ಈ ವಿಚಿತ್ರ ಕಾಯಿಲೆಗಳನ್ನು ವಿವರಿಸಲು ವಿಜ್ಞಾನಕ್ಕೂ ಇದುವರೆಗೆ ಸಾಧ್ಯವಾಗಿಲ್ಲ

By: Arshad
Subscribe to Boldsky

ನಮ್ಮ ಸ್ನೇಹಿತನೊಬ್ಬನಿದ್ದಾನೆ. ಆತನಿಗೆ ಬೆಳಿಗ್ಗೆದ್ದು ಗಣೇಶ ಬ್ರಾಂಡಿನ ಬೀಡಿ ಸೇದದಿದ್ದರೆ ಬಹಿರ್ದೆಶೆ ಆಗುವುದೇ ಇಲ್ಲ! ಹಾಗಾಗಿ ಈ ಬೀಡಿ ಸಿಗದ ಊರಿಗೆ ಹೋದಾಗ ಈ ಬೀಡಿ ಇಲ್ಲದಿದ್ದ ದಿನವಷ್ಟೂ ಆತನಿಗೆ ನರಕಯಾತನೆ. ಇದೇಕೆ ಹೀಗೆ ಎಂದು ವೈದ್ಯರಿಗೂ ವಿವರಿಸಲು ಸಾಧ್ಯವಾಗಿಲ್ಲ. ಆದರೆ ಕೆಲವು ಕಾಯಿಲೆಗಳು ಮನುಕುಲವನ್ನು ಬಹಳ ಹಿಂದಿನಿಂದ ಕಾಡುತ್ತಾ ಬಂದಿದ್ದು ಇದನ್ನು ವಿವರಿಸಲು ಖ್ಯಾತ ವಿಜ್ಞಾನಿ-ವೈದ್ಯರಿಗೂ ಇದುವರೆಗೆ ಸಾಧ್ಯವಾಗಿಲ್ಲ. ಉದಾಹರಣೆಗೆ ಉರಿಯುವ ಬಾಯಿ, ನೀರಿನ ಅಲರ್ಜಿ ಮೊದಲಾದವುಗಳನ್ನು ಅರಿತುಕೊಳ್ಳಲು, ಚಿಕಿತ್ಸೆಯನ್ನು ಕಂಡುಕೊಳ್ಳಲು ಹಲವರು ಬಹಳಷ್ಟು ಪ್ರಯತ್ನಪಟ್ಟರಾದರೂ ಇದುವರೆಗೆ ಖಚಿತವಾದ ಪರಿಹಾರವನ್ನು ಒದಗಿಸಲಾಗಿಲ್ಲ.

ಅದರಲ್ಲೂ 2014 ವಿಜ್ಞಾನಿಗಳ ಪಾಲಿಗೆ ಸವಾಲುಭರಿತ ವರ್ಷವಾಗಿತ್ತು. ಏಕೆಂದರೆ ಈ ವರ್ಷದಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿ ಎಬೋಲಾ ಎಂಬ ವೈರಸ್ ಆಕ್ರಮಣ ಮಾಡಿದ್ದು ಜಗತ್ತಿನಾದ್ಯಂತ ಹರಡಲು ತೊಡಗಿತ್ತು. ಇದರ ಆಕ್ರಮಣವನ್ನು ತಡೆಗಟ್ಟಿ ಸೋಂಕು ಹರಡದಂತೆ ಮಾಡಲು ವಿಜ್ಞಾನಿಗಳೆಲ್ಲರೂ ಒಂದಾಗಿ ಈ ವೈರಸ್ ಮೇಲೆ ಹತೋಟಿ ಸಾಧಿಸಿದ್ದರು.

