳಿ ಮಣ್ಣನ್ನು ಬೆರೆಸಿ, ಒಂದು ಮಿಶ್ರಣ ತಯಾರಿಸುತ್ತಾರೆ. ಈ ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 30 ನಿಮಿಷಗಳ ಕಾಲ ಬಿಡಲಾಗುವುದು. ಹೀಗೆ ಮಾಡುವುದರಿಂದ ತ್ವಚೆಯು ಮೃದು ಹಾಗೂ ಕೋಮಲವಾಗಿರುತ್ತದೆ. ಈ ಆರೈಕೆಯು ಚಿಕಾಗೊ ಮತ್ತು ಯುಎಸ್‍ಎ ಯಲ್ಲಿ ಹೆಚ್ಚು ಚಾಲ್ತಿಯಲ್ಲಿದೆ. ಇದರ ಬೆಲೆ 3000 ರೂಪಾಯಿ.

ಒಣ ಹುಲ್ಲು ಸ್ನಾನ

ಒಣ ಹುಲ್ಲು ಸ್ನಾನ

ಒಣ ಹುಲ್ಲು/ಕರಡದ ಸ್ನಾನವು ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿರುವ ಒಂದು ಸೌಂದರ್ಯ ಚಿಕಿತ್ಸೆ. ಅದು ಈಗ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಒಮ್ಮೆ ಬಿಸಿಯಾದ ಹುಲ್ಲಿನಲ್ಲಿ ನಿಮ್ಮನ್ನು ಸುತ್ತುತ್ತಾರೆ, ನಂತರ ನೀರಿನಲ್ಲಿ ಸ್ನಾನ ಮಾಡಬೇಕು. ಈ ವಿಧಾನವು ದೇಹದಲ್ಲಿ ಹೆಚ್ಚು ಶಕ್ತಿದಾಯಕವಾದ ಅನುಭವ ನೀಡುತ್ತದೆ. ಇಟಲಿಯಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ಈ ಸ್ನಾನದ ಬೆಲೆ 6000 ರೂಪಾಯಿ.

Image Courtesy

English summary

Controversial Beauty Treatments From Around The World

While for some people, these procedures sound bizarre and totally crazy, there are some who find them normal and undergo these treatments for the sake of their skin and hair. Check them out and tell us would you go for any of these if you were given a chance? Lets start with Snail Facial. Snail mucus is said to have nutrients and antioxidants and are believed to contribute to youthful appearance.
Subscribe Newsletter