For Quick Alerts
ALLOW NOTIFICATIONS  
For Daily Alerts

  ಋಣಾತ್ಮಕ ಶಕ್ತಿಗಳು ಇರುವಲ್ಲಿ ಭೂತ ಪ್ರೇತಗಳೂ ಇರುತ್ತವೆಯಂತೆ!

  By Arshad
  |

  ಭೂತ ಪಿಶಾಚಿಗಳ ಇರುವಿಕೆಯ ಬಗ್ಗೆ ನಮಗೆಲ್ಲಾ ಅನುಮಾನವಿದ್ದರೂ ಇವುಗಳ ಬಗ್ಗೆ ಭಯ ಮಾತ್ರ ಹೆಚ್ಚಿನವರಲ್ಲಿ ಇರುತ್ತದೆ. ಕೆಲವರು ಭೂತಗಳೇ ಇಲ್ಲ ಎಂದು ಭಾವಿಸಲು ಇಷ್ಟಪಡುತ್ತಾರೆ. ನಮ್ಮ ಸುತ್ತ ಆವರಿಸುವ ಋಣಾತ್ಮಕ ಶಕ್ತಿಗಳಿಗೆ ಭೂತಪ್ರೇತಗಳನ್ನು ಆಹ್ವಾನಿಸುವ ಶಕ್ತಿ ಇದೆ ಎಂದು ಹೇಳಲಾಗುತ್ತದೆ.

  ಇದೇ ಕಾರಣಕ್ಕೆ ಆರಾಧಾನಾಲಯಗಳಲ್ಲಿ ಜನರು ಅತಿ ಹೆಚ್ಚು ಸುರಕ್ಷಾ ಭಾವನೆಯನ್ನೂ ಸ್ಮಶಾನಗಳಲ್ಲಿ ಅತಿ ಹೆಚ್ಚು ಅಸುರಕ್ಷತೆಯ ಭಾವನೆಯನ್ನೂ ಹೊಂದಿರುತ್ತಾರೆ. ಭೂತಪ್ರೇತಗಳಿಗೆ ಈ ಸ್ಥಿತಿ ಒದಗಿರಲು ಯಾವುದೋ ಹಿಂದಿನ ಘಟನೆ ಕಾರಣವಾಗಿದ್ದು ಇದಕ್ಕೆ ಸೇಡು ತೀರಿಸಲು ಕಾಯುತ್ತಿರುತ್ತವೆ ಎಂದು ಹೇಳುತ್ತಾರೆ. 

  ಭೂತ- ಪ್ರೇತಗಳು ಬರೀ ಭ್ರಮೆಯಂತೆ! ನಂಬುತ್ತೀರಾ?

  ಅಂದರೆ ಋಣಾತ್ಮಕ ಶಕ್ತಿಗಳು ಇರುವಲ್ಲಿ ಭೂತಪ್ರೇತಗಳು ಇರುತ್ತವೆ ಅಥವಾ ಆಗಮಿಸುತ್ತವೆ. ನಮ್ಮ ನಿತ್ಯದ ಹಲವು ಕಾರ್ಯಗಳಲ್ಲಿ ನಮಗೆ ಅರಿವೇ ಇಲ್ಲದೇ ನಾವು ಕೆಲವು ಋಣಾತ್ಮಕ ಶಕ್ತಿಗಳನ್ನು ಆಹ್ವಾನಿಸುತ್ತಿದ್ದಿರಬಹುದು. ಇವುಗಳನ್ನು ಹಿಂಬಾಲಿಸಿ ಭೂತಪ್ರೇತಗಳೂ ಆಗಮಿಸುತ್ತಿದ್ದಿರಬಹುದು. ಇಂತಹ ಕೆಲವು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಿದ್ದು ಇವು ನಿಮ್ಮ ಮಟ್ಟಿಗೆ ನಿಜವಾಗಿದ್ದರೆ ನಿಮ್ಮ ಸುತ್ತ ಈಗಾಗಲೇ ಭೂತಗಳು ಆವರಿಸಿರಲೂಬಹುದು! 

