ಅಚ್ಚರಿ ಜಗತ್ತು: ಈತನಿಗೆ ಪ್ರತೀ ದಿನವೂ ಊಟಕ್ಕೆ 'ಹಲ್ಲಿಗಳು' ಬೇಕಂತೆ!!

By: Arshad
Subscribe to Boldsky

ಮನುಷ್ಯರು ತಿನ್ನಬಹುದಾದ ಅತ್ಯಂತ ವಿಚಿತ್ರ ಆಹಾರಗಳು ಯಾವುವು ಎಂದರೆ ಕೆಲವರು ಹಾವು ಇಲಿಗಳನ್ನು ಹೆಸರಿಸಬಹುದು. ನೊಣ, ಮಿಡತೆ, ಗೊದ್ದಗಳನ್ನು ಸೇವಿಸುವವರು ಇದಕ್ಕಿಂತ ರುಚಿಯಾದದ್ದು ಇನ್ನೊಂದಿಲ್ಲ ಎನ್ನಬಹುದು. ಆದರೆ ಇಲ್ಲೊಬ್ಬರು ಹಲ್ಲಿಗಳನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. 

ಕೇಳಲಿಕ್ಕೇ ಈ ವಿಷಯ ನಮಗೆ ಅಸಹ್ಯವೆನಿಸಿದರೂ ಈ ವ್ಯಕ್ತಿ ಕಳೆದ ಇಪ್ಪತ್ತು ವರ್ಷಗಳಿಂದ ಪ್ರತಿದಿನವೂ ಹಲ್ಲಿಗಳನ್ನು ಇಷ್ಟಪಟ್ಟು ತಿನ್ನುತ್ತಾ ಬಂದಿದ್ದಾರೆ. ಬನ್ನಿ, ಈ ವಿಲಕ್ಷಣ ಆಹಾರಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ.... 

ಈ ವ್ಯಕ್ತಿ ಭಾರತೀಯರು

ಈ ವ್ಯಕ್ತಿ ಭಾರತೀಯರು

ಈ ವಿಲಕ್ಷಣ ಆಹಾರ ಪದ್ದತಿಯನ್ನು ಅನುಸರಿವ ವ್ಯಕ್ತಿಯ ಹೆಸರು ಕೈಲಾಶ್ ಎಂದಾಗಿದ್ದು ಇವರು ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ನೆಲೆಸಿದ್ದಾರೆ. ಈ ವ್ಯಕ್ತಿ ದಿನಕ್ಕೆ ಮೂರೂ ಹೊತ್ತು ಹಲ್ಲಿಗಳನ್ನು ತಿನ್ನುವ ಮೂಲಕ ಸುತ್ತಮುತ್ತಲಲ್ಲಿ 'ಮೀನಾ' ಎಂಬ ಅನ್ವರ್ಥನಾಮದಿಂದಲೇ ಜನಜನಿತರಾಗಿದ್ದಾರೆ.

ಇವರಿಗೆ ಹಲ್ಲಿಯ ಸೂಪ್ ತುಂಬಾ ಇಷ್ಟ

ಇವರಿಗೆ ಹಲ್ಲಿಯ ಸೂಪ್ ತುಂಬಾ ಇಷ್ಟ

ಇವರಿಗೆ ಹಲ್ಲಿಗಳನ್ನು ಹಾಕಿ ಮಾಡಿದ ಸೂಪ್ ತುಂಬಾ ಇಷ್ಟವಾಗಿದ್ದು ಒಂದು ದಿನವೂ ಈ ಸೂಪ್ ಕುಡಿಯದೇ ಇರಲಾರೆ ಎನ್ನುತ್ತಾರೆ. ಇವರು ಈ ಆಹಾರಕ್ಕೆ ವ್ಯಸನಿಗಳೇ ಆಗಿಬಿಟ್ಟಿದ್ದಾರೆ.

ಈ ಅಭ್ಯಾಸ ಇಪ್ಪತ್ತು ವರ್ಷಗಳಿಂದ ಇದೆ

ಈ ಅಭ್ಯಾಸ ಇಪ್ಪತ್ತು ವರ್ಷಗಳಿಂದ ಇದೆ

ಹಲ್ಲಿ ಎಂದರೆ ವಿಷ ಎಂದೇ ನಂಬಿಕೆ ಇರುವ ಕಾರಣ ಸುತ್ತಮುತ್ತಲ ಜನರು ಇವರಿಗೆ 'ವಿಷಪುರುಷ'ನೆಂಬ ಬಿರುದನ್ನೂ ದಯಪಾಲಿಸಿದ್ದಾರೆ. ಇವರು ಪ್ರತಿದಿನವೂ ಹಲ್ಲಿಯ ಆಹಾರವನ್ನೇ ಸೇವಿಸುತ್ತಿದ್ದು ಕಳೆದ ಇಪ್ಪತ್ತು ವರ್ಷಗಳಿಂದ ಇವರ ನಿತ್ಯದ ಆಹಾರವಾಗಿದ್ದು ಈಗ ಇದನ್ನು ಬಿಡಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಗೆ ತಲುಪಿದ್ದಾರೆ.

ಇವರ ಆಹಾರದ ಪಟ್ಟಿಯಲ್ಲಿ ಹಲ್ಲಿ ಮಾತ್ರವೇ ಅಲ್ಲ, ಇತರ ಜೀವಿಗಳೂ ಇವೆ

ಇವರ ಆಹಾರದ ಪಟ್ಟಿಯಲ್ಲಿ ಹಲ್ಲಿ ಮಾತ್ರವೇ ಅಲ್ಲ, ಇತರ ಜೀವಿಗಳೂ ಇವೆ

ಇವರಿಗೆ ಹಲ್ಲಿ ಅತ್ಯಂತ ಹೆಚ್ಚು ಇಷ್ಟವಾದ ಆಹಾರವಾಗಿದ್ದರೂ ಇವರು ಇಷ್ಟಪಡುವ ಇತರ ಆಹಾರಗಳೂ ಇವೆ. ಇವರ ಆಹಾರಪಟ್ಟಿಯಲ್ಲಿ ಸುಮಾರು ಅರವತ್ತಕ್ಕೂ ಹೆಚ್ಚು ಜೀವಿಗಳಿದ್ದು ಇದರಲ್ಲಿ ತೆವಳುವ ಹುಳಗಳಿಂದ ತೊಡಗಿ ಅಸಹ್ಯವೆನಿಸುವ ಪ್ರಾಣಿಗಳವರೆಗೂ ಇವೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ತಿಳಿಸಿ.

English summary

Can You Believe This Man Eats Lizards Every Single Day!

What is the worst thing that you would have thought that people can eat? From insects to cockroaches - the list sure looks disgusting. But have you heard of someone relishing or wanting to eat lizards as a delicacy? Yes, though this sounds crazy, there is a man who enjoys relishing eating lizards and apparently, this practice has been going on since the past 20 years! Continue reading to know more about this bizarre case of the man who enjoys relishing lizards every single day!
Subscribe Newsletter