ಚಿತ್ರ ವಿಚಿತ್ರ ಶೌಚಾಲಯಗಳು! ಕೇಳಿದರೆ ತಲೆ ತಿರುಗುವುದು ಗ್ಯಾರಂಟಿ!!

By: manu
Subscribe to Boldsky

ಶೌಚಾಲಯವೇನಿದ್ದರೂ ಉಳ್ಳವರಿಗೆ ಮಾತ್ರ ಎಂಬ ಭಾವನೆ ಇತ್ತೀಚಿನವರೆಗೂ ಭಾರತದಲ್ಲಿತ್ತು. ಇಂದಿಗೂ ಎಷ್ಟೋ ಹಳ್ಳಿಗಳಲ್ಲಿ ಬಯಲು ಶೌಚಾಲಯ ಅನಿವಾರ್ಯವಾಗಿದೆ. ಆದರೆ ಅತ್ತ, ಉಳ್ಳವರ ಮನೆಯಲ್ಲಿ ಶೌಚಾಲಯ ಹಲವಾರು ಮಾರ್ಪಾಡುಗಳನ್ನು ಪಡೆಯುತ್ತಾ ಹತ್ತು ಹಲವು ವೈಚಿತ್ರ್ಯಗಳನ್ನು ಅಳವಡಿಸಿಕೊಂಡಿದೆ. ಇಂದು ಟಾಯ್ಲೆಟ್ಟು ಹೋಗಿ 'ವಾಷ್ ರೂಂ' ಎಂದಾಗಿದೆ. ಒಂದು ಕಾಲದಲ್ಲಿ ಮನೆಯಿಂದ ಕೊಂಚ ದೂರಕ್ಕಿರುತ್ತಿದ್ದ ಶೌಚಾಲಯ ಇಂದು ಮನೆಯ ಸ್ನಾನಗೃಹದ ಒಂದು ಅಂಗವೇ ಆಗಿ ಹೋಗಿದೆ.  ಸಾರ್ವಜನಿಕ ಶೌಚಾಲಯ ಬಳಸುವಾಗ ಜಾಗರೂಕರಾಗಿರಿ!

ಶೌಚಾಲಯವೆಂದರೆ ಬರೆಯ ಶೌಚಕ್ರಿಯೆಗೆ ಮಾತ್ರವಲ್ಲ, ಕದ್ದು ಧೂಮಪಾನ ಮಾಡಲು, ಕದ್ದುಮುಚ್ಚಿ ಮೇಕಪ್ ಮಾಡಿಕೊಳ್ಳಲು, ಸಾರ್ವಜನಿಕವಾಗಿ ಓದಲು ಸಾಧ್ಯವಿಲ್ಲದ ಸರಕನ್ನು ಓದಲು ಅಷ್ಟೇ ಏಕೆ, ಕೆಲವರಿಗೆ ಶೌಚಾಲಯದಲ್ಲಿಯೇ ಲಕ್ಷಾಧೀಶರಾಗುವ ಐಡಿಯಾಗಳೂ ಹೊಳೆದಿವೆ! ಶೌಚಾಲಯದ ಬಗ್ಗೆ ನೀವು ತಿಳಿಯದೆ ಇರುವ ಸತ್ಯಾಸತ್ಯತೆ

ಕೆಲವರಿಗೆ ಶೌಚಾಲಯ ಕೇವಲ ಶೌಚಾಲಯವೇ ಆಗಿದ್ದರೆ ಕೆಲವರಿಗೆ ಇದು ಪ್ರತಿಷ್ಠೆಯ ಸಂಕೇತ. ಭಾರತದಲ್ಲಂತೂ ಮನೆಯ ಸ್ವಚ್ಛತೆಯನ್ನು ಶೌಚಾಲಯದ ಸ್ವಚ್ಛತೆಯನ್ನು ನೋಡಿಯೇ ಅಳೆದು ಹೆಣ್ಣು ಕೊಡುವ ಸಂಪ್ರದಾಯವಿದೆ. ನಂಬುತ್ತೀರೋ ಬಿಡುತ್ತೀರೋ, ಇದು ಪಕ್ಕಾ ಚಿನ್ನದ ಶೌಚಾಲಯ!

