2018 ರಾಶಿ ಭವಿಷ್ಯ: ವಿವಾಹವಾಗಲು ಶುಭ ಮುಹೂರ್ತದ ದಿನ ಇಲ್ಲಿದೆ ನೋಡಿ

Posted By: Lekhaka
Subscribe to Boldsky

ವಿವಾಹ ಎನ್ನುವುದು ಜೀವನದಲ್ಲಿ ಅತ್ಯಂತ ಪವಿತ್ರವಾದ ಬಂಧನ. ಜೀವನದ ಸಂತೋಷದ ಜೊತೆಗೆ ಒಂದಿಷ್ಟು ಜವಾಬ್ದಾರಿಗಳನ್ನು ನೀಡಿ. ಜೀವನಕ್ಕೊಂದು ಪರಿಪೂರ್ಣತೆಯನ್ನು ನೀಡುವ ಸಂಸ್ಕಾರವೇ ವಿವಾಹ. ಹುಡುಗಾಟದ ಜೀವನದಿಂದ ಗೃಹಸ್ತನಾಗುವ ಈ ಹಂತಕ್ಕೆ ವಿಶೇಷ ಮುಹೂರ್ತಗಳನ್ನು ನೋಡಲಾಗುತ್ತದೆ. ಹಿಂದೂ ಸಂಸ್ಕøತಿಯಲ್ಲಿ ವಿವಾಹಕ್ಕೊಂದು ವಿಶೇಷ ಸ್ಥಾನವನ್ನು ನೀಡಲಾಗಿದೆ. ಅಲ್ಲದೆ ವಿವಾಹಕ್ಕೆ ಪ್ರತಿಯೊಂದು ಸಮುದಾಯಗಳಲ್ಲೂ ವಿಶೇಷ ಆಚರಣೆ ಹಾಗೂ ಪದ್ಧತಿಗಳಿರುವುದನ್ನು ನಾವು ನೋಡಬಹುದು.

ವಿವಾಹ ಎಂದೊಡನೆ ಮೊದಲು ವಧು-ವರರ ನಕ್ಷತ್ರ, ರಾಶಿ ಹಾಗೂ ಕುಂಡಲಿಯ ಹೊಂದಾಣಿಕೆಯನ್ನು ನೋಡುತ್ತಾರೆ. ಎಲ್ಲವೂ ಸೂಕ್ತ ವಾಗಿದೆ ಎಂದಾಗ ವಿವಾಹಕ್ಕೆ ಒಂದು ಪ್ರಸಕ್ತವಾದ ದಿನಾಂಕವನ್ನು ನಿಗದಿ ಪಡಿಸುತ್ತಾರೆ. ಕುಡಲಿಯ ಹೊಂದಾಣಿಕೆಯಿಂದ ಹಿಡಿದು ವಿವಾಹದ ದಿನಾಂಕದ ಆಯ್ಕೆಯು ವ್ಯಕ್ತಿಯ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಮನಸ್ಸಿಗೆ ಬಂದ ದಿನಾಂಕದಲ್ಲಿ ವಿವಾಹವಾದರೆ ವೈವಾಹಿಕ ಜೀವನವು ಅಷ್ಟು ಸುಖಕರವಾಗಿರುವುದಿಲ್ಲ ಎನ್ನಲಾಗುವುದು. ಅದಕ್ಕಾಗಿಯೇ ಬೋಲ್ಡ್ ಸ್ಕೈ ಪ್ರತಿಯೊಂದು ರಾಶಿಯವರಿಗೂ 2018ರಲ್ಲಿ ಯಾವೆಲ್ಲಾ ದಿನಾಂಕಗಳು ವಿವಾಹಕ್ಕೆ ಸೂಕ್ತ ದಿನವಾಗಿರುತ್ತದೆ ಎನ್ನುವ ವಿವವರಣೆಯನ್ನು ತಿಳಿಸಿಕೊಡುತ್ತಿದೆ. ನಿಮಗೂ ಈ ವಿಚಾರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕು ಎಂದೆನಿಸಿದರೆ ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ... 