  ಸಾವಿನ ಬಗ್ಗೆ ಗ್ರಸ್ತನಾಗಿರುವುದು

  ಸಾವಿನ ಬಗ್ಗೆ ಗ್ರಸ್ತನಾಗಿರುವುದು

  ಸಾವು ಎಂಬ ಪದವೇ ನಮ್ಮೆಲ್ಲರನ್ನೂ ಭಯಭೀತಗೊಳಿಸುತ್ತದೆ. ನಮ್ಮೆಲ್ಲರಿಗೂ ಒಂದಲ್ಲಾ ಒಂದು ದಿನ ಇದು ಅನಿವಾರ್ಯವಾದರೂ ಇದರ ಬಗ್ಗೆ ನಾವು ಮಾತನಾಡಲು ಇಚ್ಛಿಸುವುದಿಲ್ಲ. ಸಾವು ಎಂಬ ಪದಕ್ಕೆ ಇರುವಷ್ಟು ಭಯ ಇಡಿಯ ಜಗತ್ತಿನಲ್ಲಿಯೇ ಇಲ್ಲ. ಏಕೆಂದರೆ ಸಾವಿಗೆ ಋಣಾತ್ಮಕ ಶಕ್ತಿಯನ್ನು ಆಕರ್ಷಿಸುವ ಶಕ್ತಿ ಇದೆ.

  ಸಾವಿನ ಬಗ್ಗೆ ಗ್ರಸ್ತನಾಗಿರುವುದು

  ಸಾವಿನ ಬಗ್ಗೆ ಗ್ರಸ್ತನಾಗಿರುವುದು

  ಜೀವನ ಮತ್ತು ನಾಳೆ ಉತ್ತಮವಾಗಿಸುವ ಬಗ್ಗೆ ಯೋಚಿಸುವ ಮೂಲಕ ಧನಾತ್ಮಕ ಶಕ್ತಿಯ ಆಗಮನವಾದರೆ ಅಂತ್ಯ ಹಾಗೂ ಸಾವಿನ ಬಗ್ಗೆ ಯೋಚಿಸುತ್ತಾ ಗ್ರಸ್ತನಾಗಿರುವುದು ಋಣಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಈ ಯೋಚನೆಯ ವ್ಯಕ್ತಿಯ ಸುತ್ತ ಭೂತಗಳು ಸುಲಭವಾಗಿ ಬರುತ್ತವೆ.

  ಸದಾ ಖಿನ್ನನಾಗಿರುವುದು

  ಸದಾ ಖಿನ್ನನಾಗಿರುವುದು

  ಖಿನ್ನತೆಯ ಸಮಯದಲ್ಲಿ ನಮ್ಮ ಯೋಚನೆಗಳೆಲ್ಲಾ ಧನಾತ್ಮಕವಾಗಿರದೇ, ನನಗೇ ಹೀಗಾಯಿತಲ್ಲಾ, ನನ್ನ ಪಾಡು ನಾಯಿಪಾಡಾಯಿತಲ್ಲ, ನನಗಿನ್ನಾರು ದಿಕ್ಕು ಇಂತಹ ಋಣಾತ್ಮಕ ಭಾವನೆಗಳೇ ಮನದಲ್ಲಿ ಮೂಡುತ್ತಿರುತ್ತವೆ. ನಮಗೆ ಪ್ರೇರಣೆ ಇಲ್ಲದಿದ್ದರೆ, ನಮ್ಮ ಸುತ್ತಲಿರುವ ಹತ್ತು ಹಲವು ಸಂತೋಷಗಳನ್ನು ಗಮನಿಸದೇ ಹೋದರೆ ನಮ್ಮಲ್ಲಿ ನಾವೇ ಅತಿ ಶಿಥಿಲವಾದ ಪ್ರಭೆಯನ್ನು ಮೂಡಿಸುತ್ತೇವೆ. ನಾವು ಈ ಮನಃಸ್ಥಿತಿಯಲ್ಲಿ ಎಷ್ಟು ಹೆಚ್ಚು ಇರುತ್ತೇವೆಯೋ ಅಷ್ಟೂ ಋಣಾತ್ಮಕ ಶಕ್ತಿಗಳನ್ನು ಆಹ್ವಾನಿಸಿತ್ತೇವೆ. ಇವುಗಳ ಜಾಡು ಹಿಡಿದುಕೊಂಡು ಭೂತಗಳೂ ಬರುತ್ತವೆ. ಆದ್ದರಿಂದ ಎಷ್ಟೇ ದುಃಖವಿದ್ದು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದ್ದರೆ ನೆನಪಿಡಿ, ನೀವೇ ನಿಮ್ಮ ಕೈಯಾರೆ ಭೂತಗಳನ್ನು ಆಹ್ವಾನಿಸುತ್ತಿದ್ದೀರಿ.

