ಲೈಫ್‌ನಲ್ಲಿ ಶ್ರೇಷ್ಠ ಜೋಡಿಯಾಗಬಲ್ಲ ರಾಶಿಯವರು

Posted By: Lekhaka
Subscribe to Boldsky

ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎನ್ನುವ ಮಾತಿದೆ. ಇದು ನಿಜವೆಂದು ನಮಗೆ ಕೆಲವೊಮ್ಮೆ ಅನಿಸುವುದು ಇದೆ. ಯಾಕೆಂದರೆ ಕೆಲವು ಜೋಡಿಗಳನ್ನು ನೋಡಿದರೆ ಖಂಡಿತವಾಗಿಯೂ ಮದುವೆ ಎನ್ನುವುದು ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎನ್ನಬಹುದು. ಅದರಲ್ಲೂ ಹಿಂದೂಗಳಲ್ಲಿ ಮದುವೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಮದುವೆ ಜೀವಮಾನದ ಪ್ರಮುಖ ಘಟ್ಟವಾಗಿರುವ ಕಾರಣ ಇಬ್ಬರಲ್ಲಿನ ಹೊಂದಾಣಿಕೆ ತುಂಬಾ ಮುಖ್ಯ. ಇಂದಿನ ಕಾಲದಲ್ಲಿ ಹೆಚ್ಚಿನವರು ಜಾತಕಗಳಲ್ಲಿ ನಂಬಿಕೆ ಇರಿಸದಿದ್ದರೂ ಅದು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು.

ಒಂದು ದೈವಿಕ ಶಕ್ತಿಯು ನಮ್ಮ ಜೀವನದ ಮೇಲೆ ಪ್ರಬಾವ ಬೀರುತ್ತದೆ. ಇದು ಕೆಲವೊಮ್ಮೆ ನಮಗೆ ತಿಳಿದುಬಂದರೆ, ಇನ್ನು ಕೆಲವು ಸಲ ನಮಗೆ ಅದು ಅರಿವಿಗೆ ಬರುವುದಿಲ್ಲ. ಆದರೆ ಯಾವ ರಾಶಿಯವರ ಜೋಡಿಯಾದರೆ ಜೀವನದಲ್ಲಿ ಅವರು ಧನಾತ್ಮಕ ಪರಿಣಾಮ ಬೀರಬಹುದು ಎಂದು ಬೋಲ್ಡ್ ಸ್ಕೈ ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದೆ.

ಮೇಷ ಮತ್ತು ಕುಂಭ

ಮೇಷ ಮತ್ತು ಕುಂಭ

ಹನ್ನೆರಡು ರಾಶಿಗಳಲ್ಲಿ ಇದು ಅತ್ಯುತ್ತಮ ಜೋಡಿಯಾಗಿದೆ. ಈ ಎರಡು ರಾಶಿಗಳ ಮಧ್ಯೆ ಯಾವತ್ತೂ ನೀರಸ ಕ್ಷಣವಿರದು. ಈ ಎರಡು ರಾಶಿಯವರು ತಾವು ಮಾಡುವಂತಹ ಕೆಲಸಕಾರ್ಯಗಳಲ್ಲಿ ಹೆಚ್ಚು ಸಾಹಸಪ್ರವೃತ್ತಿಯಾಗಿರುವ ಕಾರಣ ಇವರಿಬ್ಬರ ಜೀವನವು ತುಂಬಾ ಆನಂದಮಯವಾಗಿರುವುದು. ಇವರು ಹೊಸ ಹೊಸ ಅನ್ವೇಷಣೆಯಲ್ಲಿ ತೊಡಗಿಕೊಂಡಿರುವರು. ಈ ಮೂಲಕ ಅವರಿಗೆ ಉತ್ತಮ ಸಮಯ ಸಿಗುವುದು. ಸ್ನೇಹಿತರೊಂದಿಗೆ ಹೊರಗಡೆ ಸುತ್ತಾಡಲು ಹೋಗುವುದು ಮತ್ತು ಏಕಾಂಗಿಯಾಗಿರುವ ಬಗ್ಗೆ ಪರಸ್ಪರರಿಗೆ ಸರಿಯಾಗಿ ತಿಳಿದಿದೆ.