ಎಬೋಲಾ ಇತರ ವೈರಸ್‌ಗಳಂತಲ್ಲ, ಇದರ ಪರಿಣಾಮ ಹಾಗೂ ಇದು ಸೋಂಕು ಹರಡುವ ಮೂಲಕ ಹರಡುವ ಕಾಯಿಲೆಗಳ ಬಗ್ಗೆ ಯಾವುದೇ ಹಿಂದಿನ ಮಾಹಿತಿ ಇಲ್ಲದೇ ಇದ್ದಿದ್ದು ಇದನ್ನು ವಿವರಿಸಲು ಕಷ್ಟವಾಗಿಸಿತ್ತು. ಇದೊಂದೇ ಅಲ್ಲ, ಜಗತ್ತಿನಲ್ಲಿ ಇನ್ನೂ ಹಲವಾರು ಕಾಯಿಲೆಗಳಿದ್ದು ಇವುಗಳ ಚಿಕಿತ್ಸೆಗಾಗಿ ಸೂಕ್ತ ಔಷಧಿಯನ್ನು ಪಡೆಯಲು ವೈದ್ಯರ, ಸಂಶೋಧಕರ, ವಿಜ್ಞಾನಿಗಳ ತಂಡ ಸತತ ಪ್ರಯತ್ನಿಸುತ್ತಲೇ ಇದೆ. ಬನ್ನಿ, ಇದುವರೆಗೆ ವಿಜ್ಞಾನಿಗಳಿಗೆ ಸೂಕ್ತ ವಿವರಣೆ ನೀಡಲು ಅಸಾಧ್ಯವಾಗಿರುವ ಕೆಲವು ಕಾಯಿಲೆಗಳ ಬಗ್ಗೆ ಅರಿತುಕೊಳ್ಳೋಣ.....

ನೀರಿನ ಅಲರ್ಜಿ

ನೀರಿನ ಅಲರ್ಜಿ

ಇದು ಅತ್ಯಪರೂಪದ ಕಾಯಿಲೆಯಾಗಿದ್ದು ವಿವರಿಸಲು ಕಷ್ಟಕರವಾಗಿದೆ. ಏಕೆಂದರೆ ನಮ್ಮ ದೇಹ ಶೇಖಡಾ ಎಪ್ಪತ್ತಕ್ಕೂ ಹೆಚ್ಚು ನೀರಿನಿಂದ ಕೂಡಿದ್ದು ನಮ್ಮ ನಿತ್ಯದ ಪ್ರತಿ ಚಟುವಟಿಕೆಗೂ ನೀರಿನ ಅಗತ್ಯವಿದ್ದೇ ಇದೆ. ನೀರಿಲ್ಲದೇ ಕೆಲವು ದಿನ ಬದುಕಿರಬಹುದಷ್ಟೇ. ಅಂತಹದ್ದರಲ್ಲಿ ನೀರು ಬೇಡ ಎಂದರೆ? ಆದರೂ ಇಂತಹ ಒಂದು ಕಾಯಿಲೆ ಇದೆ. ಇದರ ರೋಗಿಗಳಿಗೆ ನೀರು ಮೈ ಮೇಲೆ ಬಿದ್ದರೆ ಬಿಸಿ ಎಣ್ಣೆ ಬಿದ್ದಂತೆ ಚರ್ಮದಲ್ಲಿ ಕೆಂಪಗಾಗಿ ಉರಿಯುಳ್ಳ ಗೆರೆಗಳು ಮೂಡುತ್ತವೆ. ಇಡಿಯ ದಿನ ತುರಿಕೆ, ಉರಿ ಕಾಡುತ್ತದೆ. ಈ ಸ್ಥಿತಿಗೆ aquagenic urticaria ಅಥವಾ ನೀರಿನ ಅಲರ್ಜಿ ಎಂದು ಕರೆಯುತ್ತಾರೆ. ಇವರಿಗೆ ಈ ಭೂಮಿಯೇ ನರಕದಂತೆ ಭಾಸವಾಗುತ್ತದೆ.

ಸಿಡ್ಸ್ (SIDS)

ಸಿಡ್ಸ್ (SIDS)

ಕಾರಣವೇ ಗೊತ್ತಿಲ್ಲದ ಪಟ್ಟಿಯಲ್ಲಿ ಪ್ರಮುಖವಾದ ಕಾಯಿಲೆ ಇದು. ಒಂದು ಅಧ್ಯಯನದ ಪ್ರಕಾರ ಪ್ರತಿ ನೂರು ಶಿಶುಗಳಲ್ಲಿ ಒಂದು ಶಿಶು ಈ ಕಾಯಿಲೆಯಿಂದ ಮರಣವನ್ನಪ್ಪುತ್ತದೆ. ಇದಕ್ಕೆ crib death ಅಂದರೆ ನಿದ್ದೆಯ ಸಮಯದಲ್ಲಿ ಚಿರನಿದ್ದೆಗೆ ಜಾರುವುದು ಎಂದೂ ಕರೆಯುತ್ತಾರೆ. ಹೆಸರೇ ತಿಳಿಸುವಂತೆ ಮಕ್ಕಳು ನಿದ್ದೆ ಹೋದವರು ನಿದ್ದೆಯಲ್ಲಿಯೇ ಸಾವನ್ನಪ್ಪುತ್ತಾರೆ. ಈ ಕಾಯಿಲೆಗೆ ಏನು ಕಾರಣ ಎಂದು ಇದುವರೆಗೂ ಗೊತ್ತಾಗಿಲ್ಲ. ಸಾಮಾನ್ಯವಾಗಿ ಈ ಕಾಯಿಲೆ ಒಂದು ತಿಂಗಳಿಂದ ಒಂದು ವರ್ಷದ ನಡುವಣ ವಯಸ್ಸಿನ ಮಕ್ಕಳನ್ನೇ ಕಾಡುತ್ತದೆ.

