ಪಿಯುಸಿಯಲ್ಲಿ 99.99 ಮಾರ್ಕ್ಸ್ ತಗೊಂಡ-ಆದರೆ ಸನ್ಯಾಸಿ ಆಗುತ್ತೇನೆ ಅಂದ!

By: manu
Subscribe to Boldsky

ಮಕ್ಕಳು ಚೆನ್ನಾಗಿ ಓದಿ ಮುಂದೆ ಬರಬೇಕು, ಒಳ್ಳೊಳ್ಳೆ ಕೆಲಸದಲ್ಲಿ ತೊಡಗಬೇಕು, ಕೈತುಂಬಾ ಹಣವನ್ನು ಸಂಪಾದಿಸಬೇಕು, ನಾವು ಕಂಡಷ್ಟು ಕಷ್ಟ ಮಕ್ಕಳಿಗಾಗಬಾರದು, ಹೀಗೆ ಪಾಲಕರು ಮಕ್ಕಳ ಬಗ್ಗೆ ಅನೇಕ ಕನಸುಗಳನ್ನು ಕಟ್ಟಿಕೊಳ್ಳುತ್ತಾರೆ. ಅದಕ್ಕಾಗಿಯೇ ಎಷ್ಟೇ ಕಷ್ಟವಾದರೂ ಮಕ್ಕಳು ಬಯಸಿದ ವಿದ್ಯಾಭ್ಯಾಸ ಕೊಡಿಸುತ್ತಾರೆ. ಆದರೆ ಇಲ್ಲೊಬ್ಬ ಹುಡುಗ ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಅಂಕವನ್ನು ಪಡೆದುಕೊಂಡಿದ್ದಾನೆಯಾದರೂ, ಅವನ ಗುರಿ ಮತ್ತು ದಾರಿ ಬೇರೆ ರೀತಿಯದ್ದು.

ನಿಜ, ಗುಜರಾತಿನ ಅಹಮದಾಬಾದ್‍ನ ಮೂಲವಾದ ವರ್ಶಿಲ್ ಷಾ ಎನ್ನುವ ಹುಡುಗ, ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ಶೇ. 99.99 ಅಂಕವನ್ನು ಪಡೆದುಕೊಂಡಿದ್ದಾನೆ. ಇವನೊಟ್ಟಿಗೆ ಓದಿ ಉತ್ತಮ ಅಂಕ ಪಡೆದ ಇತರ ವಿದ್ಯಾರ್ಥಿಗಳು ಉತ್ತಮ ವ್ಯಾಸಂಗಕ್ಕಾಗಿ ಬೇರೆ ಬೇರೆ ವಿಶ್ವವಿದ್ಯಾಲಯದ ಸೇರ್ಪಡೆ ಪತ್ರ(ಎಡ್ಮಿಷನ್ ಫಾರಮ್)ತುಂಬುತ್ತಿದ್ದಾರೆ.

ಆದರೆ ವರ್ಶಿಲ್ ಷಾ ಮಾತ್ರ ವಿಭಿನ್ನ ಹಾದಿ ಹಿಡಿದಿದ್ದಾನೆ. ಬಿಳಿ ಹಾಳೆಯ ಮೇಲೆ ಅರ್ಜಿ ತುಂಬುವ ಬದಲು, ಬಿಳಿ ನಿಲುವಂಗಿ ಧರಿಸಲು ಬಯಸುತ್ತಿದ್ದಾನೆ. ಹೌದು, ಇವನಿಗೆ ಜೈನ ಮುನಿಯಾಗಬೇಕೆಂಬ ಆಸೆಯಂತೆ.....  

ಕುಟುಂಬದ ವಿವರ

ಕುಟುಂಬದ ವಿವರ

ಇವನ ತಂದೆ ಆದಾಯ ತೆರಿಗೆಯ ಅಧಿಕಾರಿ. ತಾಯಿ ಗೃಹಿಣಿ. ದ್ವಿತೀಯ ಪಿಯುಸಿಯ ಫಲಿತಾಂಶ ಪ್ರಕಟಿಸಿದ ಎರಡು ವಾರಗಳ ನಂತರ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಸರಳ ಜೀವನದ ಸಿದ್ಧತೆ

ಸರಳ ಜೀವನದ ಸಿದ್ಧತೆ

ವರ್ಶಿಲ್ ಶೇ. 93.06 ಅಂಕಗಳನ್ನು ಪಡೆದು 99.99ನೇ ಶೇಕಡದಲ್ಲಿ ಸ್ಥಾನಪಡೆದಿದ್ದಾನೆಯಾದರೂ, ಗುರು ಕಲ್ಯಾಣ್ ರತ್ನಾವಿಜಯ್‍ಸುರಿ ಮಹರಾಜರಂತೆ ಆಗುವ ಆಸೆಯಂತೆ. ಈ ಹಿನ್ನೆಲೆಯಲ್ಲೇ ಸೂರತ್‍ನಲ್ಲಿ ದೀಕ್ಷೆ ಪಡೆಯಲು ಸಿದ್ಧತೆ ನಡೆಯುತ್ತಿದೆ. ಗುರುವಾರ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಅನೇಕರು ಭಾಗವಹಿಸಲಿದ್ದಾರೆ. ಕುತೂಹಲವೆಂದರೆ, ಈತನ ತಂದೆ-ತಾಯಿಯೂ ಸಮ್ಮತಿ ಸೂಚಿಸಿದ್ದಾರೆ. ಬದಲಿಗೆ ವರ್ಶಿಲ್ ಬಾಲ್ಯದಿಂದಲೂ ಆಧ್ಯಾತ್ಮಿಕ ಹಾಗೂ ಸರಳ ಜೀವನವನ್ನು ಅನುಸರಿಸುತ್ತಿದ್ದ ಎನ್ನುವ ಹೇಳಿಕೆ ನೀಡಿದ್ದಾರೆ. ಹೀಗೆ ತನ್ನ ಚಿಕ್ಕವಯಸ್ಸಿನಲ್ಲೇ ಆಧ್ಮಾತ್ಮಿಕ ಜೀವನವನ್ನು ಇಷ್ಟಪಟ್ಟು ನಡೆದು ಬಂದ ಮಹಾನ್ ಗುರುಗಳ ಕಿರು ಪರಿಚಯ ಮುಂದೆ ಇದೆ...