  ಮಾದಕ ವ್ಯಸನ

  ಮಾದಕ ವ್ಯಸನ

  ಮಾನಕ ಪದಾರ್ಥಗಳಿಗೆ ವ್ಯಸನಿಯಾಗಿರುವುದು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಮಾರಕವಷ್ಟೇ ಅಲ್ಲ ಇನ್ನೂ ಹೆಚ್ಚಿನ ಅಪಾಯವಿದೆ. ಮಾದಕ ವಸ್ತುವನ್ನು ನಿತ್ಯವೂ ಸೇವಿಸುವ ವ್ಯಕ್ತಿ ಭೂತಗಳು ಆತನನ್ನು ಆವರಿಸಲು ತಾನೇ ಸ್ವತಃ ಆಹ್ವಾನ ನೀಡುತ್ತಾನೆ. ಮಾದಕ ಪದಾರ್ಥಗಳು ಯಾವಾಗ ಶರೀರವನ್ನು ಪ್ರವೇಶಿಸುತ್ತದೆಯೋ ಆಗ ವ್ಯಕ್ತಿಯ ದೈಹಿಕ ಮಾನಸಿಕ ಹಾಗೂ ಧಾರ್ಮಿಕ ಶಕ್ತಿಗಳು ಕ್ಷೀಣವಾಗುತ್ತಾ ಹೋಗುತ್ತವೆ. ಈ ಶಕ್ತಿಗಳು ಋಣಾತ್ಮಕ ಶಕ್ತಿಗಳು, ತನ್ಮೂಲಕ ಭೂತಗಳು ನಿಮ್ಮನ್ನು ಆವರಿಸದಂತೆ ರಕ್ಷಣೆ ನೀಡುತ್ತಿದ್ದು ಈಗ ಇವುಗಳಿಗೆ ವ್ಯಕ್ತಿಯ ಶರೀರವನ್ನು ಪ್ರವೇಶಿಸಲು ಸುಲಭಸಾಧ್ಯವಾಗುತ್ತದೆ.

  ಸವಾಲಾಗಿರುವ ಈ ಭೂತ, ಪ್ರೇತಗಳ ನಿಗೂಢ ರಹಸ್ಯ

  ಮಾಟಮಂತ್ರಗಳನ್ನು ಅನುಸರಿಸುವುದು

  ಮಾಟಮಂತ್ರಗಳನ್ನು ಅನುಸರಿಸುವುದು

  ಮಾಟಮಂತ್ರಗಳನ್ನು ಅನುಸರಿಸುವುದು ಎಂದರೆ ಪಿಶಾಚಿಗಳನ್ನು ಆವಾಸಸ್ಥಾನಕ್ಕೆ ಆಹ್ವಾನಿಸುವುದು ಎಂದೇ ಅರ್ಥ. ಈ ತಂತ್ರದಲ್ಲಿ ಭಾರೀ ಪ್ರಮಾಣದ ಋಣಾತ್ಮಕ ಶಕ್ತಿಗಳ ಬಳಕೆಯಾಗುತ್ತದೆ ಹಾಗೂ ಈ ಮೂಲಕ ಪ್ರೇತಾತ್ಮಗಳು ಖಂಡಿತವಾಗಿಯೂ ಆಗಮಿಸುತ್ತವೆ.

  ಮುಂಜಾನೆಯ ಮೂರು ಗಂಟೆ-ಭೂತ ಪ್ರೇತಗಳದ್ದೇ ಕಾರುಬಾರು!!

