Latest Updates
-
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ!
ಬೆಕ್ಕಿನ ಮಲದಿಂದ ತಯಾರಿಸಿದ 'ಕಾಫಿ' ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!!
ಮನುಷ್ಯರು ತಿನ್ನುವ ಆಹಾರದ ವೈವಿಧ್ಯತೆ ನೋಡಿದರೆ ಬೆರಗಾಗುತ್ತದೆ. ಮರದ ಚೆಕ್ಕೆ, ಚಿಗುರು, ಮಣ್ಣು, ಗಡ್ಡೆ, ಮಾಂಸ, ಇನ್ನೇನೇನೋ. ಕೆಲವರಂತೂ ಜೀವಂತ ಮೀನು, ನಾಯಿಮಾಂಸ ಮೊದಲಾದವುಗಳನ್ನು ತಿನ್ನುವ ಮೂಲಕ ಭಿನ್ನವಾದ ರುಚಿ ಮತ್ತು ಅನುಭವ ಪಡೆಯಬಯಸುತ್ತಾರೆ.
ವಿಶ್ವದ ಹಲವೆಡೆ ಇಂತಹ ನೂರಾರೂ ವಿಚಿತ್ರ ಆಹಾರಗಳನ್ನು ಸೇವಿಸುತ್ತಿದ್ದು ಇವುಗಳಲ್ಲಿ ಕೆಲವು ಈಗ ಭಾರತಕ್ಕೂ ಲಗ್ಗೆಯಿಟ್ಟಿದೆ. ದಕ್ಷಿಣ ಭಾರತದ ಬೆಳಗ್ಗಿನ ಪೇಯವಾಗಿರುವ ಕಾಫಿಯಲ್ಲಿ ಒಂದು ವಿಧದ ಕಾಫಿ ಇದೆ. ಇದು ವಿಶ್ವದ ಅತಿ ದುಬಾರಿ ಕಾಫಿಯಾಗಿದ್ದು ಇದುವರೆಗೆ ಪೂರ್ವ ಏಶಿಯಾ ದೇಶಗಳಲ್ಲಿ ಜನಪ್ರಿಯವಾಗಿತ್ತು.
ಜಾವಾ ಮತ್ತು ಸುಮಾತ್ರಾ ದೇಶಗಳಲ್ಲಿ ಪ್ರಥಮವಾಗಿ ಪ್ರಾರಂಭವಾದ ಈ ಕಾಫಿ ಯಾವುದರಿಂದ ತಯಾರಾಗುತ್ತದೆ ಗೊತ್ತೇ? ಕಾಫಿ ಬೀಜದಿಂದಲೇ, ಆದರೆ ಈ ಬೀಜಗಳಿರುವ ಹಣ್ಣುಗಳನ್ನು ಸಿವೆಟ್ ಎಂಬ ಬೆಕ್ಕು ತಿಂದು ಹೊರತಿರುಳನ್ನು ಜೀರ್ಣಿಸಿ ಒಳಗಿನ ಗಟ್ಟಿಬೀಜವನ್ನು ಉಚ್ಛಿಷ್ಠದಲ್ಲಿ ವಿಸರ್ಜಿಸುತ್ತದೆ. ಈ ಬೀಜಗಳನ್ನು ಸ್ವಚ್ಛಗೊಳಿಸಿ ಹುರಿದು ಪುಡಿ ಮಾಡಿದ ಕಾಫಿಯೇ ಸಿವೆಟ್ ಕಾಫಿ ಅಥವಾ ಕ್ಯಾಟ್ ಪೂ ಕಾಫಿ.....

ಈಗ ಈ ಕಾಫಿ ಭಾರತದಲ್ಲಿ ಲಭ್ಯವಿದೆ
ಕೇಳಲು ಇಸ್ಸೀ ಎನ್ನಿಸುವ ಕಾಫಿಯ ರುಚಿ ನೋಡಬೇಕೆಂದಿದ್ದರೆ ಜಾವಾ ಸುಮಾತ್ರಾ ದೇಶಕ್ಕೇ ಹೋಗಬೇಕೆಂದಿಲ್ಲ. ಈಗ ಭಾರತದಲ್ಲಿಯೂ ಈ ಕಾಫಿ ಲಭ್ಯವಿದೆ. ಅದೂ ನಮ್ಮ ಕರ್ನಾಟಕದಲ್ಲಿಯೇ, ಕಿತ್ತಳೆಯ ಜಿಲ್ಲೆ ಕೊಡಗಿನಲ್ಲಿ (ಕಾಫಿಯ ಜಿಲ್ಲೆ ಎಂದು ಹೆಸರಾಗಿರುವುದು ಚಿಕ್ಕಮಗಳೂರು!)

