ನಿಮಗೂ ಆಗಾಗ ಈ ರೀತಿಯ ಕನಸುಗಳು ಬೀಳುತ್ತದೆಯೇ ನೋಡಿ...

By Divya
Subscribe to Boldsky

ರಾತ್ರಿಯ ಸುಂದರ ನಿದ್ರೆಯಿಂದ ಸಂತುಷ್ಟರಾಗಿ, ಬೆಳಗ್ಗೆ ಎದ್ದೇಳುವಾಗ ಏನೇನೋ ಕನಸು ಕಂಡಿದ್ದೇವೆ ಎನ್ನುವುದು ಅರಿವಾಗುತ್ತದೆ. ಆದರೆ ಅದ್ಯಾವ ಕನಸು ಎಂದು ಎಷ್ಟೇ ಯೋಚಿಸಿದರೂ ಅಥವಾ ನೆನಪಿಸಿಕೊಂಡರೂ ಅವು ನೆನಪಿನಂಗಳಕ್ಕೆ ಇಳಿಯುವುದೇ ಇಲ್ಲ. ಒಮ್ಮೊಮ್ಮೆ ನಮ್ಮ ಜೀವನದಲ್ಲಿ ನಡೆಯ ಬಹುದಾದ ಘಟನೆಗಳಿಗೆ ಸಂಬಂಧಿಸಿದ ಕನಸುಗಳನ್ನು ಕಾಣುತ್ತೇವೆ. ಕೆಲವೊಮ್ಮೆ ಆಗಾಗ ಒಂದೇ ಬಗೆಯ ಕನಸನ್ನು ಪದೇ ಪದೇ ಕಾಣುತ್ತೇವೆ ಎನ್ನುವುದು ನಮಗೆ ಅರಿವಾಗುತ್ತದೆ. 

ಅಚ್ಚರಿ ಜಗತ್ತು: ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಏನರ್ಥ ಗೊತ್ತೇ?

ಆ ರೀತಿಯ ಕನಸುಗಳು ಏಕೆ ನಮ್ಮನ್ನು ಕಾಡುತ್ತವೆ ಎನ್ನುವ ಪ್ರಶ್ನೆಗೆ ಉತ್ತರ ಸಿಗದೆ ಸುಮ್ಮನಾಗುವ ಪರಿಯೇ ಹೆಚ್ಚು. ಪದೇ ಪದೇ ಒಂದೇ ಬಗೆಯ ಕನಸು ಬೀಳುತ್ತಿದ್ದರೆ ಅವುಗಳನ್ನು ಸರಿಯಾಗಿ ನೆನಪಿಟ್ಟುಕೊಳ್ಳಬಹುದು. ಈ ರೀತಿಯ ಕನಸು ನಮ್ಮ ಮನಸ್ಸು ಮತ್ತು ಮೆದುಳಿಗೆ ಸಂಬಂಧಿಸಿರುತ್ತದೆ ಎನ್ನಲಾಗುವುದು. ಕನಸಿನ ಬಗೆಗಳು ಹಾಗೂ ಅದರ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕೆಂದರೆ ಲೇಖನದ ಮುಂದಿನ ವಿವರಣೆಯನ್ನು ಓದಿ... 

ಕನಸಿನಲ್ಲಿ ಮನೆಯ ಕಂಡರೆ

ಕನಸಿನಲ್ಲಿ ಮನೆಯ ಕಂಡರೆ

ಕನಸಿನಲ್ಲಿ ಮನೆ ಹಾಗೂ ವಿವಿಧ ಕೊಠಡಿಗಳಿರುವಂತೆ ಕಂಡರೆ ಅದು ನಮ್ಮ ವಿವಿಧ ವಿಚಾರಗಳನ್ನು ಮತ್ತು ಆಂತರಿಕ ಪ್ರಜ್ಞೆಯ ಬಗ್ಗೆ ವಿವರಿಸುತ್ತದೆ. ನಮ್ಮ ಜಾಗ್ರತಾ ಮನಸ್ಸು ಕೆಲವು ವಿಚಾರಗಳ ಬಗ್ಗೆ ತಳೆದಿರುವ ಮನೋಭಾವವನ್ನು ವಿವರಿಸುತ್ತದೆ. ವ್ಯಕ್ತಿ ಅಂದುಕೊಂಡ ವಿಚಾರಗಳಿಗೆ ಯಾವುದೇ ಪ್ರೋತ್ಸಾಹವಿಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರೆ ಈ ರೀತಿಯ ಕನಸು ಕಾಣುತ್ತಾರೆ ಎಂದು ಹೇಳಲಾಗುವುದು.

