ಬೆಂಗಳೂರಿನ ಈ ಬಂಕ್‌‌ನಲ್ಲಿ ಪೆಟ್ರೋಲ್-ಡೀಸೆಲ್‌ ಹಾಕಿಸಿದರೆ ಊಟ-ತಿಂಡಿ ಉಚಿತ!!

By: manu
Subscribe to Boldsky

ಇಂದು ನಮ್ಮ ದೇಶವನ್ನು ಭ್ರಷ್ಟಾಚಾರವೇ ಆಳುತ್ತಿದೆ, ಕ್ರೌರ್ಯಗಳು ವಿಜೃಂಭಿಸುತ್ತಿವೆ, ಜಗತ್ತಿನಲ್ಲಿ ಮಮಕಾರ ಮಾಯವಾಗುತ್ತಿದೆ ಎಂದೆಲ್ಲಾ ನಿರಾಶಾವಾದವನ್ನು ಮಂಡಿಸುತ್ತಾ ಇರುವವರಿಗೆ ನಮ್ಮ ಬೆಂಗಳೂರಿನಲ್ಲಿರುವ ಪೆಟ್ರೋಲ್ ಬಂಕ್ ಒಂದು ಆಶಾವಾದದ ಕಿರಣವಾಗಿ ಗೋಚರಿಸುತ್ತಿದೆ.

ಅಲ್ಲೊಂದು ಇಲ್ಲೊಂದು ಜನಹಿತ ಕಾರ್ಯಕ್ರಮಗಳನ್ನು ನಡೆಸುತ್ತಿರುವ ವ್ಯಕ್ತಿಗಳಿಂದ ಈ ಜಗತ್ತಿನಲ್ಲಿ ಇಂದಿಗೂ ಮಾನವತೆ ಜೀವಂತವಾಗಿದೆ ಎಂದು ತಿಳಿಸುತ್ತಾರೆ. ಬೆಂಗಳೂರಿನಲ್ಲಿರುವ ಪೆಟ್ರೋಲ್ ಬಂಕ್ ಒಂದರಲ್ಲಿ ಹಸಿದವರಿಗೆ ಹಾಗೂ ಕೆಲಸಕ್ಕೆ ಧಾವಿಸುವ ಧಾವಂತದಲ್ಲಿ ಉಪಾಹಾರವನ್ನು ತಪ್ಪಿಸಿಕೊಂಡವರಿಗೆ ಉಚಿತವಾಗಿ ಆಹಾರವನ್ನು ನೀಡುವ ಕೆಲಸವನ್ನು ಮಾಡಲಾಗುತ್ತಿದೆ...

ಎಲ್ಲಿದೆ ಇದು?

ಎಲ್ಲಿದೆ ಇದು?

ಹಳೆಯ ಮದ್ರಾಸ್ ರಸ್ತೆಯಲ್ಲಿರುವ ವೆಂಕಟೇಶ್ವರ ಸರ್ವಿಸ್ ಸ್ಟೇಷನ್‌ನಲ್ಲಿ ಬೆಳಗ್ಗಿನ ಹೊತ್ತು ಪೆಟ್ರೋಲ್ ತುಂಬಿಸಲು ಬರುವ ಗ್ರಾಹಕರಿಗೆ ಉಚಿತವಾಗಿ ಉಪಹಾರವನ್ನು ಇಲ್ಲಿನ ಸಿಬ್ಬಂದಿ ಒದಗಿಸುತ್ತಾರೆ. ಈ ಉತ್ತಮ ಕಾರ್ಯವನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆ ಪ್ರಾರಂಭಿಸಿದ್ದು ಇದಕ್ಕಾಗಿ ಈ ಪೆಟ್ರೋಲ್ ಬಂಕ್ ಅನ್ನು ಆಯ್ಕೆ ಮಾಡಿಕೊಂಡಿದ್ದು ಇದರ ಮಾಲಿಕರಾದ ಪ್ರಕಾಶ್ ರಾವ್ ರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಪೆಟ್ರೋಲ್ ಬಂಕ್‌ಗೆ ಆಗಮಿಸುವ ಗ್ರಾಹಕರಿಗೆ ಉಚಿತವಾಗಿ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಉಪಾಹಾರ, ಊಟ ಅಥವಾ ಲಘು ಆಹಾರವನ್ನು ಒದಗಿಸಲಾಗುತ್ತದೆ. ಈ ವ್ಯವಸ್ಥೆಯನ್ನು ಕನಿಷ್ಠ ಒಂದು ತಿಂಗಳ ಅವಧಿಗೆ ಮುಂದುವರೆಸಲು ನಿರ್ಧರಿಸಲಾಗಿದೆ.