ಕಾಫಿ ಮೊದಲು ಜನಪ್ರಿಯಗೊಂಡಿದ್ದು ಇಂಡೋನೇಷ್ಯಾದಲ್ಲಿ
ಜಾವಾ ಸುಮಾತ್ರಾದಲ್ಲಿ (1830-70) ರಲ್ಲಿ ಕಾಫಿಯನ್ನು ಡಚ್ಚರು ಸೇವಿಸುತ್ತಿದ್ದರು. ಆದರೆ ಈ ಕಾಫಿಗೆ ವಾಣಿಜ್ಯರೂಪದ ಬಳಕೆ ಬಂದಿದ್ದು ಮಾತ್ರ ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ. ಈ ಕಾಫಿಯ ಜನಪ್ರಿಯತೆ ಹೆಚ್ಚುತ್ತಿದ್ದಂತೆಯೇ ಕಾಫಿಯ ಬೆಲೆಯೂ ಹೆಚ್ಚುತ್ತಾ ಹೋಗಿದೆ. ಇಂದ ವಿಶ್ವದ ಹಲವೆಡೆ ಸಿವೆಟ್ ಕಾಫಿ ಎಂದು ಜನಪ್ರಿಯವಾಗಿದ್ದು ಈಗ ಕರ್ನಾಟಕಕ್ಕೂ ಬಂದಿದೆ.

ಇದು ಏಕಾಗಿ ಇಷ್ಟು ದುಬಾರಿ?
ಈ ಬೀಜಗಳನ್ನು ಎಷ್ಟು ಬೇಕೋ ಅಷ್ಟು ಪ್ರಮಾಣದಲ್ಲಿ ಪಡೆಯಲು ಸಾಧ್ಯವಿಲ್ಲ. ಏಕೆಂದರೆ ಕಾಫಿಹಣ್ಣುಗಳು ಚೆನ್ನಾಗಿ ಕಳಿತ ಬಳಿಕ ಸಿವೆಟ್ ಎಂಬ ಬೆಕ್ಕು (Asian palm civet (Paradoxurus hermaphroditus)) ಇದನ್ನು ತಿನ್ನಬೇಕು. ಈ ಬೆಕ್ಕಕಿನ ಕರುಳುಗಳಲ್ಲಿ ಈ ಹಣ್ಣುಗಳು ಜೀರ್ಣಗೊಂಡು ಒಳಗಿನ ಗಟ್ಟಿಬೀಜಗಳು ಮಾತ್ರ ಜೀರ್ಣಗೊಳ್ಳದೇ ಉಚ್ಛಿಷ್ಠದಲ್ಲಿ ಹೊರಬರಬೇಕು. ಈ ಉಚ್ಛಿಷ್ಠವನ್ನು ಸಂಗ್ರಹಿಸಿ ಸ್ವಚ್ಛಗೊಳಿಸಿ ಬೀಜಗಳನ್ನು ಪ್ರತ್ಯೇಕಿಸಬೇಕು. ಅಂದರೆ ಈ ಪ್ರಮಾಣ ಒಂದು ಬೆಕ್ಕು ಪ್ರತಿದಿನ ವಿಸರ್ಜಿಸುವ ಪ್ರಮಾಣ ಹಾಗೂ ಬೆಕ್ಕುಗಳ ಸಂಖ್ಯೆಗಳ ಮೇಲೆ ಅವಲಂಬಿತವಾಗಿರುವುದರಿಂದ ಈ ಬೀಜಗಳು ಕಡಿಮೆ ಪ್ರಮಾಣದಲ್ಲಿ ದೊರಕುತ್ತವೆ.

ಈ ಕಾಫಿಯಲ್ಲಿ ಪೌಷ್ಟಿಕಾಂಶಗಳೂ ಇವೆ
ಈ ಕಾಫಿ ಬೀಜ ಅತಿ ದುಬಾರಿಯಾಗಿರಲು ಇದೊಂದೇ ಕಾರಣವಲ್ಲ. ಬದಲಿಗೆ ಈ ಕಾಫಿಯಲ್ಲಿ ಇತರ ಕಾಫಿಯಲ್ಲಿ ಇರದ ಇತರ ಪೋಷಕಾಂಶಗಳಿವೆ ಎಂದು ಸಂಶೋಧಕರು ಪ್ರಕಟಿಸಿರುವುದೇ ಕಾರಣ. ಅಲ್ಲದೇ ಈ ಬೆಕ್ಕುಗಳು ವಿಸರ್ಜಿಸಿದ ಅಲ್ಲಾ ಉಚ್ಛಿಷ್ಠಗಳಿಂದ ಸಂಗ್ರಹಿಸಿದ ಬೀಜ ಉತ್ತಮ ಗುಣಮಟ್ಟ ಹೊಂದಿರುವುದಿಲ್ಲ. ಆದ್ದರಿಂದ ಉತ್ತಮ ಗುಣಮಟ್ಟ ಹೊಂದಿರುವ ಬೀಜಗಳನ್ನು ಪ್ರತ್ಯೇಕಿಸುವುದೇ ಕಷ್ಟಕರವಾದ ಕೆಲಸವಾಗಿದ್ದು ಪರಿಣಾಮವಾಗಿ ಈ ಬೀಜಗಳ ಬೆಲೆ ಗಗನಕ್ಕೇರುತ್ತದೆ.

