Latest Updates
-
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ!
ಹಣಕ್ಕೋಸ್ಕರ ಅತ್ಯಾಚಾರದ ವಿಡಿಯೋ ಸಹಾ ಮಾರಾಟ ಮಾಡುತ್ತಿದ್ದಾರೆ!
ಅತ್ಯಾಚಾರ ಎಂಬುವುದು ಮನುಕುಲವೇ ತಲೆ ತಗ್ಗಿಸುವಂತಹ ಹೇಯ ಕೃತ್ಯವಾಗಿದೆ. ಭಾರತದಲ್ಲಿಯೂ ನಿತ್ಯವೂ ಅತ್ಯಾಚಾರ ಪ್ರಕರಣಗಳ ಬಗ್ಗೆ ಹಲವಾರು ವರದಿಗಳು ಬರುತ್ತಲೇ ಇದ್ದು ಮನ ಕಲಕುತ್ತವೆ.
ಇಂಡೋನೇಷ್ಯಾದಲ್ಲಿ ಅತ್ಯಾಚಾರಿಗಳನ್ನು ಷಂಡರನ್ನಾಗಿಸುವ ಕಾನೂನಿದೆ. ಗಲ್ಫ್ ರಾಷ್ಟ್ರಗಳಲ್ಲಿ ಇದಕ್ಕೆ ಸಾವಿನ ಶಿಕ್ಷೆಯೂ ದೊರಕಬಹುದು. ಆದರೆ ಭಾರತದಲ್ಲಿ ಈ ಕೃತ್ಯದ ವಿಡಿಯೋಗಳು ಮಾತ್ರ ಬಹಳ ಬೇಡಿಕೆಯ ಮಾರಾಟದ ಸರಕು ಎಂದು ನಂಬಲಿಕ್ಕೆ ನಿಮಗೆ ಸಾಧ್ಯವೇ?
ವಾಸ್ತವದಲ್ಲಿ ಇದು ಹೌದು ಎಂದು ಹಲವು ವರದಿಗಳು ತಿಳಿಸುತ್ತಿವೆ. ಈ ಬಗ್ಗೆ ಅರಿವು ಮೂಡಿಸಿ ಈ ಕುಕೃತ್ಯವನ್ನು ಖಂಡಿಸಬೇಕಾದ ಅಗತ್ಯತೆಬರಬೇಕಿದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ...

ಇದು ಪ್ರಾರಂಭವಾಗಿದ್ದು ಹೇಗೆ?
ಸಾಮಾನ್ಯವಾಗಿ ವ್ಯಕ್ತಿಯೊಬ್ಬರನ್ನು ಬ್ಲ್ಯಾಕ್ ಮೇಲ್ ಮಾಡಿ ಅವರಿಂದ ಹಣ ಅಥವಾ ಬೇರಾವುದೋ ರೀತಿಯ ಪ್ರಯೋಜನ ಪಡೆದುಕೊಳ್ಳಲು ಅಥವಾ ವ್ಯಕ್ತಿಯೊಬ್ಬರ ಮಾನವನ್ನು ಬಹಿರಂಗವಾಗಿ ಹರಾಜುಹಾಕಿ ತೇಜೋವಧೆಮಾಡಲು ಅತ್ಯಾಚಾರದ ವಿಡಿಯೋ ತೆಗೆಯಲಾಗುತ್ತದೆ. ಸಾಮಾನ್ಯವಾಗಿ ಈ ವಿಡಿಯೋಗಳು ಇಪ್ಪತ್ತು ಸೆಕೆಂಡುಗಳಿಂದ ಹಿಡಿದು ಐದು ನಿಮಿಷಗಳವರೆಗೆ ಇರುತ್ತವೆ. ಈ ದುರುಳಲು ಈ ವಿಡಿಯೋ ಚಿತ್ರಗಳನ್ನು ಬಳಸಿ ತಮ್ಮ ಸಾಮರ್ಥ್ಯವನ್ನು ಕೊಂಡಾಡಿಕೊಂಡರೆ ಕೆಲವರು ಹಣದೋಚಲು ಬಳಸುತ್ತಾರೆ.