ಗ್ರಹಕರಿಗೆ ಉತ್ತಮ ಗುಣಮಟ್ಟದ ಆಹಾರವನ್ನು ಒದಗಿಸುತ್ತಿದ್ದಾರೆ...

ಗ್ರಹಕರಿಗೆ ಉತ್ತಮ ಗುಣಮಟ್ಟದ ಆಹಾರವನ್ನು ಒದಗಿಸುತ್ತಿದ್ದಾರೆ...

ಈ ಬಗ್ಗೆ ಮಾಲಿಕರಾದ ಪ್ರಕಾಶ್ ರಾವ್ ಹೀಗೆ ಹೇಳುತ್ತಾರೆ: "ಉತ್ತಮ ಗುಣಮಟ್ಟದ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಬೇರೆ ಸ್ಥಳದಲ್ಲಿ ಉತ್ತಮ ಗುಣಮಟ್ಟ ಕಾಪಾಡಿಕೊಂಡು ಬರುವಂತೆ ತಯಾರಿಸಲಾಗುತ್ತದೆ. ಬಳಿಕ ಆಹಾರವನ್ನು ಇಲ್ಲಿ ತರಿಸಲಾಗುತ್ತದೆ ಹಾಗೂ ಗ್ರಾಹಕರಿಗೆ ಒದಗಿಸುವ ಮುನ್ನ ಬಿಸಿ ಮಾಡಲಾಗುತ್ತದೆ.

ಇಸ್ಕಾನ್ ಸಂಸ್ಥೆಯೊಂದಿಗೆ ಒಪ್ಪಂದ

ಇಸ್ಕಾನ್ ಸಂಸ್ಥೆಯೊಂದಿಗೆ ಒಪ್ಪಂದ

ಎಲ್ಲಾ ಬೇಕರಿ ಉತ್ಪನ್ನಗಳಿಗಾಗಿ ನಾವು ಇಸ್ಕಾನ್ ಸಂಸ್ಥೆಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದೇವೆ. ಇಲ್ಲಿನ ನುರಿತ ಬಾಣಸಿಗರು ಉತ್ತಮ ಗುಣಮಟ್ಟ ಹಾಗೂ ರುಚಿಯಾದ ಆಹಾರವನ್ನು ತಯಾರಿಸುತ್ತಾರೆ. ಪೆಟ್ರೋಲ್ ತುಂಬಿಸಿಕೊಳ್ಳುವ ಎಲ್ಲಾ ಗ್ರಾಹಕರಿಗೆ ಆಹಾರ ಉಚಿತವಾಗಿದೆ. ಗ್ರಾಹಕರಲ್ಲದವರೂ ಈ ಆಹಾರವನ್ನು ನಿಗದಿತ ಶುಲ್ಕವನ್ನು ನೀಡಿ ಪಡೆದುಕೊಳ್ಳಬಹುದು"

ಇಸ್ಕಾನ್ ಸಂಸ್ಥೆಯೊಂದಿಗೆ ಒಪ್ಪಂದ

ಇಸ್ಕಾನ್ ಸಂಸ್ಥೆಯೊಂದಿಗೆ ಒಪ್ಪಂದ

ಈ ಜಗತ್ತಿನಲ್ಲಿ ಹಸಿವು ಹಾಗೂ ಬಡತನವನ್ನು ನಿವಾರಿಸಲು ಇಂತಹ ಕೆಲವಾದರೂ ಕಾರ್ಯಕ್ರಮಗಳು ನಡೆಯುವುದು ಅವಶ್ಯವಾಗಿದೆ. ಹೀಗೊಂದು ಪ್ರಯತ್ನವನ್ನು ಮಾಡಲು ನೀವು ಯತ್ನಿಸುತ್ತೀರೇ? ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ತಿಳಿಸಿ.

English summary

bengaluru-petrol-pump-where-free-food-is-offered

Even though there is a lot of corruption, high crime rate around in the world, there are many things that work in our favour and make us realise that good people do exist. This is an initiative of a petrol pump in Bengaluru, which is concentrating on feeding the hungry people who miss out on having their breakfasts to rush to work in the morning. This unique concept has been started at the Venkateshwara Service Station on Old Madras Road. Here, the employees will serve free food to customers who stop there to refuel.
Subscribe Newsletter