ಹುಚ್ಚು ಹಸು ಕಾಯಿಲೆ (ಮ್ಯಾಡ್ ಕೌ)

ಹುಚ್ಚು ಹಸು ಕಾಯಿಲೆ (ಮ್ಯಾಡ್ ಕೌ)

ಕೆಲವು ವರ್ಷಗಳ ಹಿಂದೆ ಪತ್ರಿಕೆಗಳ ಮುಖಪುಟವನ್ನು ಆವರಿಸಿದ್ದ ಈ ಕಾಯಿಲೆಯಿಂದ ಹಸುಗಳ ಮೆದುಳು ಕರಗಿ ಗಂಜಿಯಂತಾಗಿ ಹಸುವಿನ ಸಾವಿಗೆ ಕಾರಣವಾಗುತ್ತದೆ. ovine spongiform encephalopathy ಅಥವಾ BSE ಎಂದು ವೈದ್ಯವಿಜ್ಞಾನದಲ್ಲಿ ಕರೆಯಲಾಗುವ ಈ ಸ್ಥಿತಿ ಅದೃಷ್ಟವಶಾತ್ ಮಾನವರಿಗೆ ಬರುವುದಿಲ್ಲ.

ನರ್ತಿಸುವ ಪ್ಲೇಗ್ (Dancing Plague)

ನರ್ತಿಸುವ ಪ್ಲೇಗ್ (Dancing Plague)

ಸುಮಾರು 1518ರಷ್ಟು ಹಿಂದೆ ಈ ರೋಗದ ಇರುವಿಕೆ ಪತ್ತೆಯಾಗಿತ್ತು. ಆ ವರ್ಷ ಸುಮಾರು ನಾನೂರಕ್ಕೂ ಜನರು ವಿವರಿಸಲಾಗದ ಕಾಯಿಲೆಯಿಂದ ಸಾವನ್ನಪ್ಪಿದ್ದರು. ಈ ಕಾಯಿಲೆ ಬಂದ ವ್ಯಕ್ತಿ ತನ್ನ ಮೈ ಮೇಲೆ ಹತೋಟಿಯಿಲ್ಲದೇ ನರ್ತಿಸಲು ಪ್ರಾರಂಭಿಸಿ ಹಲವು ದಿನಗಳವರೆಗೂ ನಿರಂತವಾಗಿ ನರ್ತಿಸುತ್ತಲೇ ಇರುತ್ತಾನೆ ಹಾಗೂ ಕಡೆಗೆ ಸುಸ್ತಾಗಿ ಅಳ್ಳೆದೆ ಕುಸಿದು ಅಥವಾ ಹೃದಯ ಸ್ತಂಭನದಿಂದ ಸಾವು ಸಂಭವಿಸುತ್ತದೆ. ಈ ಸ್ಥಿತಿಯನ್ನು ಕಂಡುಹಿಡಿಯಲು ಎಷ್ಟೋ ಸಂಶೋಧನೆಗಳು ನಡೆದಿವೆ. ಆದರೆ ಇದುವರೆಗೆ ಇದಕ್ಕೆ ಸರಿಯಾದ ವಿವರಣೆ ನೀಡಲು ಸಾಧ್ಯವಾಗಿಲ್ಲ. ಇಂದಿನ ಆಧುನಿಕ ವೈದ್ಯವಿಜ್ಞಾನಕ್ಕೂ ಈ ಸ್ಥಿತಿ ಇದುವರೆಗೂ ಬಗೆಹರಿಯದ ಸವಾಲಾಗಿದೆ.