ಆಹಾರದ ಕನಸು

ಆಹಾರದ ಕನಸು

ಶಕ್ತಿ, ಜ್ಞಾನ ಮತ್ತು ಆಹಾರಗಳು ನೇರವಾಗಿ ನಮ್ಮ ಬುದ್ಧಿಶಕ್ತಿ, ಭಾವನೆ ಮತ್ತು ಆಧ್ಯಾತ್ಮಿಕ ಚಿಂತನೆಗಳಿಗೆ ಸಂಬಂಧಿಸಿರುತ್ತದೆ. ನಮ್ಮ ಸುತ್ತಲಿನ ಹೊಸ ವಿಚಾರ ಮತ್ತು ಜ್ಞಾನವನ್ನು ಪಡೆದುಕೊಳ್ಳಬೇಕೆನ್ನುವ ಭಾವನೆ ಆಳವಾಗಿದ್ದರೆ, ಕನಸಿನಲ್ಲಿ ಆಹಾರ ಸೇವಿಸುತ್ತಿದ್ದಂತೆ ಅಥವಾ ಆಹಾರವನ್ನು ಕಂಡಂತೆ ಕನಸು ಕಾಣುತ್ತೇವೆ.

ಮಗುವಿನ ಕನಸು

ಮಗುವಿನ ಕನಸು

ಮಗುವಿನ ಕನಸು ಸಾಮಾನ್ಯವಾಗಿ ಹೊಸದನ್ನು ಪ್ರತಿನಿಧಿಸುತ್ತದೆ. ಇದು ಹೊಸ ಪರಿಕಲ್ಪನೆ, ಕೆಲಸದಲ್ಲಿ ಹೊಸ ಯೋಜನೆ, ನಮ್ಮ ಅಭಿವೃದ್ಧಿ ಅಥವಾ ನಮ್ಮ ಜೀವನದ ನಿರ್ದಿಷ್ಟ ಏಳಿಗೆಯನ್ನು ಬಯಸುವ ಆಂತರಿಕ ಬಯಕೆಯನ್ನು ಪ್ರತಿಬಿಂಬಿಸುತ್ತದೆ.

ಬೆನ್ನಟ್ಟುವ ಕನಸು

ಬೆನ್ನಟ್ಟುವ ಕನಸು

ಅನೇಕ ಜನರು ಕಾಣುವ ಸಾಮಾನ್ಯ ಕನಸುಗಳಲ್ಲಿ ಇದು ಒಂದು. ಇದು ನಿಮಗೆ ಬೆದರಿಕೆ ಇದೆ ಎನ್ನುವುದನ್ನು ಪ್ರತಿನಿಧಿಸುತ್ತದೆ. ನಿಮ್ಮ ಬೆನ್ನಟ್ಟಿಕೊಂಡು ಬಂದ ವ್ಯಕ್ತಿಯಿಂದ ನಿಜ ಜೀವನದಲ್ಲೂ ಅಪಾಯ ಉಂಟಾಗುವ ಸಾಧ್ಯತೆಗಳಿರುತ್ತವೆ.

ಬಟ್ಟೆಯ ಕನಸು

ಬಟ್ಟೆಯ ಕನಸು

ನಿಮ್ಮ ಕನಸಿನಲ್ಲಿ ಹರುಕಲು ಬಟ್ಟೆಯನ್ನು ಧರಿಸಿದವರಂತೆ ಕಂಡರೆ, ನೀವು ಹೊಸ ಬಟ್ಟೆಯನ್ನು ಧರಿಸಬೇಕು ಎನ್ನುವುದನ್ನು ಸೂಚಿಸುತ್ತದೆ. ನಿಜ ಜೀವನದಲ್ಲಿ ಜೀವನ ಶೈಲಿಯ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ ಅಥವಾ ಜನರು ನಮ್ಮನ್ನು ಹೇಗೆ ಗ್ರಹಿಸಬೇಕೆಂದು ಬಯಸುತ್ತೇವೆ ಎನ್ನುವುದನ್ನು ಬಟ್ಟೆಯ ರೂಪದಲ್ಲಿ ಕನಸು ವಿವರಿಸುತ್ತದೆ.

