Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಖತರ್ನಾಕ್ ಕಾಯಿಲೆ ಎದುರಿಸಿ, ಕೊನೆಗೂ ಆಕೆ ರೂಪದರ್ಶಿಯಾದಳು!
ಸಾಧಿಸುವ ಗುರಿ ಹಾಗೂ ಛಲವಿದ್ದರೆ ಏನು ಬೇಕಾದರೂ ಮಾಡಬಹುದು. ಅದರಲ್ಲೂ ಫ್ಯಾಷನ್ ಲೋಕದಲ್ಲಿ ಮುಂದೆ ಬರಬೇಕಾದರೆ ತುಂಬಾ ಶ್ರಮ ವಹಿಸಬೇಕು. ಫ್ಯಾಷನ್ ಲೋಕವು ಹೊರಗಿನಿಂದ ತುಂಬಾ ಸುಂದರವಾಗಿ ಕಂಡರೂ ಅದರೊಳಗೆ ನುಗ್ಗಿ ಅದರಲ್ಲಿ ಯಶಸ್ಸು ಪಡೆಯಲು ತುಂಬಾ ಸಮಯ ಹಾಗೂ ಶ್ರಮ ಬೇಕು. ಜನಪ್ರಿಯ ವ್ಯಕ್ತಿಗಳನ್ನು ಹಿಂದಕ್ಕಿ ಮುಂದೆ ಸಾಗಬೇಕಾದರೆ ಹಲವಾರು ರೀತಿಯ ಅಡೆತಡೆಗಳು ಬರುವುದು ಸಹಜ.
ಇಂತಹ ಫ್ಯಾಷನ್ ಲೋಕದಲ್ಲಿ ಇವೆಲ್ಲವನ್ನೂ ಮೀರಿ ನಿಂತಿರುವ ರೂಪದರ್ಶಿಯೆಂದರೆ ಆಕೆ ಸಾರಾ ಜ್ಯೂರ್ಟ್ಸ್. ತನಗೆ ಡರ್ಮಟೊಸ್ಪರಾಕ್ಸಿಸ್ ಎಹ್ಲೆರ್ಸ್-ಡಾನ್ಲೋಸ್ ಸಿಂಡ್ರೋಮ್ ಎನ್ನುವ ಕಾಯಿಲೆಯಿದ್ದರೂ ಸಹಿತ ಇದೆಲ್ಲನ್ನೂ ಮೀರಿ ಆಕೆ ಒಳ್ಳೆಯ ರೂಪದರ್ಶಿಯಾಗಿದ್ದಾಳೆ. ಕಾಯಿಲೆಯು ಆಕೆಯ ಆತ್ಮವಿಶ್ವಾಸ ಮತ್ತು ಸ್ಫೂರ್ತಿಗೆ ಯಾವುದೇ ತೊಂದರೆ ಮಾಡಿಲ್ಲ. ಇದರ ಬಗ್ಗೆ ಮತ್ತಷ್ಟು ತಿಳಿಯಲು ಮುಂದೆ ಓದಿ....

ಇದು ತುಂಬಾ ಅಪರೂಪದ ಪರಿಸ್ಥಿತಿ
ಎಹ್ಲೆರ್ಸ್-ಡಾನ್ಲೋಸ್ ಸಿಂಡ್ರೋಮ್ ತುಂಬಾ ಅಪರೂಪದಲ್ಲಿ ಅಪರೂಪದ ಕಾಯಿಲೆ. ಸುಮಾರು ಐದು ಸಾವಿರ ಮಂದಿಯಲ್ಲಿ ಒಬ್ಬರಿಗೆ ಮಾತ್ರ ಇಂತಹ ಕಾಯಿಲೆ ಕಾಣಿಸಿಕೊಳ್ಳುವುದು. ಸಾರಾ ರೀತಿ ಡರ್ಮಟೊಸ್ಪರಾಕ್ಸಿಸ್ ಎಹ್ಲೆರ್ಸ್-ಡಾನ್ಲೋಸ್ ಸಿಂಡ್ರೋಮ್ ಬಳಲುತ್ತಿರುವವರ ಸಂಖ್ಯೆ ಕೇವಲ 12 ಮಾತ್ರ.