  ಜುಮಾಂಜಿ, ಉಯ್ಜಾ ಬೋರ್ಡ್ ಆಟಗಳನ್ನು ಆಡುವುದು

  ಜುಮಾಂಜಿ, ಉಯ್ಜಾ ಬೋರ್ಡ್ ಆಟಗಳನ್ನು ಆಡುವುದು

  ಪ್ರಾರಂಭದಲ್ಲಿ ಸ್ನೇಹಿತರನ್ನು ಹೆದರಿಸಲು ಉಪಯೋಗಿಸುವ ಈ ಬಗೆಯ ಆಟಗಳು ಬರಬರುತ್ತಾ ಹೆಚ್ಚು ಹೆಚ್ಚು ಭಯಾನಕವಾಗುತ್ತಾ ಹೋಗುತ್ತವೆ. ಕಳೆದ ಶತಮಾನದಲ್ಲಿ ಫ್ರಾನ್ಸ್ ನಲ್ಲಿ ಪ್ರಾರಂಭವಾದ ಈ ಆಟಗಳಲ್ಲಿ ದಾಳ ಉರುಳಿಸುತ್ತಿದ್ದಂತೆ ಯಾವ ಮನೆಯಲ್ಲಿ ಆಟಗಾರ ತಲುಪುತ್ತಾನೆಯೋ, ಅಲ್ಲಿ ಬರೆದಿರುವ ವಾಕ್ಯಗಳು ನಿಜವಾಗಿಯೂ ಸಂಭವಿಸುತ್ತವೆ. ಈ ಮೂಲಕ ಆವರಿಸುವ ದುಷ್ಟಶಕ್ತಿಯಿಂದ ರಕ್ಷಣೆ ಪಡೆಯಲು ಸಾಧ್ಯವೇ ಇಲ್ಲವಾದುದರಿಂದ ಇವನ್ನು ಅನುಸರಿಸಿ ಭೂತಗಲು ಆಗಮಿಸುತ್ತವೆ. ಆದ್ದರಿಂದ ಈ ಆಟಗಳನ್ನು ಆಡಬಾರದು.

  ಮನೆಗೆ ಭೂತಗಳು ಆಗಮಿಸುವ ಇತರ ಕಾರಣಗಳು

  ಮನೆಗೆ ಭೂತಗಳು ಆಗಮಿಸುವ ಇತರ ಕಾರಣಗಳು

  ಕೊಲೆ/ಆತ್ಮಹತ್ಯೆ

  ಸಿನೆಮಾಗಳಲ್ಲಿ ನೋಡಿದ್ದಂತೆ ಅಥವಾ ವಾಸ್ತವದಲ್ಲಿ ಕಂಡುಕೊಂಡಿರುವಂತೆ ಇಂದಿಗೂ ಹಲವಾರು ಕಟ್ಟಡಗಳು ಪಾಳು ಬಿದ್ದಿರಲು ಇದರಲ್ಲಿ ವ್ಯಕ್ತಿಯೊಬ್ಬರ ಸಾವು ಸಂಭವಿಸಿರುವುದು ಕಾರಣವಾಗಿದೆ. ಒಂದು ವೇಳೆ ಸಾವು ನೋವಿನಿಂದ ಕೂಡಿದ್ದರೆ (ಅಂದರೆ ಕೊಲೆ, ಆತ್ಮಹತ್ಯೆ) ಈ ಸ್ಥಳದಲ್ಲಿ ಭಾರೀ ಪ್ರಮಾಣದ ಋಣಾತ್ಮಕ ಶಕ್ತಿ ಆವರಿಸಿರುತ್ತದೆ ಹಾಗೂ ಇವು ಭೂತಗಳನ್ನು ಆಹ್ವಾನಿಸುತ್ತವೆ.

  ಹೆಚ್ಚು ಸಾವುಗಳು

  ಹೆಚ್ಚು ಸಾವುಗಳು

  ಒಂದು ಸ್ಥಳದಲ್ಲಿ ಹಲವಾರು ಸಾವುಗಳಾಗಿದ್ದರೆ ಇಲ್ಲಿ ಹೆಚ್ಚಿನ ಸಂಖ್ಯೆಯ ಋಣಾತ್ಮಕ ಶಕ್ತಿ ಆವರಿಸಿರುತ್ತದೆ. ಈ ಶಕ್ತಿ ಖಂಡಿತವಾಗಿಯೂ ಪ್ರೇತಗಳನ್ನು ಆಹ್ವಾನಿಸುತ್ತದೆ ಹಾಗೂ ನಮ್ಮ ಮನೆಗಳನ್ನು ನಮ್ಮ ನಡುವೆ ಹಂಚಿಕೊಳ್ಳುತ್ತವೆ.

