ಇಲ್ಲಿಂದ ಆಯ್ದುಕೊಂಡ ಒಂದು ಪುಕ್ಕ ವ್ಯಕ್ತಿತ್ವವನ್ನು ಬಯಲು ಮಾಡಬಹುದು!!

By Arshad
Subscribe to Boldsky

ಓರ್ವ ವ್ಯಕ್ತಿಯ ಕೆಲವು ಚರ್ಯೆಗಳು ಹಾಗೂ ಪ್ರತಿಕ್ರಿಯೆಗಳು ಆತನ ವ್ಯಕ್ತಿತ್ವವನ್ನು ಆಧರಿಸಿದ್ದು ಇವುಗಳನ್ನು ಪ್ರಥಮವಾಗಿ ಗಮನಿಸುವ ಮೂಲಕ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಸ್ಥೂಲವಾಗಿ ಅಂದಾಜಿಸಬಹುದು. ವಾಸ್ತವವಾಗಿ ಇದು ಗಿಣಿಶಾಸ್ತ್ರವಲ್ಲ, ಬದಲಿಗೆ ಮನಃಶಾಸ್ತ್ರಜ್ಞರು ಕಂಡುಕೊಂಡ ಮಾಹಿತಿಗಳನ್ನು ಆಧರಿಸಿದೆ. ವ್ಯಕ್ತಿಯೊಬ್ಬರ ಎದುರಿಗೆ ವಿವಿಧ ಪುಕ್ಕಗಳನ್ನಿಟ್ಟು (ಗರಿ) ನಿಮಗೆ ಅತಿ ಇಷ್ಟ ಯಾವುದೋ ಅದನ್ನು ಆಯ್ದುಕೊಳ್ಳಿರಿ ಎಂದಾಗ ಈ ವ್ಯಕ್ತಿ ಆಯ್ದುಕೊಂಡ ಪುಕ್ಕ ಅವರ ವ್ಯಕ್ತಿತ್ವವನ್ನು ಆಧರಿಸಿರುವುದು ಕಂಡುಬಂದಿದೆ.

ಹುಟ್ಟಿದ ದಿನಾಂಕ, ವರ್ಷ, ತಿಂಗಳು ಗೊತ್ತಿದ್ದರೆ ಸಾಕು, ವ್ಯಕ್ತಿತ್ವ ತಿಳಿಯುವುದು

ಒಂದು ವೇಳೆ ನಿಮಗೆ ಈ ಚಟುವಟಿಕೆಯಲ್ಲಿ ಭಾಗಿಯಾಗುವ ಅವಕಾಶ ಒದಗಿಬಂದರೆ ನೀವು ಯಾವ ಪುಕ್ಕ ಆರಿಸಿಕೊಳ್ಳುತ್ತೀರಿ? ಇದು ನಿಮ್ಮ ವ್ಯಕ್ತಿತ್ವವನ್ನು ಬಯಲು ಮಾಡಲಿದೆ. ನಿಮ್ಮ ಬಾಂಧವರ, ಸ್ನೇಹಿತರ ನಡುವೆ ಈ ಚಟುವಟಿಕೆ ನಡೆಸಿ ಈ ಬಗ್ಗೆ ನೀವೇಕೆ ಅವರ ವ್ಯಕ್ತಿತ್ವವನ್ನು ಒರೆ ಹಚ್ಚಬಾರದರು?...

ಪುಕ್ಕ #1

ಪುಕ್ಕ #1

ಈ ಪುಕ್ಕವನ್ನು ಆರಿಸಿಕೊಳ್ಳುವವರು ಸಾಮಾನ್ಯವಾಗಿ ಶಾಂತಿಪ್ರಿಯರಾಗಿರುತ್ತಾರೆ. ಇವರು ಕೊಡುಗೈ ದಾನಿಗಳಾಗಿದ್ದು ಸುತ್ತಮುತ್ತಲೂ ಶಾಂತಿಯನ್ನೇ ಬಯಸುತ್ತಾರೆ. ಇವರ ಹೃದಯ ನಿರ್ಮಲವಾಗಿದ್ದು ತಮ್ಮಲ್ಲಿ ನೆರವು ಕೋರಿಕೊಂಡು ಬಂದವರಾರಿಗೂ ಇಲ್ಲ ಎನ್ನಲಾರದ ವ್ಯಕ್ತಿತ್ವ ಹೊಂದಿರುತ್ತಾರೆ. ಇವರನ್ನು ತನ್ನ ಸಂಬಂಧಿಗಳು ಎಂದು ಪರಿಚಿಯಿಸಿಕೊಳ್ಳಲು ಇತರರಿಗೆ ಹೆಚ್ಚು ಕಷ್ಟವಾಗಲಾರದು, ಆದರೆ ಈ ವ್ಯಕ್ತಿಗಳು ಸಂಬಂಧಕ್ಕಿಂತಲೂ ಹೆಚ್ಚಾಗಿ ಭಾವನೆಗಳಿಗೆ ಒತ್ತು ನೀಡುವ ವ್ಯಕ್ತಿಗಳಾಗಿರುತ್ತಾರೆ ಹಾಗೂ ಎದೆಗುಂದದ ವ್ಯಕ್ತಿಗಳೂ ಆಗಿರುತ್ತಾರೆ.

