For Quick Alerts
ALLOW NOTIFICATIONS  
For Daily Alerts

  ನಿಮ್ಮ ಹಚ್ಚೆಗೂ ರಾಶಿಚಕ್ರಕ್ಕೂ ಸಂಬಂಧವಿದೆಯಂತೆ!

  By Manu
  |

  ಹಚ್ಚೆ ಹಾಕಿಸಿಕೊಳ್ಳುವುದು ಈಗಿನ ಕಾಲದಲ್ಲಿ ಒಂದು ಬಗೆಯ ಫ್ಯಾಷನ್ ಆಗಿ ಬಿಟ್ಟಿದೆ. ಪ್ರೀತಿ ಪಾತ್ರರ ಹೆಸರು ಅಥವಾ ಅವರಿಗಿಷ್ಟ ವಾಗುವಂತಹ ಹಚ್ಚೆಯನ್ನು ಹಾಕಿಸಿಕೊಳ್ಳುತ್ತಾರೆ. ಹಚ್ಚೆಯ ವಿಶೇಷವೆಂದರೆ ಸಂಬಂಧದಲ್ಲಿ ಬದಲಾವಣೆಯಾದರೂ ಹಚ್ಚೆಯಲ್ಲಿ ಯಾವುದೇ ಬದಲಾವಣೆ ಉಂಟಾಗದು. ಹಾಗಾಗಿ ಜನರು ರಾಶಿ ಚಕ್ರದ ಚಿಹ್ನೆಯನ್ನು ಆಧರಿಸಿದ ಹಚ್ಚೆಗಳನ್ನು ಹಾಕಿಸಿಕೊಂಡರೆ ನಿಮ್ಮ ಭವಿಷ್ಯದ ಮೇಲೆ ಉತ್ತಮ ಪರಿಣಾಮ ಬೀರುವುದು ಎಂದು ಹೇಳಲಾಗುತ್ತದೆ.

  ನಿಜ, ಇತ್ತೀಚಿನ ದಿನಗಳಲ್ಲಿ ಹಚ್ಚೆ ಹಾಕಿಸಿಕೊಳ್ಳುವು ಹೊಸ ಪ್ರವೃತ್ತಿಯಾಗಿದೆಯಾದರೂ ತಮ್ಮ ಕಲ್ಪನೆಯಲ್ಲಿ ರಾಶಿ ಚಕ್ರ ಸೂಚಿಸಿದಂತಹ ಹೂವುಗಳ ಆಯ್ಕೆಯನ್ನು ಮಾಡಿಕೊಳ್ಳುತ್ತಾರೆ ಎಂತಲೂ ಹೇಳುತ್ತಾರೆ. ನಿಮಗೆ ಅನುಕೂಲವಾಗಲೆಂದು ಜನ್ಮ ತಿಂಗಳ ಆಧಾರದ ಮೇಲೆ ರಾಶಿಚಕ್ರ ಸೂಚಿಸುವ ಹೂವಿನ ಹಚ್ಚೆಯ ವಿಚಾರವನ್ನು ಇಲ್ಲಿ ವಿವರಿಸಿದ್ದೇವೆ ಪರಿಶೀಲಿಸಿ. ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಹಚ್ಚೆಯ ಆಯ್ಕೆ ಮಾಡಿ...

   ಜನವರಿ

  ಜನವರಿ

  ಈ ತಿಂಗಳಲ್ಲಿ ಜನಿಸಿದವರಿಗೆ ಕಾರ್ನೇಷನ್ ಹೂವನ್ನು ಸೂಚಿಸಲಾಗುತ್ತದೆ. ಇದು ಅಗ್ಗದ ಹೂವು ಎಂದು ಎನಿಸಬಹುದು. ಆದರೆ ಇರಲ್ಲಿ ಇರುವ ವಿವಿಧ ಬಣ್ಣಗಳ ಆಯ್ಕೆ ಹಾಗೂ ಸರಳತೆಯು ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಹಚ್ಚೆಯಲ್ಲಿ ಸುಂದರವಾಗಿ ಕಾಣುವುದು ಎಂದು ಹೇಳಲಾಗುವುದು.

  ಫೆಬ್ರವರಿ

  ಫೆಬ್ರವರಿ

  ಈ ಮಾಸದಲ್ಲಿ ಜನಿಸಿದವರು ನೇರಳೆ ಬಣ್ಣದ ಹೂವಿನ ಆಯ್ಕೆ ಮಾಡಿಕೊಳ್ಳಬೇಕು. ಇದೊಂದು ಕ್ರೇಜಿ ವಿಚಾರ ಎನಿಸಿದರೂ, ಇದರಿಂದ ಒಳ್ಳೆಯ ಫಲಿತಾಂಶ ನೀವು ಪಡೆದುಕೊಳ್ಳುತ್ತೀರಿ.