  ಮಾಟಗಾರಿಕೆ

  ಮಾಟಗಾರಿಕೆ

  ಯಾವುದೇ ಸ್ಥಳದಲ್ಲಿ ಮಾಟಗಾರಿಕೆ ನಡೆಯುತ್ತಿದ್ದರೆ ಇದು ಪ್ರೇತಾತ್ಮಗಳನ್ನು ಆಹ್ವಾನಿಸುವ ವೇದಿಕೆಯಾಗಿರುತ್ತದೆ. ಒಂದು ವೇಳೆ ಈ ಸ್ಥಳದಲ್ಲಿ ಮಾಟಗಾರರ ಗುಂಪೇ ನೆರೆದು ಯಾವುದೋ ಕಾರ್ಯವನ್ನು ಸಾಮೂಹಿಕವಾಗಿ ನಡೆಸುತ್ತಿದ್ದರೆ ಈ ಕೇಂದ್ರದಲ್ಲಿ ಅತ್ಯಂತ ಹೆಚ್ಚಿನ ಶಕ್ತಿ ಸಾಂದ್ರಗೊಂಡಿದ್ದು ಈ ಸ್ಥಳದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇತಾತ್ಮಗಳು ಉಪಸ್ಥಿತರಿರುತ್ತವೆ.

  ಸತತವಾಗಿ ಋಣಾತ್ಮಕ ಶಕ್ತಿ ಆವರಿಸುವುದು

  ಸತತವಾಗಿ ಋಣಾತ್ಮಕ ಶಕ್ತಿ ಆವರಿಸುವುದು

  ನಮ್ಮ ಯೋಚನೆಗಳು ಋಣಾತ್ಮಕವಾಗಿದ್ದರೆ ಪ್ರೇತಾತ್ಮಗಳಿಗೆ ಆಹ್ವಾನ ಸಿಕ್ಕಂತಾಗುತ್ತದೆ. ಅಂತೆಯೇ ಮನೆಯಲ್ಲಿರುವ ಕೆಲವು ಋಣಾತ್ಮಕ ಶಕ್ತಿಗಳು, ಒಂದು ಸ್ಥಳದಲ್ಲಿರುವ ಹಲವು ವ್ಯಕ್ತಿಗಳ ಒಟ್ಟಾರೆ ಚಿಂತನೆ ಋಣಾತ್ಮಕವಾಗಿರುವುದು ಹಾಗೂ ಸತತವಾಗಿರುವುದು ಒಟ್ಟೈಸಿ ಪ್ರೇತಾತ್ಮಗಳನ್ನು ಆಹ್ವಾನಿಸಲು ಸಾಕಾಗುವಷ್ಟಿರಬಹುದು.

  ಹೀಗೆ ಮಾಡಿದರೆ ದುಷ್ಟಶಕ್ತಿಗಳಿಂದ ದೂರವಿರಬಹುದು

  ಹೀಗೆ ಮಾಡಿದರೆ ದುಷ್ಟಶಕ್ತಿಗಳಿಂದ ದೂರವಿರಬಹುದು

  ಈ ಎಲ್ಲಾ ವಿಷಯಗಳನ್ನು ಈಗ ನೀವು ತಿಳಿದಿರುವುದರಿಂದ ಈ ತಪ್ಪುಗಳನ್ನು ಮುಂದಿನ ದಿನಗಳಲ್ಲಿ ಮಾಡದೇ ಇರುವ ಮೂಲಕ ಈ ದುಷ್ಟಶಕ್ತಿಗಳಿಂದ ದೂರವಿರಬಹುದು ಹಾಗೂ ಸದಾ ಧನಾತ್ಮಕ ಚಿಂತನೆ ಹಾಗೂ ಧನಾತ್ಮಕ ಶಕ್ತಿಗಳನ್ನು ಆಹ್ವಾನಿಸುವ ಮೂಲಕ ಈ ಶಕ್ತಿಗಳಿಂದ ರಕ್ಷಣೆ ಪಡೆಯಬಹುದು.

  English summary

  Bizarre Ways Of How You Would Be Inviting Ghosts At Home

  The devils and spirits are believed to be all around us, where they are trying to accomplish some of their unfulfilled task or they are here to take revenge from someone. There are certain things that we might be doing unknowingly that can attract and invite ghosts into our houses. Check out the reasons, as it can simply spook you out!
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more