ವೃಷಭ ಮತ್ತು ಕರ್ಕಾಟಕ

ವೃಷಭ ಮತ್ತು ಕರ್ಕಾಟಕ

ಎರಡು ರಾಶಿಯವರು ತಮ್ಮ ಸಂಗಾತಿಯೆಡೆಗಿನ ಬದ್ಧತೆಯಲ್ಲಿ ತುಂಬಾ ಪ್ರಾಮಾಣಿಕವಾಗಿರುವರು. ಇವರು ದೈಹಿಕ ಹಾಗೂ ಭಾವನಾತ್ಮಕವಾಗಿ ಪರಸ್ಪರ ಜತೆಯಾಗಿ ಕೆಲಸ ಮಾಡುವರು. ಇವರು ಪರಸ್ಪರರನ್ನು ಒಳಗೆ ಹಾಗೂ ಹೊರಗಿನಿಂದ ಚೆನ್ನಾಗಿ ಅರ್ಥ ಮಾಡಿಕೊಂಡಿರುವರು. ಇದರಿಂದ ಅವರ ಸಂಬಂಧವು ತುಂಬಾ ಗಟ್ಟಿಯಾಗಿ ಬೆಸೆಯಲು ನೆರವಾಗುವುದು.

ಮಿಥುನ ಮತ್ತು ಕುಂಭ

ಮಿಥುನ ಮತ್ತು ಕುಂಭ

ಇವರಿಬ್ಬರ ಮಾನಸಿಕ ಹಾಗೂ ಭಾವನಾತ್ಮಕ ಸಂಬಂಧವು ಅದ್ಭುತವಾಗಿರುವುದು. ಇವರಿಬ್ಬರು ತಿಂಗಳ ಕಾಲ ಮಾತ್ರ ಪರಸ್ಪರ ಪರಿಚಯವಿದ್ದರೂ ವರ್ಷಗಳಿಂದ ತಾವು ಜತೆಯಾಗಿ ಇದ್ದೇವೆ ಎನ್ನುವಂತೆ ವರ್ತಿಸುವರು. ಇವರು ಪರಸ್ಪರ ಉತ್ತಮ ಬಾಂಧವ್ಯ ಬೆಸೆದುಕೊಂಡು ಆದಷ್ಟು ಮಟ್ಟಿಗೆ ಜತೆಯಾಗಿ ಸಮಯ ಕಳೆಯಲು ಪ್ರಯತ್ನಿಸುವರು. ಇನ್ನೊಂದು ಬದಿಯಲ್ಲಿ ಇವರು ತಮ್ಮ ಸ್ವತಂತ್ರ್ಯವನ್ನು ಆನಂದಿಸುವರು. ಇವರ ಸ್ವತಂತ್ರ್ಯವು ಸಂಬಂಧದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಲ್ಲ. ಯಾಕೆಂದರೆ ಇವರು ಜತೆಯಾಗಿರುವಾಗ ಸಮಯ ಕಳೆಯುವ ಮಹತ್ವ ತಿಳಿದುಕೊಂಡಿರುವರು. ಇದರಿಂದಾಗಿ ಅವರಿಬ್ಬರ ಹೃದಯ ಮತ್ತಷ್ಟು ಹತ್ತಿರವಾಗುವುದು.

ಕರ್ನಾಟಕ ಮತ್ತು ಮೀನ

ಕರ್ನಾಟಕ ಮತ್ತು ಮೀನ

ನೀರಿಗೆ ಸಂಬಂಧಪಟ್ಟಿರುವ ಈ ಎರಡು ರಾಶಿಗಳು ಒಳ್ಳೆಯ ಅನುಬಂಧ ಹೊಂದಿರುವರು. ಇವರು ಜತೆಯಾಗಿ ಚೆನ್ನಾಗಿ ಕೆಲಸ ಮಾಡಬಲ್ಲರು. ಯಾಕೆಂದರೆ ಇವರಿಗೆ ಪರಸ್ಪರರ ಬಗ್ಗೆ ತಿಳಿದಿದೆ ಮತ್ತು ಅದರ ಬಗ್ಗೆ ಹೆಮ್ಮೆಯಿದೆ. ಪರಸ್ಪರ ಜತೆಯಾಗಿ ಹೊಂದಿಕೊಳ್ಳುವಂತಹ ವೈಯಕ್ತಿಕ ಗುಣಲಕ್ಷಣಗಳು ಈ ರಾಶಿಯವರಲ್ಲಿದೆ.

