For Quick Alerts
ALLOW NOTIFICATIONS  
For Daily Alerts

ಈ ಮಗುವನ್ನು ಕಂಡರೆ ಎಲ್ಲರಿಗೂ ಭೀತಿಯಂತೆ!! ಯಾಕೆ ಗೊತ್ತೇ?

By Hemanth
|

ಮಹಿಳೆಯೊಬ್ಬಳು ಗರ್ಭ ಧರಿಸಿದ ಬಳಿಕ ತನ್ನ ಮಗುವಿನ ಬಗ್ಗೆ ಹಲವಾರು ರೀತಿಯ ಕನಸು ಕಾಣುತ್ತಾ ಇರುತ್ತಾಳೆ. ಮಗುವಿನ ಜನನದ ತನಕ ಆಕೆಯ ಕನಸುಗಳಿಗೆ ಮಿತಿ ಎನ್ನುವುದೇ ಇರುವುದಿಲ್ಲ. ತನ್ನ ಮಗು ಹೀಗೆ ಇರಬೇಕು. ಹೀಗೆ ಬೆಳೆಯಬೇಕು ಎಂದು ಹಲವಾರು ರೀತಿಯ ಯೋಜನೆಗಳನ್ನು ಹಾಕಿಕೊಳ್ಳುತ್ತಾಳೆ. ಮಗು ರಾಜಕುಮಾರನಂತಿರಬೇಕು. ರಾಣಿಯಂತಿರಬೇಕೆಂಬ ಕನಸುಗಳು ಆಕೆಯಲ್ಲಿರುತ್ತದೆ. ಮಗುವಿನ ಜನನದ ಬಳಿಕ ಆಕೆಯ ಕನಸೆಲ್ಲವೂ ನನಸಾಗುವುದು.

ಆದರೆ ಕೆಲವೊಂದು ಸಂದರ್ಭದಲ್ಲಿ ಕುರೂಪವಿರುವ ಮಕ್ಕಳು ಹುಟ್ಟಿದರೂ ತಾಯಿ ಅದನ್ನು ಪ್ರೀತಿಸುತ್ತಾಳೆ. ಈ ಲೇಖನದಲ್ಲಿ ಹೇಳಲು ಹೊರಟಿರುವುದು ಗಲ್ಲ ಹಾಗೂ ತುಟಿಯೇ ಇಲ್ಲದ ಜನಿಸಿದ ಹೆಣ್ಣು ಮಗುವಿನ ಬಗ್ಗೆ. ಇದನ್ನು ನೋಡಿ ಹೆತ್ತ ತಾಯಿ ಒಮ್ಮೆ ದಂಗಾದರೂ ಅದನ್ನು ತೋರಿಸಿಕೊಡದೆ ಮಗುವನ್ನು ಪ್ರೀತಿಯಿಂದ ಕಾಣುತ್ತಿದ್ದಾಳೆ. ಈ ಅಸಾಮಾನ್ಯ ಮಗು ಮತ್ತು ಅದನ್ನು ಸಾಮಾನ್ಯ ಮಕ್ಕಳಂತೆ ಬೆಳೆಸಲು ಹೆತ್ತವರು ಪಡುತ್ತಿರುವ ಕಷ್ಟದ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಮುಂದೆ ಓದುತ್ತಾ ಸಾಗಿ....

ಮಗು ಹುಟ್ಟಿದಾಗ ವೈದ್ಯರು ಮಗುವನ್ನು ತಾಯಿಯಿಂದ ಅಡಗಿಸಿಟ್ಟರು!

ಮಗು ಹುಟ್ಟಿದಾಗ ವೈದ್ಯರು ಮಗುವನ್ನು ತಾಯಿಯಿಂದ ಅಡಗಿಸಿಟ್ಟರು!

ಎಲೆನಾ ಶೆಪ್ಲರ್ ಎಂಬಾಕೆ ತನ್ನ ಮಗಳು ಡರಿನಾಗೆ ಜನ್ಮ ನೀಡಿದಾಗ ವೈದ್ಯರು ಮಗುವನ್ನು ತೋರಿಸಲು ಹಿಂಜರಿದರು. ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಗೊಂದಲವೇರ್ಪಟ್ಟಿತ್ತು. ವೈದ್ಯರು ತುಂಬಾ ಚಿಂತೆಗೊಳಗಾಗಿದ್ದರು ಮತ್ತು ಮಗುವನ್ನು ಬಟ್ಟೆಯಲ್ಲಿ ಸುತ್ತಿದ್ದರು. ಏನೋ ಸಮಸ್ಯೆಯಿದೆ ಎಂದು ಆಗಲೇ ತಾಯಿಗೆ ಅರಿವಾಗಿತ್ತು.

ಮಗುವನ್ನು ನೋಡಿದಾಗ ಆಕೆ ಮೂರ್ಛೆ ಹೋದಳು!

ಮಗುವನ್ನು ನೋಡಿದಾಗ ಆಕೆ ಮೂರ್ಛೆ ಹೋದಳು!

