For Quick Alerts
ALLOW NOTIFICATIONS  
For Daily Alerts

  ಬಾಹುಬಲಿ ಚಿತ್ರದ ಬಿಂದಿ, ಟ್ಯಾಟೂ-ಲಾಂಛನಗಳ ಹಿಂದಿನ ಸೀಕ್ರೆಟ್ ರಟ್ಟು!

  By Arshad
  |

  ದಕ್ಷಿಣ ಭಾರತದ ಚಿತ್ರವೊಂದು ಬರೆಯ ಹತ್ತೇ ದಿನಗಳಲ್ಲಿ ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನಗಳಿಕೆ ಗಳಿಸಿ ಹಾಲಿವುಡ್‌ ಸಹಾ ಹುಬ್ಬೇರಿಸಿ ನೋಡುವಂತೆ ಮಾಡಿರುವಲ್ಲಿ ಹಲವು ವರ್ಷಗಳ ಕಠಿಣ ಶ್ರಮವಿದ್ದು ಭಾರತೀಯ ಚಿತ್ರರಂಗದ ಗೌರವವನ್ನು ಹೆಚ್ಚಿಸಿದೆ.

  ಭಾರತೀಯ ಸಿನಿಮಾದ ಹಾದಿಯಲ್ಲಿ ಈ ಸಿನಿಮಾವೊಂದು ಪ್ರಮುಖ ಮೈಲಿಗಲ್ಲಾಗಿದ್ದು ಇದರ ಯಶಸ್ಸಿಗೆ ಚಿತ್ರದಲ್ಲಿ ಬಳಸಲಾದ ವಿಶುಯಲ್ ಎಫೆಕ್ಟ್ VFX ಅಥವಾ ದೃಶ್ಯಮಾಧ್ಯಮದ ವೈಶಿಷ್ಟ್ಯಗಳೇ ಇದರ ವೈಭವಕ್ಕೆ ಪ್ರಮುಖ ಕಾರಣವಾಗಿದೆ. ಆದರೆ ಯಾವುದೇ ದೊಡ್ಡ ವಸ್ತು ಸಹಾ ಚಿಕ್ಕ ಚಿಕ್ಕ ಹಾಗೂ ಸೂಕ್ಷ್ಮ ವಿವರಗಳಿಂದ ಕೂಡಿರುತ್ತದೆ. ಈ ಸೂಕ್ಷ್ಮವಂತಿಕೆಯ ಹಿಂದೆ ಹಲವು ವ್ಯಕ್ತಿಗಳು ತಮ್ಮ ಅಪಾರ ಶ್ರಮ, ಸಮಯವನ್ನು ವ್ಯಯಿಸಿರುತ್ತಾರೆ. 

  ಬಾಹುಬಲಿ ಸಿನಿಮಾ ಹೀರೋ ಪ್ರಭಾಸ್‌‌ನ ಫಿಟ್ನೆಸ್ ರಹಸ್ಯ ಬಯಲು!

  ಈ ಚಿತ್ರದ ಪಾತ್ರಧಾರಿಗಳ ವಸ್ತ್ರವಿನ್ಯಾಸ ಮಾತ್ರವಲ್ಲ, ಪೌರಾಣಿಕ ಅಲಂಕಾರಿಕಾ ಚಿಹ್ನೆಗಳನ್ನು ಸಹಾ ಅತ್ಯಂತ ಸೂಕ್ಷ್ಮ ಹಾಗೂ ಕಲಾವಂತಿಕೆಯಿಂದ ಪ್ರತಿ ಪಾತ್ರಧಾರಿಗೆ ವರ್ಣಿಸಲಾಗಿದ್ದು ಪ್ರತಿ ಪಾತ್ರವನ್ನು ಅತ್ಯಂತ ಸಮರ್ಪಕವಾಗಿ ಪ್ರಸ್ತುತಪಡಿಸಲು ನೆರವಾಗಿದೆ. ಇಂದಿನ ಲೇಖನದಲ್ಲಿ ಬಾಹುಬಲಿ ಸಿನಿಮಾದಲ್ಲಿ ಪ್ರತಿ ಪಾತ್ರಧಾರಿ ಧರಿಸಿದ ಬಿಂದಿ, ಟ್ಯಾಟೂ ಮೊದಲಾದ ಚಿಹ್ನೆಗಳು ಏನನ್ನು ಬಿಂಬಿಸುತ್ತವೆ ಎಂಬುದನ್ನು ನೋಡೋಣ.... 