ಹೀಗಿರುವಾಗ ಇಡಿಯ ವಿಶ್ವದಲ್ಲಿ ಇನ್ನೆಷ್ಟು ವೈಚಿತ್ರ್ಯಗಳಿರಬೇಡ? ಬನ್ನಿ, ಇವುಗಳಲ್ಲಿ ಕೊಂಚವಾದರೂ ಸ್ವಾರಸ್ಯಕರವಾದವುಗಳ ಬಗ್ಗೆ ಅರಿಯೋಣ. ಈ ವಿಶ್ವದ ಹಲವು ದೇಶಗಳಲ್ಲಿ ಚಿತ್ರವಿಚಿತ್ರ ಶೌಚಾಲಯಗಳೂ, ಶೌಚಾಲಯದಲ್ಲಿ ಬಳಸುವ ಕಾಗದಗಳೂ, ದುಬಾರಿ ಚಿನ್ನದ ಚೌಕಟ್ಟಿನ ಶೌಚಾಲಯಗಳೂ ಇವೆ. ಅಷ್ಟೇ ಏಕೆ, ಶೌಚಾಲಯಕ್ಕೇ ಮೀಸಲಾದ ಒಂದು ಟಾಯ್ಲೆಟ್ ಮ್ಯೂಸಿಯಂ ನಮ್ಮ ಭಾರತದಲ್ಲಿಯೇ (ದೆಹಲಿಯಲ್ಲಿ) ಇದೆ......

ಪ್ರಾಚೀನ ರೋಮ್

ಪ್ರಾಚೀನ ರೋಮ್

ಈ ಮಾಹಿತಿ ಕೊಂಚ ಇರಿಸು ಮುರಿಸು ತರಿಸಬಹುದು. ಅಂದಿನ ದಿನಗಳಲ್ಲಿ ಶೌಚಕ್ರಿಯೆಯ ಬಳಿಕ ಒರೆಸಿಕೊಳ್ಳಲು ಸ್ಪಂಜಿನ ತುಂಡೊಂದನ್ನು ಬಳಸುತ್ತಿದ್ದರು ಹಾಗೂ ಜೊತೆಯಲ್ಲಿದ್ದವರೆಲ್ಲಾ ಅದನ್ನೇ ಹಂಚಿಕೊಳ್ಳುತ್ತಿದ್ದರು! ಅಂದಿನ ದಿನಗಳಲ್ಲಿ ಹುಟ್ಟದೇ ಇಂದು ಹುಟ್ಟಿದುದಕ್ಕಾಗಿ ಭಗವಂತನಿಗೆ ಥ್ಯಾಂಕ್ಸ್ ಹೇಳಿದಂತೆ ಕೇಳಿದಂತಾಯ್ತಲ್ಲಾ!

Image courtesy

ಜರ್ಮನಿ

ಜರ್ಮನಿ

ತಮ್ಮ ಉತ್ಪನ್ನಗಳು ಉತ್ತಮ ಗುಣಮಟ್ಟ ಹೊಂದಬೇಕೆಂದು ಬಯಸುವ ಜರ್ಮನ್ನರು ತಮ್ಮ ಶೌಚಾಲಯಗಳೂ ಅತ್ಯುತ್ತಮವಾಗಿರಬೇಕೆಂದು ಬಯಸುವುದೇನೂ ತಪ್ಪಿಲ್ಲ. ಅಂತೆಯೇ ಈ ದೇಶದಲ್ಲಿ ಅತ್ಯಂತ ವೈಭವದ ಖಾಸಗಿ ಶೌಚಾಲಯಗಳಿವೆ. ಮನೆಯ ಹಾಲ್‌ನಲ್ಲಿ ಇರುವುದಕ್ಕಿಂತ ಶೌಚಾಲಯವೇ ಹೆಚ್ಚು ಭರ್ಜರಿಯಾಗಿದ್ದು ಜನರು ಇಲ್ಲೇ ಹೆಚ್ಚಿನ ವೇಳೆ ಕಳೆಯಲು ಇಚ್ಛಿಸುತ್ತಾರಂತೆ.

Image courtesy

ಲಾವೋಸ್

ಲಾವೋಸ್

ಈ ದೇಶದಲ್ಲಿ ಅತಿ ಕಡಿಮೆ ಶೌಚಾಲಯಗಳಿದ್ದು ನಗರಗಳಲ್ಲಿ ಅಲ್ಲಲ್ಲಿ ಇದ್ದರೂ ಹಳ್ಳಿಗಳಲ್ಲಿ ಇಲ್ಲವೇ ಇಲ್ಲವೆನ್ನುವಷ್ಟಿವೆ. ಶೌಚಾಲಯಗಳಿದ್ದರೂ ಮೂಲಭೂತ ಸೌಕರ್ಯವಾದ ನೀರಿನ ವ್ಯವಸ್ಥೆಯೇ ಇಲ್ಲದಿರುವ ಕಾರಣ ಮನೆಯಿಂದ ಹೊರಹೋಗಬೇಕಾದರೆ ಟಾಯ್ಲೆಟ್ ಪೇಪರನ್ನೂ ಮರೆಯದೇ ಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.

Image courtesy

ನ್ಯೂಜಿಲ್ಯಾಂಡ್

ನ್ಯೂಜಿಲ್ಯಾಂಡ್

ಇಲ್ಲಿ ಸ್ಥಾಪಿಸಿರುವ ಸಾರ್ವಜನಿಕ ಶೌಚಾಲಯಗಳೆಲ್ಲಾ ಮರುಬಳಕೆ ಮಾಡಬಹುದಾದ ಸಾಮಾಗ್ರಿಗಳಿಂದಲೇ ಮಾಡಲ್ಪಟ್ಟಿವೆ. ಇವರ ನಿಸರ್ಗಪ್ರೀತಿಗೆ ನಮದೊಂದು ಸಲಾಂ.