ನಿದ್ದೆಯಲ್ಲಿ ನಿಶ್ಚಲತೆ (Sleeping Sickness)

ನಿದ್ದೆಯಲ್ಲಿ ನಿಶ್ಚಲತೆ (Sleeping Sickness)

ಈ ಕಾಯಿಲೆ ಇರುವ ವ್ಯಕ್ತಿಗಳ ಮೆದುಳಿನ ಯಾವುದೋ ಒಂದು ಭಾಗ ನಿಷ್ಟೇಷ್ಟಿತವಾಗಿ ಇದು ನಿಯಂತ್ರಿಸುವ ದೇಹದ ಅಂಗಗಳೂ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಈ ವ್ಯಕ್ತಿಗಳಿಗೆ ಚಲನೆ, ಮಾತನಾಡಲು ಆಗದೇ ಪ್ರತಿಮೆಯಂತೆ ಒಂದೇ ಕಡೆ ಇರುತ್ತಾರೆ. ಈ ಕಾಯಿಲೆಗೆ ಕೆಲವಾರು ವಿವರಣೆಗಳನ್ನು ನೀಡಿದರೂ ಇದಕ್ಕೆ ಕಾರಣವನ್ನು ಮಾತ್ರ ಇದುವರೆಗೆ ನೀಡಲು ಸಾಧ್ಯವಾಗಿಲ್ಲ. ಈ ರೋಗ ಪ್ರಥಮ ಸ್ಥಿತಿ ದಾಟುವ ಮೊದಲೇ ಹೆಚ್ಚಿನ ರೋಗಿಗಳು ಪರಂಧಾಮಕ್ಕೆ ಧಾವಿಸುತ್ತಾರೆ. ವೈದ್ಯರ ಪ್ರಕಾರ ಅಜ್ಞಾತ ವೈರಸ್ ಒಂದು ಇದಕ್ಕೆ ಕಾರಣವಾಗಿದ್ದು ಇದರ ಪರಿಣಾಮವಾಗಿ ರೋಗಿಯನ್ನು ಮಾತನಾಡಲು ಹಾಗೂ ಚಲಿಸಲು ಇಡಿಯ ಜೀವಮಾನದಲ್ಲಿ ಅಸಾಧ್ಯವಾಗುವಂತೆ ಮಾಡುತ್ತದೆ.

ಬೆವರಿನ ಕಾಯಿಲೆ (Sweating Sickness)

ಬೆವರಿನ ಕಾಯಿಲೆ (Sweating Sickness)

ಈ ಕಾಯಿಲೆಯನ್ನು ಮಾರಣಾಂತಿಕ ಎಂದು ಪರಿಗಣಿಸಲಾಗಿದೆ. ಇದುವರೆಗೆ ಸಾವಿರಾರು ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಇದರ ಲಕ್ಷಣಗಳೆಂದರೆ ಥಟ್ಟನೇ ನೋವು ಪ್ರಾರಂಭವಾಗುವುದು, ಚಳಿಜ್ವರ ಆವರಿಸುವುದು ಹಾಗೂ ಬಳಿಕ ಧಾರಾಕಾರವಾಗಿ ಬೆವರು ಸುರಿಯುವುದು. ಒಂದು ವೇಳೆ ಸತತವಾಗಿ ಕೆಲವು ಘಂಟೆಗಳ ಕಾಲ ಬೆವರು ದೇಹದಿಂದ ಹರಿದು ಹೋದರೆ ಇದು ದೇಹವನ್ನು ನಿರ್ಜಲೀಕರಣಕ್ಕೆ ಈಡು ಮಾಡುತ್ತದೆ ಹಾಗೂ ಇದು ವ್ಯಕ್ತಿಗ ಸಾವಿಗೆ ಕಾರಣವಾಗುತ್ತದೆ. ಈ ಸ್ಥಿತಿಯನ್ನು ಕೆಲವಾರು ರೋಗಿಗಳಲ್ಲಿ ಇಂದಿಗೂ ಕಂಡುಬರುತ್ತಿದ್ದು ಇದಕ್ಕೆ ಸೂಕ್ತ ಚಿಕಿತ್ಸೆ ಮಾತ್ರ ಇದುವರೆಗೆ ಸಿದ್ಧಪಡಿಸಲಾಗಿಲ್ಲ.