ವೈದ್ಯರಿಗೆ ಕೂಡ ಮಗುವಿಗೆ ಬಗ್ಗೆ ಗೊಂದಲವಿದ್ದ ಕಾರಣ ಗಂಟೆಗಟ್ಟಲೆ ಮಗುವನ್ನು ತಾಯಿಗೆ ತೋರಿಸಿರಲಿಲ್ಲ. ಆದರೆ ಎಲೆನಾ ಪಟ್ಟು ಬಿಡದೇ ಇದ್ದಾಗ ಮಗುವನ್ನು ಆಕೆಗೆ ತೋರಿಸಿದರು. ಮಗುವಿಗೆ ಗಲ್ಲ ಮತ್ತು ತುಟಿಗಳು ಇಲ್ಲದೆ ಇರುವುದನ್ನು ನೋಡಿ ಆಕೆ ಮೂರ್ಛೆ ಹೋದಳು.

ಮಗುವಿಗೆ ಮುಖದ ಸಮಸ್ಯೆ

ಮಗುವಿಗೆ ಮುಖದ ಸಮಸ್ಯೆ

ಈ ಮಗು ಗಂಭೀರವಾದ ಮುಖದ ಸಮಸ್ಯೆಯೊಂದಿಗೆ ಜನ್ಮ ತಾಳಿದೆ. ಮಗುವಿಗೆ ತುಟಿ ಹಾಗೂ ಗಲ್ಲ ಇರಲಿಲ್ಲ. ಇಷ್ಟು ಮಾತ್ರವಲ್ಲದೆ ಮಗು ಹುಟ್ಟುವಾಗ ಮುಖದ ತುಂಬಾ ರಕ್ತವಿತ್ತು. ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋಗುವಂತೆ ವೈದ್ಯರು ಸೂಚಿಸಿದ್ದರು.

ಮಗುವಿಗಾಗಿ ಹೆತ್ತವರು ಹೋರಾಡಿದರು

ಮಗುವಿಗಾಗಿ ಹೆತ್ತವರು ಹೋರಾಡಿದರು

ಮಗುವಿನ ಮೇಲಿನ ಪ್ರೀತಿಯಿಂದಾಗಿ ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋಗಲು ಹೆತ್ತವರು ನಿರಾಕರಿಸಿ ಮನೆಗೆ ಕರೆದುಕೊಂಡು ಹೋದರು. ಮಗು ತುಂಬಾ ಸಣ್ಣದಾಗಿದ್ದರೂ ಈಗಾಗಲೇ ಹಲವಾರು ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಮಗುವನ್ನು ಸಮಾಜ ತಿರಸ್ಕರಿಸಿತು....

ಮಗುವನ್ನು ಸಮಾಜ ತಿರಸ್ಕರಿಸಿತು....

ಮಗುವನ್ನು ಹೊರಗಡೆ ಕರೆದುಕೊಂಡು ಹೋಗಲು ಹೆತ್ತವರು ತುಂಬಾ ಕಷ್ಟಪಡಬೇಕಾಯಿತು. ಹೆಚ್ಚಿನ ಸಲ ಮಗುವಿನ ಮುಖಕ್ಕೆ ಮಾಸ್ಕ್ ಹಾಕಿ ಹೊರಹೋಗುತ್ತಿದ್ದರು. ಮಗುವಿಗೆ ಶಾಲೆಯಲ್ಲಿ ಕೂಡ ಪ್ರವೇಶ ಸಿಗಲಿಲ್ಲ. ಮಗುವನ್ನು ನೋಡಿ ಇತರ ಮಕ್ಕಳು ಹೆದರುತ್ತಾರೆ ಎನ್ನುವ ಕಾರಣದಿಂದ ಆಕೆಗೆ ಪ್ರವೇಶ ನಿರಾಕರಿಸಲಾಗಿದೆ.

ಹೆತ್ತವರು ಮಾತ್ರ ತಮ್ಮ ಪ್ರೀತಿ ಕಡಿಮೆ ಮಾಡಿಲ್ಲ.....

ಮಗುವಿಗೆ ಈಗಾಗಲೇ ಹಲವಾರು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆದರೂ ಸಾಮಾನ್ಯ ಮಕ್ಕಳಂತೆ ಆಗಲು ಇನ್ನೂ ಸಮಯ ಬೇಕಾಗುವುದರಿಂದ ಆಕೆಯನ್ನು ಕತ್ತಲೆಯಲ್ಲಿ ಇಡಲು ಸಾಧ್ಯವಿಲ್ಲ ಎಂದು ಹೆತ್ತವರು ಹೇಳುತ್ತಾರೆ. ಮಗು ಇತರ ಸಾಮಾನ್ಯ ಮಕ್ಕಳಂತೆ ಆಗಲಿ ಎನ್ನುವುದೇ ನಮ್ಮ ಹಾರೈಕೆ.....ಈ ವಿಡಿಯೋ ನಿಮಗೆ ಎಲ್ಲವನ್ನೂ ತಿಳಿಸಲಿದೆ.

English summary

Child Who Has No Lips And Chin!

This is one such rare case where the baby girl was born without lips and chin and the moment the parents were handed over with the baby girl, they knew that its their child and they love her immensely despite her abnormality. Check out more on this unusual case of the kid who was born without lips and chin and how her parents are struggling to raise her like a regular kid...
X
Desktop Bottom Promotion