  ಬಿಜ್ಜಳದೇವ - ಆತನ ಹಣೆಯ ಬಿಂದಿಯ ವಿನ್ಯಾಸ-

  ಬಿಜ್ಜಳದೇವ - ಆತನ ಹಣೆಯ ಬಿಂದಿಯ ವಿನ್ಯಾಸ-"ತ್ರಿಶೂಲಂ"

  ಹಿಂದೂ ಪುರಾಣಗಳ ಪ್ರಕಾರ ತ್ರಿಶೂಲ ಮೂರು ಗುಣಗಳನ್ನು ಪ್ರತಿನಿಧಿಸುತ್ತದೆ. ಅವೆಂದರೆ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ. ಈ ಮೂರೂ ಗುಣಗಳು ಅಸಮತೋಲನ, ಅವ್ಯವಸ್ಥತೆ, ಅವ್ಯವಸ್ಥೆ ಹಾಗೂ ತಳಮಳಗಳನ್ನು ನಿಯಂತ್ರಿಸುವ ಮೂಲಕ ಮನಸ್ಸನ್ನು ಸ್ಥಿಮಿತದಲ್ಲಿರಿಸಲು ನೆರವಾಗುತ್ತವೆ. ಬಿಜ್ಜಳದೇವ ಇದೇ ಗುಣಗಳನ್ನು ತನ್ನ ತ್ರಿಶೂಲದ ಮೂಲಕ ಪ್ರತಿನಿಧಿಸುತ್ತಾನೆ.

  ಶಿವಗಾಮಿ-ಆಕೆಯ ಬಿಂದಿಯ ವಿನ್ಯಾಸ

  ಶಿವಗಾಮಿ-ಆಕೆಯ ಬಿಂದಿಯ ವಿನ್ಯಾಸ "ಪೂರ್ಣಚಂದ್ರ"

  ಈಕೆಯ ಹಣೆಯಲ್ಲಿ ರಾರಾಜಿಸುತ್ತಿರುವ ಪೂರ್ಣಚಂದ್ರ ಆಕೆಯ ಕ್ರಿಯಾಶೀಲ ನಡವಳಿಕೆಯನ್ನು ಬಿಂಬಿಸುತ್ತದೆ. ಅಲ್ಲದೇ ಆಕೆಯ ವಿವಿಧ ಗುಣಗಳಾದ ಸಮಾನತೆ, ಎದೆಗಾರಿಕೆ, ಸ್ಥೈರ್ಯ, ಸಂರಕ್ಷಣೆ ಹಾಗೂ ಸಾಮರ್ಥ್ಯವನ್ನು ಬಿಂಬಿಸುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಕೇವಲ ಒಂದು ಬಿಂದಿಯ ಬೊಟ್ಟು ಆಕೆಯ ಸಂಪೂರ್ಣ ಗುಣಗಳನ್ನು ಒಂದೇ ನೋಟದಲ್ಲಿ ಹೇಳಿಬಿಡುತ್ತದೆ.

  ಅಮರೇಂದ್ರ ಬಾಹುಬಲಿ-ಆತನ ಬಿಂದಿಯ ವಿನ್ಯಾಸ

  ಅಮರೇಂದ್ರ ಬಾಹುಬಲಿ-ಆತನ ಬಿಂದಿಯ ವಿನ್ಯಾಸ "ಅರ್ಧ ಚಂದ್ರ"

  ಅರ್ಧಚಂದ್ರವನ್ನು ವಿಶ್ವದ ಹಲವು ಧರ್ಮಗಳು ಪವಿತ್ರವೆಂದು ಪರಿಗಣಿಸಿವೆ. ಹಲವು ರಾಷ್ಟ್ರಗಳ, ಧರ್ಮಗಳ ಲಾಂಛನವೂ ಆಗಿದೆ. ಮಾಹಿಷ್ಮತಿಯ ಜನತೆ ಅಪಾರವಾಗಿ ಪ್ರೀತಿಸುವ, ಆರಾಧಿಸುವ ಬಾಹುಬಲಿಯ ಗುಣಗಳಾದ ದಯಾಪರತೆ, ಸಮನ್ವಯತೆ ಹಾಗೂ ಯಾವುದೇ ಸಂದರ್ಭದಲ್ಲಿ ಎದೆಗುಂದದೇ ಪರಿಸ್ಥಿತಿಯನ್ನು ಸಮಚಿತ್ತದಲ್ಲಿ ಎದುರಿಸುವ ಗುಣವನ್ನು ಈ ಅರ್ಧಚಂದ್ರ ಬಿಂಬಿಸುತ್ತದೆ.