ಸಿಂಹ ಮತ್ತು ಧನು

ಸಿಂಹ ಮತ್ತು ಧನು

ಈ ಎರಡು ರಾಶಿಯವರು ಜೀವನವನ್ನು ಸಂಪೂರ್ಣವಾಗಿ ಆನಂದಿಸುವರು. ಈ ಜಗತ್ತಿನಿಂದ ಅವರಿಗೆ ಏನು ಬೇಕಾಗಿದೆ ಎನ್ನುವ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿದೆ ಮತ್ತು ಪರಸ್ಪರರ ಗುರಿ ಸಾಧಿಸಲು ಅವರು ಒಬ್ಬರನೊಬ್ಬರು ಪ್ರೋತ್ಸಾಹಿಸುವರು. ಈ ಎರಡು ರಾಶಿಗಳು ಬೆಂಕಿಗೆ ಸಂಬಂಧಪಟ್ಟದ್ದಾಗಿರುವ ಕಾರಣ ಅವರಿಬ್ಬರು ಪರಸ್ಪರ ಅರ್ಥ ಮಾಡಿಕೊಂಡು ಸುಲಭವಾಗಿ ಹೊಂದಿಕೊಳ್ಳುವರು.

ಕನ್ಯಾ ಮತ್ತು ವೃಷಭ

ಕನ್ಯಾ ಮತ್ತು ವೃಷಭ

ಎರಡು ರಾಶಿಗಳು ಭೂಮಿಗೆ ಸಂಬಂಧಪಟ್ಟದ್ದಾಗಿವೆ ಮತ್ತು ಪರಸ್ಪರ ಚೆನ್ನಾಗಿ ಹೊಂದಿಕೊಳ್ಳುವರು. ಇವರು ತಮ್ಮ ದೈನಂದಿನ ಜೀವನದಲ್ಲಿ ತುಂಬಾ ಪ್ರಾಯೋಗಿಕ ಮತ್ತು ಸರಳವಾಗಿರುವರು. ಇದರಿಂದ ಅವರ ಸಂಬಂಧವು ತುಂಬಾ ಶಾಂತ ಮತ್ತು ಒಳ್ಳೆಯ ಬೆಸುಗೆ ಹೊಂದಿರುವುದು. ಇವರು ಪರಸ್ಪರರ ಬಗ್ಗೆ ತುಂಬಾ ಪ್ರಾಮಾಣಿಕ ಮತ್ತು ನಂಬಿಕೆಯನ್ನಿಟ್ಟಿಕೊಳ್ಳುವರು. ಇದರಿಂದ ಅವರ ಸಂಬಂಧವು ತುಂಬಾ ಹತ್ತಿರವಾಗಿರುವುದು. ಇವರು ಸಂಬಂಧವನ್ನು ತುಂಬಾ ಗಂಭೀರ ಮತ್ತು ದೀರ್ಘಕಾಲಕ್ಕೆ ಕೊಂಡೊಯ್ಯುವರು.