ಇದು ತುಂಬಾ ಅಪರೂಪದ ಪರಿಸ್ಥಿತಿ
ಸಾರಾಗೆ ಕೇವಲ ಹತ್ತು ವರ್ಷವಾಗಿದ್ದಾಗ ಆಕೆಗೆ ಡರ್ಮಟೊಸ್ಪರಾಕ್ಸಿಸ್ ಎಹ್ಲೆರ್ಸ್-ಡಾನ್ಲೋಸ್ ಸಿಂಡ್ರೋಮ್ ಪ್ರಾರಂಭವಾಯಿತು. ಇದೊಂದು ಅನುವಂಶೀಯ ಕಾಯಿಲೆ. ಇದರಿಂದ ಗಂಟು ಮತ್ತು ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳುವುದು. ದೇಹದಲ್ಲಿ ಕಾಲಜನ್ ಬಿಡುಗಡೆ ಕಡಿಮೆಯಾಗುವ ಕಾರಣದಿಂದ ಆ ವ್ಯಕ್ತಿಯ ಚರ್ಮವು ಜೋತು ಬಿದ್ದಂತೆ ತುಂಬಾ ದುರ್ಬಲವಾಗಿ ಕಾಣಿಸಿಕೊಳ್ಳುವುದು. ಇದರಿಂದ ಚರ್ಮವು ತುಂಬಾ ನೆರಿಗೆ ಬಿದ್ದಂತೆ ಕಾಣಿಸುವುದು.

ವಯಸ್ಸಾದಂತೆ ಕಾಣುತ್ತಾಳೆ
ಈ ಕಾಯಿಲೆಯಿಂದಾಗಿ ಸಾರಾಳ ಮೈಯ ಚರ್ಮವು ವಯಸ್ಸಾದವರಂತೆ ಜೋತು ಬಿದ್ದಿರುತ್ತದೆ ಮತ್ತು ಗಂಟು ಹಾಗೂ ಸ್ನಾಯುಗಳಲ್ಲಿ ನೋವಿರುತ್ತದೆ. ಇದರಿಂದ ಆಕೆಗೆ ಯಾವಾಗಲೂ ಸಮಸ್ಯೆ ಕಾಣಿಸಿಕೊಳ್ಳುವುದು. ಸುಮಾರು 7ನೇ ವಯಸ್ಸಿನಿಂದಲೇ ಆಕೆ ಈ ಲಕ್ಷಣಗಳು ಕಾಣಿಸಿಕೊಂಡಿದೆ ಮತ್ತು ಇದರ ಬಳಿಕ ಆಕೆಯಲ್ಲಿ ಮಹತ್ತರ ಬದಲಾವಣೆಗಳು ಆದವು.

ಹೀಗಿದ್ದರೂ ಆಕೆ ಜನಪ್ರಿಯಳಾದಳು….
ಇಂತಹ ಸಮಸ್ಯೆಯಿದ್ದರೂ ಇದರಿಂದ ಆತ್ಮವಿಶ್ವಾಸ ಕಳೆದುಕೊಳ್ಳದೆ ಆಕೆ ರೂಪದರ್ಶಿಯಾಗಿ ತನ್ನ ವೃತ್ತಿಯನ್ನು ಆರಂಭಿಸಿದಳು. ಪ್ರತೀ ಸಲವು ಆಕೆ ಚಿತ್ರಗಳಲ್ಲಿ ತುಂಬಾ ಅದ್ಭುತವಾಗಿ ಕಾಣುತ್ತಾಳೆ ಮತ್ತು ಇಂಟರ್ನೆಟ್ ನಲ್ಲಿ ಆಕೆಯ ಬಗ್ಗೆ ದೊಡ್ಡ ಅಭಿಮಾನಿ ಬಳಗವೇ ಇದೆ.