ಪುಕ್ಕ #2

ಪುಕ್ಕ #2

ಈ ಪುಕ್ಕವನ್ನು ಆರಿಸಿಕೊಂಡ ವ್ಯಕ್ತಿಗಳು ಇನ್ನೊಬ್ಬರ ಸ್ನೇಹವನ್ನು ಪಡೆದುಕೊಳ್ಳಲು ಪುಟ್ಟ ಕಾರಣವೊಂದನ್ನೇ ಮುಂದಿಟ್ಟುಕೊಂಡು ಸಾಧಿಸುವವರಾಗಿರುತ್ತಾರೆ. ಸಾಮಾಜಿಕವಾಗಿ ಈ ವ್ಯಕ್ತಿಗಳು ಹೆಚ್ಚು ಸಕ್ರಿಯರಾಗಿದ್ದರೂ ತಮ್ಮ ಖಾಸಗಿತನಕ್ಕೆ ಹೆಚ್ಚಿನ ಮಹತ್ವ ನೀಡುವವರಾಗಿರುತ್ತಾರೆ. ಈ ವ್ಯಕ್ತಿಗಳ ಮುನ್ನಡೆಗೆ ಇವರು ತಮ್ಮ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸದಿರುವುದೇ ಆಗಿದೆ. ಈ ಬಗ್ಗೆ ಕೊಂಚ ಹೆಚ್ಚಿನ ವಿಮರ್ಶೆಯ ಅಗತ್ಯವಿದೆ.

ಪುಕ್ಕ #3

ಪುಕ್ಕ #3

ಈ ಪುಕ್ಕವನ್ನು ಆಯ್ದುಕೊಂಡವರು ಸಾಮಾನ್ಯವಾಗಿ ಇನ್ನೊಬ್ಬರ ಮೇಲೆ ಅವಲಂಬಿತವಾಗಿರುತ್ತಾರೆ. ಇವರಿಗೆ ತಮ್ಮ ಜೀವನದ ಗುರಿಯನ್ನು ನಿರ್ಧರಿಸುವುದು ಬಹಳ ಮುಖ್ಯವಾಗಿರುತ್ತದೆ. ಜೀವನದಲ್ಲಿ ಮುನ್ನಡೆಯುವ ಅನುಭವವೇ ಇವರನ್ನು ಸದೃಢ, ವಿವೇಕಯುತ ಹಾಗೂ ನೇರನಡೆಯ ವ್ಯಕ್ತಿಗಳನ್ನಾಗಿಸುತ್ತದೆ ಎಂದು ಇವರು ನಂಬಿರುತ್ತಾರೆ. ಅಲ್ಲದೇ ಇವರು ತಮ್ಮ ಸುತ್ತಮುತ್ತಲಿರುವ ವ್ಯಕ್ತಿಗಳ ಬಗ್ಗೆ ಅನುಕಂಪ ಹೊಂದಿರುವವರೂ ಇವರ ಸಮಸ್ಯೆಗಳಿಗೆ ಸ್ಪಂದಿಸುವವರೂ ಆಗಿರುತ್ತಾರೆ. ಈ ಲಕ್ಷಣಗಳಿಂದಾಗಿಯೇ ಇವರು ಉತ್ತಮ ನಾಯಕರಾಗಿ ಹೊರಹೊಮ್ಮಬಲ್ಲರು.