ಸತರ ಉದ್ರೇಕದ ತೊಂದರೆ. (Persistent Genital Disorder)

ಸತರ ಉದ್ರೇಕದ ತೊಂದರೆ. (Persistent Genital Disorder)

ಈ ತೊಂದರೆ ಇರುವ ವ್ಯಕ್ತಿಗಳಿಗೆ ಅವೇಳೆಯಲ್ಲಿ ಉದ್ರೇಕ ಸಂಭವಿಸಿ ಭಾರೀ ಮುಜುಗರಕ್ಕೆ ಕಾರಣವಾಗುತ್ತದೆ. ಆದರೆ ಕಾರಣವಿಲ್ಲದೇ ಏಕೆ ಹೀಗಾಗುತ್ತಿದೆ ಎಂದು ವೈದ್ಯರೂ ವಿವರಿಸಲು ಅಸಮರ್ಥರಾಗಿದ್ದಾರೆ. ಇದಕ್ಕೆ ಕಾರಣವನ್ನು ಕಂಡುಕೊಳ್ಳುವುದು ಕಷ್ಟಕರವಾಗಿದ್ದು ಈ ಸ್ಥಿತಿ ಕೆಲವು ತಿಂಗಳ ಕಾಲ ಹಾಗೇ ಉಳಿದುಕೊಳ್ಳಬಹುದು. ಅಲ್ಲಿಯವರೆಗೂ ರೋಗಿ ನಾಲ್ಕು ಜನರ ನಡುವೆ ಬರಲಿಕ್ಕೆ ಮುಜುಗರವಾಗುವ ಕಾರಣ ನಿತ್ಯದ ಚಟುವಟಿಕೆಗಳೆಲ್ಲಾ ಬಾಧೆಗೊಳಗಾಗುತ್ತವೆ.

ಆಲಿಸ್ ಇನ್ ವಂಡರ್ಲ್ಯಾಂಡ್ ಕಾಯಿಲೆ

ಆಲಿಸ್ ಇನ್ ವಂಡರ್ಲ್ಯಾಂಡ್ ಕಾಯಿಲೆ

ಪಾಶ್ಚಾತ್ಯ ದಂತಕತೆಯೊಂದರ ಹೆಸರನ್ನೇ ಪಡೆದ ಈ ಕಾಯಿಲೆ ಕೇಳಲು ಚೆನ್ನಾಗಿದ್ದರೂ ರೋಗಿಗಳು ಮಾತ್ರ ಮಾನಸಿಕವಾಗಿ ವ್ಯಾಕುಲನಾಗಿರುತ್ತಾರೆ. ಇವರು ತಮ್ಮ ಸಾಮಾನ್ಯ ಗಾತ್ರಕ್ಕಿಂತಲೂ ಚಿಕ್ಕದಾಗಿರುವ ಅಥವಾ ದೊಡ್ಡದಾಗಿರುವಂತೆ ಭಾವಿಸಿ ಆದೇ ಪ್ರಕಾರ ಅವರ ನಡವಳಿಕೆಯೂ ಬದಲಾಗುತ್ತದೆ. ಕೆಲವರಿಗೆ ತಾವು ಬೆಳೆಯದೇ ತಮ್ಮ ವಸ್ತುಗಳು ಅಂದರೆ ಹಾಸಿಗೆ, ಕೋಣೆ ಮೊದಲಾದವು ಚಿಕ್ಕದಾಗುತ್ತಿರುವಂತೆ ಅಥವಾ ದೊಡ್ಡದಾಗುತ್ತಿರುವಂತೆ ಅನ್ನಿಸುತ್ತದೆ. ಈ ಕಾಯಿಲೆಯ ಬಗ್ಗೆ ನಡೆಸಿದ ಹಲವಾರು ಸಂಶೋಧನೆಗಳ ಬಳಿಕವೂ ಈ ಸ್ಥಿತಿಗೆ ಸೂಕ್ತವಾದ ವಿವರಣೆ ನೀಡಲು ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ.