  ಕಾಲ ಭೈರವ- ಆತನ ಬಿಂದಿಯ ವಿನ್ಯಾಸವೂ

  ಕಾಲ ಭೈರವ- ಆತನ ಬಿಂದಿಯ ವಿನ್ಯಾಸವೂ "ಅರ್ಧ ಚಂದ್ರ"

  ಈ ಪಾತ್ರದ ಪಾತ್ರಧಾರಿಯಗೂ ಬಾಹುಬಲಿಯ ವಿನ್ಯಾಸದಂತಹದ್ದೇ ಅರ್ಧಚಂದ್ರ ಬಿಂದಿಯನ್ನು ಒದಗಿಸಲಾಗಿದೆ.

  ದೇವಸೇನ - ಆಕೆಯ ಬಿಂದಿಯ ವಿನ್ಯಾಸ:

  ದೇವಸೇನ - ಆಕೆಯ ಬಿಂದಿಯ ವಿನ್ಯಾಸ: "ಲಿಂಗ ಸರಿಸಮಾನತೆ"

  ಈ ಪಾತ್ರ ಕಠಿಣ ಸವಾಲೊಡ್ಡುವ ದೇವಸೇನಳದ್ದಾಗಿದ್ದು ಈಕೆಯ ಬಿಂದಿಯಲ್ಲಿ ಪುರುಷ ಮತ್ತು ಮಹಿಳೆಯ ಐಕ್ಯತೆಯನ್ನು ಬಿಂಬಿಸಲಾಗಿದೆ. ದಡ್ಡರ ಗುಂಪಿನಲ್ಲಿರುವ ಪ್ರಬಲ ಶಿವಗಾಮಿಯೂ ಇದೇ ಬಿಂದಿಯೊಂದಿಗೆ ಕಾಣಿಸಿಕೊಳ್ಳುತ್ತಾಳೆ.

  ಭಲ್ಲಾಳದೇವ - ಆತನ ಬಿಂದಿಯ ವಿನ್ಯಾಸ

  ಭಲ್ಲಾಳದೇವ - ಆತನ ಬಿಂದಿಯ ವಿನ್ಯಾಸ "ಉದಯಿಸುತ್ತಿರುವ ಸೂರ್ಯ"

  ಇಡಿಯ ಬಾಹುಬಲಿ ಚಿತ್ರದಲ್ಲಿ ಎದುರಾಳಿಯಾಗಿರುವ ಭಲ್ಲಾಳದೇವ ತನ್ನ ಹಣೆಯಲ್ಲಿ ಉದಯಿಸುತ್ತಿರುವ ಸೂರ್ಯನ ಬಿಂದಿಯನ್ನು ಧರಿಸಿರುತ್ತಾನೆ. ಈ ವಿನ್ಯಾಸದ ಮೂಲಕ ಇಂದು ಸೂರ್ಯ ತನ್ನ ನಡುವಯಸ್ಸಿನಲ್ಲಿದ್ದರೂ ತನ್ನ ಶಕ್ತಿಯನ್ನು ಕಳೆದುಕೊಳ್ಳದೇ ಮುಂದಿನ ಕೆಲವು ಬಿಲಿಯ ವರ್ಷಗಳವರೆಗೂ ಹಾಗೇ ಇರುತ್ತಾನೆ ಎಂಬುದನ್ನು ಸೂಚಿಸುತ್ತದೆ.

  ಮಹೇಂದ್ರ ಬಾಹುಬಲಿ-ಈತನ ಬಿಂದಿಯ ವಿನ್ಯಾಸ

  ಮಹೇಂದ್ರ ಬಾಹುಬಲಿ-ಈತನ ಬಿಂದಿಯ ವಿನ್ಯಾಸ "ಚಿಪ್ಪನ್ನು ಸುತ್ತಿರುವ ಸರ್ಪ"

  ಈ ಬಿಂದಿಯ ವಿನ್ಯಾಸ ಮಹೇಂದ್ರ ತನ್ನ ಇಷ್ಟದೈವದ ಪ್ರತಿ ಇರಿಸಿರುವ ಭಕ್ತಿಯನ್ನು ಪ್ರಕಟಿಸುತ್ತದೆ. ಈತ ಶಿವನ ಪರಮಭಕ್ತನಾಗಿದ್ದು ಈ ವಿನ್ಯಾಸ ಈತನ ಭಕ್ತಿಯನ್ನು ಪರಿಪೂರ್ಣವಾಗಿ ಬಿಂಬಿಸುತ್ತದೆ.