ಪುಕ್ಕ #4

ಪುಕ್ಕ #4

ಈ ಪುಕ್ಕವನ್ನು ಆಯ್ದುಕೊಂಡ ವ್ಯಕ್ತಿಗಳು ಪ್ರಬಲವಾದ ವ್ಯಕ್ತಿತ್ವವನ್ನು ಹೊಂದಿದ್ದರೂ ನಿಗೂಢನೆಯನ್ನು ಕಾಯ್ದುಕೊಂಡಿರುತ್ತಾರೆ. ಇವರಲ್ಲಿ ಅದ್ಭುತವಾದ ಕಲ್ಪನಾಶಕ್ತಿ ಇದ್ದು ಈ ಶಕ್ತಿಯನ್ನು ಸಮಸ್ಯೆಗಳ ಪರಿಹಾರಕ್ಕಾಗಿ ಬಳಸಿಕೊಳ್ಳುತ್ತಾರೆ. ಸಮಸ್ಯೆ ಏನೇ ಇದ್ದರೂ ಇವರು ಸದಾ ಅತ್ಯುತ್ತಮವಾದ ಪರಿಹಾರವನ್ನೇ ಬಯಸುತ್ತಾರೆ. ಇವರಲ್ಲಿ ಒಂದು ಬಗೆಯ ಆಕರ್ಷಣೆ ಇದ್ದು ಇವರ ಸುತ್ತಮುತ್ತ ಇರುವ ಯಾರೇ ಇದನ್ನು ಉಪೇಕ್ಷಿಸಲು ಸಾಧ್ಯವೇ ಇಲ್ಲದಂದಿರುತ್ತದೆ.

ಪುಕ್ಕ #5

ಪುಕ್ಕ #5

ಈ ವ್ಯಕ್ತಿಗಳು ಸಾಮಾನ್ಯವಾಗಿ ಕಲಾವಿದರಾಗಿದ್ದು ಇವರಲ್ಲಿ ಅದ್ಭುತವಾದ ಕಲ್ಪನಾ ಶಕ್ತಿ ಹಾಗೂ ಕ್ರಿಯಾತ್ಮಕ ಶಕ್ತಿ ಹೊಮ್ಮುತ್ತಿರುತ್ತದೆ. ಆದರೆ ಕೆಲವೊಮ್ಮೆ ಇವರಿಗೆ ತಮ್ಮ ಸಾಮರ್ಥ್ಯದ ಮೇಲೇ ನಂಬಿಕೆ ಇರುವುದಿಲ್ಲವಾದುದರಿಂದ ಈ ಕೊರಗಿನಿಂದ ಇವರು ಎಷ್ಟು ಬೆಳೆಯಬೇಕಿತ್ತೋ ಅಷ್ಟು ಬೆಳೆಯಲು ಸಾಧ್ಯವಾಗುವುದಿಲ್ಲ.

ವ್ಯಕ್ತಿತ್ವ ಅಳೆಯಲು ಸುಲಭ ಉಪಾಯ ಏನು ಗೊತ್ತಾ? ಅದೇ ನಿಮ್ಮ ಮುಷ್ಟಿ!

ಪುಕ್ಕ #5

ಪುಕ್ಕ #5

ಇವರು ಬಹಳಷ್ಟು ಯೋಚನೆ ಮಾಡುವವರಾಗಿದ್ದರೂ ದಿನದ ಕೊನೆಯ ವೇಳೆಗೆ ದಿನದ ಪ್ರಾರಂಭದ ಯೋಚನೆಗಳನ್ನು ಮರೆತು ಬಿಟ್ಟಿರುತ್ತಾರೆ. ಹಾಗಾಗಿ ಇವರಿಂದ ಆಗಬೇಕಾದ ಕೆಲಸಕ್ಕೆ ಮತ್ತೊಮ್ಮೆ ಮೊದಲಿನಿಂದ ಪ್ರಾರಂಭಿಸುವುದು ಇವರಿಗೆ ಸಾಮಾನ್ಯವಾಗಿರುತ್ತದೆ. ನೀವು ಯಾವ ಪುಕ್ಕ ಆಯ್ದುಕೊಂಡಿರಿ? ನಿಮ್ಮ ವ್ಯಕ್ತಿತ್ವಕ್ಕೆ ಇದು ಸರಿಯಾಗಿತ್ತೇ? ಈ ಬಗ್ಗೆ ನಮಗೆ ಖಂಡಿತಾ ಬರೆದು ತಿಳಿಸಿ, ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿಕೊಳ್ಳಿ.

Image Source: salud y belleza

For Quick Alerts
ALLOW NOTIFICATIONS
For Daily Alerts

    English summary

    Choosing A Feather From Here Can Reveal Your Personality Traits

    Find out what exactly does the choice of the feather reveal about your personality. We bet, you would be stunned with the results, which are so apt and correct. Check out the different shapes of feathers and pick one among them to know what this tells about your personality traits.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more