ಕೈಜೋಮು ಹಿಡಿಯುವ ಕಾಯಿಲೆ (Working Hand Syndrome)

ಕೈಜೋಮು ಹಿಡಿಯುವ ಕಾಯಿಲೆ (Working Hand Syndrome)

ವಿಚಿತ್ರ ಕಾಯಿಲೆಗಳಲ್ಲಿ ಯಾರಿಗೂ ಬಾಧಿಸಬಹುದಾದ ಈ ಕಾಯಿಲೆ ಆವರಿಸಿದ ವ್ಯಕ್ತಿಗಳಿಗೆ ರಾತ್ರಿ ಸಮಯದಲ್ಲಿ ಕೈ ಅಥವಾ ಇತರ ಪ್ರಮುಖ ಅಂಗದಲ್ಲಿ ನೋವು, ಜೋಮು ಹಿಡಿಯುವುದು, ಬೆಂಕಿ ಹಿಡಿದಂತೆ ಉರಿಯುವುದು ಅಥವಾ ಕಚಗುಳಿ ಇಟ್ಟಂತೆ, ಒಳಗಿನಿಂದ ಸೂಜಿಗಳು ಚುಚ್ಚಿದಂತೆ ಅನ್ನಿಸುತ್ತದೆ. ಈ ಬಗ್ಗೆ ಹಲವಾರು ಸಂಶೋಧನೆಗಳು ನಡೆದಿದ್ದು ಇದುವರೆಗೂ ಯಾವುದೇ ಖಚಿತ ಚಿಕಿತ್ಸೆ ಲಭ್ಯವಾಗಿಲ್ಲ. ಆದರೆ ಸಂಶೋಧನೆಯ ಮೂಲಕ ಈ ವ್ಯಕ್ತಿಗಳ ನರಗಳು ಘಾಸಿಗೊಂಡಿದ್ದು ನರತಂತುಗಳ ಸಂವೇದನೆಯಿಂದ ನೋವು ಕಾಣಿಸಿಕೊಳ್ಳುತ್ತದೆ ಎಂದು ಮಾತ್ರ ಕಂಡುಕೊಳ್ಳಲಾಗಿದೆ. ಇದುವರೆಗೆ ಈ ಕಾಯಿಲೆಗೆ ಚಿಕಿತ್ಸೆ ಕಂಡುಹಿಡಿಯಲಾಗಿಲ್ಲ.

ನೀಲಿಚರ್ಮದ ಕಾಯಿಲೆ

ನೀಲಿಚರ್ಮದ ಕಾಯಿಲೆ

ಇದೊಂದು ವಂಶವಾಹಿನಿಯ ಮೂಲಕ ಆವರಿಸುವ ಕಾಯಿಲೆಯಾಗಿದ್ದು ರೋಗಿಯ ಚರ್ಮ ನೀಲಿ ಬಣ್ಣಕ್ಕೆ ತಿರುಗುತ್ತದೆ. ವೈದ್ಯವಿಜ್ಞಾನದಲ್ಲಿ ಈ ಕಾಯಿಲೆಗೆ Methemoglobinemia ಎಂದು ಕರೆಯುತ್ತಾರೆ. ಈ ಕಾಯಿಲೆ ಇರುವ ವ್ಯಕ್ತಿಯ ರಕ್ತದಲ್ಲಿ met-hemoglobin ಎಂಬ ಕಣ ಕೆಂಪು ರಕ್ತಕಣಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿರುತ್ತದೆ. ಈ ಕಣ ರಕ್ತ ಆಮ್ಲಜನಕವನ್ನು ಹೊತ್ತೊಯ್ಯುವ ಕೆಲಸ ಮಾಡುತ್ತದೆ. ಹೆಚ್ಚಿನ ಕಣಗಳ ಕಾರಣ ಆಮ್ಲಜನಕವೂ ಹೆಚ್ಚಾಗಿದ್ದು ಚರ್ಮ ನೀಲಿಯಾಗುತ್ತದೆ. ಇಂದು ಈ ರೋಗದಿಂದ ನೂರಾರು ವ್ಯಕ್ತಿಗಳು ಬಳಲುತ್ತಿದ್ದಾರೆ. ಆದರೆ ಇದುವರೆಗೆ ಈ ತೊಂದರೆಗೆ ಯಾವುದೇ ಚಿಕಿತ್ಸೆ ಕಂಡುಹಿಡಿಯಲು ಸಾಧ್ಯವಾಗಿಲ್ಲ.

English summary

Bizarre Diseases That Science Has No Explanation For

No matter how classified and intellectual scientists we have, the truth is even top-class scientists have failed to explain how these diseases have affected mankind. From a burning mouth syndrome to water allergy, scientists have failed to explain the cause and remedy of these diseases.
Subscribe Newsletter