ಸಾವಿನ ಕನಸು

ಸಾವಿನ ಕನಸು

ನೀವು ಸ್ನೇಹಿತನ ಅಥವಾ ಪ್ರೀತಿ ಪಾತ್ರರ ಮರಣವನ್ನು ನೋಡಿದರೆ ಅದು ಯಾವುದೇ ಮಾನಸಿಕ ಭಾವನೆಯ ಭವಿಷ್ಯವಲ್ಲ. ಇತ್ತೀಚೆಗೆ ಯಾರೋ ಆಪ್ತರನ್ನು ಕಳೆದುಕೊಂಡಿರುವುದನ್ನು ನೋಡಿರುವುದನ್ನು ಪ್ರತಿಬಿಂಬಿಸುತ್ತದೆ. ಇಲ್ಲವೇ ಆ ವ್ಯಕ್ತಿಗಳು ನಿಮ್ಮ ಜೀವನದಲ್ಲಿ ಇನ್ನೊಮ್ಮೆ ಪಡೆದುಕೊಳ್ಳಬೇಕೆಂಬ ಬಯಕೆಯಾಗಿರುತ್ತದೆ.

ಹಾರುವ ಕನಸು

ಹಾರುವ ಕನಸು

ಸಾಮಾನ್ಯವಾಗಿ ಅನೇಕರು ಕನಸಿನಲ್ಲಿ ಹಾರಾಡುತ್ತಿದ್ದಂತೆ ಕಾಣುತ್ತಾರೆ. ಇದು ನಮ್ಮ ಜೀವನದಲ್ಲಿ ನಾವೆಷ್ಟು ನಿಯಂತ್ರಣಕ್ಕೆ ಒಳಗಾಗಿದ್ದೇವೆ ಎನ್ನುವುದನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ನಮ್ಮ ಗುರಿಯನ್ನು ತಲುಪಲು ನಾವೆಷ್ಟು ಆತ್ಮವಿಶ್ವಾಸಿಗರಾಗಿದ್ದೇವೆ ಎನ್ನುವುದನ್ನು ಇದು ಅರಿವು ಮೂಡಿಸುತ್ತದೆ.

ಬೀಳುವ ಕನಸು

ಬೀಳುವ ಕನಸು

ಬೀಳುವ ಕನಸು ಎಂದ ಮಾತ್ರಕ್ಕೆ ಅದು ಭಯಾನಕ ಅಥವಾ ನಕಾರಾತ್ಮಕ ಕನಸಲ್ಲ. ಇದು ಪ್ರಶಾಂತತೆ ಮತ್ತು ಅವಕಾಶವನ್ನು ನೀಡುವ ಕಾರ್ಯದ ಕುರಿತು ಸೂಚಿಸುತ್ತದೆ. ಅನೇಕ ವೇಳೆ ಬಲು ಎತ್ತರದಿಂದ ಬಿದ್ದಂತೆ ಕಾಣುತ್ತೇವೆ. ಇದು ನಮ್ಮ ಜೀವನದಲ್ಲಿ ಯಾವುದೋ ವಿಚಾರ ನಮ್ಮ ನಿಯಂತ್ರಣಕ್ಕಿಂತ ದೂರ ಉಳಿದಿರುವುದನ್ನು ಸೂಚಿಸುತ್ತದೆ.

ನೀರಿನ ಕನಸು

ನೀರಿನ ಕನಸು

ಕನಸಿನಲ್ಲಿ ನೀರನ್ನು ಕಾಣುವುದು ನಮ್ಮ ಭಾವನೆ ಮತ್ತು ಸುಪ್ತ ಮನಸ್ಸಿನ ಬಗ್ಗೆ ಪ್ರತಿಬಿಂಬಿಸುತ್ತದೆ ಎಂದು ಹೇಳಲಾಗುತ್ತದೆ. ನೀರಿನ ಗುಣಮಟ್ಟ, ಸ್ಪಷ್ಟತೆ, ಮಸುಕು ಮತ್ತು ಪ್ರಕ್ಷುಬ್ಧವಾಗಿರುವುದು ನಮ್ಮ ಭಾವನೆಯನ್ನು ನಿರ್ವಹಿಸುವಲ್ಲಿ ನಾವೆಷ್ಟು ಪರಿಣಾಮಕಾರಿಯಾಗಿದ್ದೇವೆ ಎನ್ನುವುದರ ಒಳನೋಟವನ್ನು ತಿಳಿಸುತ್ತದೆ.

For Quick Alerts
ALLOW NOTIFICATIONS
For Daily Alerts

    English summary

    common-dreams-and-symbols-and-why-they-are-important

    Every morning when you wake up, there are times when you realise that you dreamt about something and try to recall it; however, it just does not help. On the other hand, when you get constant dreams about watching some of the most common things or even experiencing something that happens in our daily lives, it confuses us and leaves us on thinking about its significance!
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more