  ಕಟ್ಟಪ್ಪ- ಆತನ ಬಿಂದಿಯ ವಿನ್ಯಾಸ

  ಕಟ್ಟಪ್ಪ- ಆತನ ಬಿಂದಿಯ ವಿನ್ಯಾಸ "ನಿಷ್ಠಾವಂತ ಗುಲಾಮ"

  ಕಟ್ಟಪ್ಪನ ಹಣೆಯಲ್ಲಿರುವ ಬಿಂದಿ ಸ್ವತಃ ತನ್ನ ವಿವರಣೆಯನ್ನು ನೀಡುತ್ತಿದ್ದು ಇದಕ್ಕೆ ಇನ್ನೂ ಹೆಚ್ಚಿನ ವಿವರಣೆ ಬೇಕೇ? ಈತ ತನ್ನ ಮಾಲಕಿಯಾದ ಮಾಹಿಶ್ಮತಿಯ ಆಜ್ಞೆಯನ್ನು ಶಿರಾವಹಿಸಿ ಪಾಲಿಸುವ ವಿಧೇಯ ಗುಲಾಮನಾಗಿದ್ದು ಬಾಹುಬಲಿಯ ಕಥೆಗೆ ಮೂಲಾಧಾರವಾಗಿದೆ. ಈ ಚಿಹ್ನೆ ಆತನ ಗುಲಾಮನಾಗಿರುವ ಸಂಕೇತವಾಗಿದ್ದು ತನಗೆ ನೀಡಿದ ಆಜ್ಞೆಯನ್ನು ಪರಿಪಾಲಿಸದೇ ವಿಧಿಯೇ ಇಲ್ಲವೆಂಬ ಅಸಹಾಯಕತೆಯೂ ಇದರಲ್ಲಡಗಿದೆ.

  ಮಾಹಿಷ್ಮತಿ ಲಾಂಛನ

  ಮಾಹಿಷ್ಮತಿ ಲಾಂಛನ

  ಇಂದು ಪ್ರತಿ ರಾಷ್ಟ್ರಕ್ಕೆ ರಾಷ್ಟ್ರಲಾಂಛನವಿರುವಂತೆಯೇ ಅಂದಿನ ದಿನಗಳಲ್ಲಿ ರಾಜ್ಯಕ್ಕೆ ಮತ್ತು ರಾಜಮನೆತನಕ್ಕೂ ಒಂದು ಲಾಂಛನವಿರುತ್ತಿತ್ತು. ಮಾಹಿಷ್ಮತಿಯಲ್ಲಿಯೂ ಕ್ರಮಾಗತ ಅಧಿಕಾರ ವ್ಯವಸ್ಥೆ ಇತ್ತು. ಈ ವ್ಯವಸ್ಥೆಯನ್ನು ಲಾಂಛನದ ನಡುವೆ ಪಿರಮಿಡ್ ಆಕಾರದಲ್ಲಿರಿಸಿ ಅತ್ಯಂತ ಸೂಚ್ಯವಾಗಿ ಬಿಂಬಿಸಲಾಗಿದೆ. ಈ ವಿನ್ಯಾಸದ ಮೂಲಕ ಕೇಂದ್ರದ ರಾಜಮನೆತನವನ್ನು ಸುತ್ತುವರೆದಿರುವ ಶಸ್ತ್ರಸಜ್ಜಿತ ಯೋಧರು ಯಾವುದೇ ದಿಕ್ಕಿನಿಂದ ಆಗಮಿಸುವ ಶತ್ರುಗಳಿಂದ ರಕ್ಷಣೆ ನೀಡುತ್ತಿರುವಂತೆ ಬಿಂಬಿಸಲಾಗಿದೆ. ಎರಡೂ ಬದಿ ಕುದುರೆಗಳು ನಿಂತಿರುವಂತೆಯೂ ವಿವರಿಸಲಾಗಿದೆ.