ಕಾಫಿಗೆ ರುಚಿ ಬರಲು ಕಾರಣ?
ಈ ಬಗ್ಗೆ ನಡೆಸಿದ ಸಂಶೋಧನೆಗಳಲ್ಲಿ ಬೆಕ್ಕಿನ ಕರುಳಿನಲ್ಲಿರುವ ಆಮ್ಲೀಯತೆ ಹೊರಗಿನ ತಿರುಳನ್ನು ಕರಗಿಸಬಲ್ಲದಾದರೂ ಒಳಗಿನ ಗಟ್ಟಿ ಬೀಜವನ್ನು ಜೀರ್ಣಿಸಿಕೊಳ್ಳಲಾರವು. ಬದಲಿಗೆ ಈ ಆಮ್ಲೀಯತೆಯ ಪರಿಸರದಲ್ಲಿ ಕಾಫಿ ಬೀಜ ಸೂಕ್ತಪ್ರಮಾಣದಲ್ಲಿ ಹುರಿದಂತಹ ಪ್ರಭಾವಕ್ಕೆ ಒಳಗಾಗುವ ಮೂಲಕ ವಿಶೇಷ ಸ್ವಾದ ಮತ್ತು ಪೋಷಕಾಂಶಗಳನ್ನು ಪಡೆಯುತ್ತದೆ. ಇದೇ ಕಾರಣಕ್ಕೆ ಈ ಕಾಫಿ ವಿಶೇಷವಾಗಿದೆ.

ಈ ಕಾಫಿಯ ಬೆಲೆ ಎಷ್ಟು?
ಸಾಮಾನ್ಯ ಜನರು ಹೆಸರು ಕೇಳಿಯೇ ಕುಡಿಯಲಿಚ್ಛಿಸದವರು ಬೆಲೆ ಕೇಳಿಯಂತೂ ಈ ಕಾಫಿಯ ಸಹವಾಸವೇ ಬೇಡ ಎಂದು ದೂರ ಹೋಗುವುದು ಖಚಿತ. ಏಕೆಂದರೆ ವಿದೇಶದಲ್ಲಿ ಈ ಕಾಫಿಪುಡಿ ಕೇಜಿಯೊಂದಕ್ಕೆ ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ಸಾವಿರ ರೂ ಬೆಲೆ ಬಾಳುತ್ತದೆ.

ಈ ಕಾಫಿಯ ಬೆಲೆ ಎಷ್ಟು?
ಇದೇ ಕಾರಣಕ್ಕೆ ಐರೋಪ್ಯ ಹಾಗೂ ಗಲ್ಫ್ ರಾಷ್ಟ್ರಗಳ ಶ್ರೀಮಂತ್ರ ವ್ಯಕ್ತಿಗಳು ಮಾತ್ರವೇ, ಅದರಲ್ಲೂ ಈ ಕಾಫಿಯ ಬಗ್ಗೆ ವಿಶೇಷ ಅಭಿರುಚಿಯುಳ್ಳವರು ಮಾತ್ರವೇ ಇದರ ಗಿರಾಕಿಗಳಾಗಿದ್ದಾರೆ. ಆದರೆ ನಮ್ಮ ಕೊಡಗಿನಲ್ಲಿ ಈ ಬೀಜಗಳನ್ನು ಯಾವ ಬೆಕ್ಕುಗಳಿಗೆ ತಿನ್ನಿಸಿ ಬೀಜಗಳನ್ನು ಪಡೆಯುತ್ತಿದ್ದಾರೋ ಗೊತ್ತಿಲ್ಲ, ಆದರೆ ಬೆಲೆ ಮಾತ್ರ ಕೇಜಿಗೆ ಎಂಟು ಸಾವಿರ ರೂ. ನಿಗದಿಪಡಿಸಿದ್ದಾರೆ. ಈ ಕಾಫಿ ಪ್ರಯತ್ನಿಸಲು ಬಯಸುವಿರಾ? ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.



Click it and Unblock the Notifications