ಮೇಷ: ವಿವಾಹ ದಿನಾಂಕ 21 ಮಾರ್ಚ್ 20 ಏಪ್ರಿಲ್

ಮೇಷ: ವಿವಾಹ ದಿನಾಂಕ 21 ಮಾರ್ಚ್ 20 ಏಪ್ರಿಲ್

2018ರಲ್ಲಿ ಮೇಷ ರಾಶಿಯವರು ವಿವಾಹವಾಗಲು ಸೂಕ್ತ ದಿನಾಂಕವೆಂದರೆ 27. ಈ ದಿನಾಂಕವು ಅದೃಷ್ಟವನ್ನು ತಂದುಕೊಡುತ್ತದೆ ಎನ್ನಲಾಗುವುದು. ಈ ದಿನಾಂಕದಲ್ಲಿ ವಿವಾಹವಾದರೆ ದಂಪತಿಗಳು ಜೀವನದಲ್ಲಿ ಎಲ್ಲಾ ಸಂಗತಿಗಳನ್ನು ಚೆನ್ನಾಗಿ ನಿರ್ವಹಿಸಿಕೊಂಡು ಸಾಗುತ್ತಾರೆ ಎನ್ನಲಾಗುವುದು.

ವೃಷಭ: ವಿವಾಹ ದಿನಾಂಕ ಏಪ್ರಿಲ್ 21- ಮೇ 21

ವೃಷಭ: ವಿವಾಹ ದಿನಾಂಕ ಏಪ್ರಿಲ್ 21- ಮೇ 21

ಈ ರಾಶಿಚಕ್ರದವರು ವಿವಾಹವಾಗಲು 7 ಅತ್ಯುತ್ತಮವಾದ ದಿನಾಂಕ. ಈ ದಿನಾಂಕವು ಅದೃಷ್ಟ ಮತ್ತು ಉತ್ತಮ ಪ್ರೀತಿ ಬೆಂಬಲವನ್ನು ತಂದುಕೊಡುತ್ತದೆ. ಸಂಗಾತಿಯು ಉತ್ತಮ ರೀತಿಯ ಸಹಕಾರ ಹಾಗೂ ಕರ್ತವ್ಯವನ್ನು ನಿರ್ವಹಿಸುವರು.

ಮಿಥುನ: ವಿವಾಹ ದಿನಾಂಕ ಮೇ 22- ಜೂನ್21

ಮಿಥುನ: ವಿವಾಹ ದಿನಾಂಕ ಮೇ 22- ಜೂನ್21

ಈ ರಾಶಿಚಕ್ರದವರು ಮದುವೆಯಾಗಲು ಉತ್ತಮವಾದ ದಿನಾಂಕ 9. ಈ ದಿನದಂದು ವಿವಾಹವಾದರೆ ಜೀವನದಲ್ಲಿ ದೃಢತೆಯನ್ನು ಪಡೆದುಕೊಳ್ಳುವರು. ಅಲ್ಲದೆ ಸಂಗಾತಿಯೊಂದಿಗೆ ಯಶಸ್ವಿ ಜೀವನವನ್ನು ನಡೆಸುವರು.

ಕರ್ಕ: ವಿವಾಹ ದಿನಾಂಕ ಜೂನ್ 22 -ಜುಲೈ 22

ಕರ್ಕ: ವಿವಾಹ ದಿನಾಂಕ ಜೂನ್ 22 -ಜುಲೈ 22

ತಮ್ಮ ಜೀವನದಲ್ಲಿ ಅದೃಷ್ಟ ಮತ್ತು ಸಮೃದ್ಧಿಯನ್ನು ಸಾಧಿಸಲು ಈ ರಾಶಿಯವರು ದಿನಾಂಕ 15ರಂದು ವಿವಾಹವಾಗಬೇಕು. ಈ ದಿನಾಂಕದಲ್ಲಿ ವಿವಾಹವಾದರೆ ತಮ್ಮ ಭಾವನೆಯನ್ನು ವ್ಯಕ್ತಪಡಿಸಲು ಮತ್ತು ಜೀವನದಲ್ಲಿ ಪರಸ್ಪರ ಅರ್ಥೈಸಿಕೊಂಡು ಸೂಚನೆಗಳನ್ನು ನೀಡಲು ಸಹಾಯ ಮಾಡುತ್ತದೆ.