  ಕುಂತಳ ರಾಜ - ಆತನ ಬಿಂದಿಯ ವಿನ್ಯಾಸ

  ಕುಂತಳ ರಾಜ - ಆತನ ಬಿಂದಿಯ ವಿನ್ಯಾಸ "ಕಪ್ಪು ಚುಕ್ಕೆ"

  ಈ ಪಾತ್ರಧಾರಿಯನ್ನು ಒಂದು ಮುಖ್ಯ ಅಭಿಯಾನಕ್ಕೆ ಹೊರಟಿರುವಂತೆ ಪ್ರದರ್ಶಿಸಲಾಗಿದ್ದು ಈತನ ಹಣೆಯಲ್ಲಿರುವ ಕಪ್ಪು ಚುಕ್ಕೆ ಆತನ ಪರಿವಾರಕ್ಕೆ ಉಂಟುಮಾಡಿದ ಧಾಳಿಗೆ ಪ್ರತೀಕಾರವನ್ನು ನೀಡುವಂತಿದೆ.

  ಆವಂತಿಕಾ - ಆಕೆಯ ಬಿಂದಿಯ ವಿನ್ಯಾಸ

  ಆವಂತಿಕಾ - ಆಕೆಯ ಬಿಂದಿಯ ವಿನ್ಯಾಸ "ಕಪ್ಪು ಈಟಿಯ ತುದಿ"

  ಈಕೆ ತನ್ನ ಗುರಿಯನ್ನು ಸಾಧಿಸಹೊರಟ ಸ್ತ್ರೀಯಾಗಿದ್ದು ಈಕೆಯ ಜೀವನದ ಗುರಿ ಎಂದರೆ ದೇವಸೇನನಿಂದ ಸ್ವಾತಂತ್ರ್ಯ ಪಡೆಯುವುದಾಗಿರುತ್ತದೆ. ಈ ಕಾರ್ಯಕ್ಕೆ ಈಕೆ ತನ್ನನ್ನು ತಾನೇ ಒಂದು ಅಸ್ತ್ರದಂತೆ ಬದಲಿಸಿಕೊಂಡಿರುತ್ತಾಳೆ.

  ಭದ್ರ - ಈತನ ಬಿಂದಿಯ ವಿನ್ಯಾಸ

  ಭದ್ರ - ಈತನ ಬಿಂದಿಯ ವಿನ್ಯಾಸ "ಗೂಳಿ"

  ಈ ಬಿಂದಿಯ ಮೂಲಕ ಈತ ಸೇನೆಯ ಮೇಲೆ ಹೊಂದಿರುವ ಪ್ರಭುತ್ವವನ್ನು ಸಾರಿದಂತಾಗುತ್ತದೆ. ಅಲ್ಲದೇ ಈ ಪಾತ್ರಧಾರಿಯ ಆಕ್ರಮಣಶೀಲತೆ, ಅಧಿಕಾರವನ್ನೂ ಬಿಂಬಿಸುತ್ತದೆ. ಅಷ್ಟೇ ಅಲ್ಲ, ಹಠಮಾರಿತನಕ್ಕೂ ಗೂಳಿ ಸಂಕೇತವಾಗಿದೆ.

  ’ಪ್ರೀತಿ’ ಟ್ಯಾಟೂ

  ’ಪ್ರೀತಿ’ ಟ್ಯಾಟೂ

  ಈ ಸಂಕೇತಗಳನ್ನು ಅತ್ಯಂತ ಸಮರ್ಪಕವಾಗಿ ಮೂಡಿಸಲಾಗಿದ್ದು ಈ ಮೂಲಕ ಹೇಗೆ ಎರಡು ಆತ್ಮಗಳು ಬೆರೆತು ಒಂದಾಗುತ್ತವೆ ಎಂಬುದನ್ನು ಸೂಚಿಸಲಾಗಿದೆ. ಇದರಲ್ಲಿ ಉಪಯೋಗಿಸಲಾಗಿರುವ ವರ್ಣಸಂಯೋಜನೆ ಅತ್ಯಂತ ಕುತೂಹಲಕರವಾಗಿದ್ದು ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ ಹಾಗೂ ಮನಸ್ಸಿಗೆ ಮುದ ನೀಡುತ್ತದೆ.

  English summary

  Bindis, Tattoos & Logo Designs Mean In The Movie Baahubali?

  This article is all about the hidden meaning behind the tattoos, bindi designs and the logos that were used in the movie for each character. Come let us check out what each design signifies about the nature of the different characters in the movie Baahubali.
  Story first published: Monday, May 22, 2017, 7:01 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more