ತುಲಾ ಮತ್ತು ಮಿಥುನ

ತುಲಾ ಮತ್ತು ಮಿಥುನ

ಈ ರಾಶಿಗಳ ನಡುವಿನ ಸಂಬಂಧವು ತುಂಬಾ ಜಾಣ್ಮೆಯ ಬೆಸುಗೆಯಲ್ಲಿರುವುದು. ಈ ಎರಡು ರಾಶಿಗಳು ಗಾಳಿ ರಾಶಿಗಳಾಗಿರುವ ಕಾರಣ ತುಂಬಾ ಜಾಣ್ಮೆ ಮತ್ತು ಅವರದ್ದೇ ಆಗಿರುವ ಆಧ್ಯಾತ್ಮಿಕ ಭಾವನೆ ಹೊಂದಿರುವರು. ಈ ರಾಶಿಗಳು ಪರಸ್ಪರ ಒಳ್ಳೆಯ ಹೊಂದಾಣಿಕೆ ಮತ್ತು ಪ್ರೋತ್ಸಾಹ ನೀಡುವರು. ಇದರಿಂದಾಗಿ ಈ ಜೋಡಿಯು ಅದ್ಭುತವೆನಿಸುವುದು. ಈ ಜೋಡಿಯು ತಮ್ಮ ಸ್ನೇಹ, ಜ್ಞಾನ ಹಂಚಿಕೊಂಡು ಪರಸ್ಪರರನ್ನು ಅರ್ಥ ಮಾಡಿಕೊಳ್ಳುವ ಕಾರಣ ಸಂಬಂಧವು ಶಾಂತ ರೀತಿಯಲ್ಲಿರುವುದು.

ವೃಶ್ಚಿಕ ಮತ್ತು ಕರ್ಕಾಟಕ

ವೃಶ್ಚಿಕ ಮತ್ತು ಕರ್ಕಾಟಕ

ನೀರಿಗೆ ಸಂಬಂಧಿಸಿದ ರಾಶಿಯಾದ ಈ ಎರಡು ರಾಶಿಗಳು ಭಾವನೆಗಳಿಗೆ ತುಂಬಾ ತೀವ್ರವಾಗಿ ಪ್ರತಿಕ್ರಿಯಿಸುವರು. ಇದರಿಂದಾಗಿ ಈ ರಾಶಿಗಳು ಚೆನ್ನಾಗಿ ಹೊಂದಿಕೊಳ್ಳುವರು. ಈ ರಾಶಿಯವರು ಪರಸ್ಪರ ಆಕಾಂಕ್ಷೆಗಳಿಗೆ ಸರಿಯಾಗಿ ಸ್ಪಂದಿಸುವ ಕಾರಣದಿಂದಾಗಿ ಜತೆಯಾಗಿ ಕೆಲಸ ಮಾಡಿದಾಗ ಅದ್ಭುತ ಫಲಿತಾಂಶ ನೀಡುವರು. ಈ ರಾಶಿಗಳು ಪರಸ್ಪರರಿಗಾಗಿ ಮೀಸಲಾಗಿರುವರು ಮತ್ತು ಒಳ್ಳೆಯ ಬೆಂಬಲ ನೀಡುವರು. ಈ ರಾಶಿಯವರು ಸಮಾನವಾದ ನೈತಿಕತೆ ಹಂಚಿಕೊಳ್ಳುವರು ಮತ್ತು ಪರಸ್ಪರರ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವರು.

ಧನು ಮತ್ತು ಮೇಷ

ಧನು ಮತ್ತು ಮೇಷ

ಈ ಎರಡು ರಾಶಿಗಳು ಬೆಂಕಿಗೆ ಸಂಬಂಧಿಸಿದ್ದಾಗಿದೆ. ಈ ಎರಡು ರಾಶಿಗಳು ಜತೆಯಾದರೆ ಅಲ್ಲಿ ದೊಡ್ಡ ಮಟ್ಟದ ಬೆಸುಗೆಯಾಗುವುದು. ಇವರಿಬ್ಬರು ಪರಸ್ಪರರ ಸಂಬಂಧಕ್ಕೆ ಶಕ್ತಿ ತುಂಬುವರು. ಇದರಿಂದ ಅವರು ಸಂಬಂಧವು ಬಲವಾಗುವುದು. ಇವರು ತಮ್ಮ ಸಂಗಾತಿ ಮತ್ತು ಜೀವನದ ಉತ್ಸಾಹವವನ್ನು ಚೆನ್ನಾಗಿ ಪ್ರೋತ್ಸಾಹಿಸುವರು.

ಮಕರ ಮತ್ತು ವೃಷಭ

ಮಕರ ಮತ್ತು ವೃಷಭ

ಈ ಎರಡು ರಾಶಿಗಳ ನಡುವಿನ ಸಂಬಂಧವು ಬೇರೆಲ್ಲಾ ರಾಶಿಗಳಿಗಿಂತ ತುಂಬಾ ಅದ್ಭುತವಾಗಿ ಬೆಸೆದಿರುವುದು. ಇವರಿಬ್ಬರ ಮಧ್ಯೆ ಅಂತ್ಯವಾಗದ ಪ್ರೀತಿಯಿರುವುದು ಮತ್ತು ಎಂದೆಂದಿಗೂ ಇವರು ಜತೆಯಾಗಿರುವರು. ಅಂತ್ಯದವರೆಗೆ ಇವರಿಬ್ಬರು ತಮ್ಮ ಸಂಬಂಧವನ್ನು ಆನಂದಿಸುವರು.