ಸಿಂಹ: ವಿವಾಹ ದಿನಾಂಕ ಜುಲೈ 23- ಆಗಸ್ಟ್ 21

ಸಿಂಹ: ವಿವಾಹ ದಿನಾಂಕ ಜುಲೈ 23- ಆಗಸ್ಟ್ 21

ಈ ರಾಶಿಯವರಿಗೆ ಉತ್ತಮವಾದ ವಿವಾಹ ದಿನಾಂಕವೆಂದರೆ 3. ಇವರು ಇತರ ವ್ಯಕ್ತಿಗಳ ಅಭಿಪ್ರಾಯವನ್ನು ಗೌರವಿಸಲು ಕಲಿತುಕೊಳ್ಳಬೇಕು. ಇವರು ಇತರರ ಹೃದಯವನ್ನು ಗೆಲ್ಲಲು ತಪ್ಪುಗಳನ್ನು ಕ್ಷಮಿಸುವ ಗುಣವನ್ನು ಬೆಳೆಸಿಕೊಳ್ಳಬೇಕು.

ಕನ್ಯಾ: ವಿವಾಹದ ದಿನಾಂಕ ಆಗಸ್ಟ್ 22- ಸೆಪ್ಟೆಂಬರ್ 23

ಕನ್ಯಾ: ವಿವಾಹದ ದಿನಾಂಕ ಆಗಸ್ಟ್ 22- ಸೆಪ್ಟೆಂಬರ್ 23

ಈ ವ್ಯಕ್ತಿಗಳಿಗೆ ವಿವಾಹವಾಗಲು ಉತ್ತಮವಾದ ದಿನಾಂಕ 11. ಈ ದಿನಾಂಕದಲ್ಲಿ ವಿವಾಹವಾದರೆ ಅದೃಷ್ಟವಂತರಾಗುತ್ತಾರೆ. ಇವರು ವ್ಯವಹಾರಗಳಲ್ಲಿ ಪರಿಪೂರ್ಣತೆಯನ್ನು ಪಡೆದವರಾಗಿರುತ್ತಾರೆ. ತಮ್ಮ ಹೃದಯವನ್ನು ಗೆಲ್ಲಲು ಇತರರ ತಪ್ಪನ್ನು ಕ್ಷಮಿಸಲು ಕಲಿತುಕೊಳ್ಳಬೇಕು.

ತುಲಾ: ವಿವಾಹ ದಿನಾಂಕ ಸಪ್ಟೆಂಬರ್24 -ಅಕ್ಟೋಬರ್ 23

ತುಲಾ: ವಿವಾಹ ದಿನಾಂಕ ಸಪ್ಟೆಂಬರ್24 -ಅಕ್ಟೋಬರ್ 23

ಇವರಿಗೆ ವಿವಾಹವಾಗಲು ಅತ್ಯುತ್ತಮವಾದ ದಿನಾಂಕ 2. ಈ ದಿನಾಂಕವನ್ನು ಆಯ್ಕೆ ಮಾಡಿಕೊಂಡರೆ ಅದೃಷ್ಟ ಮತ್ತು ಸಮೃದ್ಧಿಯನ್ನು ಕಂಡುಕೊಳ್ಳುತ್ತಾರೆ. ಜೀವನದಲ್ಲಿ ಒತ್ತಡ ಮುಕ್ತರಾಗುತ್ತಾರೆ. ಸಂತೋಷ ಮತ್ತು ದುಃಖವನ್ನು ಸಮನಾಗಿ ಕಾಣಲು ಕಲಿಯುತ್ತಾರೆ.

ವೃಶ್ಚಿಕ: ವಿವಾಹ ದಿನಾಂಕ ಅಕ್ಟೋಬರ್ 24-ನವೆಂಬರ್ 21

ವೃಶ್ಚಿಕ: ವಿವಾಹ ದಿನಾಂಕ ಅಕ್ಟೋಬರ್ 24-ನವೆಂಬರ್ 21

ಇವರಿಗೆ ವಿವಾಹವಾಗಲು ಅತ್ಯುತ್ತಮವಾದ ದಿನಾಂಕ 18. ಈ ದಿನಾಂಕದ ವಿವಾಹ ಜೀವನದಲ್ಲಿ ಅದೃಷ್ಟ ಹಾಗೂ ಸಂತೋಷವನ್ನು ತಂದುಕೊಡುತ್ತದೆ. ಇತರರ ತಪ್ಪನ್ನು ಕ್ಷಮಿಸುವ ಗುಣವನ್ನು ಕಲಿತುಕೊಂಡರೆ ಜೀವನದಲ್ಲಿ ಇನ್ನಷ್ಟು ಸಂತೋಷ ಪಡೆದುಕೊಳ್ಳುವರು ಎನ್ನಲಾಗುವುದು.