Image Courtesy

ಶ್ರೀ ರವಿಶಂಕರ್ ಗುರೂಜಿ

ಶ್ರೀ ರವಿಶಂಕರ್ ಗುರೂಜಿ

ಇವರು ಬಾಲ್ಯದಿಂದಲೂ ಅಗಾಧ ಬುದ್ಧಿಶಕ್ತಿಯನ್ನು ಹೊಂದಿದ್ದರು. ಚಿಕ್ಕವಯಸ್ಸಿನಲ್ಲೇ ಭಗವತ್ ಗೀತೆಯನ್ನು ಸರಾಗವಾಗಿ ಪಠಿಸುತ್ತಿದ್ದರು. ಜೊತೆಗೆ ಪಾಲಕರೊಂದಿಗೆ ಧ್ಯಾನದಲ್ಲೂ ತೊಡಗುತ್ತಿದ್ದರು. ತನ್ನ 17ನೇ ವಯಸ್ಸಿನಲ್ಲಿಯೇ ಭೌತಶಾಸ್ತ್ರ ಮತ್ತು ವೇದ ಸಾಹಿತ್ಯದಲ್ಲಿ ಪದವಿ ಪಡೆದ ಮಹಾನ್ ಗುರುಗಳು ಇವರು.

ಸದ್ಗುರು ಜಗ್ಗಿ ವಾಸುದೇವ್

ಸದ್ಗುರು ಜಗ್ಗಿ ವಾಸುದೇವ್

ಇವರು ತನ್ನ 12ನೇ ವಯಸ್ಸಿನಲ್ಲೇ ಮಲ್ಲಾದಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮೀಜಿಯವರ ಸಂಪರ್ಕ ಪಡೆದುಕೊಂಡರು. ಅವರಲ್ಲಿ ಯೋಗಾಭ್ಯಾಸ ಮಾಡಿದರು. ಗುರುಗಳ ಆಧ್ಯಾತ್ಮಿಕ ಅನುಭವಗಳೇ ಇವರಿಗೆ ದಾರಿದೀಪವಾಯಿತು. 25ನೇ ವಯಸ್ಸಿಗೆ ಕಾಲಿಡುವಷ್ಟರಲ್ಲೇ ಅನೇಕ ಆಧ್ಯಾತ್ಮಿಕ ಕಾರ್ಯಕ್ರಮ ಮತ್ತು ಯೋಜನೆಗಳನ್ನು ಕೈಗೊಂಡ ಹಿನ್ನೆಲೆಯಲ್ಲಿಯೇ ಗುರುಗಳಾಗುವ ನಿರ್ಧಾರ ಕೈಗೊಂಡರು.

ಬಾಬಾ ರಾಮ್‍ದೇವ್

ಬಾಬಾ ರಾಮ್‍ದೇವ್

ಇವರು ತನ್ನ 8ನೇ ತರಗತಿಯ ನಂತರ ವಿವಿಧ ಗುರುಕುಲಗಳಲ್ಲಿ ಹಿಂದೂ ಧರ್ಮಗ್ರಂಥ ಮತ್ತು ಯೋಗದ ಬಗ್ಗೆ ಹೆಚ್ಚಿನ ಶಿಕ್ಷಣ ಪಡೆದರು. ನಂತರ ಸ್ವಯಂ ಶಿಸ್ತು, ಯೋಗ ಮತ್ತು ಧ್ಯಾನದಲ್ಲಿ ತಲ್ಲೀನರಾಗಿ ಸನ್ಯಾಸಿ ಜೀವನಕ್ಕೆ ಪ್ರವೇಶಿಸಿದರು. ನಂತರ 2006ರಲ್ಲಿ ಪತಂಜಲಿ ಯೋಗಪೀಠವನ್ನು ತೆರೆದರು.

ಜೈನ ಮುನಿ ತರುಣ್ ಸಾಗರ್

ಜೈನ ಮುನಿ ತರುಣ್ ಸಾಗರ್

ಇವರು ತನ್ನ 13ನೇ ವಯಸ್ಸಿನಲ್ಲಿಯೇ ಆಧ್ಯಾತ್ಮಿಕ ಚಿಂತನೆಗಳಿಗೆ ಒಳಗಾಗಿ, ಅದೇ ಮಾರ್ಗದಲ್ಲಿ ನಡೆದರು. ನಂತರ 20ನೇ ವಯಸ್ಸಿನಲ್ಲಿ ಸನ್ಯಾಸಿಯಾಗಿ ದೀಕ್ಷೆ ಪಡೆದರು.

English summary

Boy tops class 12th exams in Gujarat, then becomes a Jain monk

Varshil Shah of Ahmedabad, Gujarat, scored 99.99 percentile in his class XII board exams. While other toppers of his age are busy filling forms of different universities and gearing up for a college life, Varshil has different plans. He wants to renunciate and take up white robes. Yes, Varshile aspires to become a Jain muni.
Story first published: Friday, June 9, 2017, 23:33 [IST]
Subscribe Newsletter