ಆಕೆಗೆ ಕುಟುಂಬದವರ ಬೆಂಬಲ
ಆಕೆಗೆ ಈ ಕಾಯಿಲೆ ಕಾಣಿಸಿಕೊಂಡಾಗ ಆಕೆಯ ಕುಟುಂಬದವರು ಮತ್ತು ಸ್ನೇಹಿತರು ತುಂಬಾ ಪ್ರೋತ್ಸಾಹಿಸಿದರು. ಯಾರೂ ತನ್ನನ್ನು ಹೀಯಾಳಿಸಲಿಲ್ಲ. ನನ್ನ ತ್ವಚೆಯ ಬಗ್ಗೆ ತುಂಬಾ ಬೇಸರವಿತ್ತು. ನನ್ನ ಬಗ್ಗೆ ಯಾವುದೇ ಕೆಟ್ಟ ಮಾತುಗಳು ಬರಲಿಲ್ಲವೆನ್ನುವುದು ನನ್ನ ಅದೃಷ್ಟ. ಆದರೆ ನನ್ನ ಸ್ನೇಹಿತೆಯರು ಕೆಲವೊಂದು ಉಡುಗೆಗಳನ್ನು ಧರಿಸುವಾಗ ನನಗೆ ಆ ರೀತಿ ಧರಿಸಲು ಆಗುತ್ತಿಲ್ಲವಲ್ಲಾ ಎನ್ನುವ ಬೇಸರವಿತ್ತು ಎನ್ನುತ್ತಾಳೆ.

ತನ್ನ ಪರಿಸ್ಥಿತಿ ಒಪ್ಪಿಕೊಂಡು ಬದಲಾವಣೆ ತರಬೇಕೆಂದು ಆಕೆಗೆ ತಿಳಿದಿತ್ತು
ತನ್ನ ಪರಿಸ್ಥಿತಿಯನ್ನು ಬದಿಗಿಟ್ಟುಕೊಂಡು ಸಾರಾ ತನ್ನ ಕೆಲವೊಂದು ಫೋಟೊಗಳನ್ನು ಲವ್ ಯುವರ್ ಲೈನ್ಸ್‌ಗೆ ಕಳುಹಿಸಿಕೊಟ್ಟಳು. ಇದರಲ್ಲಿ ಮಹಿಳೆಯರು ತಮ್ಮ ಹೊಟ್ಟೆಯ ಗೆರೆಗಳು, ಕಲೆಗಳು ಮತ್ತು ಇತರ ಯಾವುದೇ ಕುಂದುಕೊರತೆಗಳನ್ನು ತೋರಿಸಿಕೊಳ್ಳಬಹುದು. ಇದರ ಬಳಿಕ ಆಕೆ ಹಿಂತುರಿಗಿ ನೋಡಲಿಲ್ಲ. ಯಾಕೆಂದರೆ ಜನ ತನ್ನನ್ನು ಸ್ವೀಕರಿಸಿದ್ದರು ಮತ್ತು ಪರಿಸ್ಥಿತಿಯ ಹೊರತಾಗಿಯೂ ನನ್ನನ್ನು ಪ್ರೀತಿಸುತ್ತಿದ್ದರು.

ರೂಪದರ್ಶಿಯಾಗಲು ಕಾರಣವೇನು?
ತನಗೆ ರೂಪರ್ಶಿಯಾಗಬೇಕೆಂಬ ಮನಸ್ಸಿತ್ತು ಎನ್ನುವುದನ್ನು ಆಕೆ ತಿಳಿಸಿದ್ದಾಳೆ. ಅಲನಿಯಂ ರೂಪದರ್ಶಿ, ಮೆಲನಿನ್ ರೂಪದರ್ಶಿ, ವಿಟಿಲಿಗೊ ರೂಪದರ್ಶಿಯರನ್ನು ನಾವು ನೋಡಿದ್ದೇವೆ. ಇದೆಲ್ಲವೂ ತುಂಬಾ ಅದ್ಭುತವಾಗಿರುವ ವಿಚಾರಗಳು. ಆದರೆ ಯಾವುದೇ ಸಮಸ್ಯೆಯಿರುವಂತಹ ರೂಪದರ್ಶಿಯರನ್ನು ನಾವು ಪ್ರತಿನಿತ್ಯದ ಜಾಹೀರಾತುಗಳಲ್ಲಿ ನೋಡುವುದಿಲ್ಲ ಎಂದು ಆಕೆ ಹೇಳುತ್ತಾಳೆ. ಆಕೆಯ ಸ್ಫೂರ್ತಿಗೆ ನಮ್ಮದೊಂದು ಸಲಾಂ



Click it and Unblock the Notifications