  ಮಾರ್ಚ್

  ಮಾರ್ಚ್

  ಡ್ಯಾಫೋಡಿಲ್ಸ್‌ಗಳು ವಸಂತಕಾಲದ ಮೊದಲ ಚಿಹ್ನೆಯಾಗಿದೆ. ಇದರ ಆಕರ್ಷಕ ಹಳದಿ ಬಣ್ಣವು ಈ ತಿಂಗಳಲ್ಲಿ ಜನಿಸಿದವರಿಗೆ ಅದೃಷ್ಟವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಸುವಾಸನೆ ಭರಿತ ಹಾಗೂ ಆಕರ್ಷಕ ಹೂವೆನಿಕೊಂಡ ಡ್ಯಾಫೋಡಿಲ್ಸ್‌ ಹಚ್ಚೆಯಲ್ಲೂ ಸುಂದರವಾಗಿ ಮೂಡಿ ಬರುವುದು.

  ಏಪ್ರಿಲ್

  ಏಪ್ರಿಲ್

  ಏಪ್ರಿಲ್ ಮಾಸದಲ್ಲಿ ಜನಿಸಿದವರಿಗೆ ಸ್ವೀಟ್ ಪೀ ಹೂವು ಅದೃಷ್ಟದ ಸಂಕೇತವಾಗಿದೆ. ಇದರ ಬಣ್ಣ ಹಾಗೂ ಸ್ವಭಾವ ಎಲ್ಲರ ಮನ ತಣಿಸುವಂತಿರುತ್ತದೆ. ಮಹಿಳೆಯರಿಗೆ ಈ ಹೂವು ಹೆಚ್ಚು ಇಷ್ಟವಾಗುವುದು ಎಂದು ಹೇಳಲಾಗುತ್ತದೆ.

  ಮೇ

  ಮೇ

  ಲಿಲ್ಲಿ ಆಫ್ ದಿ ವ್ಯಾಲಿ ಹೂವು ಮೇ ತಿಂಗಳಲ್ಲಿ ಜನಿಸಿದವರಿಗೆ ಶುಭವನ್ನು ಸೂಚಿಸುತ್ತದೆ. ಇದರ ಹಚ್ಚೆಯೂ ಹೆಚ್ಚು ಆಕರ್ಷಕವಾಗಿರುತ್ತದೆ. ಇದರ ಸೌಂದರ್ಯ ಹಾಗೂ ವಿನ್ಯಾಸವು ಇತರರನ್ನು ಆಕರ್ಷಿಸುತ್ತದೆ.

  ಜೂನ್

  ಜೂನ್

  ಜೂನ್ ತಿಂಗಳಲ್ಲಿ ಜನಿಸಿದವರು ಹನಿಸಕಲ್ ಮತ್ತು ಗುಲಾಬಿ ಈ ಎರಡು ಹೂವುಗಳ ಆಯ್ಕೆಮಾಡಿಕೊಳ್ಳಬಹುದು. ಗುಲಾಬಿ ಹೂವು ಸಾಮಾನ್ಯವಾಗಿ ಎಲ್ಲರೂ ತಿಳಿದಿರುತ್ತಾರೆ. ಹನಿಸಕಲ್ ಹೂ ಅಪರೂಪದ ಹಚ್ಚೆ ಎನಿಸಿಕೊಳ್ಳುವುದು. ಇವೆರಡರ ಆಯ್ಕೆಯಲ್ಲಿ ಎರಡೂ ಸುಂದರವಾಗಿ ಮೂಡಿಬರುವುದು, ಅಲ್ಲದೆ ಅದೃಷ್ಟವನ್ನು ಹೆಚ್ಚಿಸುವುದು.

  ಜುಲೈ

  ಜುಲೈ

  ಈ ಮಾಸದಲ್ಲಿ ಜನಿಸಿದವರಿಗೆ ವಾಟರ್ ಲಿಲ್ಲಿ ಶುಭವನ್ನು ತರುವುದು. ಈ ಹೂವಿನಲ್ಲಿ ಬಣ್ಣಗಳ ಆಯ್ಕೆ ಇದೆ. ಸುಂದರ ವಿನ್ಯಾಸವನ್ನು ಹೊಂದಬಹುದು. ಹಚ್ಚೆಯು ಸುಂದರವಾಗಿ ಮೂಡುವುದು. ಹಾಗೂ ಇತರರನ್ನು ಆಕರ್ಷಿಸುವುದು.