ಕೆಲ ತಿಂಗಳುಗಳಿಂದ ಈ ವಿಡಿಯೋಗಳು ಮಾರಾಟಕ್ಕಿವೆ
ಈ ವಿಡಿಯೋಗಳನ್ನು ಮಾರಾಟ ಮಾಡುತ್ತಿರುವುದು ವಿಶೇಷವಾಗಿ ಉತ್ತರ ಭಾರತದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ನಡೆಯುತ್ತಿರುವುದು ವ್ಯಾಪಕವಾಗಿದೆ. ಜನರೂ ತಾಮುಂದು ನಾಮುಂದು ಎಂದು ಮುಗಿಬಿದ್ದು ಈ ವಿಡಿಯೋಗಳನ್ನು ಖರೀದಿಸುತ್ತಿದ್ದಾರೆ ಹಾಗೂ ಸಾಮಾಜಿಕ ತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ. ಉಳಿದವರೂ ಕಣ್ಣುಮುಚ್ಚದೇ ಇವನ್ನು ನೋಡುತ್ತಿದ್ದಾರೆ.

ಹೆಚ್ಚಿನ ವಿಡಿಯೋಗಳು ಕದ್ದವು
ಈ ವಿಡಿಯೋಗಳನ್ನು ಮಾರುತ್ತಿರುವ ಅಂಗಡಿಯವರು ಈ ವಿಡಿಯೋಗಳನ್ನು ಯಾರೋ ಕದ್ದು ತಮಗೆ ಮಾರಿರುವುದು ಅಥವಾ ಕದ್ದ ಮೊಬೈಲುಗಳಲ್ಲಿ ಈ ವಿಡಿಯೋಗಳಿದ್ದು ಇವನ್ನು ಮಾತ್ರವೇ ತಾವು ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ಪ್ರತಿ ವಿಡಿಯೋ ಕ್ಲಿಪ್ ಇಪ್ಪತ್ತರಿಂದ ಇನ್ನೂರು ರುಪಾಯಿಗಳವರೆಗೂ ಮಾರಾಟವಾಗುತ್ತಿದೆ.

ಕೆಲವು ಆರೋಪಿಗಳನ್ನು ಬಂಧಿಸಲಾಗಿದೆ
ಈ ವಿಡಿಯೋಗಳ ಜಾಡು ಹಿಡಿದು ಹೊರಟ ಪೋಲೀಸರು ಅಲ್ಲಲ್ಲಿ ಕೆಲವು ಆರೋಪಿಗಳನ್ನು ಹಿಡಿದು ಬಂಧಿಸಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಸಹಸ್ರಾರು ಇಂತಹ ವಿಡಿಯೋಗಳು ಪ್ರಸಾರದಲ್ಲಿದ್ದು ಇವೆಲ್ಲವನ್ನೂ ತನಿಖೆಗೊಳಪಡಿಸುವುದು ಸರಿಸುಮಾರು ಅಸಾಧ್ಯವಾದ ಮಾತು. ಆದರೆ ಈ ಬಗ್ಗೆ ಸರ್ಕಾರವೇ ತಕ್ಷಣ ನಿಷೇಧ ಹೇರುವ ಮೂಲಕ ಏನಾದರೂ ಪರಿಣಾಮ ಗೋಚರಿಸಬಹುದು.

ಅತ್ಯಾಚಾರದ ಬಲಿಪಶುಗಳ ಪಾಡು ಮಾತ್ರ ಕೇಳಲೇ ಸಾಧ್ಯವಿಲ್ಲ
ಅತ್ಯಾಚಾರದ ಮೂಲಕ ದೈಹಿಕವಾಗಿ ಘಾಸಿಗೊಂಡ ವ್ಯಕ್ತಿಗಳು ಬಳಿಕ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಂದರೆ ಮಾನಸಿಕರಾಗಿ ಕುಗ್ಗಿ ಹೋಗುತ್ತಾರೆ. ಇದರ ಪರಿಣಾಮ ಊಹಿಸಲೂ ಸಾಧ್ಯವಾಗದಷ್ಟು ಘೋರವಾಗುತ್ತದೆ. ಇದು ಅತ್ಯಂತ ಗಂಭೀರವಾದ ವಿಚಾರವಾಗಿದ್ದು ತಕ್ಷಣವೇ ಈ ಬಗ್ಗೆ ಸೂಕ್ತ ಮತ್ತು ಅತ್ಯಂತ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.



Click it and Unblock the Notifications