ಕುಂಭ ಮತ್ತು ಮಿಥುನ

ಕುಂಭ ಮತ್ತು ಮಿಥುನ

ಇವೆರಡು ರಾಶಿಗಳ ಮಧ್ಯೆ ಒಂದು ಅಮೋಘ ಮನೋಶಾಸ್ತ್ರದ ಸಂಬಂಧವಿರುವುದು. ಇವರಿಬ್ಬರ ಸಂಬಂಧವು ತುಂಬಾ ಗೌಪ್ಯವಾಗಿರುವುದು. ಯಾಕೆಂದರೆ ಒಬ್ಬರ ಮನಸ್ಸಿನಲ್ಲಿ ಏನಿದೆ ಎಂದು ಮತ್ತೊಬ್ಬರಿಗೆ ತಿಳಿಯುವುದಿಲ್ಲ. ಈ ರಾಶಿಯ ಜೋಡಿಗಳು ಬೇರ್ಪಡುವ ಬದಲಿಗೆ ಜತೆಯಾಗಿ ಹೆಗಲಿಗೆ ಕೈ ಹಾಕಿ ಜೀವನದ ಹಾದಿಯಲ್ಲಿ ಮುಂದುವರಿಯಲು ಬಯಸುವರು.

ಮೀನ ಮತ್ತು ವೃಶ್ಚಿಕ

ಮೀನ ಮತ್ತು ವೃಶ್ಚಿಕ

ಈ ಎರಡು ರಾಶಿಯವರು ತಮ್ಮ ಸಂಗಾತಿಯ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯುವಲ್ಲಿ ತುಂಬಾ ಅದ್ಭುತವಾಗಿರುವರು. ಇವರು ಎಷ್ಟರಮಟ್ಟಿಗೆ ತಮ್ಮ ಸಂಗಾತಿಯ ಮನಸ್ಸು ಅರ್ಥ ಮಾಡಿಕೊಂಡಿರುವರು ಎಂದರೆ ತಾವೇ ಅದನ್ನು ಯೋಚಿಸಿದಂತಿರುವುದು. ಇವರು ತಮ್ಮ ಸಂಗಾತಿಯ ಬೇಕು ಬೇಡಗಳನ್ನು ಅರಿತುಕೊಳ್ಳಲು ಪ್ರಯತ್ನಿಸುವರು ಮತ್ತು ಪರಸ್ಪರರನ್ನು ಗೌರವಿಸುವರು. ಇವರ ಆಕಾಂಕ್ಷೆಯು ಆಕಾಶದೆತ್ತರದಲ್ಲಿರುವುದು ಮತ್ತು ಯಾವುದೇ ಹೇಳಿದ ಸಮಯದಲ್ಲಿ ರೋಮ್ಯಾನ್ಸ್ ಮಾಡಲು ಹೆದರುವರು. ನಿಮ್ಮ ಸಂಗಾತಿಯ ರಾಶಿಯು ನಿಮ್ಮ ರಾಶಿಯೊಂದಿಗೆ ಹೊಂದಾಣಕೆಯಾಗುತ್ತದೆಯಾ? ನಿಮ್ಮ ಅನಿಸಿಕೆಗಳನ್ನು ಕೆಳಗೆ ಕಮೆಂಟ್ ಬಾಕ್ಸ್ ಗೆ ಹಾಕಿಬಿಡಿ.

English summary

Best Matches According To Zodiac Signs

According to a research, it is revealed that there are 12 different best pairs according to the different zodiac signs. These combinations of different zodiac signs are said to play a distinctive positive role on their partners.So, check out to know more on which zodiac sign matches you the best.
Story first published: Friday, October 27, 2017, 13:15 [IST]
Subscribe Newsletter