  ಆಗಸ್ಟ್

  ಆಗಸ್ಟ್

  ಈ ಮಾಸದಲ್ಲಿ ಜನಿಸಿದವರಿಗೆ ಪೋಪೀ ಹೂವು ಅದೃಷ್ಟವನ್ನು ಹೆಚ್ಚಿಸುವುದು. ಆಕರ್ಷಕ ಕೆಂಪು ಬಣ್ಣದಲ್ಲಿರುವ ಈ ಹೂವಿನ ಮೊಗ್ಗು ಹಾಗೂ ದಳಗಳು ಎಲ್ಲರನ್ನು ಆಕರ್ಷಿಸುತ್ತವೆ. ಇದರ ಹಚ್ಚೆಯ ವಿನ್ಯಾಸವೂ ವಿಶೇಷವಾಗಿ ಮೂಡಿಬರುವುದು.

  ಸಪ್ಟೆಂಬರ್

  ಸಪ್ಟೆಂಬರ್

  ಮಾರ್ನಿಂಗ್ ಗ್ಲೋರಿ ಹೂವು ಪರಿಪೂರ್ಣತೆಯನ್ನು ಸೂಚಿಸುತ್ತದೆ. ಇದು ಸಪ್ಟೆಂಬರ್ ತಿಂಗಳಲ್ಲಿ ಜನಿಸಿದವರಿಗೆ ಶುಭ ತರುವುದು. ಸುಂದರವಾದ ಬಣ್ಣ ಹಾಗೂ ವಿನ್ಯಾಸವು ಹಚ್ಚೆಯ ಆಕರ್ಷಣೆಯನ್ನು ಹೆಚ್ಚಿಸುವುದು.

  ಅಕ್ಟೋಬರ್

  ಅಕ್ಟೋಬರ್

  ಕ್ಯಾಲೆಡುಲಾ ಜನ್ಮ ಜಾತ ಟ್ಯಾಟೂ ಎಂದು ಪರಿಗಣಿಸಲಾಗುವುದು. ಇದನ್ನು ಹೆಚ್ಚಾಗಿ ಮಾರಿಗೋಲ್ಡ್ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ. ಈ ಸುಂದರ ಹೂವಿನ ಬಣ್ಣವು ಹೆಚ್ಚು ಆಕರ್ಷಿಸುವುದು. ಇದನ್ನು ಭುಜದ ಮೇಲೆ ಅಥವಾ ತೋಳಿನ ಮೇಲೆ ಹಾಕಿಸಿಕೊಂಡರೆ ಒಳ್ಳೆಯದು ಎನ್ನಲಾಗುತ್ತದೆ.

  ನವೆಂಬರ್

  ನವೆಂಬರ್

  ಕ್ರೈಸಾಂಥೆಮ್ ಹೂವು ನವೆಂಬರ್‍ನಲ್ಲಿ ಜನಿಸಿದವರಿಗೆ ಅದೃಷ್ಟವನ್ನು ಹೆಚ್ಚಿಸುತ್ತವೆ. ಇದರ ಹಚ್ಚೆಯು ಸರಳ ಹಾಗೂ ಸುಂದರವಾಗಿ ಕಾಣುತ್ತದೆ. ವಿನ್ಯಾಸ ಹಾಗೂ ಬಣ್ಣವು ಇತರರನ್ನು ಹೆಚ್ಚು ಆಕರ್ಷಿಸುವುದು.

  ಡಿಸೆಂಬರ್

  ಡಿಸೆಂಬರ್

  ಹೋಲಿ ಹೂವು ಡಿಸೆಂಬರ್ ಮಾಸದಲ್ಲಿ ಜನಿಸಿದವರಿಗೆ ಹೆಚ್ಚು ಶುಭವನ್ನು ತರುವುದು. ಇದು ಕಪ್ಪು ಮತ್ತು ಬೂದು ಬಣ್ಣದಲ್ಲಿರುವುದರಿಂದ ಹಚ್ಚೆಯು ಹೆಚ್ಚು ಆಕರ್ಷಕವಾಗಿರುವುದು. ಇದರಲ್ಲಿರುವ ವಿಭಿನ್ನ ಶೈಲಿಯು ಇತರರಿಗೆ ಆಕರ್ಷಕ ಹಾಗೂ ಕ್ರೇಜಿ ಎನಿಸುವುದು.

  English summary

  Choose A Birth Flower Instead Of Zodiac Tattoo

  Many people get Zodiac sign-based tattoos. This is the one thing that will never change, even if relationships change; and that is the reason most of them opt for these kind of tattoos. So getting a zodiac tattoo seems to be a cool idea, but what if we have a better idea than getting only a plain symbol-based tattoo design? So, check out your birth flower, for each of the 12 months, from below and choose this as your next tattoo design...
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more