Image courtesy

ಆಸ್ಟ್ರೇಲಿಯಾ

ಆಸ್ಟ್ರೇಲಿಯಾ

ಒಂದು ವೇಳೆ ಇಲ್ಲಿನ ಶೌಚಾಲಯದ ಕಮೋಡ್ ಮುಚ್ಚಳವನ್ನು ತೆರೆದಾಕ್ಷಣ ಬುಸ್ಸನೆ ಹಾವೊಂದು ಹೆಡೆಯೆತ್ತಿದರೆ ಗಾಬರಿಯಾಗಬೇಡಿ. ಏಕೆಂದರೆ ಇದು ಇಲ್ಲಿ ಸರ್ವೇ ಸಾಮಾನ್ಯ.

Image courtesy

ಅರ್ಯ್ಲೆಂಡ್

ಅರ್ಯ್ಲೆಂಡ್

ಇಲ್ಲಿನ ನಾಗರಿಕರು ಸಾರ್ವಜನಿಕ ಶೌಚಾಲಯಗಳನ್ನು ಬಳಸುವುದನ್ನು ಇಷ್ಟಪಡರು ಎಂದು ಸಮೀಕ್ಷೆಗಳು ಸಾಬೀತುಪಡಿಸಿವೆ. ಸಮೀಕ್ಷೆಯ ಪ್ರಕಾರ 76% ರಷ್ಟು ಜನರು ಟಾಯ್ಲೆಟ್ ಸೀಟ್ ಅನ್ನು ಮುಟ್ಟುವುದೇ ಇಲ್ಲ. ಅಷ್ಟೇ ಅಲ್ಲ, 62% ರಷ್ಟು ಜನರು ಈ ಶೌಚಾಲಯಗಳನ್ನು ಬಳಸುವುದೇ ಇಲ್ಲ.

Image courtesy

ಸ್ವೀಡನ್

ಸ್ವೀಡನ್

ಇಲ್ಲಿ ಸಾರ್ವಜನಿಕ ಶೌಚಾಲಯ ಬಳಸಬೇಕಾದರೆ ಪ್ರತಿಯೊಬ್ಬರಿಗೂ ಭಿನ್ನರೀತಿಯ ಶುಲ್ಕವನ್ನು ವಸೂಲಿ ಮಾಡಲಾಗುತ್ತದೆ. ಅಂದರೆ ವಿಸರ್ಜಿಸಿದ ಪ್ರಮಾಣಕ್ಕೆ ಅನುಗುಣವಾದ ಶುಲ್ಕ. ಹಾಗಾಗಿ ಸಾಕಷ್ಟು ಚಿಲ್ಲರೆ ಇದ್ದರೆ ಮಾತ್ರ ಶೌಚಾಲಯಕ್ಕೆ ಹೋಗಬಹುದು. ಅಷ್ಟಕ್ಕೂ ನೀವು ಎಷ್ಟು ವಿಸರ್ಜಿಸಿದ್ದೀರಿ ಎಂದು ಈ ಶೌಚಾಲಯಕ್ಕೆ ಗೊತ್ತಾಗಿರುವುದಾದರೂ ಹೇಗೆ?

Image courtesy

ಜಪಾನ್

ಜಪಾನ್

ಜಪಾನಿನ ಸಾಂಪ್ರಾದಾಯಿಕ ಕಮೋಡ್ ಗಳು ಭಾರತೀಯ ವಿಧಾನಕ್ಕೆ ತದ್ವಿರುದ್ದವಾಗಿದ್ದು ಇದರಲ್ಲಿ ಕುಳಿತುಕೊಳ್ಳುವುದು ಹೇಗೆ ಎಂಬ ಪ್ರಶ್ನೆಗೆ ಚಿತ್ರಪಟವನ್ನು ನೋಡದೇ ಉತ್ತರ ಪಡೆದುಕೊಳ್ಳುವುದು ಬಹಳ ಕಷ್ಟ. ಪಟವಿಲ್ಲದಿದ್ದರೆ ನೀವು ಯಾವ ರೀತಿ ಇದನ್ನು ಬಳಸುತ್ತಿದ್ದಿರಿ ಎಂಬ ವಿವರಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Image Courtesy

English summary

Bizarre Toilet Facts To Know From Around The World

There are many interesting facts about toilets from around the world that you should know about. These days, toilets have eventually turned into 'washrooms', since they serve more purposes than before, as girls tend to use them as they their makeup rooms and what not! But do you know how toilets have evolved over the years in the world? And some of the facts about toilers toilets will really disgust you to the core, once you get to know of them!
Please Wait while comments are loading...
Subscribe Newsletter