ಧನು: ವಿವಾಹ ದಿನಾಂಕ ನವೆಂಬರ್ 22- ಡಿಸೆಂಬರ್22

ಧನು: ವಿವಾಹ ದಿನಾಂಕ ನವೆಂಬರ್ 22- ಡಿಸೆಂಬರ್22

ಇವರ ವಿವಾಹ ಸಂಬಂಧ ಉತ್ತಮ ಗೊಳ್ಳಲು ಸೂಕ್ತ ದಿನಾಂಕ 21. ಇವರು ಜೀವನದಲ್ಲಿನ ಸಹಿಷ್ಣುತೆಯನ್ನು ಬೆಳೆಸಿಕೊಳ್ಳುತ್ತಾರೆ. ಇತರರ ಅಭಿಪ್ರಾಯಕ್ಕೆ ಮಾನ್ಯತೆ ಮತ್ತು ಸಂತೋಷವಾಗಿರಲು ಅವಕಾಶ ಕಲ್ಪಿಸಿಕೊಡುತ್ತಾರೆ.

ಮಕರ: ವಿವಾಹ ದಿನಾಂಕ ಡಿಸೆಂಬರ್ 23 -ಜನವರಿ 20

ಮಕರ: ವಿವಾಹ ದಿನಾಂಕ ಡಿಸೆಂಬರ್ 23 -ಜನವರಿ 20

ಇವರಿಗೆ ವಿವಾಹವಾಗಲು ಉತ್ತಮ ದಿನಾಂಕ 30. ಈ ದಿನಾಂಕದಲ್ಲಿ ವಿವಾಹವಾದರೆ ಜೀವನದಲ್ಲಿ ವಿವಿಧ ಅನುಭವವನ್ನು ಪಡೆದುಕೊಳ್ಳುತ್ತಾರೆ. ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳುತ್ತಾರೆ.

ಕುಂಬ: ಜನವರಿ 21- ಫೆಬ್ರುವರಿ 19

ಕುಂಬ: ಜನವರಿ 21- ಫೆಬ್ರುವರಿ 19

ಈ ರಾಶಿಯವರ ಅತ್ಯುತ್ತಮವಾದ ಮದುವೆಯ ದಿನಾಂಕ 14. ಇವರಿಗೆ ಈ ದಿನಾಂಕ ಅತ್ಯಂತ ಅದೃಷ್ಟದ ದಿನಾಂಕ. ಈ ದಿನದಲ್ಲಿ ವಿವಾಹವಾದರೆ ತಮ್ಮ ಸಂಗಾತಿಯೊಂದಿಗೆ ಕಾಳಜಿ ಮತ್ತು ಬೆಂಬಲವನ್ನು ಪಡೆದುಕೊಳ್ಳುತ್ತಾರೆ.

ಮೀನ: ವಿವಾಹ ದಿನಾಂಕ ಫೆಬ್ರುವರಿ 20- ಮಾರ್ಚ್20

ಮೀನ: ವಿವಾಹ ದಿನಾಂಕ ಫೆಬ್ರುವರಿ 20- ಮಾರ್ಚ್20

ಈ ರಾಶಿ ಚಕ್ರದವರಿಗೆ 20 ಅದೃಷ್ಟದ ದಿನಾಂಕವಾಗಿದೆ. ಇವರು ತಮ್ಮ ಜೀವನದಲ್ಲಿ ಪ್ರಾಯೋಗಿಕವಾಗಿ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ಈ ವ್ಯಕ್ತಿಗಳು ಜೀವನದ ಕನಸುಗಳು ಮತ್ತು ನೈಜತೆಯ ನಡುವೆ ಸಮತೋಲನವನ್ನು ಕಲಿಯಬೇಕಾಗುವುದು.

English summary

best-wedding-date-for-2018-according-to-zodiac-sign

We, here at Boldsky, are sharing the lucky dates on which each zodiac sign can look upto for the best wedding dates that would suit the particular sign in 2018. These are the dates revealed to us by our astrologers and getting hooked on the lucky dates of 2018, will surely bring in good luck. Here are the lucky wedding dates for 2018 for all zodiac signs. Take a look.